Click here to Download MyLang App

ಅಂಗೈಯಲ್ಲಿ ಆರೋಗ್ಯ-2 (ಪ್ರಿಂಟ್ ಪುಸ್ತಕ)

ಅಂಗೈಯಲ್ಲಿ ಆರೋಗ್ಯ-2 (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ.ಗೌರಿ ಸುಬ್ರಹ್ಮಣ್ಯ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಮ್ಮ ಆಹಾರ ತಯಾರಿಕಾ ಕ್ರಮಗಳಲ್ಲಿ ಪದಾರ್ಥಗಳನ್ನು ಬೇಯಿಸಲು ಅಗ್ನಿಯನ್ನು ಬಳಸುವಂತೆ, ನಮ್ಮ ದೇಹದಲ್ಲಿಯೂ ಸದಾ ಅಗ್ನಿ ಪ್ರಜ್ವಲಿಸುತ್ತಿರುತ್ತದೆ. ಅದು ನಾವು ಸೇವಿಸಿದ ಆಹಾರವನ್ನು ವಿವಿಧ ಸ್ಥರಗಳಲ್ಲಿ ಪಾಕಮಾಡಿ, ನಿರುಪಯುಕ್ತ ಕಲ್ಮಶಗಳನ್ನು ಬೇರ್ಪಡಿಸಿ, ಉತ್ತಮ ಪೌಷ್ಟಿಕಾಂಶಗಳನ್ನು ನೀಡಿ ಶರೀರವನ್ನು ಪುಷ್ಟಿಗೊಳಿಸುತ್ತದೆ. ನಾವು ಪೂರಕ ಆಹಾರವನ್ನು ಸೇವಿಸಿದಾಗ ಮಾತ್ರ ನಮ್ಮ ದೇಹದಲ್ಲಿನ ಅಗ್ನಿಯು ಅದನ್ನು ಅಮೃತ ಸಮಾನವಾಗಿಸುತ್ತದೆ. ಇಲ್ಲದಿದ್ದಲ್ಲಿ ದೋಷಯುಕ್ತವಾಗಿ ನಾನಾ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಬಲ್ಲವರು ಹೇಳುತ್ತಾರೆ- 'ಊಟ ಬಲ್ಲವನಿಗೆ ರೋಗವಿಲ್ಲ' ಎಂದು.


ಅನುಚಿತ ಆಧುನಿಕ ಜೀವನಶೈಲಿಯಿಂದ ಬಳುವಳಿಯಾಗಿ ಬರುವ ನಾನಾ ರೋಗಗಳಿಗೆ ನಮ್ಮ ಆಯುರ್ವೇದದಲ್ಲಿದೆ ದಿವ್ಯ ಪರಿಹಾರ, ಆಯುರ್ವೇದ ಇದು ಕಪೋಲಕಲ್ಪಿತ ವಿದ್ಯೆಯಲ್ಲ. ತಮ್ಮ ಜ್ಞಾನಚಕ್ಷುವಿನಿಂದ ಸೃಷ್ಟಿಯ ಆಗುಹೋಗುಗಳನ್ನು ಅರಿತಿದ್ದ ಸನಾತನಾರ್ಯಭಾರತದ ಮಹರ್ಷಿಗಳು ಉದಾತ್ತ ಮನಸ್ಸಿನಿಂದ ನೀಡಿದ ಅತ್ಯಮೂಲ್ಯ ಜ್ಞಾನವೇ 'ಆಯುರ್ವೇದ', ಲೋಕವನ್ನು ಬೆಳಗಿದ ಹಲವಾರು ಋಷಿಮುನಿಗಳ ಮೂಲಕ ಮನುಕುಲದ ಉದ್ದಾರಕ್ಕೆಂದು ಈ ಅದ್ಭುತ ವಿದ್ಯ ಪ್ರಚಾರಕ್ಕೆ ಬಂದಿತು. ತನ್ಮೂಲಕ ಶರೀರದ ಸ್ವಾಸ್ತವನ್ನು ಕಾಪಾಡಿಕೊಳ್ಳುವ ಈ ಕಲೆ ಮೊದಲು ಒಲಿದದ್ದು ಮನೆಯನ್ನು ಜವಾಬ್ದಾರಿಯಿಂದ ನಡೆಸುವ ಗೃಹಿಣಿಯರಿಗೆ.


ಶರೀರೇ ಜರ್ಝರೀಭೂತೇ ವ್ಯಾಧಿಗಸ್ ಕಳೇಬರೆ!
ಔಷಧಿ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿಃ। ನಮ್ಮ ದೇಹವು ಆರೋಗ್ಯ ಸಮಸ್ಯೆಗಳಿಂದ ಕೂಡಿ ಬಾಧಿಸುವಾಗ ಪರಮಪವಿತ್ರ ಗಂಗಾಜಲದಂತೆ ಔಷಧಿಯನ್ನು ನೀಡುವ ವೈದ್ಯನನ್ನೇ ಭಗವಂತನೆನ್ನುತ್ತದೆ ನಮ್ಮ ಸನಾತನ ಧರ್ಮ.

