Click here to Download MyLang App

ಹಿರಣ್ಯಗರ್ಭ - ಅಧ್ಯಾಯ 9 (ಆಡಿಯೋ  ಬುಕ್)

ಹಿರಣ್ಯಗರ್ಭ - ಅಧ್ಯಾಯ 9 (ಆಡಿಯೋ ಬುಕ್)

audio book

ಪಬ್ಲಿಶರ್
ನವೀನ್ ಶಾಂಡಿಲ್ಯ
ಮಾಮೂಲು ಬೆಲೆ
Rs. 17.00
ಸೇಲ್ ಬೆಲೆ
Rs. 17.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ :

28 ನಿಮಿಷ

ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ  ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'

1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ?

2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 

3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 

4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 

5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ? 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ಒಂಬತ್ತನೆಯ  ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
A
Ashwin Rao K P
ಬಹಳ ಚೆನ್ನಾಗಿದೆ. ಕಾದಂಬರಿಕಾರ ನವೀನ್ ಶಾಂಡಿಲ್ಯ ಅವರಿಗೆ ಅಭಿನಂದನೆಗಳು

ಪ್ರತಿಯೊಂದು ಅಧ್ಯಾಯವೂ ನನ್ನನ್ನು ರೋಚಕ ಜಗತ್ತಿಗೆ ಕರೆದುಕೊಂಡು ಹೋಗುತ್ತಿದೆ. ಈಗಲೇ ಹಂಪಿಗೆ ಹೋಗಿ ಅಲ್ಲಿಯ ದೃಶ್ಯಾವಳಿಗಳನ್ನು ನೋಡುವ ಬಯಕೆಯಾಗುತ್ತಿದೆ. ಅಷ್ಟೊಂದು ಪ್ರೇರಣೆಯಾಗಿದೆ. ಕಲಾವಿದರ ಮಾತುಗಳು, ಹಿನ್ನಲೆ ಧ್ವನಿ, ಸಂಗೀತ ಎಲ್ಲವೂ ಪರಸ್ಪರ ತಾಳೆಯಾಗುತ್ತಿದೆ.

R
Ravi Hegde
Tumbaa ishtavaayitu

Nidhi Shodhaa haaguu adannu talupalu henedaa tarkaa hidistu

ರವಿಶಂಕರ್
ನಿಧಿ ಶೋಧನೆಯಲ್ಲಿ ತರಂಗಗಳ ಬಗ್ಗೆ ಅಧ್ಯಯನ !!!

ಅಥರ್ವ ನುಡಿಸಿದ ಹಾಡನ್ನು ರಾಘವನಿಂದ ನಿರೀಕ್ಷಿಸುತ್ತಿದ್ದಾಳೇನೋ ತುಂಟಿ ಗಾರ್ಗಿ...
ಅಥವಾ ಆ ಹಾಡೇ ಮತ್ತೇನಾದರೂ ಸುಳುಹಿನ ಮೂಲವಾ ???

S
Srinivasa Prasad G
ರೋಚಕ ಅದ್ಯಾಯ. ಹಿನ್ನೆಲೆ ಸಂಗೀತ ಸೂಪರ್

ಸಿಮೋಗ್ಲಿಫ್ ಬಗ್ಗೆ ಅರಿವೇ ಇಲ್ಲದವರಿಗೆ ಒಳ್ಳೆಯ ಅರಿವು ಮೂಡುತ್ತದೆ. ತುಂಬಾ ರೋಚಕವಾಗಿದೆ. ನಿಗೂಢತೆಯನ್ನ ಕಾಯ್ದುಕೊಂಡಿದೆ. ರಾಮಾನುಜ ಚಿರಂಜೀವಿ