Click here to Download MyLang App

ದೇಹ ದೇಗುಲ (ಆಡಿಯೋ ಕತೆ),ಅನಂತ ಕುಣಿಗಲ್,Deha Degula (Audio Kate),Ananta Kunigal,ನಾಗರಾಜ್ ವಸಿಷ್ಠ ,Nagaraj Vasista,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ದೇಹ ದೇಗುಲ (ಆಡಿಯೋ ಕತೆ)

ಪಬ್ಲಿಶರ್
ಅನಂತ ಕುಣಿಗಲ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಅನಂತ ಕುಣಿಗಲ್
ಓದಿದವರು: ನಾಗರಾಜ್ ವಸಿಷ್ಠ 
ಕತೆಯ ಪ್ರಕಾರ: ರೋಮ್ಯಾನ್ಸ್

ಸರಿದಾರಿ ಆಯ್ದುಕೊಳ್ಳಲು ಯಾರ ಅಪ್ಪಣೆಯೂ ಬೇಕಿಲ್ಲ. ಇಲ್ಲೊಬ್ಬಳು ಸುಂದರಿ ಮೊದಲಬಾರಿಗೆ, ತನ್ನ ದೇಹ ಬಿಟ್ಟು, ಉಪ್ಪಿಟ್ಟು ಉಣಬಡಿಸಲು ಹಾತೊರೆಯುತ್ತಿದ್ದಾಳೆ.

ದೇಹ ದೇಗುಲ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 6 reviews
67%
(4)
33%
(2)
0%
(0)
0%
(0)
0%
(0)
S
Somashekhar Bavur
ಅದ್ಭುತವಾಗಿದೆ... ಮುಂದಿನ ಭಾಗಕ್ಕೆ ಕಾಯುತ್ತಿರುವೆ..

ಯಾವುದೋ ವಯಕ್ತಿಕ ತೊಂದರೆಗಳ ಕಾರಣಕ್ಕೆ ಹಳ್ಳಿಯಿಂದ ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಬಂದು ಜೀವನ ಸಾಗಿಸಲು ಹಳ್ಳಿಯ, ವಿದ್ಯಾಭ್ಯಾಸ ಗೊತ್ತಿಲ್ಲದ ಜನರು ಏನೆಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಅನ್ನೋದರ ಬಗ್ಗೆ ಉತ್ತಮವಾದ ಕಥೆ ಮತ್ತು ನಿರೂಪಣೆ...

ಹಳ್ಳಿಯಿಂದ ತಾಯಿ ಮರಣ ಹೊಂದಿದಳು ಎಂಬ ಕಾರಣಕ್ಕೆ ಚಿಕ್ಕಪ್ಪನ ಮಾತು ಕೇಳಿ ಬೆಂಗಳೂರಿಗೆ ಬರುವ ಸುನಿತಾ.
ಸುನಿತಾಳಿಗೆ ಮದುವೆ ಮಾಡಿಸುವುದಾಗಿ ಗಂಡು ನೋಡುವ ಚಿಕ್ಕಪ್ಪ, ಆ ಗಂಡು ಮದುವೆ ಆಗುತ್ತಾನೆಂದು ನಂಬಿದ ಅಮಾಯಕ ಸುನಿತಾ ಆತನೊಂದಿಗೆ ಹೊರಗಡೆ ಹೋಗಿ ದೇಹ ಹಂಚಿಕೊಳ್ಳುವುದು. ಹೀಗೆ ಏನು ತಿಳಿಯದ ಅವಳನ್ನ ಮನೆಯ ಓನರ್ ಗೆ ಮಾರುವ ಚಿಕ್ಕಪ್ಪ.. ಈ ವಿಷಯ ತಿಳಿದು ಪೊಲೀಸರು ಆಕೆಯನ್ನು ಕರೆದುಕೊಂಡು ಹೋಗೋದು.. ಇನ್ನೊಬ್ಬ ರೌಡಿಗಳನ್ನು ಬಿಡಿಸಿಕೊಂಡು ಹೋಗಲು ಠಾಣೆಗೆ ಹೋದಾಗ ಸುನಿತಾಳ ಬಗ್ಗೆ ಪೊಲೀಸರು ಆತನಿಗೆ ಹೇಳುವುದು.. ಆತ ಆಕೆಯನ್ನು ಜೈಲಿಂದ ಬಿಡಿಸಿದಾಗಲೂ ಆಕೆ ಅದೇ ಮನೆಯಲ್ಲಿ ತನ್ನ ಜೀವನ ಮುಂದುವರೆಸುವ ತವಕ.. ಇನ್ನೂ ತಾಯಿಯ ಮಾತು ಕೇಳದೆ ಬೆಂಗಳೂರಿಗೆ ಬರುವ ಸೋಮು, ಚಲನ ಚಿತ್ರ ಮಾಡಬೇಕು ಎಂದು ಅಲೆದಾಡುವಾಗ ಆತನ ಕಥೆಗೆ ಸಹಕರಿಸದ ನಿರ್ಮಾಪಕರು.. ನಿರ್ಮಾಪಕರಿಗೆ ಬೇಕಾದಂತಹ ಕಥೆ ಬರೆಯಲು ಸೂಳೆಯರ, ರೌಡಿಗಳ ಅಡ್ಡಗಳನ್ನು ಹುಡುಕಿ ಆತನೇ ಹೋಗುವ ದೈರ್ಯ ಮಾಡಿ ಸುನಿತಾಳ ನಂಬಿಕೆ ಗಿಟ್ಟಿಸಿಕೊಂಡು ಅವಳದ್ದೇ ಸ್ಟೋರಿಯನ್ನು ಕಥೆಯಾಗಿ ಸೃಷ್ಟಿಸುವ ದೃಢ ನಿರ್ಧಾರ.. ಇನ್ನೂ ಕಥೆ ಕೇಳುವಾಗ ಮುಂದೇನಿರಬಹುದು ಎಂಬ ಕುತೂಹಲ, ಕಥೆ ಮುಕ್ತಾಯಗೊಂಡ ಕೊನೆಗೆ ಆ ಹಳ್ಳಿಯಿಂದ ಬಂದ ಸೋಮು ಚಲನಚಿತ್ರ ನಿರ್ದೇಶನ ಮಾಡುತ್ತಾನೋ ಎನೋ ಎಂಬಂತೆ ಹುಟ್ಟುವ ಪ್ರಶ್ನೆ ಒಟ್ಟಾರೆಯಾಗಿ ಅದ್ಬುತವಾದ ಕಥೆ ಹೆಣೆದು ಉಣಬಡಿಸಿದ ಅನಂತ್ ಹಾಗೂ ಕತೆಗೆ ದನಿಯಾದ ನಾಗರಾಜ್ ವಸಿಷ್ಠ ಅವರಿಗೆ ಧನ್ಯವಾದಗಳೊಂದಿಗೆ ಅಭಿನಂದನೆಗಳು..