ಅದರಂತೆ ಯಾವುದೇ ವ್ಯಕ್ತಿಯ ಪ್ರಥಮ, ನಿಸ್ವಾರ್ಥ, ಅಘೋಷಿತ ವೈದ್ಯರೆಂದರೆ ಅದು 'ಅಮ್ಮ' ಮಾತ್ರ. ಪ್ರಕೃತಿದತ್ತವಾಗಿಯೇ ಮಾತೃಹೃದಯದಲ್ಲಿ ಜಾಗೃತವಾಗುವ ಜವಾಬ್ದಾರಿಯಿದು. ಹಿಂದಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳನ್ನು ತಮ್ಮ ಊಟೋಪಚಾರಗಳಿಂದಲೇ ಸರಿಪಡಿಸಲಾಗುತ್ತಿತ್ತು. ನಮ್ಮ ಸನಾತನ ಆಚಾರವಿಚಾರಗಳಲ್ಲಿ ಅಮ್ಮನ ಮಾರ್ಗದರ್ಶನದ ಆಹಾರ-ವಿಹಾರ-ಮನೆಮದ್ದು ಮೇಳೆಸಿದ್ದವು. ಆದರೆ ಕಾಲಕಾಲದ ಜೀವನಶೈಲಿ ಬದಲಾದಂತೆ ಸಂಕೋಚಗೊಂಡೋ, ಅನುಮಾನಗೊಂಡೋ ಅಮ್ಮನ ಮನೆಮದ್ದಿನ ಜ್ಞಾನದ ಉತ್ತರದಾಯಿತ್ವ ವಹಿಸಿಕೊಳ್ಳುವಲ್ಲಿ ಇಂದಿನ ಪೀಳಿಗೆ ಅಷ್ಟೇನು ಸಫಲವಾಗಿಲ್ಲ. ಪಾಶ್ಚಿಮಾತ್ಯ ಚಿಕಿತ್ಸಾ ಪದ್ಧತಿಯತ್ತ ಒಲವು ಮೂಡಿದ್ದೇ ಇದಕ್ಕೆ ಕಾರಣವಿರಬಹುದಾದರು ಅದರ ಅನಾನುಕೂಲಗಳನ್ನು ಮನಗಂಡು ಮತ್ತೆ ತವರಿನ ಸಿರಿ ಅಮ್ಮನ ಆಯುರ್ವೇದವನ್ನರಸಿ ಬರಬೇಕಾದ ಅನಿವಾರ್ಯ ಉಂಟಾಗದಿರದು.

ಪ್ರಸ್ತುತ 'ಅಂಗೈಯಲ್ಲಿ ಆರೋಗ್ಯ-2' ಎಂಬ ಗೌರಿ ಅಮ್ಮನ ಆರೋಗ್ಯ ಸೂತ್ರಗಳ ಕಿರು ಹೊತ್ತಿಗೆ ಈಗಿನ ಕಾಲಕ್ಕೆ ಹೆಚ್ಚು ಸಮಂಜಸವಾಗಿದ್ದು ನಿತ್ಯ ಬಳಕೆಯ ಅಡುಗೆಮನೆ ಪದಾರ್ಥದಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಸರಳ ಗುಟ್ಟನ್ನು ಮಾತೃಹೃದಯಿ ಡಾ. ಗೌರಿ ಸುಬ್ರಹ್ಮಣ್ಯರವರು ಅಚ್ಚುಕಟ್ಟಾಗಿ ಸರಳ ಕನ್ನಡದಲ್ಲಿ ಅನಾವರಣಗೊಳಿಸಿದ್ದಾರೆ. ಅನೇಕ ವರ್ಷಗಳ ಅವರ ಅಧ್ಯಯನದ ಸಾರವನ್ನೇ ಜನಹಿತಕ್ಕಾಗಿ ಪಚಾರಪಡಿಸಲು ಮುಂದಾಗಿರುವ ಅವರ ಈ ಕೊಡುಗೆ ನಿಜಕ್ಕೂ ಪ್ರಶಂಸನೀಯ. ಇವರಿಂದ ಇನ್ನೂ ಹೆಚ್ಚೆಚ್ಚು ಉಪಯುತ್ತ ಮಾಹಿತಿಗಳನ್ನು ಹೊತ್ತ ಪುಸ್ತಕಗಳು ಹೊರಬರಲಿ. ಸಹೃದಯ ಓದುಗರು ಈ ಪುಸ್ತಕದ ಸರ್ವತೋಮುಖ ಉಪಯೋಗವನ್ನು ಪಡೆದುಕೊಳ್ಳಲೆಂದು ತನ್ಮೂಲಕ ಅವರ ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳಲೆಂದು ಆಶಿಸುತ್ತೇನೆ. 

ಸರ್ವೇ ಜನಾಃ ಸುಖಿನೋ ಭವಂತು |
ಮಹರ್ಷಿ ಡಾ. ಶ್ರೀ ಶ್ರೀ ಆನಂದ್ ಗುರೂಜಿ ಬ್ರಹ್ಮರ್ಷಿ ಆನಂದಸಿದ್ದಿ ಪೀಠಂ ಸಂಸ್ಥಾಪನಾಚಾರ್ಯ ಮಹರ್ಷಿ ಮಂದಿರಂ, ನವರತ್ನ ಅಗ್ರಹಾರ ಕೆಂಪೇಗೌಡ ವಿಮಾನನಿಲ್ದಾಣದ ಹತ್ತಿರ ಸಾದನಹಳ್ಳಿ, ಬೆಂಗಳೂರು.

 

ಪುಟಗಳು : 200

 

ಪುಟಗಳು : 100

Customer Reviews

No reviews yet
0%
(0)
0%
(0)
0%
(0)
0%
(0)
0%
(0)