Click here to Download MyLang App

ಗೂಡಿನಿಂದ ಬಾನಿಗೆ (ಪ್ರಿಂಟ್ ಪುಸ್ತಕ) | Goodininda Baanige (Print)

ಗೂಡಿನಿಂದ ಬಾನಿಗೆ (ಪ್ರಿಂಟ್ ಪುಸ್ತಕ) | Goodininda Baanige (Print)

printed book

ಪಬ್ಲಿಶರ್
ಸಂಯುಕ್ತಾ ಪುಲಿಗಲ್
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಮೂಲ ಲೇಖಕಿ: ಹೇಮಾ ಹಟ್ಟಂಗಡಿ
ಕನ್ನಡ ಅನುವಾದ: ಸಂಯುಕ್ತಾ ಪುಲಿಗಲ್
ಪ್ರಕಾಶಕರು: ಮೈಲ್ಯಾಂಗ್ ಪ್ರಕಾಶನ
  • ಒಂದು ಸಾಮಾನ್ಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಹೇಮಾ ಅವರು ಕನ್ಸರ್ವ್ ಅನ್ನುವ ಡಿಜಿಟಲ್ ವಿದ್ಯುತ್ ಮೀಟರುಗಳ ಕಂಪನಿಯನ್ನು ಕಟ್ಟಿ, ಬೆಳೆಸಿದ ಕತೆ ಗೂಡಿನಿಂದ ಬಾನಿಗೆ
  • ವಿದ್ಯುತ್ ಉದ್ದಿಮೆಯಂತಹ ಭ್ರಷ್ಟಾಚಾರದ ಆಗರದಲ್ಲಿ ಭ್ರಷ್ಟಾಚಾರಕ್ಕೆ ಚೂರು ಅವಕಾಶ ಕೊಡದೇ ಅತ್ಯಂತ ಯಶಸ್ವಿಯಾದ, ಪಾರದರ್ಶಕವಾದ ಸಂಸ್ಥೆಯೊಂದನ್ನು ಕಟ್ಟಿ ಗೆಲುವು ಸಾಧಿಸಿದ ಕತೆ ಗೂಡಿನಿಂದ ಬಾನಿಗೆ
  • ಧಾರವಾಡದಲ್ಲಿ ಓದಿ, ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದು ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್ಸ್ ಅಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ ಹೆಣ್ಣಿನ ಕತೆ ಗೂಡಿನಿಂದ ಬಾನಿಗೆ
  • ಸಂಸ್ಥೆಯೆಂದರೆ ಮಾಲೀಕ, ನೌಕರ ಅನ್ನುವ ಸಂಬಂಧವಲ್ಲ, ಅದೊಂದು ಕುಟುಂಬದ ಸಂಬಂಧ ಅನ್ನುವಂತೆಯೇ ಸಂಸ್ಥೆಯನ್ನು ರೂಪಿಸಿ ಉದ್ಯೋಗಿಗಳಿಗೆಲ್ಲ ಒಳ್ಳೆಯ ಕೆಲಸ, ಏಳಿಗೆ ಸೃಷ್ಟಿಸಿದ ಕನ್ಸರ್ವ್ ಅನ್ನುವ ಸಂಸ್ಥೆಯ ಕತೆ ಗೂಡಿನಿಂದ ಬಾನಿಗೆ

ಭಾರತದಲ್ಲಿ ವಿದ್ಯುತ್ ಉದ್ದಿಮೆಯೆನ್ನುವುದು ಭ್ರಷ್ಟಾಚಾರಕ್ಕೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ, ಮಾರಾಟ ಹೀಗೆ ಎಲ್ಲ ಹಂತದಲ್ಲೂ ಬಹುತೇಕ ಗಂಡಸರದ್ದೇ ಕಾರುಬಾರು. ಅಂತಹ ಕ್ಷೇತ್ರಕ್ಕೆ ಕಾಲಿಟ್ಟು, ಭ್ರಷ್ಟಾಚಾರಕ್ಕೆ ಚೂರು ಸೊಪ್ಪು ಹಾಕದೇ ಒಂದು ಅದ್ಭುತವಾದ ಸಂಸ್ಥೆ ಕಟ್ಟಿ ತೋರಿಸಿದ, ಧಾರವಾಡದಿಂದ ಹಾರ್ವರ್ಡ್‌ವರೆಗೆ ಹಬ್ಬಿದ ಸಾಧಕಿ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ ಲಿಫ್ಟ್ ಆಫ್ ಅನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿತ್ತು. ಅದನ್ನು ಈಗ ಮೈಲ್ಯಾಂಗ್ ಪ್ರಕಾಶನ ಕನ್ನಡಕ್ಕೆ ತಂದಿದೆ. ಕನ್ನಡದ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  

ಪುಟಗಳು: 256

Goodininda baanige is the Kannada translation of Hema Hattangady 's life story "Lift Off", published in English by Amazon's West Land. In a completely male dominated and corruption ridden energy industry, Hema, as the CEO of Conzerv Systems, showed the world on how a successful company can be built without resorting to any corrupt means, how a people centric work culture can excel in bringing the best out of people, how a family owned business can be transformed to become one of corporate India's most professionally run business. No wonder Conzerv became one of India's most successful energy efficiency companies and later acquired by Schneider electric. Conzerv's remarkable journey is studied at several business schools in the world including at Harvard Business school!

This story is riveting, engaging and inspiring and is translated to Kannada by one of the very promising Kannada writers of the last decade Samyuktha Puligal

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
K
K.K.

