Click here to Download MyLang App

ಬಾಳು ಸಾವು ಒಡ್ಡುತ್ತಿರುವ ಆಮಿಷ (ಪ್ರಿಂಟ್ ಪುಸ್ತಕ)

ಬಾಳು ಸಾವು ಒಡ್ಡುತ್ತಿರುವ ಆಮಿಷ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಲಕ್ಷ್ಮೀಶ ತೋಳ್ಪಾಡಿ
ಮಾಮೂಲು ಬೆಲೆ
Rs. 75.00
ಸೇಲ್ ಬೆಲೆ
Rs. 75.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಉಪನಿಷತ್ತುಗಳ ಪರಿಚಯ ಮಾಡಿಕೊಳ್ಳಲು, ಅವುಗಳಿಗೊಂದು ಪ್ರವೇಶ ದೊರಕಿಸಿಕೊಡಲು ರೂಪುಗೊಂಡ ಈ ಪುಸ್ತಕವು ಮೂಲತಃ ಅಂಕಣ ಬರಹಗಳ ಸಂಕಲನ. ಇಂತಹ ಗಂಭೀರ ವಿಚಾರಗಳನ್ನು ಅಂಕಣಗಳ ಮೂಲಕ ಓದುಗರಿಗೆ ಪರಿಚಯಿಸಬಹುದೆಂಬ ಪರಿಕಲ್ಪನೆಯೇ ವಿಸ್ಮಯ ಹುಟ್ಟಿಸುವಂತಹದ್ದು. ಲಕ್ಷ್ಮೀಶ ತೋಳ್ಳಾಡಿ ಯವರಂತಹ ಚಿಂತಕರಿಂದ ಮಾತ್ರ ಅಂತಹ ಕಾರ್ಯ ಸಾಧ್ಯ. ದಿನಪತ್ರಿಕೆಯೊಂದರ ಪುರವಣಿಯಲ್ಲಿ 2019ರಲ್ಲಿ ಪ್ರಕಟಗೊಂಡ ಈ ಬರೆಹಗಳು ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಉಪನಿಷತ್ತಿನಲ್ಲಿ ಮೇಲ್ನೋಟಕ್ಕೆ ಒಂದು ಕಥೆ ಇದೆ. ಅದೊಂದು ಸಂದರ್ಭ ಸೂಚನೆ. ಅನುಗುಣವಾಗಿ ಕೆಲವು ಮಾತುಕತೆಗಳ ವಿವರಗಳು. ಈ ಮಾತುಕತೆಗಳಾದರೂ ಸಮಗ್ರವಾಗಿ ಪ್ರತಿಯೊಂದು ಹೆಜ್ಜೆಯನ್ನೂ ಚಿತ್ರಿಸುವಂತೆ ಇಲ್ಲ, ನಡುವೆ ನಾವು ಊಹಿಸಿಕೊಳ್ಳಬೇಕಾದ ಅನೇಕ ಸಂಗತಿಗಳಿರುತ್ತವೆ. ಎರಡು ಮನಸುಗಳು ಸೇರಿದಾಗ ಎಷ್ಟು ಮಾತು, ಎಷ್ಟು ಮಾತಿಲ್ಲದೆ ಅರ್ಥವಾಗುವಂಥವು, ಮಾತುಗಳ ಅರ್ಥಗಳಾದರೂ ಎಷ್ಟು ಬೇರೆ ಬೇರೆ ಕಡೆ ಚಾಚುವಂಥವು - ಇವೆಲ್ಲ ಸಂಭವಗಳೂ ಇರುತ್ತವೆ. ಈ ಎಲ್ಲ ಸಂಭವಗಳ ನಡುವೆ ಸವಾಲು - ಆತಂಕಗಳ ನಡುವೆ ಉಪನಿಷತ್ತುಗಳನ್ನು ಓದುವುದೇ ಒಂದು ಸಂಭ್ರ ಮವೂ ಅಲ್ಲವೆ! ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆ ಲೋಕವೇ ಬೆಚ್ಚುವಂತೆ ಮಾಡಬಲ್ಲ ಪ್ರಶ್ನೆಯಾಗಿದೆ! ಈ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ.' (ಬೆನ್ನುಡಿಯಿಂದ) ಉಪನಿಷತ್ತುಗಳ ಕುರಿತು ಕನ್ನಡದಲ್ಲಿ ಈಚೆಗೆ ಪ್ರಕಟಗೊಂಡ ಅಪರೂಪದ ಪುಸ್ತಕವಿದು ಎಂದು ಗುರುತಿಸಿ, ಓದಬಹುದಾದ ಕೃತಿ ಇದು.

 

ಪುಟಗಳು : 84

 

ಕೃಪೆ https://epaper.vishwavani.news 

Customer Reviews

No reviews yet
0%
(0)
0%
(0)
0%
(0)
0%
(0)
0%
(0)