Click here to Download MyLang App

ಹುಲಿ ಪತ್ರಿಕೆ,  ಹುಲಿ,    ಅನುಷ್ ಎ ಶೆಟ್ಟಿ,  Hulipatrike,  huli patrike,  huli,  Anush A Shetty,

ಹುಲಿ ಪತ್ರಿಕೆ - 2 - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಅನುಷ್ ಎ ಶೆಟ್ಟಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರೆದವರು: 

ಅನುಷ್ ಶೆಟ್ಟಿ

 

ಆಡಿಯೋ ದನಿಗಳು: 

ಕಥಾ ನಿರೂಪಣೆ:  ಗಣೇಶ್ ಮಂದಾರ್ತಿ

ಸಾರಂಗ - ಮೇಘ ಸಮೀರ
ವೇದ - ದಿಶಾ ರಮೇಶ್
ಸಂತು - ಚೇತನ್ ಸಿಂಗನೆಲ್ಲೂರ್
ಅಬು - ಸುಪ್ರೀತ್ ಭಾರದ್ವಾಜ್
ಕೇಶವ್ - ಯತೀಶ್ ಕೊಳ್ಳೇಗಾಲ
ಚೈತನ್ಯ - ರಾಜೇಶ್ ಮಾಧವನ್
ಮಾಧವ್ - ಯದು ಶ್ರೇಷ್ಠ
ಸುಮಂತ - ಉಮೇಶ್ ಸಾಲಿಯಾನ್
ನವೀನ - ಮಂಜು ಕಾಸರಗೋಡು
ಚೆಲುವ - ಕಿರಣ್
ರೇಂಜರ್ ಪ್ರತಾಪ್ - ವಿನೋದ್ ರಂಗ



ಇತರ ಪಾತ್ರಗಳು:

ಹುಲುಗಪ್ಪ ಕಟ್ಟಿಮನಿ
ವಿನಯ್ ಸುಬ್ರಮಣ್ಯ
ಲಕ್ಷ್ಮಿ ವಿ ನಾಯಕ್
ಕಾರ್ಣಿಕ ವಿ ನಾಯಕ್
ಶಮಿತಾ
ದೃವ
ಆರ್ಯ

ಸಂಗೀತ ವಿನ್ಯಾಸ :ಮುನ್ನಾ  ಮೈಸೂರು 

ರೆಕಾರ್ಡಿಂಗ್ : ನಾವು ಸ್ಟುಡಿಯೊಸ್ ಮೈಸೂರು 

ಸಹಕಾರ: ನಟನ ರಂಗ ಶಾಲೆ, ಮೈಸೂರು

ಆಡಿಯೋ ಬುಕ್ ನಿರ್ಮಾಣ : ಅನುಗ್ರಹ ಪ್ರಕಾಶನ, ಮೈಸೂರು

 

ಆಡಿಯೋ ಪುಸ್ತಕದ ಅವಧಿ: 3 ಗಂಟೆ 42 ನಿಮಿಷ

 

