Click here to Download MyLang App

ಪೋಲಿಸ್ ಕಂಡ ಕಥೆಗಳು (ಪ್ರಿಂಟ್ ಪುಸ್ತಕ)

ಪೋಲಿಸ್ ಕಂಡ ಕಥೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬಿ.ಕೆ ಶಿವರಾಮ್
ಮಾಮೂಲು ಬೆಲೆ
Rs. 450.00
ಸೇಲ್ ಬೆಲೆ
Rs. 450.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರತಿ ಭಾನುವಾರ ಹಲವು ಕಂತುಗಳಲ್ಲಿ ಅಂಕಣವಾಗಿ ಮೂಡಿ ಬಂದ ಈ ಬರಹಗಳು, ಪತ್ರಿಕೆಯಲ್ಲಿ ಬರುತ್ತಿದ್ದಾಗ ಮಧ್ಯೆ ಮಧ್ಯೆ ಕೆಲವು ಬರಹಗಳನ್ನು ಓದಿ ಇಷ್ಟಪಟ್ಟಿದೆ ತದ ನಂತರ 596 ಪುಟಗಳ ದೊಡ್ಡ ಪುಸ್ತಕವಾಗಿ ಪ್ರಕಟವಾಗಿತ್ತು. ನನ್ನ ತಗೋಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಇದ್ದರೂ ಇದುವರೆಗೂ ಈ ಪುಸ್ತಕ ಸಿಕ್ಕಿರಲಿಲ್ಲಾ. ಹಳೆಯ ಪುಸ್ತಕದ ಅಂಗಡಿಯಲ್ಲಿ ಬೇರೆ ಯಾವುದೋ ಪುಸ್ತಕ ಹುಡುಕುವಾಗ ಈ ಪುಸ್ತಕ ಸಿಕ್ತು, ಬರೀ ರೂ.150/- ಗಳಿಗೆ. ಇನ್ನೂ ಹೊಚ್ಚ ಹೊಸ ಪುಸ್ತಕದಂತಿರುವ ಇದನ್ನು ಲೇಖಕರು ಯಾರೋ ಕಿರಿಯ ಮಿತ್ರನಿಗೆ ತಮ್ಮ ಕೈಬರಹದಲ್ಲಿ ಬರೆದು ಸಹಿ ಹಾಕಿ ಕೊಟ್ಟಿದ್ದಾರೆ. ಇಂತಹ ಪುಸ್ತಕಗಳು ಒಂದು ಸ್ಮರಣೀಕೆಯಂತೆ ಸಂಗ್ರಹಕ್ಕೆ ಒಂದು ಮೆರಗು.
ಇನ್ನೂ ಪುಸ್ತಕದ ಹೂರಣದ ಬಗ್ಗೆ ಹೇಳೋದಾದರೆ ತುಂಬಾ ಕುತೂಹಲದಿಂದ ಓದಿಸಿಕೊಳ್ಳುವ ಹೂರಣವನ್ನು ತುಂಬಿಸಿ ಕೊಟ್ಟಿದ್ದಾರೆ, ಬೆಂಗಳೂರು ಭೂಗತ ಲೋಕದ ಕುಖ್ಯಾತ ರೌಡಿಗಳು, ಪುಡಿ ರೌಡಿಗಳು, ಡಾನ್ ಗಳು ಇವರುಗಳನ್ನು ಮಟ್ಟ ಹಾಕಿದಂತಹ ಟಾಪ್ ಪೊಲೀಸ್ ಅಧಿಕಾರಿಗಳಲ್ಲಿ ಬಿ.ಕೆ. ಶಿವರಾಂ ಹೆಸರು ತುಂಬಾ ಮುಖ್ಯವಾದದ್ದು. ಪೊಲೀಸ್ ಅಧಿಕಾರಿಗಳಾದ ಲೇಖಕರು ತಮ್ಮ ಸಬ್ ಇನ್ಸ್‌ಪೆಕ್ಟರ್ ಸೇವಾವಧಿಯ ಮೊದಲಿನಿಂದ ತಾವು ಸೇವೆ ಸಲ್ಲಿಸಿರುವ
ಎಲ್ಲಾ ಠಾಣೆಗಳಲ್ಲಿ ಏನೇನು ಮುಖ್ಯವಾದ ಹಾಗೆ ಕುಖ್ಯಾತವಾದ ಅಪರಾಧದ ಕೇಸ್ ಗಳನ್ನು ವಿಚಾರಣೆ ಮಾಡಿದ್ದಾರೋ, ಹಾಗೆ ವಿಚಾರಣೆ ಸಂಧರ್ಭಗಳಲ್ಲಿನ ವಿಶೇಷತೆಯನ್ನು, ಸ್ವಾರಸ್ಯಗಳನ್ನು ಮತ್ತು ಅಪರಾಧಿಗಳ
