Click here to Download MyLang App

ಒಂದು ರೂಪಾಯಿ (ಇಬುಕ್)

ಒಂದು ರೂಪಾಯಿ (ಇಬುಕ್)

e-book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 30.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


'ಒಂದು  ರೂಪಾಯಿ' ನಾಟಕದ  ಶೀರ್ಷಿಕೆಯೇ  ಹೇಳುವಂತೆ  ಕೇವಲ ಒಂದು  ರೂಪಾಯಿ ಹೆಚ್ಚಿಗೆ ಕೂಲಿ ಕೇಳಿದ ಕಾರ್ಮಿಕನ ಮೇಲೆ ಕ್ರೂರವಾಗಿ ಎರಗುವ  ರೈತನ ಕಥಾ ಸಂದರ್ಭದ ಮೂಲಕ ಶೋಷಣೆಯ ವಿವಿಧ ಮಾದರಿಗಳ  ನಿರೂಪಣೆಯಾಗುತ್ತದೆ. ಹಳ್ಳಿಯಲ್ಲಿ ಕೂಲಿಕಾರರ ಶೋಷಣೆ ಮಾಡುವ  ರೈತರು  ಪಟ್ಟಣಕ್ಕೆ ಹೋದಾಗ ಸರ್ಕಾರಿ ಕಛೇರಿಗಳಲ್ಲಿ ನೌಕರರಿಂದ ಅಧಿಕಾರಿಗಳಿಂದ  ಶೋಷಣೆಗೆ ಗುರಿಯಾಗುತ್ತಾರೆ. ಇವರೆಲ್ಲರನ್ನೂ ರಾಜಕಾರಣಿಗಳು, ಮಂತ್ರಿ ಮಹೋದಯರು ಸುಲಿಗೆ ಮಾಡುತ್ತಾರೆ. ಹೀಗೆ ಶೋಷಣೆಯ ಜಾಲವೇ ಜನರ ಸುತ್ತ  ಹೆಣೆದುಕೊಂಡಿದೆ.

ಬೇರೆ ಬೇರೆ ಸ್ವತಂತ್ರ ಬಿಡಿ ದೃಶ್ಯ ಕಲ್ಪನೆಯ  ಮೂಲಕ  ಇದೆಲ್ಲವನ್ನೂ ಚಿತ್ರವತ್ತಾಗಿ ನಾಟಕದಲ್ಲಿ ನಿರೂಪಿಸಲಾಗಿದೆ. ಮುಕ್ತಾಯದಲ್ಲಿ ರೈತನಿಗೆ ತನ್ನ ಸ್ವಾರ್ಥ ಮತ್ತು ಅಸಹಾಯಕತೆಗಳೆರಡೂ ಮನದಟ್ಟಾಗಿ ಕೂಲಿಕಾರನೊಂದಿಗೆ  ಒಂದಾಗಿ ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡಲು ಸಂಕಲ್ಪ ಮಾಡುವ  ವಿಚಾರವಿದೆ. ಆದರೆ ಈ ಹೋರಾಟ ಸರಳವಾಗಿಲ್ಲವೆಂಬುದೂ ನಾಟಕದಲ್ಲಿ  ಪ್ರಸ್ತಾಪಗೊಳ್ಳುತ್ತದೆ. ಶೋಷಣೆಯ ಬೇರುಗಳು  ದೈವಶ್ರದ್ಧೆ, ಧಾರ್ಮಿಕ ನಂಬಿಕೆ, ಸಾಮಾಜಿಕ ವ್ಯವಸ್ಥೆಯಲ್ಲೇ ಆಳವಾಗಿ ಬೇರೂರಿವುದನ್ನೂ ದೃಷ್ಟಾಂತಗಳ ಮೂಲಕ ತೋರಿಸಿಕೊಡಲಾಗಿದೆ.

 

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)