Click here to Download MyLang App

ಬಿಡುಗಡೆ (ಪ್ರಿಂಟ್ ಪುಸ್ತಕ)

ಬಿಡುಗಡೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎ.ಎನ್. ಪ್ರಸನ್ನ
ಮಾಮೂಲು ಬೆಲೆ
Rs. 195.00
ಸೇಲ್ ಬೆಲೆ
Rs. 195.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರಸನ್ನರ ಪ್ರಸ್ತುತ ಕಥಾಸಂಕಲನ ಅವರ ಆರನೆಯದು. ಸದಾ ಪ್ರಯೋಗಶೀಲರಾಗಿರುವ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಹಿಂದಿನ ಸಂಕಲನದ ಕಥೆಗಳಿಗಿಂತ ಭಿನ್ನವಾಗಿವೆ. ಈ ವರೆಗಿನ ಕಥೆಗಳು ಬಹುಮಟ್ಟಿಗೆ ವ್ಯಕ್ತಿಸಮಾಜಗಳ ನಡುವೆ ಇರುವ ಸಂಬಂಧಗಳನ್ನು ಸೂಕ್ಷವಾಗಿ ಕಟ್ಟಿಕೊಟ್ಟರೆ, ಈ ಸಂಕಲನದ ಕಥೆಗಳು ಸಂಪೂರ್ಣವಾಗಿ ವ್ಯಕ್ತಿಗಳ ಭಾವನೆಗಳು ಹಾಗೂ ಮಾನಸಿಕ ತುಮುಲಗಳಿಗೆ ಒತ್ತುಕೊಡುತ್ತಾ ವ್ಯಕ್ತಿಯ ಕೌಟುಂಬಿಕ ಸಂಬಂಧಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ. ಈ ಸಂಕಲನದ ಕಥೆಗಳನ್ನು, ಸ್ಥೂಲವಾಗಿ, ಎರಡು ವರ್ಗಗಳಲ್ಲಿ ನೋಡಬಹುದು: ವರ್ಷ ಇಡೀ ವಿಶ್ವವನ್ನು ಆಕ್ರಮಿಸಿರುವ ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬರೆದಿರುವ ಕಥೆಗಳು ನಾಲ್ಕು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿನ್ನೆಲೆಯಲ್ಲಿ ಬರೆದಿರುವ ಕಥೆಗಳು ಆರು, ಮೊದಲನೆಯ ವರ್ಗದ ಕಥೆಗಳಲ್ಲಿ ತುಂಬಾ ಹೃದಯಸ್ಪರ್ಶಿಯಾಗಿರುವ ಸಫಲ ಕಥೆಗಳೆಂದರೆ "ಬಿಡುಗಡೆ” ಮತ್ತು “ಹೊರಳು", ಮಾನವೀಯತೆ ಕರೋನಾ ಕಾಲದಲ್ಲಿಯೂ ಗೆಲ್ಲುತ್ತದೆ ಎಂಬುದನ್ನು ಮನೋಜ್ಞವಾಗಿ ಈ ಕಥೆಗಳು ದಾಖಲಿಸುತ್ತವೆ.

ಎರಡನೆಯ ವರ್ಗದಲ್ಲಿ ಬರುವ ಆರು ಕಥೆಗಳಲ್ಲಿ ವ್ಯಕ್ತಿಯ ಭಾವಕೋಶದ ಆಳವಾದ ವಿಶ್ಲೇಷಣೆ ಮುಖ್ಯವಾಗುತ್ತದೆ; ಎಲ್ಲಾ ಕಥೆಗಳ ಕಥನದ ನೆಲೆಯಲ್ಲಿ ಸಫಲವಾದರೂ, "ಪಾರ್ಕ್” ಮತ್ತು “ಹುಡುಕಾಟ” ತಮ್ಮ ವಿಶಿಷ್ಟ ವಸ್ತುವಿನ ಕಾರಣದಿಂದ ಎದ್ದು ಕಾಣುತ್ತದೆ.

ಪ್ರಾರಂಭದಿಂದಲೂ ಪ್ರಸನ್ನ ಅವರ ಕಥೆಗಳನ್ನು ಹಾಗೂ ಅನುವಾದಗಳನ್ನು ಓದುತ್ತಿರುವ ನನಗೆ ವಸ್ತು ಹಾಗೂ ನಿರೂಪಣೆ ಇವೆರಡು ನೆಲೆಗಳಲ್ಲಿಯೂ ಅವರು ಸದಾ ಹೊಸತನದ ಹುಡುಕಾಟದಲ್ಲಿರುವ ಪರಿ ವಿಸ್ಮಯವನ್ನುಂಟುಮಾಡಿದೆ. ಸಂತೋಷವನ್ನು ಕೊಟ್ಟಿದೆ. ಇದೇ ಶೋಧ ಮುಂದುವರೆಯಲಿ ಎಂದು ನಾನು ಹಾರೈಸುತ್ತೇನೆ.
.ಎನ್. ರಾಮಚಂದ್ರನ್

 

ಪುಟಗಳು: 200

Customer Reviews

No reviews yet
0%
(0)
0%
(0)
0%
(0)
0%
(0)
0%
(0)