Click here to Download MyLang App

ಕಾಡು (ಪ್ರಿಂಟ್ ಪುಸ್ತಕ)

ಕಾಡು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಶ್ರೀಕೃಷ್ಣ ಆಲನಹಳ್ಳಿ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 60.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 

ಒಂದು ಕಾದಂಬರಿ ಬಹುವಾಗಿ ಕಾಡುವುದು ಭಾಷೆಯ ಕಾರಣಕ್ಕೆ. ಮತ್ತು ಅದರಲ್ಲಿನ ತಿರುಳು ನಮ್ಮನುಭವಕ್ಕೆ ಸಿಕ್ಕು ಬದುಕಿಗೆ ಬಹು ಹತ್ತಿರವೆನ್ನಿಸುವುದಕ್ಕೆ. ಈ ಪುಟ್ಟ ಕಾದಂಬರಿಯ ಗಟ್ಟಿತನಕ್ಕೆ ಆಧಾರವಾಗಿರುವುದೇ ಭಾಷೆ ಎಂದರೆ ತಪ್ಪಾಗಲಾರದು.
ಹಳ್ಳಿಯ ಜನಜೀವನದ ಕುರಿತು ಓದುವ ಕಾದಂಬರಿಗಳಲ್ಲಿ ಅಡಗಿರುವ ಸ್ವಾರಸ್ಯಗಳು, ನಗರದ ಜೀವನಕ್ಕೆ ವಿಭಿನ್ನವಾಗಿ ನಡೆದುಕೊಳ್ಳುವ ಪಾತ್ರಗಳ ನಡುವಳಿಕೆ, ಭಾವನೆಗಳು ಸಂಕುಚಿತವಾಗೇ ಬದುಕನ್ನು ನೋಡುವ ರೀತಿಗಳಂತೆ ಇಲ್ಲಿಯ ಕಥೆಯೂ ಹೌದಾದರೂ ಕೊಂಚ ಭಿನ್ನವೆನ್ನಿಸುವುದು ಲೇಖಕರು ಪ್ರಭಾವಿತವಾಗಿ ಬಳಸಿರುವ ಭಾಷೆಗೆ ಮತ್ತು ಅದ್ಭುತವಾಗಿ ಓದಿಸಿಕೊಂಡು ಹೋಗುವ, ಘಟನೆಗಳನ್ನು ಚಿತ್ರಗಳಂತೆ ಕಣ್ಣ ಮುಂದೆ ತೆರೆದಿಡುವ ಬರಹದ ಶೈಲಿಗೆ.

ಈ ಪುಟ್ಟ ಕಾದಂಬರಿ ಓದುವಾಗ “ಕಾಡು” ಎಂಬ ಹೆಸರಿಗೆ ಅನ್ವರ್ಥವಾಗುವಂತದ್ದೇ ಮೃಗೀಯ ನಡವಳಿಕೆಯ ದೃಶ್ಯಗಳು ಕಣ್ಣ ಮುಂದೆ ತೇಲುತ್ತವೆ. ಸಂವೇದನಾತ್ಮಕ ಹಸಿರಿನ ಕೊರತೆಯಿಂದಾಗಿ ಇಂದಿನ ಓಡು ನಡುಗೆಯ ಬದುಕಿನಲ್ಲಿ ದಿಕ್ಕುಗೆಟ್ಟು ತನ್ನ ಮೌಲ್ಯವನ್ನು ಕಳೆದುಕೊಂಡಿರುವ ಬೋಳಾದ ಕಾಡೇ ಎನ್ನಿಸಿಬಿಡುತ್ತದೆ. ಪುಟ್ಟ ಬಾಲಕ ಕಿಟ್ಟಿಯ ಕಣ್ಣಿನಲ್ಲಿ ಮೇಲ್ಮುಖಕ್ಕೆ ಸಣ್ಣದಾಗೇ ಕಾಣುವ ಬದುಕಿನ ಬಗೆಗಿರುವ ಪ್ರಶ್ನೆಗಳು ಅದರ ಒಳನೋಟದಲ್ಲಿ ಇನ್ನೊಂದೇ ಬಗೆಯಾಗಿ ಓದುಗರಿಗೆ ಕಾಣುತ್ತವೆ. ಹಳ್ಳಿಯ ಒಳದ್ವೇಷಗಳು, ಅಕ್ರಮ ಸಂಬಂಧಗಳು, ಕೊಂಚ ಕ್ರೌರ್ಯವೇ ಎನ್ನಿಸುವ ನ್ಯಾಯ ತಿರ್ಮಾನದ ರೀತಿಗಳು, ಹೊರ ಬರಲಾರದೇ ತಹತಹಿಸುವ ಹೆಣ್ಣಿನ ಬಿಕ್ಕುವಿಕೆಯ ಸದ್ದು, ಹಬ್ಬ ನಾಟಕಗಳ ಸಂಭ್ರಮ. ಹೀಗೇ ಈ ಎಲ್ಲಾ ಹಳ್ಳಿಯ ತುಡಿತಗಳು ಕಿಟ್ಟಿಯ ಪುಟ್ಟಕಣ್ಣಿನಲ್ಲಿ ಹೇಗೆ ಅಚ್ಚರಿಯ ವಿಷಯಗಳಾಗಿ ಉಳಿಯುತ್ತವೆ ಎನ್ನುತ್ತಲೇ ಓದುಗರ ಮುಂದೆ ತೆರೆದಿಡುವ ಹಳ್ಳಿಯ ಬದುಕಿನ ಕಥೆಯೇ ಇಲ್ಲಿಯ ಕಥಾವಸ್ತು.


