Click here to Download MyLang App

ಜೋಗಿ 108 ನಾಕು ದಶಕದ ಕತೆಗಳು (ಪ್ರಿಂಟ್ ಪುಸ್ತಕ)

ಜೋಗಿ 108 ನಾಕು ದಶಕದ ಕತೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 550.00
ಸೇಲ್ ಬೆಲೆ
Rs. 550.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕಳೆದ ನಾಲ್ಕು ದಶಕಗಳಲ್ಲಿ ಬರೆದ ನೂರಾರು ಕತೆಗಳು ಇಲ್ಲಿವೆ. ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್ ಪ್ರತಿಭೆಯೋ ಮಹಾನ್ ಸಾಧನೆಯೋ ಅಲ್ಲ, ಪುಟ್ಟ ಹುಡುಗಿ ಮುಂಜಾನೆಗೇ ಎದ್ದು ಮನೆಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ, ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ ಮಲ್ಲಿಗೆ ಹೂವು ಹಿಡಿದುಕೊಂಡು ನಿಂತುಕೊಳ್ಳುವ ಉದ್ದಲಂಗದ ಅರಿಶಿನಗೆನ್ನೆಯ ಬಾಲಕಿಯ ಭರವಸೆ, ಸೈಕಲ್ ರಿಪೇರಿ ಮಾಡುವ ಪುಟ್ಟ ಬಾಲಕನ ಮೂಗಿನ ತುದಿಯ ಅಸಾಧ್ಯ ಶ್ರದ್ದೆ- ಇವೆಲ್ಲ ಬರಹಕ್ಕಿಂತ ದೊಡ್ಡದು. ಅವೆಲ್ಲ ನಾಳೆಯ ಬದುಕನ್ನು ಕಟ್ಟಬಲ್ಲವು. ಕತೆಗಳಿಗೆ ಆಶಕ್ತಿಯಿಲ್ಲ.

ಕತೆ ಒಂದು ಅಪೂರ್ವ ಕ್ಷಣವನ್ನು ಹಿಡಿದಿಡಲು ಚಡಪಡಿಸುತ್ತದೆ. ಹಿಡಿದಿಟ್ಟೆಅಂತಕತೆ ಬೀಗುವ ಹೊತ್ತಿಗೆ ಆ ಕ್ಷಣವನ್ನು ಹಿಂದಕ್ಕೊತ್ತಿ ಮರುಕ್ಷಣ ಹಾಜರಾಗಿರುತ್ತದೆ. ಹೀಗಾಗಿ ಎಂಥ ಸಫಲ ಕತೆ ಕೂಡ ಕಾಲದ ಕಣ್ಣಲ್ಲಿ ವಿಫಲವೇ, ಆದರೂ ಕತೆ ಬರೆದು ಪ್ರಕಟಿಸಿ ಸಂಭ್ರಮಿಸುವುದರಲ್ಲಿ ಒಂದು ಸ್ವಾರ್ಥವಿದೆ. ಹತ್ತಿರದ ಗೆಳೆಯರ ಜೊತೆ ಕುಳಿತು ಅವರ ಕತೆಗಳನ್ನು ನಾವು, ನಮ್ಮ ಕತೆಗಳನ್ನು ಅವರುಓದುತ್ತಾ ಕಾಲ ಕಳೆಯಲು ಯತ್ನಿಸುತ್ತಿರುತ್ತೇವೆ. ಹಾಗೇ ಕಳೆದ ಕಾಲವೇ ನಮ್ಮನ್ನು ಯೌವನವಂತರಾಗಿಯೂ ಆಸಕ್ತರನ್ನಾಗಿಯೂ ಹುರುಪಿನ ಜೀವಗಳಾಗಿಯೋ ಇರಿಸುತ್ತವೆ. ಈ ಪುಟ್ಟ ಗುಂಪಿನ ಸಂಭ್ರಮ ಓದುಗರತನಕವೂ ತಲುಪಿದರೆ ಮತ್ತಷ್ಟುಖುಷಿ.


ಈಕತೆಗಳು ನಿಮಗೆ ಬರೆದ ಖಾಸಾಪತ್ರದ ಹಾಗೆ ನಿಮ್ಮನ್ನು ತಲುಪಲಿ.

 

ಪುಟಗಳು : 582

Customer Reviews

No reviews yet
0%
(0)
0%
(0)
0%
(0)
0%
(0)
0%
(0)