Click here to Download MyLang App

ದೇವಾಲಯ ವಾಸ್ತುಶಿಲ್ಪಿ ಪರಿಚಯ (ಪ್ರಿಂಟ್ ಪುಸ್ತಕ)

ದೇವಾಲಯ ವಾಸ್ತುಶಿಲ್ಪಿ ಪರಿಚಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಕೂ. ಸ. ಅಪರ್ಣ
ಮಾಮೂಲು ಬೆಲೆ
Rs. 300.00
ಸೇಲ್ ಬೆಲೆ
Rs. 300.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ವಿಶ್ವವಿದ್ಯಾಲಯದ ವಿದ್ವಾಂಸರು ಹಾಗೂ ನಾಡಿನ ಹಿರಿಯ, ಕಿರಿಯ ವಿದ್ವಾಂಸರು ಕೂಡಿ ಅರಿವಿನ ತೇರನು, ಎಳೆಯಬೇಕಾಗಿದೆ. ಜ್ಞಾನವನ್ನು ಇನ್ನೂ ಹುಲುಸಾಗಿ ಬೆಳೆಸಬೇಕಾಗಿದೆ. ದಾಸೋಹ ಭಾವನೆಯಿಂದ ಅದನ್ನು ಹಂಚಬೇಕಾಗಿದೆ. ಅಂದರೆ ಬೋಧನೆ ಮತ್ತು ಶೋಧನೆಗಳನ್ನು ಶ್ರೀಸಾಮಾನ್ಯರ ಮನೆ ಮನಗಳಿಗೆ ತಲುಪಿಸುವ ಮತ್ತೊಂದು ಅಂಗವೇ ಪ್ರಸಾರಾಂಗ, ಈ ಪ್ರಸಾರಾಂಗದ ಮೂಲಕ ದೇಸಿ ಸಂಸ್ಕೃತಿ ಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕಾಯಕ ಕನ್ನಡ ವಿಶ್ವವಿದ್ಯಾಲಯದಿಂದ ನಿರಂತರವಾಗಿ ನಡೆಯುತ್ತಿದೆ ಎಂಬುದು ನಮ್ಮ ಆಶಯವಾಗಿದೆ. - ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳು, ಈ ಕೇಂದ್ರಗಳ ವಾಸ್ತುಶಿಲ್ಪ ಒಂದು ಶಾಸ್ತ್ರೀಯ ಅಧ್ಯಯನ, ದೇವಾಲಯಗಳ ಅಂಗರಚನೆ, ಪತಂಗರಚನೆ ಕುರಿತಂತೆ ಒಂದು ಪೂರ್ಣಪ್ರಮಾಣದ ಪರಿಚಯಾತ್ಮಕ ಕೃತಿಯ ಅಗತ್ಯವಿತ್ತು. ಆ ಅಗತ್ಯವನ್ನು ಬಹು ಹಿಂದೆಯೇ ಕನ್ನಡ ವಿಶ್ವವಿದ್ಯಾಲಯಕ್ಕೆ ಪುಸ್ತಕ ರಚಿಸಿಕೊಡುವುದರ ಮೂಲಕ ಪುರಾತತ್ವ ಆಕರಗಳ ಸ್ವರೂಪದ ಕಡೆಗೆ ವಿದ್ವಾಂಸರ ಗಮನವನ್ನು ಸೆಳೆದ ಡಾ. ಕೂ.ಸ, ಅಪರ್ಣ ಅವರು ವಾಸ್ತುಶಿಲ್ಪದ ಪರಿಭಾಷೆಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಬಹು ಬೇಡಿಕೆಯ ಈ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಸಿದ್ಧಪಡಿಸಿದ ಡಾ. ಕೂ.ಸ. ಅಪರ್ಣ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 345

Customer Reviews

No reviews yet
0%
(0)
0%
(0)
0%
(0)
0%
(0)
0%
(0)