ಇಡೀ ಕಾದಂಬರಿಯಲ್ಲಿ ಜೀವಂತವಾದ ಪಾತ್ರಗಳೆನ್ನಿಸಿ ಮಿಸುಕಾಡುವುದು ಕಮಲಮ್ಮ ಮತ್ತು ಕಿಟ್ಟಿ ಮಾತ್ರ. ಕಮಲಮ್ಮನ ಒಳಗುದಿಯ ಪರಿಚಯವಿದ್ದೂ ಸೊಲ್ಲೆತ್ತದೇ ಅವಳ ಬಗೆಗೆ ಯಾವ ನಿಲುವನ್ನೂ ತಾಳದ ಪಾತ್ರಗಳ ನಿರ್ಲಿಪ್ತಿಯ ನಡುವೆ ಯಾವುದೂ ಅರ್ಥವಾಗದಿದ್ದರೂ “ಅತ್ತೆಯ ಅಳು” ಒಂದಕ್ಕೇ ಕರಗಿಬಿಡುವ ಕಿಟ್ಟಿಯ ಬಗೆಗೆ ಆತ್ಮೀಯ ಭಾವ ಮೂಡುತ್ತದೆ. ಪಾತ್ರಗಳ ಕದಲುವಿಕೆಗೆ ಆಗಾಗ್ಗೇ ಪ್ರತಿಕ್ರಿಯಿಸಿ ಒಳ್ಳೆಯದು ಕೆಟ್ಟದು ಎನ್ನುವ ನಿರ್ಣಯ ನೀಡಿ ನಿಜಕ್ಕೂ ಅದೇನು ಎನ್ನುವ ನಿಲುವು ನಮ್ಮ ಮುಂದೆ ಒಡ್ಡಿ ನಿಲ್ಲುತ್ತಾನೆ ಕಿಟ್ಟಿ.
ಬದಲಾವಣೆಯ ಓಟಕ್ಕೆ ಸಿಕ್ಕು ನಿಧಾನಕ್ಕೆ ಮರೆಯಾಗುತ್ತಿರುವ ಹಳ್ಳಿಯ ಮಾನವೀಯತೆ ಸ್ಪಂದನೆಗಳು ತನ್ನ ನಿಜಾಯಿತಿಯನ್ನು ಕಳೆದುಕೊಳ್ಳುತ್ತಿರುವುದು ಇಲ್ಲಿ ಕಾಣಬಹುದು.
ಒಳಗೊಳಗೇ ಪತಗುಡುವ ದ್ವೇಷಗಳಿಗೆಲ್ಲಾ ಓಕುಳಿಯ ರಂಗು, ರಣರಂಗವಾಗಿ ಕಮಲಮ್ಮನ ಸಾವಿನಲ್ಲಿ ಅಂತ್ಯ ಕಾಣುವುದು ದುರಂತವೇ ಸರಿ.


ನಾಟಕ ರಂಗದ ಮೇಲೆ ಒಮ್ಮೆ ಬಂದು ತಮ್ಮ ನಿಗದಿತ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಉಳಿದಂತೆ ತಮ್ಮತನವನ್ನು ಎಲ್ಲಿಯೂ ಬಿಟ್ಟುಕೊಳ್ಳದೇ ವಿಕ್ಷಿಪ್ತವಾಗೇ ಉಳಿದುಬಿಡುವ ಪಾತ್ರಗಳು ತೀರಾ ಸಂಕುಚಿತವೆನ್ನಿಸುತ್ತವೆ. ಅದೇ ಕಾರಣಕ್ಕೆ ಈ ಕಾದಂಬರಿಯ ಗಾತ್ರ ಕುಗ್ಗಿರಬಹುದು.


ಬಾಹ್ಯದಲ್ಲಿ ಕಾಣುವ ಹಸಿರಿಗೆ ವ್ಯತಿರಿಕ್ತವಾಗಿರುವ ಮನುಷ್ಯನ ಒಳಗಿನ ಬಣಬಣ ಇಲ್ಲಿ ಕಾಣಬಹುದು. ಏನಲ್ಲದಿದ್ದರೂ ಇಲ್ಲಿ ಬಳಸಿರುವ ಭಾಷೆ ಮಾತ್ರ ನನಗೆ ಬಹುಕಾಲದವರೆಗೆ ನೆನಪಿನಲ್ಲಿ ಉಳಿಯುವಂತದ್ದು. ನನಗೆ ಈ ಕಾದಂಬರಿಯಲ್ಲಿ ಕಂಡದ್ದಕ್ಕಿಂತ ಹೆಚ್ಚಿನದ್ದು ಏನೋ ಇದ್ದು ಒಂದು ಓದಿಗೆ ಏನೇನೂ ದಕ್ಕಿಲ್ಲವೆಂಬ ಅಸಮಾಧಾನವಿದೆ. ಇನ್ನೊಮ್ಮೆ ಓದಬೇಕು.

ಕವಿತಾ ಭಟ್

ಕೃಪೆ  https://pustakapremi.wordpress.com

ಪುಟಗಳು : 100

Customer Reviews

No reviews yet
0%
(0)
0%
(0)
0%
(0)
0%
(0)
0%
(0)