Click here to Download MyLang App

ಆತ್ಮ (ಪ್ರಿಂಟ್ ಪುಸ್ತಕ)

ಆತ್ಮ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.ತುಂಬಾ ಕುತೂಹಲದಿಂದ ಪುಟ ತಿರುಗಿಸುತ್ತಾ ಹೋಗುವ ಪುಸ್ತಕ.

ಇದರಲ್ಲಿ ಹೊಸ ಮಾದರಿಯಲ್ಲಿ ಭೂಗತಜಗತ್ತು ಮತ್ತು ತಾಂತ್ರಿಕಲೋಕವನ್ನು ಸಮೀಕರಿಸಿದ್ದಾರೆ.ಬಹುಶಃ ಎರಡೂ ತರದ ಓದುಗರನ್ನು ತಲುಪುವ ಪ್ರಯತ್ನವಿರಬಹುದು.

ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ ಕೆಲವು ಕಡೆ ಸ್ವಲ್ಪ ಮಸಾಲೆ ಜಾಸ್ತಿಯಾಗಿದೆಯಾದರೂ ಕಥೆಯ ಓಟಕ್ಕೇನೂ ಭಂಗವಿಲ್ಲ.ಅಸಲು ಇಲ್ಲಿ ಕಥೆಯೇ ಇಲ್ಲ!! ಸಿನಿಮಾದಂತೆ ಪಾತ್ರಗಳು ಫ್ರೆಮ್,ಫ್ರೆಮಗಳಂತೆ ವೇಗವಾಗಿ ಬಂದು ಹೋಗುತ್ತವೆ.ರುಚಿಕಟ್ಟಾಗಿ ಓದುಗ ಪುಸ್ತಕ ಕೆಳಗಿಡದಂತೆ ಓದಿಸುತ್ತದೆ. ನೀವು ಪಳಗಿದ ಓದುಗರಾದರೆ ಕೆಲವು ಅತಾರ್ಕಿಕ ವಿಷಯಗಳು ಸಿಗುತ್ತವೆ(ನೀಲಿಮಾಳಿಗೆ ಅವಳ ಸಾವಿನ ವಿಷಯ ಅವಳಿಗೇ ಗೊತ್ತಿಲ್ಲದೇ ಇರುವುದು, ಇನ್ಸ್ಪೆಕ್ಟರ್ ಅಶೋಕ್ ಕಾಡುಕೋಣ ಹೊಡೆಯುವ ಬಂದೂಕಲ್ಲಿ ಎನ್ಕೌಂಟರ್ ಮಾಡುವುದು….ಇತ್ಯಾದಿ) ಅವನ್ನೆಲ್ಲಾ ಬದಿಗಿಟ್ಟು ರುಚಿಯನ್ನಷ್ಟೇ ಆಸ್ವಾದಿಸುತ್ತಾ ಹೋಗಿ.

ಯಥಾ ಪ್ರಕಾರ ರವಿಬೆಳೆಗೆರೆ ತಮ್ಮ ಹಳೆಯ ಚಾಳಿಯನ್ನು ಇಲ್ಲೂ ಮುಂದುವರಿಸಿದ್ದಾರೆ.ಕಾದಂಬರಿಗೆ ನಿರ್ದಿಷ್ಟ ಅಂತ್ಯಕೊಡದೆ ಓದುಗನನ್ನು ಗೋಜಲಲ್ಲಿ ಕೆಡವುವುದು, ಕೆಲವು ಆಧ್ಯಾಯ ಗಳನ್ನು ಅರ್ಜೆಂಟಿಗೆ ಸಂತೆಗೆ ಮೂರುಮೊಳ ನೆಯ್ದಿರುವುದು….ಇತ್ಯಾದಿಯನ್ನು ಓದುಗದೊರೆ ಕ್ಷಮಿಸಿ ಒಪ್ಪಿಸಿಕೊಳ್ಳಬಹುದು.

ಒಮ್ಮೆ ಕೈಯಾಡಿಸಿ ನೋಡಿ,ಪೈಸಾ ವಸೂಲ್ ಮಾಲ್.ಕೊಟ್ಟ ರೊಕ್ಕಕ್ಕೆ ಮೋಸವಿಲ್ಲ.

ಅಗ್ನಿಹೋತ್ರಿ

 

ಕೃಪೆ  https://pustakapremi.wordpress.com/

ಪುಟಗಳು : 232


Customer Reviews

No reviews yet
0%
(0)
0%
(0)
0%
(0)
0%
(0)
0%
(0)