Click here to Download MyLang App

ಭಾರತೀಯ ಸಂಸ್ಥಾನಗಳ ಏಕೀಕರಣ (ಪ್ರಿಂಟ್ ಪುಸ್ತಕ)

ಭಾರತೀಯ ಸಂಸ್ಥಾನಗಳ ಏಕೀಕರಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಮೆನನ್ ವಿ ಪಿ
ಮಾಮೂಲು ಬೆಲೆ
Rs. 500.00
ಸೇಲ್ ಬೆಲೆ
Rs. 500.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದಾಗ ಭಾರತ ಎದುರಿಸುತ್ತಿದ್ದ ಅತಿದೊಡ್ಡ ಸಮಸ್ಯೆ ತನ್ನ ಭೌಗೋಳಿಕ ವ್ಯಾಪ್ತಿಯಲ್ಲೇ ಇದ್ದ 554 ಸಂಸ್ಥಾನಗಳದ್ದಾಗಿತ್ತು. ಹೀಗೆ ಇದ್ದ ಸಂಸ್ಥಾನ ಗಳಲ್ಲಿ ಕೆಲವು ದೊಡ್ಡವು, ಇನ್ನು ಕೆಲವು ಚಿಕ್ಕವು. ಭಾರತದ ಎಲ್ಲೆಡೆಯೂ ಹರಡಿಕೊಂಡಿದ್ದ ಈ ಸಂಸ್ಥಾನಗಳ ಒಟ್ಟು ವ್ಯಾಪ್ತಿ ದೇಶದ ಒಟ್ಟು ವಿಸ್ತೀರ್ಣದ ಐದನೆಯ ಎರಡು ಭಾಗಗಳಷ್ಟು ಇತ್ತು. ಬ್ರಿಟಿಷ್ ಸರ್ಕಾರದ ತೀರ್ಮಾನದ ಅನ್ವಯ ಇವು ತಾವು ಸ್ವತಂತ್ರ ಸಂಸ್ಥಾನಗಳು ಎಂದು ಘೋಷಿಸಿಕೊಳ್ಳಬಹುದಿತ್ತು, ಭಾರತದಲ್ಲಿ ವಿಲೀನ ಆಗಬಹುದಿತ್ತು ಅಥವಾ ಪಾಕಿಸ್ತಾನದ ಜೊತೆ ಸೇರಿಕೊಳ್ಳಬಹುದಿತ್ತು. ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಈ ಸಂಸ್ಥಾನಗಳನ್ನು ವಿಲೀನ ಮಾಡಿಕೊಳ್ಳುವುದು, ದೇಶ ಸ್ವಾತಂತ್ರ್ಯ ಪಡೆದ ದಿನ ಇದ್ದ ಅತಿದೊಡ್ಡ ರಾಜಕೀಯ ಹಾಗೂ ಆಡಳಿತಾತ್ಮಕ ಸಮಸ್ಯೆಯಾಗಿತ್ತು. ಈ ಸವಾಲಿಗೆ ಎದೆಯೊಡ್ಡಿದವರು ಉಪಪ್ರಧಾನಿ ಸರ್ದಾರ್‌ ವಲ್ಲಭಭಾಯ್ ಪಟೇಲರು. 

ಈ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಲು ಸಾಧ್ಯವಾಗಿದ್ದಕ್ಕೆ ಕಾರಣ ಪಟೇಲರ ದೃಢ ನಿಶ್ಚಯ, ಎದೆಗಾರಿಕೆ ಹಾಗೂ ಮುತ್ಸದ್ದಿತನ. ಸರ್ದಾರ್‌ ಪಟೇಲರು ಇಲ್ಲದಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದೂ ನಿಜ. 

ಭಾರತೀಯ ಸಂಸ್ಥಾನಗಳ ಏಕೀಕರಣ ಕುರಿತ ವಿವರಣೆಗಳು ಈ ಪುಸ್ತಕದಲ್ಲಿವೆ. 

 

ಕೃಪೆ  https://www.prajavani.net 

 

 ಪುಟಗಳು : 514

Customer Reviews

No reviews yet
0%
(0)
0%
(0)
0%
(0)
0%
(0)
0%
(0)