Click here to Download MyLang App

ಭಾವಚಿಂತಾರತ್ನ ಟೀಕು (ಪ್ರಿಂಟ್ ಪುಸ್ತಕ)

ಭಾವಚಿಂತಾರತ್ನ ಟೀಕು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಡಿ. ವಿ. ಪರಮಶಿವಮೂರ್ತಿ
ಮಾಮೂಲು ಬೆಲೆ
Rs. 400.00
ಸೇಲ್ ಬೆಲೆ
Rs. 400.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರಾಚೀನ ಕನ್ನಡ ಕಾವ್ಯ ಪರಂಪರೆಯಲ್ಲಿ ಟೀಕು, ವ್ಯಾಖ್ಯಾನ, ಭಾಷ್ಯ ಬರೆಯುವುದು ಒಂದು ಸ್ವತಂತ್ರ ಸಾಹಿತ್ಯ ಪ್ರಕಾರದಂತೆ ಬೆಳೆದುಬಂದಿದೆ. ಅನ್ಯಭಾಷೆಗಳಿಗೆ ಬರೆದ ಕನ್ನಡ ಟೀಕು, ಕನ್ನಡ ಭಾಷೆಗೆ ಬರೆದ ಕನ್ನಡ ಟೀಕು ಎಂದು ಇವುಗಳ ಸ್ವರೂಪವನ್ನು ವಿದ್ವಾಂಸರು ಗುರುತಿಸಿದ್ದಾರೆ. ವಚನ ಸಂಕಲನ ಸಮಯದಲ್ಲಿ ಶರಣರ ವಚನಗಳನ್ನು ಸ್ಥಲಕಟ್ಟುಗಳ ಮಾದರಿಯಲ್ಲಿ ಸಂಯೋಜಿಸಿ ಅವುಗಳಿಗೆ ಟೀಕು ಬರೆದ ಹತ್ತಾರು ಜನ ಟೀಕಾಚಾರ್ಯರು ಕಾಣುತ್ತಾರೆ. ಅವರಲ್ಲಿ ಲಿಂಗಲೀಲಾವಿಲಾಸ ಚಾರಿತ್ರ್ಯ ಕೃತಿಯ ಕಲ್ಲಮಠದ ಪ್ರಭುದೇವರು, ಮಹಲಿಂಗದೇವ ಮುಂತಾದವರನ್ನು ಹೆಸರಿಸಬಹುದು. ಪ್ರಸ್ತುತ ಗುಬ್ಬಿ ಮಲ್ಲಣಾರ್ಯರ ಭಾವಚಿಂತಾರಕ್ಕೆ ಮರಿಸಿದ್ದಲಿಂಗದೇಶಿಕ ಟೀಕು ಬರೆದಿದ್ದಾನೆ. ಆತನ ಟೀಕುವಿನ ವಿಶೇಷತೆ, ಪಾಂಡಿತ್ಯ, ಸಾಂಸ್ಕೃತಿಕ ಚಹರೆಗಳನ್ನು ಪ್ರಸ್ತಾವನೆಯಲ್ಲಿ ಸಂಪಾದಕರಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸುದೀರ್ಘವಾಗಿ ಚರ್ಚಿಸಿದ್ದಾರೆ. ಅಪರೂಪದ ಸಾಹಿತ್ಯ ಪ್ರಕಾರವೊಂದನ್ನು ಪರಿಷ್ಕರಿಸಿ ಸಂಪಾದಿಸಿ ಪ್ರಕಟಣೆಗೆ ಅವಕಾಶ ನೀಡಿದ ಡಾ. ಡಿ.ವಿ. ಪರಮಶಿವಮೂರ್ತಿ ಅವರ ಸೌಜನ್ಯವನ್ನು ಕನ್ನಡ ವಿಶ್ವವಿದ್ಯಾಲಯ ಪ್ರೀತಿಯಿಂದ ನೆನೆಯುತ್ತದೆ. ಅವರಿಗೆ ಅಭಿನಂದನೆಗಳು.



ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 460

Customer Reviews

No reviews yet
0%
(0)
0%
(0)
0%
(0)
0%
(0)
0%
(0)