Click here to Download MyLang App

ನಿಗೂಢ ನಾಣ್ಯ (ಪ್ರಿಂಟ್ ಪುಸ್ತಕ)

ನಿಗೂಢ ನಾಣ್ಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವಿಠಲ್ ಶೆಣೈ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 165.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಲೇಖಕರು: ವಿಠಲ್ ಶೆಣೈ

  1. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ವಿವೇಕ್, ಭಾರತಕ್ಕೆ ಹಿಂತಿರುಗಿ ಬಂದು ಪ್ಲಸ್ ಮನಿ ಎಂಬ ತನ್ನದೇ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದಾನೆ. ಆದರೆ ಅಕ್ರಮವಾಗಿ ಬಿಟ್ ಕಾಯಿನ್ ಏಟಿಎಂ ತೆರೆದ ಆರೋಪದಲ್ಲಿ ಈಗ ಜೈಲು ಪಾಲಾಗಿದ್ದಾನೆ.  ಅವನು ಮಾಡಿದ ತಪ್ಪಾದರೂ ಏನು? ಅವನ ಮುಂದಿನ ದಾರಿಯೇನು? 
  2. ಸೂರಜ್ ಎಂಬ ರಿಯಲ್ ಎಸ್ಟೇಟ್ ಮ್ಯಾಗ್ನೆಟ್ ಗೆ ತನ್ನ ಬಳಿ ಇರುವ ಕಪ್ಪು ಹಣವನ್ನು ಮರೆಮಾಚಿ ಇಡುವ ಚಿಂತೆ. ಅವನ ಅಕ್ಕನ ಮಗ ಪೃಥ್ವಿಗೆ ಬೈಕ್ ಡೀಲರ್ ಶಿಪ್ ತೆರೆಯಲು ದುಡ್ಡು ಬೇಕಾಗಿದೆ. ವಿವೇಕ್ ಗೆ ತನ್ನ ಮೇಲಿನ ಆರೋಪವನ್ನು ಅಲ್ಲಗಳೆಯಬೇಕಾಗಿದೆ. ಉಮಾಗೆ ತಾನು ಕೈ ಹಾಕಿದ ಕೇಸ್ ಗೆ ವಿವೇಕ್ ನ ಸಹಾಯ ಬೇಕಾಗಿದೆ. ಯಾರು ಗೆಲ್ಲುತ್ತಾರೆ? ಯಾರು ತಮ್ಮ ಗುರಿ ತಲುಪುತ್ತಾರೆ? 
  3. ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ಪ್ರೇಮ್ ಮತ್ತು ಉಮಾ ಕೇವಲ ಹನ್ನೆರಡು ನಿಮಿಷಗಳಲ್ಲಿ ಕೋಟ್ಯಧಿಪತಿಗಳಾಗುವ ಸಾಧ್ಯತೆಗಳು ಅವರ ಮುಂದೆ ಬಂದು ಒದಗಿದೆ.  ಹೇಗೆ? ಯಾವ ರೀತಿಯಲ್ಲಿ? ಅದರಲ್ಲಿ ರಿಸ್ಕ್ ಇಲ್ಲವೇ?
  4. 1968ನೆಯ ಇಸವಿಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 16 ರೂಪಾಯಿಯಾಗಿತ್ತು. ಆಗ 16 ರೂಪಾಯಿಗೆ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತಿತ್ತು. ಆದರೆ ಇವತ್ತು 16 ರೂಪಾಯಿಗೆ ಒಂದು ಕಪ್ ಚಹಾ ಕೂಡಾ ಸಿಗಲಿಕ್ಕಿಲ್ಲ. ಆದರೆ ಒಂದು ಗ್ರಾಂ ಚಿನ್ನವನ್ನು ಮಾರಿದರೆ ಅದೇ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತದೆ. ರೂಪಾಯಿಯ ಮೌಲ್ಯ ಯಾಕೆ ಕುಸಿದಿದೆ? ಚಿನ್ನದ ಬೆಲೆ ಯಾಕೆ ಗಗನಕ್ಕೇರಿದೆ? 

ಮೇಲಿನ ನಾಲ್ಕು ಪ್ರಶ್ನೆಗಳನ್ನು ಓದಿದ ಮೇಲೆ ಕೆರಳಿರುವ ನಿಮ್ಮ ಕುತೂಹಲ ಪುಸ್ತಕ ಓದಿಯೇ ತಣಿಯಬೇಕು ! 

