Click here to Download MyLang App

ಜಗತ್ತಿನ ಅತಿ ಸಣ್ಣ ಕಥೆಗಳು (ಪ್ರಿಂಟ್ ಪುಸ್ತಕ)

ಜಗತ್ತಿನ ಅತಿ ಸಣ್ಣ ಕಥೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್ ದಿವಾಕರ್
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರಪಂಚದ ಅನೇಕ ದೇಶಗಳ ಲೇಖಕರು ಬದುಕಿನ ಅಪೂರ್ವ ಕ್ಷಣಗಳನ್ನು ಹಿಡಿದಿಟ್ಟಿರುವ ಅಪರೂಪದ ಸಂಕಲನ ಈ ಅತಿ ಸಣ್ಣಕತೆಗಳು, ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್, ಹೇನ್ರಿಕ್ ರ್ಬ್ಯೂಲ್, ಯಾಸುನಾರಿ ಕವಾದಾಟ, ಅರ್ನೆಸ್ಟ್ ಹೆಮಿಂಗ್ವೇ, ಒಕ್ಕಾವಿಯೊ ಪಾಜ್, ನಗೀಬ್ ಮೆಹ್-ಫ್ಯೂಸ್ ಮೊದಲಾದ ನೊಬೆಲ್ ಪ್ರಶಸ್ತಿ ವಿಜೇತರಿಂದ ಹಿಡಿದು ನಾವು ಓದಲೇಬೇಕಾದ, ಓದಿದರೆ ಇನ್ನೂ ಅಷ್ಟು ಓದಬೇಕೆನ್ನಿಸುವ ಇತ್ತೀಚಿನ ಲೇಖಕರವರೆಗೆ ಅನೇಕರು ಸೃಷ್ಟಿಸಿರುವ ಇಲ್ಲಿನ ಕತೆಗಳು ಓದುಗರನ್ನು ಮನುಷ್ಯಲೋಕದ ವಸ್ತುಪ್ರದರ್ಶನವೊಂದರಲ್ಲಿ ಸುತ್ತಾಡಿಸುವಂತಿವೆ.


ಶಬ್ದ-ವಾಕ್ಯಗಳ ದೃಷ್ಟಿಯಿಂದಷ್ಟೇ ಅತಿ ಸಣ್ಣ ಎನ್ನಿಸುವ ಈ ಕತೆಗಳು ಒಂದು ಬೀಜದಲ್ಲಿ ಹೆಮ್ಮರವಿದ್ದಂತೆ, ಬಿಂದುವಿನಲ್ಲಿ ಸಿಂಧುವಿದ್ದಂತೆ, ವ್ಯಕ್ತಿಯಲ್ಲಿ ಸಮಷ್ಟಿಯಿದ್ದಂತೆ. ಎಲ್ಲ ಕತೆಗಳಲ್ಲೂ ಸಾಮಾಜಿಕ, ಮನೋವೈಜ್ಞಾನಿಕ ಅನುರಣನವಿದ್ದು ಅದು ಬಹುಕಾಲ ಓದುಗರನ್ನು ಕಾಡಬಲ್ಲದು. ಹತ್ತು ಹನ್ನೆರಡು ನಿಮಿಷಗಳಲ್ಲಷ್ಟೆ ಓದಿಬಿಡಬಹುದಾದ ಈ ಕತೆಗಳು ಓದುಗರನ್ನು ಅಳಿಸಬಹುದು, ನಗಿಸಬಹುದು, ಭಾವಪರವಶಗೊಳಿಸಬಹುದು, ಚಿಂತಿಸುವಂತೆ ಪ್ರೇರೇಪಿಸಬಹುದು.


ಕನ್ನಡಕ್ಕೆ ತೀರ ಹೊಸದಾಗಿರುವ ಈ ಸಂಕಲನ ಅತ್ಯುತ್ತಮ ಭಾಷಾಂತರಕ್ಕೆ ಹೆಸರಾದ ಎಸ್.ದಿವಾಕರರ ಹತ್ತಾರು ವರ್ಷಗಳ ಪರಿಶ್ರಮದ ಫಲ. ಅವರು ಈ ಸಂಕಲನಕ್ಕೆಂದೇ ವಿಶೇಷವಾಗಿ ಬರೆದಿರುವ ಪ್ರಸ್ತಾವನೆ ಮೊಟ್ಟಮೊದಲ ಬಾರಿಗೆ ಅತಿ ಸಣ್ಣಕತೆಯ ಆಶಯ-ಆಕೃತಿಗಳನ್ನು ಸಮರ್ಥವಾಗಿ ವಿಶ್ಲೇಷಿಸಿದೆ.

 

ಪುಟಗಳು : 160

Customer Reviews

No reviews yet
0%
(0)
0%
(0)
0%
(0)
0%
(0)
0%
(0)