Click here to Download MyLang App

ಕಾಲೇಜು ರಂಗ (ಪ್ರಿಂಟ್ ಪುಸ್ತಕ)

ಕಾಲೇಜು ರಂಗ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬಿ.ಜಿ.ಎಲ್. ಸ್ವಾಮಿ
ಮಾಮೂಲು ಬೆಲೆ
Rs. 210.00
ಸೇಲ್ ಬೆಲೆ
Rs. 210.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕಾಲೇಜು ರಂಗ ಕಾದಂಬರಿಯಲ್ಲಿ ಸ್ವಾಮಿ ಯವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಪ್ರಿನ್ಸಿಪಾಲ್ ಹುದ್ದೆಗೆ ನೇಮಕವಾಗುತ್ತಾರೆ. ಪ್ರಿನ್ಸಿಪಾಲ್ ಆಗಿ ಕಾಲೇಜಿನ ಹಲವಾರು ತಲೆಗಳ ನಡುವೆ ತಾವು ಅನುಭವಿಸಿದ ಕಷ್ಟವನ್ನು ಹಾಸ್ಯ ಪೂರ್ವಕವಾಗಿ ವಿವರಿಸಿದ್ದಾರೆ. ಸರ್ಕಾರಿ ಕಾಲೇಜಿಗೆ ಸೇರಿದ್ದು ಮುಖ್ಯಕಾರಣ ತಮಗೆ ಸಂಶೋಧನೆಗೆ ಅನುಕೂಲವಾಗುತ್ತದೆಂದು, ಆದರೆ ಸರ್ಕಾರದ ಆದೇಶ ಪ್ರಕಾರ ಅವರು ಪ್ರಿನ್ಸಿಪಾಲ್ ಹುದ್ದೆಗೆ ನೇಮಕವಾದಾಗ ಇದೊಂದು ಶನಿದಶೆ ಅಂಟಿಕೊಂಡಿತಲ್ಲ ಎಂದು ಗಾಬರಿಪಟ್ಟರು, ಆದರೆ ಸರ್ಕಾರದ ಆದೇಶವನ್ನು ಪಾಲಿಸಲೇ ಬೇಕಲ್ಲ ಎಂದು ಸಂಶೋಧನೆಯ ಜೊತೆ ಈ ವೃತ್ತಿಯನ್ನು ಕೆಲವು ವರ್ಷ ಮುಂದುವರೆಸಿದರು.

