
ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚುತ್ತಿದೆ. ಕಾಡುಗಳ್ಳರು, ಪ್ರಾಣಿಗಳ್ಳರು ಎಲ್ಲೆಲ್ಲೂ ಹೆಚ್ಚುತ್ತಿದ್ದಾರೆ. ದಿನವೂ ಅನೇಕ ಪ್ರಾಣಿಪಕ್ಷಿಗಳು, ಗಿಡಮರಗಳು ಅಳಿದುಹೋಗುತ್ತಿವೆ. ವಿನಾಶದ ಅಂಚಿನೆಡೆಗೆ ದಾಪುಗಾಲಿಡುತ್ತಿರುವ ಭುವಿಯ ಜೀವ ಸಂಕುಲವನ್ನು ಪಾರುಮಾಡುವುದು ನಮ್ಮೆಲ್ಲರ ಹೊಣೆ. ಪ್ರಕೃತಿ, ಸುತ್ತಲಿನ ಪರಿಸರದ ಬಗೆಗೆ ನಾವು ಪ್ರೀತಿ ಬೆಳೆಸಿಕೊಳ್ಳಬೇಕು ಮತ್ತು ಮಕ್ಕಳಲ್ಲಿಯೂ ಬೆಳೆಸಬೇಕು.
ಎಳೆಯರಲ್ಲಿ ಭುವಿಯ ಎಲ್ಲ ಜೀವಿಗಳ ಬಗೆಗೆ ಕೌತುಕ, ಅಕ್ಕರೆಯನ್ನು ಮೂಡಿಸುವುದು ಹಾಗೂ ಭುವಿಯ ರಕ್ಷಣೆಯ ಜವಾಬ್ದಾರಿಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದು ನಮ್ಮ ಆಶಯ.
ಈ ಪುಸ್ತಕದಲ್ಲಿ ಕಾಡಿನ ಕಥೆಗಳನ್ನು ಆರಿಸಿ ಕೊಡಲಾಗಿದೆ. ಈ ಸಂಗ್ರಹದಲ್ಲಿ ಗಣೇಶ ಪಿ. ನಾಡೋರ, ಕಮಲಾ ರಾಮಸ್ವಾಮಿ, ನೀಲಾಂಬರಿ, ಎನ್ಕೆ. ಸುಬ್ರಹ್ಮಣ್ಯ, ಮತ್ತೂರು ಸುಬ್ಬಣ್ಣ, ‘ದತ್ತಾತ್ರಯ’, ಸಹನ ಮತ್ತು ಎಂ. ಆರ್. ದಾಸೇಗೌಡ ಇವರು ರಚಿಸಿರುವ ಕಥೆಗಳಿವೆ. ಸ್ಯಾಮ್ ಅವರ ಸುಂದರ ಚಿತ್ರಗಳಿಂದ ಕೂಡಿದ ಕಥೆಗಳು ಮಕ್ಕಳಿಗೆ ಪ್ರಿಯವಾಗುವವು. ನೀವೂ ಓದಿ. ನಿಮ್ಮ ಗೆಳೆಯರೂ ಓದುವಂತೆ ಪ್ರೇರೇಪಿಸಿ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.