
ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ದುರ್ಮರಣವೇ ದುಃಖಕರ-ಚಿಕ್ಕ ವಯಸ್ಸಿನ ತರುಣ ಮಕ್ಕಳಂತೂ ಹಾಗೆ ಸತ್ತರೆ ಆ ಕಣ್ಣೀರಿನ ಕತೆಯನ್ನು ಹೇಳಲಸದಳ. ಅದರ ನಡುವೆಯೇ ಭ್ರಷ್ಟ ಉದ್ಯೋಗಿಗಳು ಲಂಚಕ್ಕಾಗಿ ನಾನಾ ವಿಧವಾಗಿ ಒತ್ತಾಯಿಸಿ ಅಮಾಯಕ ಜನರಿಗೆ ಕೊಡುವ ಕಿರುಕುಳ ತೀರಾ ಅನಾಗರಿಕ ಮತ್ತು ಅಮಾನವೀಯ. ಅದನ್ನು ಪ್ರತಿಭಟಿಸಲೆಂದೇ ಅತ್ಯುಗ್ರವಾದ ಸತ್ಯಾಗ್ರಹದಿಂದ, ಅದರ ಅಭಿವ್ಯಕ್ತಿಗೆ ತಕ್ಕುದಾಗಿ ಕುದಿಯುವ ಭಾಷೆಯಿಂದ, ಉಕ್ಕುವ ಸಂಭಾಷಣೆಯಿಂದ ಅತ್ಯಂತ ವಾಸ್ತವಿಕವಾಗಿ ಈ ನಾಟಕವನ್ನು ನೀವು ನಿರೂಪಿಸಿದ್ದೀರಿ.
-ಎಲ್. ಬಸವರಾಜು
ಮನುಷ್ಯ ಕ್ರೂರಿಯಾಗುತ್ತ ಹೋಗುತ್ತಿರುವ ಇಂದಿನ ದಿನಗಳಲ್ಲಿ ಅವನನ್ನು ಸರಿದಾರಿಗೆ ತರುವುದೇ ಸಾಧ್ಯವಿಲ್ಲವೇನೋ ಅನಿಸುತ್ತಿದೆ. ನಿಮ್ಮ ನಾಟಕ ಈ ಬಗ್ಗೆ ವಿಚಾರ ಮಾಡಲು ಹಚ್ಚುತ್ತದಲ್ಲ ಎಂಬುದೇ ಸಂತಸದ ವಿಷಯ.
-ನಾ.ಡಿಸೋಜ
ನಾಟಕ ಸುಲಭವಾಗಿ ಓದಿಸಿಕೊಳ್ಳುತ್ತದೆ. ಮಂಡ್ಯ ಜಿಲ್ಲೆಯ ಆಡುಭಾಷೆಯು ನಾಟಕದ ಜೀವಾಳವಾಗಿದೆ. ವಸ್ತುವಿನ ಆಯ್ಕೆ ಮತ್ತು ನಿರೂಪಣೆಯಲ್ಲಿ ಹೊಸತನವಿದೆ, ಲವಲವಿಕೆಯಿದೆ. ಸಮಾಜ ಶುದ್ಧೀಕರಣದ ಹಿನ್ನೆಲೆಯಲ್ಲಿ ಇಂತಹ ಅಭಿವ್ಯಕ್ತಿ ಸ್ವಲ್ಪವಾದರೂ ಪರಿಣಾಮ ಬೀರುತ್ತದೆ.
-ಡಿ. ಲಿಂಗಯ್ಯ
ನಿಮ್ಮ ಹೊಸ ನಾಟಕ ‘ಹೆಣದ ಹಣ' ಓದಿದೆ. ನಿಮ್ಮನ್ನು ಬದುಕಿನ ಭ್ರಷ್ಟತೆ ತುಂಬಾ ಕಾಡುತ್ತಿದೆ. ಈ ಭ್ರಷ್ಟತೆಗೂ ನಮ್ಮ ಸಾಮಾಜಿಕ ಧಾರ್ಮಿಕ ನೈತಿಕ ಮೌಲ್ಯಗಳಿಗೂ ನೇರ ಸಂಬಂಧವಿದೆ. ಇವುಗಳ ಶೋಧ ನಡೆಸಬೇಕಾಗಿದೆ. ನಿಮ್ಮ ಈ ನಾಟಕದ ವಿಶೇಷವೆಂದರೆ-ನಿಮ್ಮ ಬೆಳವಣಿಗೆಯೂ ಹೌದು-ಸಾಮಾಜಿಕ ಶೋಧ ಆತ್ಮಶೋಧವೂ ಆದಾಗ ಮಾತ್ರ ವ್ಯಕ್ತಿತ್ವ ವಿಕಾಸ ಸಾಧ್ಯವೆಂಬ ಆಶಯಕ್ಕೆ ಬಂದಿರುವುದು. ನಿಮ್ಮ ಹಿಂದಿನ ನಾಟಕಗಳ ಶೋಧ ಬಾಹ್ಯ ಪ್ರಪಂಚಕ್ಕೆ ಪ್ರಶ್ನೆಗಳನ್ನು ಹಾಕುವಂತಿದ್ದರೆ, ಇಲ್ಲಿ ಬಾಹ್ಯವನ್ನು ಒಳಗೊಂಡ ಅಂತರಂಗದ ಅವಲೋಕನಕ್ಕೆ ವಿಸ್ತರಿಸಿದೆ.
-ಶಿವರಾಮು ಕಾಡನಕುಪ್ಪೆ
ಪುಟಗಳು: 50
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !