
ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪಾತ್ರ ಪರಿಚಯ
ಕಥಾ ನಿರೂಪಣೆ - ಡಾ|| ಶ್ರೀಪಾದ್ ಭಟ್
ಸುರೇಶ - ರೋಹಿತ್ ಬೈಕಾಡಿ
ಗೌರಿ - ಚೈತ್ರ ರಾವ್
ರಾಜಪ್ಪ - ಧೀರಜ್ ಬೆಳ್ಳಾರೆ
ಶೇಷಪ್ಪ - ಭುವನ್ ಮಣಿಪಾಲ್
ಕುಟ್ಟಿ - ಅಶ್ವಥ್ ಕೆ. ಆರ್
ದೌಲತ್ ರಾಮ್ - ಚೇತನ್ ಸಿಂಗನಲ್ಲೂರು
ಕುಂಟ ರಾಮ - ರಜತ್ ಎಸ್ ನಾಗಲಾಪುರ
ಇತರ ಪಾತ್ರಗಳು - ಸಾಗರ್ ಅರಸ್
ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ
ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು
ಆಡಿಯೋ ಬುಕ್ ನಿರ್ಮಾಣ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ, ಮೈಸೂರು
24 ಗಂಟೆಗಳಲ್ಲಿ ನಡೆಯುವ ಪತ್ತೇದಾರಿ ಕಾದಂಬರಿ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜನಪ್ರಿಯ ಯುವ ನಟರಾದ ರಕ್ಷಿತ್ ಶೆಟ್ಟಿಯವರು ಪಾಲ್ಗೊಂಡರು. ಕಾರ್ಯಕ್ರಮದ ವಿಡಿಯೋ:
ಏಲಕ್ಕಿ ಮೂಟೆ ಮಾರಲು ಬಸ್ಸಿನಲ್ಲಿ ಪಯಣಿಸುವ ಸುರೇಶ್ ಮತ್ತು ಗೌರಿ ದಂಪತಿಗಳು ತಮಗೆ ಅರಿವೇ ಇಲ್ಲದಂತೆ ಜುಗಾರಿ ಕ್ರಾಸಿನ ಭೂಗತ ಲೋಕದ ಸುಳಿಯೊಳಗೆ ಸಿಲುಕಿ, ಪ್ರಾಣಕ್ಕೆ ಬಂದಿರುವ ಕುತ್ತನ್ನು ದಾಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಅವರಿಗೆ ನೆರವಾಗಲು ಬಂದಂತೆ ಕಾಣುವ ಮನ್ಮಥ ಬೀಡಾ ಅಂಗಡಿಯ ಶೇಷಪ್ಪ ಹಾಗೂ ಸುರೇಶನ ಕಾಲೇಜು ದಿನಗಳ ಸಹಪಾಠಿ ರಾಜಪ್ಪ ತಮ್ಮ ನಿಗೂಢ ನಡವಳಿಕೆಯಿಂದ ಸುರೇಶ ಮತ್ತು ಗೌರಿಯ ಮನದಲ್ಲಿ ಅನುಮಾನದ ಸುಳಿಯನ್ನೇ ಎಬ್ಬಿಸಿದ್ದಾರೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವ ಗೊಂದಲದಲ್ಲಿರುವ ಈ ದಂಪತಿಗಳ ಆತಂಕ ತುಂಬಿದ ರೋಚಕ ಪಯಣದ ನಡುವೆಯೇ ಮಲೆನಾಡು, ಅಲ್ಲಿ ಬದಲಾಗುತ್ತಿರುವ ಜನರ ಜೀವನ, ನಾಶವಾಗುತ್ತಿರುವ ಕಾಡು, ಕಾಣದೇ ಹುದುಗಿರುವ ಕೆಂಪು ರತ್ನಗಳ ನಿಧಿಗಳೆಲ್ಲದರ ವಿವರಗಳು ಓದುಗನನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.
ನೂರಾರು ಮರುಮುದ್ರಣ ಕಂಡಿರುವ ಈ ಕೃತಿ ಈಗ ಆಡಿಯೋ ರೂಪದಲ್ಲಿ ಎಲ್ಲಿಂದ, ಯಾವಾಗ ಬೇಕಿದ್ದರೂ ತಮ್ಮ ಮೊಬೈಲಿನಲ್ಲೇ ಕೇಳಲು ಸಾಧ್ಯವಾಗಿಸಿದೆ ಮೈಲ್ಯಾಂಗ್ ಮೊಬೈಲ್ ಆಪ್.