Click here to Download MyLang App

ಅಮ್ಮ ಸಿಕ್ಕಿದ್ಲು (ಪ್ರಿಂಟ್ ಪುಸ್ತಕ)

ಅಮ್ಮ ಸಿಕ್ಕಿದ್ಲು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

“ಅಮ್ಮ ಸಿಕ್ಕಿದ್ದು' ಕೃತಿಯಲ್ಲಿ ಲೇಖಕರು ತನ್ನ ಹೆಂಡತಿ - ಮಕ್ಕಳನ್ನು ಬಿಟ್ಟು ಬರುವಲ್ಲಿಂದ ಕಥೆಯನ್ನು ಆರಂಭಿ ಸುತ್ತಾರೆ. ಪತ್ನಿ ಲಲಿತಾರೊಂದಿಗೆ ಆದ ಮನ ಸ್ತಾಪದ ಕಾರಣದಿಂದ ಮನೆಯಿಂದ ದೂರವಿರಲು ನಿರ್ಧರಿಸಿದ ಬೆಳಗಳೆಯವರು ತಾಯಿ ಇದ್ದಲ್ಲಿಗೆ ಹೋಗಬೇಕೆಂದು ಊರಿನತ್ತ ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣದ ಮಾರ್ಗದಲ್ಲಿ ತನ್ನ ಜೀವನ ಶೈಲಿ, ಅಭ್ಯಾಸಗಳು, ಚಟಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಓದುಗರೊಂದಿಗೆ ಸಂಭಾಷಣೆ ನಡೆಸುವ ರೀತಿಯಲ್ಲಿ ಕಥೆಯನ್ನು ನಿರೂಪಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಕಂಡುಬರುವ ಎಷ್ಟೋ ವಿಷಯಗಳನ್ನು ತನ್ನ ಬದುಕಿನಲ್ಲಿ ಆಗಿ ಹೋದಂತಹ ಘಟನೆಗಳೊಂದಿಗೆ ತಳಕು ಹಾಕುತ್ತಾರೆ.

ಮನುಷ್ಯರ ಅಸಹಾಯಕತೆ ಪರಿಸ್ಥಿತಿಗಳ ವಿವರ ಣೆಗಾಗಿ ಅವರು ಬಳಸಿರುವ ಪದಪುಂಜಗಳು ನಮ್ಮನ್ನು ಭಾಷೆ ಮತ್ತು ಸಾಹಿತ್ಯದ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತವೆ.

ಹುಟ್ಟೂರು ಬಳ್ಳಾರಿಯಲ್ಲಿ ತಾಯಿಯೊಂದಿಗೆ ಕಳೆದ ಬಾಲ್ಯ ಹಾಗೂ ಹದಿಹರೆ ಯದ ದಿನಗಳನ್ನು ಲೇಖಕರು ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಮನುಷ್ಯನಿಗೆ ಗಂಟು ಬೀಳುವ ಚಟಗಳು ಹೂದೋಟದಂತಹ ಜೀವನವನ್ನು ಹೇಗೆ ನಾಶ ಮಾಡುತ್ತವೆ ಎಂಬು ದನ್ನು ತನ್ನದೇ ಅನುಭವಗಳೊಂದಿಗೆ ಹಂಚಿ ಕೊಳ್ಳುತ್ತಾರೆ. ಈ ಕೃತಿಯ ಮೂಲಕ ತನ್ನ ಬದುಕಿನ ಎಷ್ಟೋ ವಿಷಯಗಳನ್ನು ಎಳೆಎಳೆ ಯಾಗಿ ಓದುಗರ ಮುಂದಿರಿಸಿದ್ದಾರೆ. ಬಾಲ್ಯ ದಲ್ಲಿ ಆದಂಥ ನೋವುಗಳು, ಚಿಕ್ಕವನಿದ್ದಾಗ ತಂದೆಯ ಕುರಿತಾಗಿ ಇದ್ದಂಥ ಪ್ರಶ್ನೆಗಳು ಸಹಿತ ಹಲವಾರು ರಹಸ್ಯಗಳು, ಕುತೂಹಲಗಳು ಹಾಗೂ ಇನ್ನಿತರ ಗಂಭೀರ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ತಾಯಿಯೊಡನೆ ಸಾಕಷ್ಟು ಸಮಯವನ್ನು ಕಳೆಯಲಿಲ್ಲವಲ್ಲ ಎಂಬ ಕೊರಗು ಈ ಶೃತಿ ಯಲ್ಲಿ ಪಡಿಮೂಡಿದೆ. ಗೆಲುವಿನ ಉತ್ತುಂಗದ ಲ್ಲಿದ್ದಾಗ, ಅದಕ್ಕೆ ಕಾರಣವಾ ದಂಥ ತಾಯಿ ಯನ್ನು, ನೋಡುವ ಭಾಗ್ಯ ತನಗಿಲ್ಲವಲ್ಲ ಎಂಬ ನೋವು ಕೃತಿಯಲ್ಲಿ ಎದ್ದು ಕಾಣುತ್ತದೆ.

“ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ... ಅಂದು ಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೇ?' ಎಂದು ಬೆನ್ನುಡಿಯಲ್ಲಿ ಲೇಖಕರು ತನ್ನನ್ನು ತಾನೇ ಪ್ರಶ್ಚಿಸಿಕೊಂಡಿದ್ದಾರೆ.

ಬೆಳಗಳೆಯವರ ಸಾಂಪ್ರದಾಯಿಕ ಶೈಲಿ ಯಲ್ಲಿ ಮೂಡಿಬಂದ “ಅಮ್ಮ ಸಿಕ್ಕಿದ್ದು' ಕೃತಿ ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪ್ರಾಮುಖ್ಯವನ್ನು ಸಾರಿ ಹೇಳಿದೆ. ತಾಯಿಯ ಕುರಿತು ಆರಾಧ್ಯ ಭಾವ ಹೆಚ್ಚಾಗುತ್ತದೆ. ತಾಯಿಯ ಜತೆಗಿನ ಒಡನಾಟವನ್ನು ಅನು ಭವಿಸಿ ನೋಡಿ ಎಂಬ ಸಲಹೆಯನ್ನೂ ಈ ಕೃತಿಯನ್ನು ಲೇಖಕರು ನೀಡಿದ್ದಾರೆ. “ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗೆ ಇಡೀ ದಿನವನ್ನು ಕಳೆಯಿರಿ. ಆಗ ತಾನೇಕೆ ಈ ಕೃತಿಯನ್ನು ಬರೆದಿರುವೆನೆಂದು ನಿಮಗೆ ತಿಳಿ ಯಲು ಸಾಧ್ಯವಾಗುತ್ತದೆ' ಎಂದು ತಿಳಿಸಿದ್ದಾರೆ. ಅಂತೂ ಸ್ವಗತದೊಂದಿಗೆ ತನ್ನದೇ ಕಥೆಯನ್ನು ನಿರೂಪಿಸಿರುವ ಈ ಕೃತಿಯಲ್ಲಿ ಲೇಖಕರು ತಾಯಿಯ ಮಹತ್ವವನ್ನು ನಾವಂದು ಕೊಂಡದ್ದಕ್ಕಿಂತ ವಿಶೇಷವಾಗಿ ನಮಗೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.

 

- ಸಂಹಿತಾ ಎಸ್ ಮೈಸೂರೆ,ಬೆಂಗಳೂರು 

 

 ಕೃಪೆ  - https://www.udayavani.com

 

ಪುಟಗಳು : 104

Customer Reviews

No reviews yet
0%
(0)
0%
(0)
0%
(0)
0%
(0)
0%
(0)