
ಪ್ರಿಯ ಓದುಗರೇ ,
ನನ್ನ ಬಹಳ ದಿನಗಳ ಕನಸು ಕಾಲಯಾನದ ಬಗ್ಗೆ ಕಥೆಯನ್ನು ಬರೆಯಬೇಕೆಂಬುದು. ತರಾಸು ಮತ್ತು ಹೆಚ್ ಜಿ ವೆಲ್ಸ್ ಲೇಖಕರ ಕಥೆಗಳು ನನಗೆ ಸ್ಫೂರ್ತಿ. "ನಾಳೆಯನ್ನು ಕಂಡವನು" ಎಂಬ ನನ್ನ ಕಾಲ್ಪನಿಕ ಕಥೆಯನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ಇಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ, ಇಲ್ಲಿ ನಾಡ ಪ್ರಭು ಕೆಂಪೇಗೌಡರ ಪಾತ್ರವೂ ಬರುತ್ತದೆ, ಇದು ಕಥೆಗೆ ಅನುಗುಣವಾಗಿ ಬಳಸಲಾಗಿದೆ, ಬೇರೆ ಯಾವ ಉದ್ದೇಶವೂ ಇಲ್ಲ.ಈ ಕಥೆಯಲ್ಲಿ ಬರುವ ನಾಯಕ ಪ್ರದ್ಯುಮ್ನ ಕಾಲಯಂತ್ರದ ಪ್ರಯೋಗದಲ್ಲಿ ಹೇಗೆ ಭೂತಕಾಲ ಮತ್ತು ವರ್ತಮಾನಗಳಿಗೆ ಪಯಣಿಸಿ ಹೇಗೆ ಹಾಗು ತನ್ನ ಅನುಭವಗಳನ್ನು ಇತರೆ ಪಾತ್ರಗಳೊಂದಿಗೆ ಹೇಗೆ ಹಂಚಿಕೊಳ್ಳುತ್ತಾನೆ. ಮುಖ್ಯವಾಗಿ ಕಾಲಯಂತ್ರದಲ್ಲಿ ಸ್ವಸ್ಥಾನಕ್ಕೆ ಬರುತ್ತಾನೆಯೇ ಎಂಬುದುದನ್ನು ಓದಿ ತಿಳಿದುಕೊಳ್ಳಬಹುದು.
ವಂದನೆಗಳೊಂದಿಗೆ
ಇಂದಿರಾತನಯ(ಹರೀಶ ಕೃಷ್ಣಪ್ಪ)