ಬಂದಿದೆ ಬ್ಲಾಕ್ ಚೇನ್, ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಂತಹ ದುಡ್ಡಿನ ಕುರಿತ ನಮ್ಮ ನಂಬಿಕೆ, ತಿಳುವಳಿಕೆಯನ್ನು ಅಲುಗಾಡಿಸುವ ತಂತ್ರಜ್ಞಾನದ ಸುತ್ತ ಹೆಣೆಯಲಾದ ಹೊಚ್ಚ ಹೊಸ ಕಾದಂಬರಿ "ನಿಗೂಢ ನಾಣ್ಯ" 

 

 

ಪುಟಗಳು: 168 Customer Reviews

Based on 7 reviews
100%
(7)
0%
(0)
0%
(0)
0%
(0)
0%
(0)
S
Santhosh Kumar
ಕೌತುಕಮಯ ಹೊಸವಿಚಾರಗಳ ಸಂಗಮ

ಬ್ಲಾಕ್ ಚೈನ್ ಮತ್ತು ಬಿಟ್ ಕಾಯ್ನ್ ಗಳ ಬಗ್ಗೆ ಹೇರಳವಾದ ಮಾಹಿತಿಯನ್ನು ಬಹಳ ಸರಳವಾಗಿ ವಿವರಿಸಲಾಗಿದೆ. ಹಾಗಂದ ಮಾತ್ರಕ್ಕೆ ಕಾದಂಬರಿ ಎಲ್ಲೂ ಸಪ್ಪೆಯಾಗುವುದಿಲ್ಲ , ಎಲ್ಲೂ ಪ್ರಬಂದವಾಗುವುದಿಲ್ಲ...ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಯಂಡಮುರಿ ಯವರ ಕಾದಂಬರಿ ಓದಿದ ಅನುಭವವಾಯಿತು.

ಬಿಡದೆ ಓದಿ. ಓದಲು ಎತ್ತಿ ಕೊಳ್ಳಿ ಸಾಕು...ಬಿಡದೆ ಓಡಿಸಿಕೊಳ್ಳೋ ಶಕ್ತಿ ಕಾದಂಬರಿಗೆ ಇದೆ

V
Vinod Kubsad

ಹಲೋ ಸರ್ ನೀವು ಪುಸ್ತಕ ತುಂಬಾ ಚೆನ್ನಾಗಿ ಬರೆದಿದ್ದೀರಿ ಮತ್ತು ಸರ್ ಬ್ಲಾಕ್ ಚೈನ್ ಟೆಕ್ನೋಲಜಿ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ಏನು ಮಾಡಬೇಕು ಎಂಬುದು ನನ್ನ ಒಂದು ಪ್ರಶ್ನೆ

A
Abhilash s
ಹೊಸ ರೀತಿಯ ಕಥೆ

Bitcoin ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದ ನಂಗೆ ಹಾಗೂ ನನ್ನ ಮಾತೃ ಭಾಷೆಯಲ್ಲೇ ಓದುವ ಬಯಕೆಗೆ ಈ ಕಾದಂಬರಿ ದಾರಿಯಾಗಿದೆ...

ಶ್ರುತಿ
ಹಣಕಾಸಿನ ವ್ಯವಸ್ಥೆ ಮತ್ತು ತಂತ್ರಜ್ಞಾನವನ್ನು ಹೀಗೂ ಹೇಳಬಹುದು!!

ಬ್ಯಾಂಕಿಂಗ್ ಮತ್ತು ಆರ್ಥಿಕತೆಯ ಅವ್ಯವಸ್ಥೆಗಳು, ಬಿಟ್ ಕಾಯಿನ್, ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಸಾಮಾನ್ಯರಿಗೂ ತಿಳಿಯುವಂತೆ ಸರಳವಾಗಿ ವಿವರಿಸಿದ್ದಾರೆ. ಹಿಡಿದವಳು ಒಂದೇ ರಾತ್ರಿಯಲ್ಲಿ ಮುಗಿಸಿಬಿಟ್ಟೆ. ವ್ಯವಸ್ಥೆ ಮತ್ತು ತಂತ್ರಜ್ಞಾನದ ವಿಷಯಗಳನ್ನು ಕತೆಯ ರೂಪದಲ್ಲಿಯೇ ಹೇಳುವ ವಿಶಿಷ್ಟ ಪುಸ್ತಕ.

ರಾಜು ಹಗ್ಗದ
#2021ರಲ್ಲಿ_ನಾ_ಓದಿದ_ಪುಸ್ತಕ

'ಬಿಟ್ ಕಾಯಿನ್' (ನಿಗೂಢ ನಾಣ್ಯ) ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಹಿನ್ನಲೆಯನ್ನೊಳಗೊಂಡ ಬ್ಲಾಕ್ ಚೈನ್ ತಂತ್ರಜ್ಞಾನದ ತಿಳುವಳಿಕೆಯನ್ನು ಒಳಗೊಂಡ ಕಾಲ್ಪನಿಕ ಕಾದಂಬರಿ 'ನಿಗೂಢನಾಣ್ಯ'.