ಗೂಡಿನಿಂದ ಬಾನಿಗೆ - ವಿದ್ಯುತ್ ಉದ್ದಿಮೆಯಲ್ಲಿ ಸೆಣೆಸಿ ಗೆದ್ದ ಹೆಣ್ಣೊಬ್ಬಳ ಸಾಹಸದ ಕಥೆ, ಪುಸ್ತಕ ಓದಿ ಮುಗಿಸಿದ ನಂತರ
ಪ್ರಾಯಶಃ ಈ ಪುಸ್ತಕದ tagline ಇದಕ್ಕಿಂತ ಇನ್ನಷ್ಟು ಮಿಗಿಲಾಗಿರಬೇಕು ಎಂದೆನಿಸದೆ ಇರದು. ಯಾಕೆಂದರೆ ಈ ಪುಸ್ತಕ, ಬರೀ ಸ್ವಂತ ಉದ್ದಿಮೆಯನ್ನು ಶುರು ಮಾಡಬೇಕೆನ್ನುವವರಿಗೆ ಅಥವಾ ಹೆಣ್ಣುಮಗಳು ಏನೂ ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕಷ್ಟೇ ಸೀಮಿತವಾಗಿಲ್ಲ.
ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮ ಇವಿಷ್ಟುಗಳೇ ಸಾಕು ನಿಮ್ಮನ್ನು ನಿಮ್ಮ ಗುರಿ ತಲುಪಿಸಲು ಎಂಬ ಸತ್ಯವನ್ನು ಬಗೆಬಗೆಯಾಗಿ, ಎಳೆಎಳೆಯಾಗಿ ಮನದಟ್ಟು ಮಾಡಬಲ್ಲ ಕತೆ ಇದಾಗಿದೆ.
ನಾವೆಷ್ಟೇ ಬುದ್ಧಿವಂತಿಕೆಯ, ಪರಿಶ್ರಮಿಯಾಗಿದ್ದರೂ, ನಮಗೊಂದು ವೈಯಕ್ತಿಕ ನೆಲೆಯಲ್ಲಿ ಮಾರ್ಗದರ್ಶಕರನ್ನು ಹುಡುಕಿಕೊಳ್ಳಬೇಕು; ಯಾವುದೇ ಕಂಪೆನಿ ಅಥವಾ ಉತ್ಪನ್ನವನ್ನು ಮುನ್ನೆಡೆಸುವಾಗ ಅದರ ಆಳಕ್ಕಿಳಿದು ಮಕ್ಕಳು ABCD ಕಲಿಯುವಾಗ ತಿದ್ದಿ ತೀಡಿ, ಹಠದಿಂದಾದರೂ ಕಲಿಯಬೇಕೆಂಬ ರೀತಿಯ ಛಲ ಹೊಂದಿರಬೇಕು( ವಾಣಿಜ್ಯ ಪದವೀಧರೆ ಹೇಮಾ ಅವರು BL Thareja ಅವರ ಎಲೆಕ್ಟ್ರಿಕಲ್ ಪುಸ್ತಕ ಓದಿದಂತೆ); ನಮ್ಮ ತಂಡದೊಂದಿಗೆ ನಿಷ್ಕಲ್ಮಶ ಸಹಾನುಭೂತಿ ಯಾಕಿರಬೇಕು, ಅದು ತರುವ ಲಾಭಗಳೇನು?; ನಮ್ಮ ಜೀವನದ ಮೌಲ್ಯ,ಉದ್ದೇಶಗಳು ಮತ್ತು ನಾವು ನಡೆಸುವ ಸಂಸ್ಥೆ/ತಂಡಗಳ ಮೌಲ್ಯ, ಉದ್ದೇಶಗಳೊಂದಿಗೆ ಯಾಕೆ ಹೋಲಿಕೆಯಾಗಬೇಕು?...

ನನಗನಿಸಿದ ಪ್ರಕಾರ ಈ ಪುಸ್ತಕವನ್ನು ಸ್ವಂತದ್ದೊಂದು ಉದ್ದಿಮೆ ಮಾಡಬೇಕು ಎಂಬ ಕನಸಿರುವ ಪ್ರತಿಯೊಬ್ಬರು ಓದಬೇಕು.
ಯಶಸ್ವಿ ಕುಟುಂಬದ ಜೊತೆ, ವೃತ್ತಿಯಲ್ಲೂ ಏನಾದರೂ ಸಾಧಿಸಬೇಕೆಂಬ ಆಸೆ ಇರುವ ಪ್ರತಿ ಹುಡುಗಿಯರಲ್ಲದೇ, ಪ್ರಾಮಾಣಿಕತೆ ಮತ್ತು ಸತತ ಕೆಲಸದಿಂದ ಗುರಿ‌ ಮುಟ್ಟಿದಾಗ ಹೇಮಾ ಮತ್ತು ಅಶೋಕ್ ದಂಪತಿಗಳಾದ ಧನ್ಯತಾಭಾವವನ್ನು ಅನುಭವಿಸಲು ಪ್ರತಿಯೊಬ್ಬರೂ ಓದಲೇಬೇಕು. ಯುವಜನತೆಗೆ ಸಾಕಷ್ಟು ಸ್ಪಷ್ಟತೆ ಕೊಡುವ ಪುಸ್ತಕ ಇದು.
ಬಹಳ‌ ಚೆನ್ನಾಗಿ, ಬಾಳೆಹಣ್ಣು ಸುಲಿದಂತೆ ಕನ್ನಡೀಕರಿಸಿದ ಸಂಯುಕ್ತಾ ಪುಲಿಗಲ್ ಅವರಿಗೆ ಧನ್ಯವಾದಗಳು. ಇನ್ನಷ್ಟು ಪುಸ್ತಕಗಳು ನಿಮ್ಮಿಂದ ಬರಲಿ.

S
Sheeba Das

ಗೂಡಿನಿಂದ ಬಾನಿಗೆ (ಪ್ರಿಂಟ್ ಪುಸ್ತಕ) | Goodininda Baanige (Print)