ವ್ಯಕ್ತಿತ್ವ, ಅವರ ಕೌಟುಂಬಿಕ ಹಿನ್ನೆಲೆ, ಅಪರಾಧದ ಜಗತ್ತಿಗೆ ಅವರು ಬಂದ ಕಾರಣ, ರೀತಿ… ಅವರೆಸಗಿದ ಅಪರಾಧಗಳ ಭೀಕರತೆ ಎಲ್ಲಾವನ್ನು ಯಾವುದೇ ರೀತಿಯಲ್ಲಿ ವೈಭವೀಕರಿಸದೆ ಸಹಜವಾಗಿ ಬರೆಯುತ್ತಾ ಹೋಗಿದ್ದಾರೆ. 596 ಪುಟಗಳಷ್ಟು ಬರಹ, ಈಗ ಅರ್ಧದಷ್ಟು ಓದಿರುವೆ, ಇಲ್ಲಿಯವರೆಗೂ ಎಲ್ಲೂ ನೀರಸವೆನಿಸದೆ ಓದಿಸಿಕೊಂಡಿದೆ.
ಇನ್ನೂ ಬೆಂಗಳೂರು ಭೂಗತ ರೌಡಿಗಳ ಚರಿತ್ರೆಗೆ ಬಂದರೆ, ರೌಡಿ ನಿಗ್ರಹ ದಳದಲ್ಲಿದ್ದು ಅನೇಕ ರೌಡಿಗಳನ್ನು
ಮಟ್ಟಹಾಕಿ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದವರು ಬಿ.ಕೆ. ಶಿವರಾಂ, ಕುಖ್ಯಾತ ರೌಡಿಗಳಾದ ಕೊತ್ವಾಲ್ ರಾಮಚಂದ್ರ, ಜಯರಾಜ್, ಆಯಿಲ್ ಕುಮಾರ್, ಮುತ್ತಪ್ಪ ರೈ ಮತ್ತು ಶ್ರೀಧರ್ ( ಅಗ್ನಿ) ಇವರೆಲ್ಲರನ್ನು ಬಿ.ಕೆ.ಶಿವರಾಂ ನೇರಾ ನೇರ ಎದುರಿಸಿ ಅವರೆಲ್ಲಾ ಥರಗುಟ್ಟುವಂತೆ ಮಾಡಿದ್ದವರು. ಅವರೆಲ್ಲಾರ ಬಗ್ಗೆ ಇಲ್ಲಿ ವಿಷಯಗಳಿವೆ ಅದು ಹೇಗಿದೆ ಎಂದರೆ ಒಬ್ಬ ತಾಕ್ಕತ್ತಿನ ಪೊಲೀಸ್ ಅಧಿಕಾರಿಯ ನೋಟದಲ್ಲಿ ಅವರುಗಳು ಹೇಗಿದ್ದರು ಇವರ ಮುಂದೆ ಯಾವ ತರಹ ನಡೆದುಕೊಂಡರು ಅನ್ನೊದನ್ನ ಇಲ್ಲಿ ಓದಿ ನೋಡಬೇಕು. ಇದಕ್ಕೂ ಮುಂಚೆ ರವಿಬೆಳಗೆರೆಯವರ ‘ಪಾಪಿಗಳ ಲೋಕದಲ್ಲಿ’ ಮತ್ತು ಅಗ್ನಿ ಶ್ರೀಧರ್ ಬರೆದಿರುವ ‘ದಾದಾ ಗಿರಿಯ ದಿನಗಳು’ ಮೂರು ಪುಸ್ತಕಗಳನ್ನು ಓದಿದ್ದರೆ, ನಿಮಗೆ ರೌಡಿ ಜಗತ್ತಿನ ಹಲವು ವಿಷಯಗಳು ಸಲೀಸಾಗಿ
ಮತ್ತು ಆಳವಾಗಿ ತಿಳಿಯುತ್ತದೆ. ದಾದಾಗಿರಿಯ ದಿನಗಳಲ್ಲಿ ಬರೆದಿರುವ ಹಲವಾರು ವಿಷಯಗಳು ಇದರಲ್ಲಿ ಬರುವ ವಿಷಯಗಳೊಂದಿಗೆ ತಾಳೆ ಆಗುತ್ತದೆ.
ಇದರಲ್ಲಿನ ಹಲವಾರು ಅಂತಃಕರಣದ ವಿಷಯಗಳನ್ನು
ಓದುತ್ತಾ ಓದುತ್ತಾ ಸಹಜವಾಗೆ ಲೇಖಕರು ಆಪ್ತವಾಗುತ್ತಾರೆ. ಮತ್ತೊಂದು ಓದಲೇ ಬೇಕಾದ ಪುಸ್ತಕ ಅಂತ ಧೈರ್ಯವಾಗಿ ಹೇಳುವೆ……

 

ಉಮಾ ಶಂಕರ್

 

ಕೃಪೆ: https://pustakapremi.wordpress.com/

 

ಪುಟಗಳು : 596

Customer Reviews

No reviews yet
0%
(0)
0%
(0)
0%
(0)
0%
(0)
0%
(0)