
ಪ್ರಿಯ ಓದುಗರೇ ,
"ಭವಿಷ್ಯಯಾನ" ಕಾದಂಬರಿ "ನಾಳೆಯನ್ನು ಕಂಡವನು" ಕಾದಂಬರಿಯ ಮುಂದುವರೆದ ಭಾಗ. ಇಲ್ಲಿ ಬರುವ ಎಲ್ಲಾ ಪಾತ್ರಗಳು ನನ್ನ ಕಲ್ಪನೆಯಲ್ಲಿ ಮೂಡಿದ್ದು , ಇಲ್ಲಿ ನಮ್ಮ ಪುರಾತನ ಕಾಲದ ಋಷಿ ಮುನಿಗಳ ಪಾತ್ರಗಳೂ ಬರುತ್ತದೆ, ಇದು ಕಥೆಗೆ ಅನುಗುಣವಾಗಿ ಬಳಸಲಾಗಿದೆ, ಬೇರೆ ಯಾವ ಉದ್ದೇಶವೂ ಇಲ್ಲ.
ಈ ಕಥೆಯಲ್ಲಿ ಬರುವ ನಾಯಕ ಪ್ರದ್ಯುಮ್ನ ಕಾಲಯಂತ್ರದ ಪ್ರಯೋಗದಲ್ಲಿ ಹೇಗೆ ಭೂತಕಾಲ ಮತ್ತು ವರ್ತಮಾನಗಳಿಗೆ ಪಯಣಿಸಿ ಹಾಗು ತನ್ನ ಅನುಭವಗಳನ್ನು ಇತರೆ ಪಾತ್ರಗಳೊಂದಿಗೆ ಹೇಗೆ ಹಂಚಿಕೊಳ್ಳುತ್ತಾನೆ ಎಂಬುದನ್ನು ಮೊದಲ ಕಾದಂಬರಿಯಲ್ಲಿ ಓದಿರುತ್ತಿರಿ. ಈ ಕಾದಂಬರಿಯಲ್ಲಿ ಕಾಲಯಂತ್ರದ ತಾಂತ್ರಿಕ ದೋಷದಿಂದ, ಪ್ರದ್ಯುಮ್ನ ಬೇರೆ ಕಾಲಘಟ್ಟಕ್ಕೆ ಹೋಗಿ ಸೇರುತ್ತಾನೆ. ಅಲ್ಲಿ ಅವನು ಪರಶುರಾಮ, ಕಶ್ಯಪರಾದಿಯಾಗಿ ಭರತಖಂಡದ ಸಪ್ತ ಋಷಿಗಳನ್ನು ಭೇಟಿಯಾಗುತ್ತಾನೆ. ಕಶ್ಯಪ ಆಶ್ರಮದ ಪ್ರದೇಶವನ್ನು ಕಶ್ಯಪ ಮೇರು ಅಂದರೆ ಈಗಿನ ಕಾಶ್ಮೀರ. ಅಲ್ಲಿಂದ ರಾಜ ವಿಕ್ರಮಾದಿತ್ಯ ಯವನರ ಧಾಳಿಯನ್ನು ಹಿಮ್ಮೆಟ್ಟಲು ಋಷಿ ಮುನಿಗಳ ಜೊತೆ ಪ್ರದ್ಯುಮ್ನನೂ ಸಹಾಯ ಮಾಡುತ್ತಾನೆ. ಅದರ ಬದಲಿಗೆ ಆ ಋಷಿಗಳು ಕಾಲಯಂತ್ರವನ್ನು ಪುನಃ ನಿರ್ಮಿಸಿಕೊಡುತ್ತಾರೋ , ಅವನು ಕಾಲಯಂತ್ರದಲ್ಲಿ ಸ್ವಸ್ಥಾನಕ್ಕೆ ಬರುತ್ತಾನೆಯೇ ಎಂಬುದನ್ನು ನೀವು ಓದಿ ತಿಳಿದುಕೊಳ್ಳಬಹುದು.
ವಂದನೆಗಳೊಂದಿಗೆ
ಇಂದಿರಾತನಯ(ಹರೀಶ ಕೃಷ್ಣಪ್ಪ)