Click here to Download MyLang App

3019 AD (ಪ್ರಿಂಟ್ ಪುಸ್ತಕ)

3019 AD (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಶಾಂತಲ
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು:

ಡಾ. ಶಾಂತಲ

ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್

Publisher: MyLang Books

 

3019 AD ಯಲ್ಲಿ ಏನಿದೆ ? ಪುಸ್ತಕದ ಬಿಡುಗಡೆ ಮತ್ತು ಸಂವಾದದ ವಿಡಿಯೋ ಇಲ್ಲಿದೆ:

 

ಸಾವಿರ ವರ್ಷಗಳ ನಂತರದ ಭೂಮಿಯಲ್ಲಿ ಸೃಷ್ಟಿಯ ನಿಯಮಗಳಡಿ ಬದುಕಲು ಬಯಸುವವರ ಹಾಗು ಅದನ್ನು ಮೀರಿ ಸಾವನ್ನೂ ತಮ್ಮ ಕೈವಶ ಮಾಡಿಕೊಂಡವರ ನಡುವೆ ಅಸ್ತಿತ್ವಕ್ಕಾಗಿ ನಡೆಯುವ ಕತೆಯನ್ನೊಳಗೊಂಡ ಮೈನವಿರೇಳಿಸುವ  ಸೈನ್ಸ್ ಫಿಕ್ಷನ್ ಕಾದಂಬರಿ  3019 AD 

ಇಸವಿ 3019. ಭೂಮಿಯು ವಿಶ್ವದ ಬೇರೆ ಗ್ರಹಗಳ ಜೊತೆ ಮೇಲಾಟದ ಪೈಪೋಟಿ ನಡೆಸಿದೆ. ಭೂ ಸರ್ಕಾರವೂ ಇನ್ನೇನು ಚೈತನ್ಯ ಮರುಬಳಕೆ ಮಸೂದೆಯನ್ನು ಮಂಡಿಸುವುದರಲ್ಲಿದೆ. ಸಾವನ್ನು ಗೆಲ್ಲುವ ಹೊಸ್ತಿಲಲ್ಲಿ ಬಂದು ನಿಂತಿದೆ. ವಿನ್ಯಾಸಿಗರು ಸೈಬೋರ್ಗುಗಳನ್ನು ಹತ್ತಿಕ್ಕಿ ಮುಂದೆ ಸಾಗಲು ಹವಣಿಸುತ್ತಿದ್ದಾರೆ. ಇದಕ್ಕೆಲ್ಲ ತಡೆಯೊಡ್ಡಬಲ್ಲ ವಿಚಿತ್ರ ವ್ಯಾಧಿಯೊಂದು ಇದ್ದಕ್ಕಿದ್ದಂತೆ ಭೂಮಿಯನ್ನು ಆಕ್ರಮಿಸಿದೆ. ಗಾಂಪರ ನಾಯಕನಾದ ಅಮರ್ತ್ಯ ಭೂ ನಿವಾಸಿಗಳನ್ನು ಕಾಪಾಡಬಲ್ಲನೇ? 

ಕನ್ನಡಕ್ಕೆ ಪೂರ್ತಿ ಹೊಸತಾದ ಸೈನ್ಸ್ ಫಿಕ್ಷನ್ ಕಾದಂಬರಿ 3019 AD ವಿಶೇಷ ಬೆಲೆಯಲ್ಲಿ ಇಂದೇ ಪ್ರಿ-ಆರ್ಡರ್ ಮಾಡಿ.

 

ಪುಟಗಳು: 252 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
S
Santhosh Kumar
ರೋಮಾಂಚಕಾರಿ ಹಾಗೂ ಮಾನವೀಯ ತುಮುಲಗಳ ಸಂಗಮ

ಸೈ-ಫೈ ಓದುವ ಖುಷಿ , ಅದರಲ್ಲೂ ಅದನ್ನು ಕನ್ನಡದಲ್ಲಿ ಓದುವ ಖುಷಿ ಬೇರೆಯದೇ👍

3019 A D ಕಾಲ್ಪಾನಿಕ ವೈಜ್ಞಾನಿಕ ಅನ್ವೇಷಣೆಗಳ ಸುತ್ತ ಸುತ್ತುತ್ತಾ ಕಲ್ಪನಾ ಲೋಕದ ರೋಮಾಂಚಕತೆಯನ್ನು ಒಂದು ಕಡೆ ಹುಟ್ಟಿ ಹಾಕಿದರೆ, ಇನ್ನೊಂದು ಕಡೆ ಮಾನವಕುಲದ ಸಹಜ ತುಮುಲಗಳನ್ನು ಹಿಡಿದಿಡುತ್ತದೆ. ಮೊದಮೊದಲಿಗೆ ಹೊಸ ಪದಗಳನ್ನು ಅರಗಿಸಿಕೊಳ್ಳಲು ಸಮಯ ತೆಗೆದು ಕೊಂಡರು ನಂತರ ಆಟೋ ಪೈಲೆಟ್ ಮೋಡ್ ನಲ್ಲಿ ಓದಿಸಿ ಕೊಂಡು ಹೋಗತ್ತೆ.