ಸ್ವಲ್ಪ ನಿಧಾನಕ್ ಹೋಗು ಅಬು.. ನೆನಿಬೇಕು ಅನ್ನುಸ್ತಿದೆ” ಎಂದಳು ವೇದ. ಸಂತು ಏನೂ ಮಾತಾಡದೆ ಲೂನಾ ಹಿಂದಿನ ಕಂಬಿಯನ್ನು ಬಿಗಿಯಾಗಿ ಹಿಡಿದು ಕುಳಿತಿದ್ದ. ಅಬು ಆಕ್ಸಲೇಟರ್ ಹ್ಯಾಂಡಲನ್ನು ಸಂಪೂರ್ಣವಾಗಿ ತನ್ನೆಡೆಗೆ ತಿರುಗಿಸಿದರೂ, ಮೂವರನ್ನು ಕೂರಿಸಿಕೊಂಡು ದಾವಣಿ ಬೀದಿಯ ದಿಣ್ಣೆಯನ್ನು ಹತ್ತಲು ಏಗುತ್ತಿದ್ದ ಲೂನಾ ವೇಗವಾಗಿ ಚಲಿಸಲು ಸಾಧ್ಯವೂ ಇರಲಿಲ್ಲ. ಆ ಏಗಾಟದ ಶಬ್ಧವೂ ಅವರಿಗೆ ಕೇಳದಷ್ಟು ಜೋರಾಗಿ ಮಳೆ ಸುರಿಯಲಾರಂಭಿಸಿತು. ಹೀಗೆ ನಿಧಾನ ಗತಿಯಲ್ಲಿಯೇ ಅವರೆಲ್ಲ ವೇದಾಳ ಮನೆಯೆದುರು ಬರುತ್ತಿದ್ದಂತೆಯೇ ಅದಾಗಲೇ ಮನೆಯ ಮುಂದೆ ನಿಂತಿದ್ದ ವಾಹನವೊಂದರ ಹೆಡ್‍ಲೈಟ್‍ನ ಬೆಳಕು ಮಳೆಯ ಪರದೆಯ ಸೀಳಿ ಅಬುವಿನ ಕಣ್ಣು ಕೋರೈಸಿತು. ಇಷ್ಟು ಹೊತ್ತಲ್ಲಿ ಯಾರಿರಬಹುದೆಂಬ ಕುತೂಹಲದಲ್ಲೇ ಮೂವರೂ ಇನ್ನೂ ಹತ್ತಿರಾಗಿ ನೋಡಿದಾಗಲೇ ತಿಳಿದದ್ದು ಅದು ಪೊಲೀಸ್ ಜೀಪ್ ಎಂದು. ಅಬು ಜೀಪ್ ಮುಂದೆಯೆ ಲೂನಾ ನಿಲ್ಲಿಸಿದ. ಮೂವರೂ ಲೂನಾದಿಂದ ಕೆಳಗಿಳಿಯುತ್ತಲೇ ಕೇಶವ್ ಕೂಡ ಕೊಡೆ ಹಿಡಿದು ಜೀಪ್‍ನಿಂದ ಕೆಳಗಿಳಿದರು. ಸ್ಟೇರಿಂಗ್ ಹಿಡಿದು ಕೂತಿದ್ದ ಹರೀಶನೂ ಮಳೆಯಲ್ಲಿ ನೆನೆಯುತ್ತ ಕೆಳಗಿಳಿದ. ಹಿಂದಿನ ಸೀಟಿನಿಂದ ಇಳಿದ ರಂಗಪ್ಪನು ತಲೆಗೆ ಟವಲ್ ಹಿಡಿದು ನಿಂತ. ವೇದ ಏನೂ ಅರ್ಥವಾಗದೆ ಮೂವರನ್ನೂ ಒಮ್ಮೆ ದಿಟ್ಟಿಸಿದಳು. ಅವಳನ್ನು ನೋಡುತ್ತಿದ್ದ ಕೇಶವ್ ತಮ್ಮ ಪ್ಯಾಂಟ್‍ನ ಜೇಬಿನಿಂದ ಮಡಚಿದ್ದ ಹಾಳೆಯೊಂದನ್ನು ಹೊರತೆಗೆದು ವೇದಾಳಿಗೆ ಕಾಣುವಂತೆ ಹಿಡಿದರು. ಅವಳಿಗೆ ಅರ್ಥವಾಯಿತು. ಮಳೆಯ ನೀರಲ್ಲಿ ಹಣೆಗಂಟಿದ್ದ ಮುಂದಲೆಯ ಕೂದಲನ್ನು ಹಿಂದಕ್ಕೆ ಸವರಿ ಅಸಹ್ಯದಿಂದ ರಂಗಪ್ಪನನ್ನೊಮ್ಮೆ ನೋಡಿದಳು. ಹೆಡ್‍ಲೈಟ್‍ನ ಬೆಳಕಲ್ಲಿ ಕಾಣುತ್ತಿದ್ದ ಆ ಅವಳ ಕೊಂಚ ಕೆಂಪಾಗಿದ್ದ ಕಂಗಳನ್ನು ಎದುರಿಸಲಾಗದ ರಂಗಪ್ಪ ಮನೆಯೊಳಗೆ ನಡೆದ. ವೇದ ಹತಾಶೆ ಮತ್ತು ಶರಣಾಗತಿಯಿಂದ ಅಬು ಮತ್ತು ಸಂತುವನ್ನೊಮ್ಮೆ ನೋಡಿ ಮುಗುಳ್ನಕ್ಕಳು. ಮಳೆಯು ಆರ್ಭಟಿಸತೊಡಗಿತು

ಒಂದು ಅದ್ಭುತ ಥ್ರಿಲ್ಲರ್ ಕನ್ನಡದಲ್ಲಿ..

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - 2"  ಈಗ ಆಡಿಯೋ ರೂಪದಲ್ಲಿ. ಕೇಳಿ ಕೇವಲ ನಿಮ್ಮ ಮೈಲ್ಯಾಂಗ್  ಆ್ಯಪ್  ಅಲ್ಲಿ.

 

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)