ಅರ್ಥಶಾಸ್ತ್ರ ಓದದೇ ಇರುವ ನನಗೆ ಇಲ್ಲಿರುವ ಅರ್ಥಶಾಸ್ತ್ರದ ಹಿನ್ನಲೆಯನ್ನೊಳಗೊಂಡ ನಿಗೂಢನಾಣ್ಯ ಕಾದಂಬರಿಯ ಪ್ರತಿಪುಟಗಳು ಹೊಸ ವಿಷಯವನ್ನೇ ಕಲಿಸಿದವು.

ಆರ್ಥಿಕ ವ್ಯವಸ್ಥೆಯ ಏರಿಳಿತಗಳಿಗೆ ಕಾರಣಗಳೇನು, ಹಣದುಬ್ಬರ, ಆರ್ಥಿಕ ದಿವಾಳಿತನಕ್ಕೆ ಕಾರಣಗಳೇನು ಎಂಬುದನ್ನು ಕಾದಂಬರಿಯಲ್ಲಿ ವಿಶ್ವದ ಆರ್ಥಿಕ ಹಿನ್ನೊಟದ ಉದಾಹರಣೆಯೊಂದಿಗೆ ವಾಸ್ತವದ ರಾಜಕಾರಣ ಹಾಗೂ ಅರ್ಥಿಕ ನೀತಿಯ ಸೂಕ್ಷ್ಮ ನೆಲೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಅರ್ಥಶಾಸ್ತ್ರದ ಬಹಳಷ್ಟು ವಾಖ್ಯಾನಗಳು ಸಿದ್ದಾಂತಗಳಿಂದಲೇ ಕೂಡಿರುತ್ತವೆ. ಅಂತಹ ಅರ್ಥಶಾಸ್ತ್ರದ ಕಠಿಣ ವಿಷಯವೊಂದಕ್ಕೆ ಕಾದಂಬರಿ ರೂಪ ಕೊಟ್ಟು ಬಹಳ ಕುತೂಹಲಕಾರಿಯಾದ ಹಾಗೂ ಒಂದೇ ಗುಟುಕಿಗೆ ಕುಡಿಯುವಂತಹ ಪಾನಕವನ್ನು ಲೇಖಕಕರು ತಯಾರಿಸಿದ್ದಾರೆ.

ಹೊಸ ವಿಷಯವೆಂದೆನಿಸಿದರೂ ಅರ್ಥವ್ಯಸ್ಥೆಯಲ್ಲಿಯ ಸಾಮಾನ್ಯ ವಿಷಯವನ್ನು ಜನಸಾಮಾನ್ಯರು ಇಂತಹ ಕಾದಂಬರಿಯ ಮೂಲಕವೂ ತಿಳಿಯಬಹುದಾಗಿದೆ.

ಕನ್ನಡದಲ್ಲಿ ಇಂತಹ ಭಿನ್ನ ಮಾದರಿಯ ಕೃತಿಗಳು ಹಿರಿಯ ಹಾಗೂ ಹೊಸ ತಲೆಮಾರಿನ ಲೇಖಕರಿಂದ ಬರುತ್ತಿರುವುದು ತುಂಬಾ ಸಂತೋಷದ ವಿಷಯವೇ ಆಗಿದೆ.

ತುಂಬಾ ಕುತೂಹಲಕಾರಿಯಾದ ಹಾಗೂ ಒಂದೇ ಉಸಿರಿನಲ್ಲಿ ಓದಬಹುದಾದ ಕಾದಂಬರಿ ನಿಗೂಢ ನಾಣ್ಯ.

ಮದ್ಯಾನ್ಹವೇ ಕೈಸೇರಿತು. ಕವರ್ ತೆಗೆದು ಪುಸ್ತಕ ಕೈಗೆತ್ತಿಕೊಂಡಾಗ ಪುಸ್ತಕದ ಪುಟಗಳಿಂದ ಹೊರಟ ಘಮಲಿನ ಗುಂಗಿನಲ್ಲೇ ಪುಟಗಳನ್ನು ತಿರುವುತ್ತ ತಿರುವುತ್ತ ಸಂಜೆಯೊಳಗೆ ಅಂತಿಮಪುಟಕ್ಕೆ ಬಂದು ನಿಂತಿದ್ದೆ. ಹೊಸದೊಂದು ವಿಷಯವನ್ನು ತಿಳಿದುಕೊಂಡ ಸಂತಸದಲ್ಲಿ.

ಈ ವರುಷದ ಮೊದಲ ಪುಸ್ತಕ ಹೊಸ ವಿಷಯವನ್ನು ತಿಳಿದುಕೊಳ್ಳುವ ಮೂಲಕ ಹೊಸ ಕಾದಂಬರಿ ಓದಿದ ಖುಷಿ ನನ್ನೊಟ್ಟಿಗೆ ಸದಾ. ನೀವೂ ಓದಿ ನಿಮ್ಮವರಿಗೂ ಓದಿಸಿ.

-------------------
ರಾಜು ಹಗ್ಗದ
ಇಣಚಗಲ್
-------------------