ಕಾಲೇಜು ರಂಗ ಇಂದಿನ ಶಿಕ್ಷಣದ ಪರಿಸ್ಥಿತಿಯನ್ನು ಎತ್ತಿ ಹೇಳುವ ಕಾದಂಬರಿ, ಇಲ್ಲಿ ಬರುವ ಹಲವಾರು ಪ್ರಸಂಗಗಳು ಉದಾ: ಕನ್ನಡದ ಕೊಲೆ, ಆಡಿಟರ್ ದಾಂಧಲೆ, ಚಾಮರೋಪಾಖ್ಯಾನ, ಹಕ್ಕುಗಳ ಪೈಪೋಟಿ ಇನ್ನೂ ಹಲವು. ಈ ಪ್ರಕರಣಗಳು ಹಾಸ್ಯಪ್ರಿಯವಾಗಿದ್ದರೂ ಅವನ್ನು ನೆನೆದಾಗ ಭಯವೂ ಆಗುತ್ತದೆ. ಸ್ವಾಮಿಯವರು ಸತ್ಯನಿಷ್ಠರು, ಇದರಿಂದ ಅಲ್ಲಿರುವ ಇತರ ಪ್ರಾಧ್ಯಾಪಕರಿಗೆ ಇವರ ರೀತಿ ಸಹಿಸಲು ಸಾಧ್ಯವಾಗುವುದಿಲ್ಲ. ಕಾಲೇಜ್ ಅಂದಮೇಲೆ ಎಷ್ಟೆಲ್ಲಾ ಸಮಸ್ಯೆಗಳು ಇದ್ದೇ ಇರುತ್ತದೆ. ಭಾಷೆಯ ಸಮಸ್ಯೆ, ವಿದ್ಯಾರ್ಥಿಗಳ ಸಮಸ್ಯೆ, ಮೂರ್ಖರಾದರೂ ಅಧಿಕಾರ ನಡೆಸುವ ಡೈರೆಕ್ಟರ್, ಯಾವುದೇ ಕಾರ್ಯದಲ್ಲಿ ತಪ್ಪು ಹುಡುಕುವ ಕರಟಕ ದಮನಕರು, ಪಾಠಮಾಡುವುದರಲ್ಲಿ ಆಸಕ್ತಿ ತೋರದೆ ಇತರದಲ್ಲಿ ಸಲಹೆ ಸೂಚಿಸುವ ಅಧ್ಯಾಪಕರು, ಒಂದಾ ಎರಡಾ ಇನ್ನೂ ಹಲವೂ. ಇವರು ಪ್ರಿನ್ಸಿಪಾಲ್ ಆದರೂ ಏನೇ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದರೆ ಆ ನಿರ್ಧಾರವೆಲ್ಲ ತಮ್ಮ ಮೇಲಿನ ಅಧಿಕಾರಿಗಳದು ಹಾಗು ರಾಜಕಾರಣಿಗಳದು. ಹೀಗೆ ಒಂದಲ್ಲಾ ಎರಡಲ್ಲ ಹಲವಾರು ಸಮಸ್ಯೆಗಳು ಅಂಥದರಲ್ಲೂ ಸಹ ತಮ್ಮ ವೃತ್ತಿಯನ್ನು ನಿಷ್ಠಯಿಂದ ಪಾಲಿಸಲು ಶ್ರಮಪಟ್ಟ ಸ್ವಾಮಿಯವರು ಕಾಲೇಜು ರಂಗದಲ್ಲಿ ಹಾಸ್ಯರೂಪದಲ್ಲಿ ವಿವರಿಸಿದ್ದಾರೆ.

ಈ ಮುಖಪುಟದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
೧. ಡೈರೆಕ್ಟರ್: ಎಷ್ಟು ವರ್ಷ ಆಗುತ್ತದೆ ಪಿ.ಎಚ್.ಡಿ. ತೆಗೆದುಕೊಳ್ಳುವುದಕ್ಕೆ.
ಸ್ವಾಮಿ: ಬುದ್ಧಿವಂತನಿಗೆ ಮೂರು ವರ್ಷ, ಸಾಮಾನ್ಯವಾದ ಬುದ್ಧಿ ಮಟ್ಟವಿರುವವನಿಗೆ ನಾಲ್ಕು ವರ್ಷ, ಇನ್ನೂ ಕೆಳಗಿನ ಮಟ್ಟದವನಿಗೆ ಐದಾರು ವರ್, ಮೂರು ಸಲ ಫೇಲಾಗಿ ಮೂರನೇ ತರಗತಿಯಲ್ಲಿ ತೇರ್ಗಡೆಯಾಗದವನಿಗೆ ಈ ಜನ್ಮದಲ್ಲಿಲ್ಲ.
ಡೈರೆಕ್ಟರ್: ಕೊನೆಯದರ ವಿಷಯವಾಗಿ ನಿಮ್ಮನ್ನು ನಾನು ಕೇಳಲಿಲ್ಲ ಕಂಡರೆ ತಿಳಿಯಿತೇ,
ಸ್ವಾಮಿ: ನೋಟೆಡ್ ಸರ್, ತಿಳಿಯಿತು ಸರ್.

 

ಕೃಪೆ  https://www.goodreads.com/

 

ಪುಟಗಳು : 280

Customer Reviews

No reviews yet
0%
(0)
0%
(0)
0%
(0)
0%
(0)
0%
(0)