ಅನಂತ್ ಅವರು ಇನ್ನಷ್ಟು ಕಥೆಗಳನ್ನು ಬರೆಯಲಿ ಹಾಗೂ ನಾಗರಾಜ್ ಅವರು ಇನ್ನಷ್ಟು ಕತೆಗಳಿಗೆ ಧನಿಯಾಗಲಿ ಎಂದು ಹಾರೈಸುತ್ತೇನೆ...

ಪುನೀತ್ ಕುಮಾರ್ ವಿ
ಕಾಡುವ ಕಥೆ.

ನಾಗರಾಜ್ ವಸಿಷ್ಠ ಅವರು ಕತೆಯ ಪಾತ್ರಗಳಿಗೆ ಸಮರ್ಥವಾಗಿ ದನಿಯಾಗಿದ್ದಾರೆ.

ಯುವಕ/ಯುವತಿಯರು ಏನೇನೊ ಕನಸುಗಳನ್ನು ಹೊತ್ತು
ಹಳ್ಳಿಯಿಂದ ನಗರಕ್ಕೆ ಬಂದು, ಅವುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಪಡುವ ಪಾಡು, ಎದುರಿಸುವ ಸಂಕಷ್ಟ, ಸಾಧಿಸಲಾಗದ ಅಸಹಾಯಕತೆಯನ್ನು ಸೋಮುವಿನ ಪಾತ್ರದ ಮೂಲಕ ಅನಂತ ಅವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ..

ಸೋಮುವಿನ ಕನಸಿಗೆ ಬಲ ತುಂಬುವ ಸುನೀತಾ, ಸುನೀತಾಳ ಬದುಕಿನ ದಿಕ್ಕನ್ನೇ ಬದಲಾಯಿಸುವತ್ತ ಸೋಮು, ಇವರಿಬ್ಬರ ನಿಷ್ಕಲ್ಮಶ ಸ್ನೇಹ ಕಥೆಯ ಮುಖ್ಯ ತಿರುವು..

ಶುಭವಾಗಲಿ ಅನಂತ್ ಮತ್ತಷ್ಟು ಬರೆಯಿರಿ..

p
p

ತುಂಬಾ ಚೆನ್ನಾಗಿದೆ..ವಾಚನ ಕೂಡ ಅದ್ಭುತವಾಗಿದೆ

p
p.

ತುಂಬಾ ಒಳ್ಳೆಯ ಕಥೆ. ಸೋಮು,ಸುನಿತಾ ಪಾತ್ರಗಳು ಮನ ಮುಟ್ಟಿತು.ಕಥೆ ಕೇಳುತ್ತಾ ಹೋದಂತೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.
ಕಥೆ ಮುಗಿದದ್ದೆ ತಿಳಿಯಲಿಲ್ಲ..ನಾಗರಾಜ್ ಸರ್ ಅವರ ಧ್ವನಿ ಅದ್ಭುತವಾಗಿದೆ..ಶುಭವಾಗಲಿ ನಿಮಗೆ.ಇನ್ನಷ್ಟು ಬರೆಯಿರಿ

k
komala MV

ಕೆಲವೊಬ್ಬರ ಬದುಕು ಹೀಗೆ ಆಗಿರುತ್ತೆ ಅಲ್ವಾ.. ಎಲ್ಲಿಂದೆಲ್ಲಿಗೆ ಸುನಿತಾಳ ಜೀವನ! ಅವಳ ಜೀವನದಲ್ಲಿ ನಂಬಿ ಮೋಸ ಮಾಡಿದವರು ಇದ್ದಾರೆ., ಹಾಗೆಯೇ ನಂಬಿಕೆಯನ್ನು ಉಳಿಸಿಕೊಂಡವರು ಸಿಕ್ಕರು..!!
ಚೆನ್ನಾಗಿದೆ ಕಥೆ.. ನಾಗರಾಜ್ ಅವರ ವಾಯ್ಸ್ ಅಲ್ಲಿ ಕೇಳೋಕೆ ಚೆನ್ನಾಗಿದೆ..!