Click here to Download MyLang App

ಡೊಳ್ಳಿನ ಹಾಡುಗಳು (ಪ್ರಿಂಟ್ ಪುಸ್ತಕ)

ಡೊಳ್ಳಿನ ಹಾಡುಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಸಿದ್ದಣ್ಣ ಎಫ್. ಜಕಬಾಳ
ಮಾಮೂಲು ಬೆಲೆ
Rs. 360.00
ಸೇಲ್ ಬೆಲೆ
Rs. 360.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕರ್ನಾಟಕದ ಜನಪದ ಕಲೆಗಳಲ್ಲಿ “ಡೊಳ್ಳು ಕಲೆ"ಯೂ ಒಂದು. ಕುಣಿತ, ಹಾಡುಗಾರಿಕೆಯನ್ನು ಒಳಗೊಂಡ ಒಂದು ಪ್ರದರ್ಶನಾತ್ಮಕ ಕಲೆಯಾಗಿ ಇಂದಿಗೂ ತನ್ನ ಅನನ್ಯತೆಯನ್ನು ಉಳಿಸಿಕೊಂಡಿದೆ. ಹಾಲುಮತ ಸಾಂಸ್ಕೃತಿಕ ನಾಯಕರಾದ ರೇವಣಸಿದ್ದೇಶ್ವರ, ಅಮೋಘಸಿದ್ದೇಶ್ವರ, ಬೀರಪ್ಪ, ಮಾಳಿಂಗರಾಯ, ಇಟ್ಟಪ್ಪ ಮೊದಲಾದವರ ಚರಿತ್ರೆ-ಚಾರಿತ್ರ್ಯವನ್ನು ಡೊಳ್ಳಿನ ಹಾಡುಗಳಲ್ಲಿ ಜನಪದರು ಕಟ್ಟಿಕೊಟ್ಟಿದ್ದಾರೆ. ಅಷ್ಟೇ ಏಕೆ, ಹಾಲುಮತ ಸಮುದಾಯದ ಪರಂಪರೆ-ಸಂಪ್ರದಾಯ, ಸಂಸ್ಕೃತಿಯನ್ನು ತಿಳಿದುಕೊಳ್ಳುವಲ್ಲಿ ಈ ಹಾಡುಗಳು ಬಹುಮುಖ್ಯ ಆಕರಗಳಾಗಿ ನೆರವಿಗೆ ಬರುತ್ತವೆ. ಮೌಖಿಕರೂಪದಲ್ಲಿರುವ ಇಂಥ ಹಾಡುಗಳ ಸಂಗ್ರಹ-ಸಂಪಾದನೆ ಮತ್ತು ಪ್ರಕಟಣಕಾರ್ಯ ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ. - ಈ ಕೊರತೆಯನ್ನು ಮನಗಂಡು ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠವು ಡೊಳ್ಳಿನ ಹಾಡುಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ರೂಪಿಸಿದೆ. ಆ ಯೋಜನೆಯಲ್ಲಿ ಮೊದಲ ಸಂಪುಟವಾಗಿ ಡಾ.ಸಿದ್ದಣ ಎಫ್, ಜಕಬಾಳ ಅವರು ಸಂಪಾದಿಸಿದ “ಡೊಳ್ಳಿನ ಹಾಡುಗಳು” ಗ್ರಂಥವು ಈಗ ಬೆಳಕು ಕಾಣುತ್ತಲಿದೆ. ದೇವತಾಸ್ತುತಿ, ದೇವರ ಕರೆಯುವ ಹಾಡುಗಳು, ಸಂಪ್ರದಾಯದ ಹಾಡುಗಳು, ಹರಕೆಯ ಪದಗಳು, ಸಂಧಿನ ಪದಗಳು, ಮಾರ್ಗದ ಹಾಡುಗಳು, ಚರಿತ್ರೆಯ ಹಾಡುಗಳು, ಪೌರಾಣಿಕ ಹಾಡುಗಳು, ತರ್ಕ ಸಿದ್ಧಾಂತದ ಪದಗಳು -ಹೀಗೆ ೯ ಭಾಗಗಳಲ್ಲಿ ೧೨೨ ಡೊಳ್ಳಿನ ಹಾಡುಗಳಿವೆ. ಈ ಹಾಡುಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಸಾಂಸ್ಕೃತಿಕ ಮತ್ತು ಚಾರಿತ್ರಿಕವಾಗಿ ಅನೇಕ ಸಂಗತಿಗಳು ತಿಳಿದುಬರುತ್ತವೆ. ಇಲ್ಲಿನ ಹಾಡುಗಳನ್ನು ಕ್ಷೇತ್ರಕಾರ್ಯದ ಮೂಲಕ ಶೋಧಿಸಿ, ವ್ಯವಸ್ಥಿತವಾಗಿ ಸಂಪಾದನೆ ಮಾಡಿಕೊಟ್ಟ ಕನ್ನಡದ ಹಿರಿಯ ಜಾನಪದ ವಿದ್ವಾಂಸರಾದ ಡಾ. ಸಿದ್ದಣ್ಣ ಎಫ್. ಜಕಬಾಳ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 414

Customer Reviews

No reviews yet
0%
(0)
0%
(0)
0%
(0)
0%
(0)
0%
(0)