ಸೈ-ಫೈ ಕಾದಂಬರಿಗಳು ನಿಮ್ಮ ಆಯ್ಕೆ ಆಗಿದ್ದರೆ ಖಂಡಿತ ಓದಲೇ ಬೇಕಾದ ಪುಸ್ತಕ. ಇಲ್ಲದಿದ್ದರೂ ಮಾನವ ಕುಲವನ್ನು ಕಾಡುವ ತುಮುಲಗಳನ್ನು/ಸಮಾಜದ ಒಳಗಿನ ಪ್ರಶ್ನೆಗಳ ಚಿತ್ರಣಕ್ಕಾಗಿಯಾದ್ರು ಓದಿ.

ನಾನು printed ಪುಸ್ತಕವನ್ನು ಓದಿದೆ. ಇದರ ಆಡಿಯೋ ಪುಸ್ತಕವು ಇದೆ.ಚೆಕ್ ಮಾಡಿ

A
Achala Hegde
ಸ್ವಾರಸ್ಯಕರ ಕಾದಂಬರಿ

ಕನ್ನಡದಲ್ಲಿ ಸ್ವಲ್ಪ ವಿರಳವೇ ಆಗಿರುವ ವೈಜ್ಞಾನಿಕ ಕಥಾ ಪ್ರಕಾರ. ಕ್ಲಿಷ್ಟ ವಿಚಾರಗಳನ್ನು ಕೂಡ ಎಲ್ಲಿಯೂ ಬೇಸರ ತರಿಸದಂತೆ ಅತ್ಯಂತ ಸುಲಲಿತವಾಗಿ ನಿರೂಪಿಸಲಾಗಿದೆ. ಕನ್ನಡಕ್ಕೆ ಅನೇಕ ಹೊಸ ವೈಜ್ಞಾನಿಕ ಪದಗಳನ್ನು ಲೇಖಕಿ ನೀಡಿದ್ದಾರೆ. Audio pustaka ಓದಿರುವ ಸಚಿನ್ ನಾಯಕ್ ಅವರ ಧ್ವನಿಯಲ್ಲಿ ಈ ಪುಸ್ತಕವನ್ನು ಕೇಳುತ್ತಿದ್ದರೆ, ನಾವೇ ಆ ಕಾಲ ಘಟ್ಟದಲ್ಲಿ ಇದ್ದು ನಮ್ಮೆದುರಿಗೆ ಎಲ್ಲ ಘಟನೆಗಳ ನಡೆಯುತ್ತಿವೆ ಎನ್ನುವ ಅನುಭವ. ಒಟ್ಟಿನಲ್ಲಿ ಅತ್ಯುತ್ತಮ.

D
Divya
ಕಲ್ಪನೆ, ಸೃಜನಶೀಲತೆ, ಮನರಂಜನೆ ಮತ್ತು ಭಾವನಾತ್ಮಕ ಸಂಪರ್ಕದ homogenous ಮಿಶ್ರಣ!

ಆಕರ್ಷಕ ಉಪನಾಮಗಳು, ಅಚ್ಚರಿ ಹೊಮ್ಮಿಸುವ ಹೊಸ ತಂತ್ರಜ್ಞಾನದ ಪರಿಭಾಷೆಗಳು, ಆಸಕ್ತಿದಾಯಕ ಕಥಾವಸ್ತು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯು ಅದ್ಭುತವಾಗಿದೆ ಆದರೆ ರೇಖೆಯನ್ನು ಎಲ್ಲಿ ಎಳೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಮಾನವಕುಲಕ್ಕೆ ಕನ್ನಡಿಯನ್ನು ತೋರಿಸುತ್ತದೆ.

ಇದು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ತುಂಬಿದ್ದರೂ, ಲೇಖಕರ ಭಾಷೆ ಅರ್ಥಮಾಡಿಕೊಳ್ಳಲು ಸರಳ, ವೈಜ್ಞಾನಿಕ ಕಾದಂಬರಿಯನ್ನು ಇಷ್ಟಪಡುವವರಿಗೆ ಅದ್ಭುತ ಓದು!

ವೈಜ್ಞಾನಿಕ ಕಾದಂಬರಿಯನ್ನು ಇಷ್ಟಪಡುವವರಿಗೆ ಅದ್ಭುತ ಓದು

ಇದು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ತುಂಬಿದ್ದರೂ, ಲೇಖಕರ ಅರ್ಥಮಾಡಿಕೊಳ್ಳಲು