Click here to Download MyLang App

ಚಂದ್ರಗಿರಿ ತೀರದಲ್ಲಿ (ಪ್ರಿಂಟ್ ಪುಸ್ತಕ)

ಚಂದ್ರಗಿರಿ ತೀರದಲ್ಲಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಸಾರಾ ಅಬೂಬಕ್ಕರ್
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

“ಚಂದ್ರಗಿರಿಯ ತೀರದಲಿ” ಮನ ಮುಟ್ಟುವಂತ ಕಾದಂಬರಿ… ಇಬ್ಬರು ಪ್ರೇಮಿಗಳು ಪರಸ್ಪರ ಮನಸ್ಸಿನಿಂದ ಆತ್ಮೀಯತೆಯಿಂದಿರುವ ಸಮಯದಲ್ಲಿ ಬೇರೊಬ್ಬರ ಆಗಮನದಿಂದ, ಯಾರದ್ದೊ ಸೇಡಿನ ಕಿಡಿಯಿಂದ, ಮುಗ್ದರಾದ ಇವರಿಬ್ಬರು ದೂರವಾದರೆ ಓದುಗರ ಮನಸ್ಸು ವಿಲವಿಲನೇ ಒದ್ದಾಡುತ್ತದೆ… ಆದರಿಲ್ಲಿ ಹಿರಿಯರ ಸಮ್ಮತದಿಂದ, ಅವರೇ ನಿಶ್ಚಯಿಸಿ ಮಾಡಿದ ಮದುವೆ… ಗಂಡ-ಹೆಂಡತಿಯ ಅನೋನ್ಯವನ್ನು ಕಂಡು ಮನಸ್ಸು ಪುಲಕಿತಗೊಳ್ಳುವುದು… ಆದರೆ ಆ ಸಂತೋಷವು ಅಲ್ಪಾಯುಷಿ… ಬಹುಕಾಲ ಇವರಿಬ್ಬರನ್ನು ಬಾಳಲು ಬಿಡದಂತೆ ಬಂದೆರಗಿತು ಒಂದು ಬಿರುಗಾಳಿ, ಹೆಂಡತಿಯ ತಂದೆಯ ಮುಖಾಂತರ… ಮುಂಗೋಪಿ, ಅಹಂಕಾರಿಯಾದ ಮಾವನೂ, ಸಹೃದಯಿಯಾದ ಅಳಿಯನಿಂದಾದ ಸಣ್ಣ ನಿರ್ಲಕ್ಷ್ಯವನ್ನೇ ದೊಡ್ಡದಾಗಿ ಮಾಡಿ, ಮಗಳನ್ನೇ ಅವನಿಂದ ಬೇರ್ಪಡಿಸಿ, ಅವಳ ಬಾಳಿನಲ್ಲಿ ಆತನಿಗೇ ಅರಿವಿಲ್ಲದೇ ದುರಂತ ಪರಿಣಾಮವನ್ನು ಬೀರಿ ಬಿಡುತ್ತಾನೆ…. ಗಂಡ ಒಳ್ಳೆಯವನಾದರೂ, ಪ್ರತಿಷ್ಟೆಯೇ ಪ್ರಾಮುಖ್ಯವಾಗಿ ಬಿಡುತ್ತದೆ ಆತನಿಗೂ… ಇವರಿಬ್ಬರ ನಡುವೆ ಆ ಹುಡುಗಿ ತಬ್ಬಲಿಯಾದಳು… ತಂದೆಯ ಮಾತಿನಂತೆ ಗಂಡನಿಗೆ ತಲಾಖ್ ನೀಡಿ ಬೇರೊಬ್ಬನನ್ನು ನಿಖಾ ಮಾಡಲು ಸಮ್ಮತವಿಲ್ಲ… ಅದನ್ನು ತಂದೆಯ ಬಳಿ ಹೇಳಲು ಧೈರ್ಯವು ಇಲ್ಲ… ಗಂಡನ ಕಂಡು ತನ್ನ ಮನದಭಿಲಾಷೆಯನ್ನು ಹೇಳಲು ದಾರಿಯಿಲ್ಲ… ಇದೊಬ್ಬ ಕಂದನನ್ನು ಅತ್ತೆ ಬಂದು ಕಸಿದು ಕೊಂಡು ಹೋದರು… ಅವಳಿಗೆ ತಿಳಿಯದೆಯೇ, ತಂದೆಯ ಕುತಂತ್ರದಿಂದ ಗಂಡನಿಂದ ತಲಾಖ್ ಪಡೆದ ನತದೃಷ್ಟೆ…. ಯಾರಿಗೂ ಬೇಡದವಳಾಗಿ, ಬಾಳಲು ಜುಗುಪ್ಸೆಯೊಂದಿ….. ಕೊನೆಗೆ ಚಂದ್ರಗಿರಿಯ ನದಿಯ ಮೊರೆಯೊದಳು ಆಸೀಫ….
ಕರುಣೆಯೇ ಇಲ್ಲದ ತಂದೆ, ಗಂಡ ಮತ್ತು ಸಮಾಜವನ್ನೆದುರಿಸಲು ಮುಗ್ದೆಯಾದ ಆಸೀಫಳಿಂದ ಸಾಧ್ಯವಾಗದೇ ಅವಳ ಅಂತ್ಯವನ್ನು ಅವಳೇ ನಿರ್ಣಯಿಸಿದಳು… 

ಬರೀ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಎಲ್ಲಾ ಸಮುದಾಯದಲ್ಲೂ ಆಸೀಫಳಂತಹ ಎಷ್ಟೋ ಹೆಣ್ಣು ಮಕ್ಕಳ ಬಾಳು ದುರಂತದಲ್ಲಿ ಕೊನೆಗೊಂಡಿದೆ…

ಧನ್ಯವಾದಗಳು


-ದೇವಿ ಶ್ರೀ ಪ್ರಸಾದ್

 

ಕೃಪೆ    https://pustakapremi.wordpress.com/

 

ಪುಟಗಳು : 119

Customer Reviews

No reviews yet
0%
(0)
0%
(0)
0%
(0)
0%
(0)
0%
(0)