
ಎಲ್ಲಿ ನೋಡಿದರೂ ಕೊರೊನಾ ವೈರಸ್ಸಿನದ್ದೇ ಸುದ್ದಿ. ಸೋಶಿಯಲ್ ಮಿಡಿಯಾ ಹಾಗೂ ಸುದ್ದಿವಾಹಿನಿಗಳಲ್ಲಿ ಬರುವ ಅತೀರಂಜಿತ ಸುದ್ದಿಗಳಿಂದಾಗಿ ಸಾಮಾನ್ಯ ಜನರು ಇದರ ಬಗ್ಗೆ ತಿಳುವಳಿಕೆಗಿಂತ ಹೆಚ್ಚು ತಪ್ಪು ಮಾಹಿತಿ ಮತ್ತು ಭಯವನ್ನು ಹಂಚುತ್ತಿದ್ದಾರೆ. ಇದನ್ನು ಕಡಿಮೆ ಮಾಡಿಸಿ, ಇದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಈ ಉಚಿತ ಆಡಿಯೋ ಬುಕ್ ಅನ್ನು ಮೈಲ್ಯಾಂಗ್ ಜಾಣಸುದ್ದಿ ಆಡಿಯೋ ಪತ್ರಿಕೆಯ ಸಹಯೋಗದೊಂದಿಗೆ ಹೊರತಂದಿದೆ. ಜಾಣಸುದ್ದಿ ತಂಡದ ಮೂಲಕ ನಿರಂತರವಾಗಿ ಆಡಿಯೋ ಪಾಡ್ಕಾಸ್ಟ್ ಮೂಲಕ ಸಾಮಾನ್ಯ ಜನರನ್ನು ವಿಜ್ಞಾನದ ಹತ್ತಿರಕ್ಕೆ ಕರೆ ತರುತ್ತಿರುವ ಕೊಳ್ಳೆಗಾಲ ಶರ್ಮ ಹಾಗೂ ಅವರ ತಂಡದ ಡಾ. ಕಿರಣ್ ಸೂರ್ಯ, ಶರತ್ ಬಿಜೂರು ಮತ್ತು ಮಾದಲಾಂಬಿಕ ಅವರ ಸಹಕಾರದಿಂದ ಈ ಆಡಿಯೋಬುಕ್ ಇಲ್ಲಿ ಸಾಧ್ಯವಾಗಿದೆ. ಇದರಲ್ಲಿನ ಮಾಹಿತಿಯನ್ನು ಜಾಣಸುದ್ದಿ ತಂಡ ಹೊರತಂದಿದ್ದು ಅವರಿಗೆ ಕೃತಜ್ಞತೆ ಅರ್ಪಿಸುತ್ತ ಮೈಲ್ಯಾಂಗ್ ಓದುಗರಿಗೆ ಇದನ್ನು ತಲುಪಿಸುತ್ತಿದ್ದೇವೆ. ಇದು ಈ ಹೊತ್ತಿನ ಕಳವಳಕ್ಕೆ ನಮ್ಮ ಕಿರು ಸ್ಪಂದನೆ ಎಂದು ಭಾವಿಸುತ್ತೇವೆ. ಈ ಆಡಿಯೋ ಪುಸ್ತಕದಲ್ಲಿನ ಭಾಗಗಳು ಜಾಣಸುದ್ದಿ ಪಾಡ್ಕಾಸ್ಟಿನಲ್ಲಿ ಕೊರೊನಾ ಕುರಿತಂತೆ ಜನವರಿಯಿಂದ ಇಲ್ಲಿಯವರೆಗೆ ಪ್ರಸಾರವಾದ ನಾಲ್ಕು ಪಾಡ್ಕಾಸ್ಟಿನಿಂದ ಆಯ್ದುಕೊಳ್ಳಲಾಗಿದೆ.