Click here to Download MyLang App

ಅಮ್ಮಾವ್ರ ಕಾಲ್ಗುಣ (ಪ್ರಿಂಟ್ ಪುಸ್ತಕ)

ಅಮ್ಮಾವ್ರ ಕಾಲ್ಗುಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬೀChi
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಇಲ್ಲಿರುವ ಎಲ್ಲವನ್ನೂ -ಕೆಲವು ಮಾತ್ರ ಹೊರತು- ಆಗಲೇ ನಾವೆಲ್ಲಿಯೋ ಓದಿದ್ದೇವೆ ಎಂದು ಅನೇಕರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಹೌದು, "ಸುಧಾ" ಮತ್ತು "ಪ್ರಜಾವಾಣಿ" ಪತ್ರಿಕೆಗಳಲ್ಲಿ ಓದಿದ್ದೀರಿ. ಈ ಪತ್ರಿಕೆಗಳ ಸಂಪಾದಕರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇನೆ.
ಇವೆಲ್ಲವೂ ಕಟ್ಟೂಕಥೆಗಳೋ, ಜೀವನದಲ್ಲಿಯ ಘಟನೆಗಳೋ? ನಾನು ಹೇಗೆ ಹೇಳಲಿ ? ನನ್ನ ರಸಿಕ ವಾಚಕ ಮಿತ್ರರು ಈ ಪ್ರಶ್ನೆಗೆ ಉತ್ತರ ಹೇಳಬೇಕು. ಅಷ್ಟು ನೀರಸ, ನಿರ್ಜೀವವಾಗಿದ್ದರೆ ಕಟ್ಟು ಕಥೆ; ಜೀವಕಳೆ ಕಂಡುಬಂದಲ್ಲಿ ನಿಜವಾದ ಘಟನೆ. ಬಾಳು 'ಕವಿಸೃಷ್ಟಿ'ಗಿಂತಲೂ ವಿಚಿತ್ರ ಎಂಬ ಮಾತು ಸರ್ವವಿದಿತ.

ಜೀವನಕ್ಕೆ ಕನ್ನಡಿ ಹಿಡಿಯುತ್ತಾನೆ ಸಾಹಿತಿ. ಇದು ಸರಿ , ಇದು ತಪ್ಪು ಎಂಬುದು ಅವನ ಕಾರ್ಯವ್ಯಾಪ್ತಿಯಲ್ಲಿಲ್ಲ. ಇದು ಹೀಗೆದೆ ಎಂದು ತೋರಿಸಿ ಹಿಂದೆ ಸರಿಯುವುದು ಅವನ ಧರ್ಮ. ನ್ಯಾಯಮೂರ್ತಿಯಲ್ಲ. ನೀತಿಭೋಧಕನೂ ಅಲ್ಲ ಅವನು. ಪಾದ್ರಿಯ ಸೋಗು ಅವನಿಗೇಕೆ?

ಈ ಪುಟ್ಟ ಪುಸ್ತಕ ಮಾಡಬೇಕಾದುದಷ್ಟೇ ಮಾಡಿರುವುದೂ ಅಷ್ಟೇ.
ಇದರ ಬಗ್ಗೆ ಇನ್ನೂ ಹೇಳುವುದು ಒಳ್ಳೆಯ ಅಭಿರುಚಿ ಅನಿಸಲಾರದು.

ಇದೆಲ್ಲ ಆಯಿತು ಕೊಂಡು ಓದುವವರು ?
ಈ ಎಲ್ಲರಿಗೂ ನಾನು ಋಣಿ.

- ಇಂತು
ಬೀchi 

ಕೃಪೆ   https://www.goodreads.com

 

ಪುಟಗಳು: 148

 


Customer Reviews

No reviews yet
0%
(0)
0%
(0)
0%
(0)
0%
(0)
0%
(0)