Click here to Download MyLang App

ಚೆರ್ರಿ ತೋಪು (ಇಬುಕ್)

ಚೆರ್ರಿ ತೋಪು (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

'ಚೆರ್ರಿ ತೋಪು' ನಾಟಕದ ಕಥೆ ಆ ಕಾಲದ ರಷಿಯಾದ - ಮತ್ತು ವಿಶಾಲವಾಗಿ ಇಪ್ಪತ್ತನೆಯ ಶತಮಾನದ ಆರಂಭಕಾಲದ ಪಾಶ್ಚಿಮಾತ್ಯ ಜಗತ್ತಿನ - ಚರಿತ್ರೆಯ ಗತಿಯನ್ನೇ ನಿರೂಪಿಸುವಂಥದು; ಬಂಡವಾಳಶಾಹಿ ಯುಗದ ಆರಂಭದ ಲೋಕವೊಂದನ್ನು ಕಾಣಿಸುವಂಥದು. ಈ ನಾಟಕದಲ್ಲಿ, ಸಾಲಕ್ಕೆ ಆಧಾರವಾಗಿರುವ ಒಂದು ಜಮೀನ್ದಾರೀ ಕುಟುಂಬದ ಚೆರ್ರಿ ತೋಟ ಹರಾಜಿಗೆ ಬಂದಿದೆ. ಅದನ್ನು ನಿವೇಶನಗಳಾಗಿ ಮಾರ್ಪಡಿಸಿ ಮಾರಿದರೆ ಸಾಲ ತೀರುತ್ತದೆ. ಆದರೆ ಆ ತೋಟದೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿರುವ ಒಡತಿ ರೆನೆವಸ್ಕಾಯಾ ಹಾಗೆ ಮಾಡಲು ಒಪ್ಪುವುದಿಲ್ಲ. ಅತ್ತ, ಹರಾಜೂ ನಿಲ್ಲುವುದಿಲ್ಲ. ಈ ಮನೆಯಲ್ಲಿ ಒಕ್ಕಲಾಗಿದ್ದು ಈಗ ಹಣವಂತನಾಗಿರುವ ಲೋಪಾಹಿನ್‌ನೇ ತೋಟವನ್ನು ಕೊಳ್ಳುತ್ತಾನೆ. ಚೆರ್ರಿಮರಗಳನ್ನು ಕಡಿದು ಉರುಳಿಸುತ್ತಿರುವ ಶಬ್ದದ ಹಿನ್ನೆಲೆಯಲ್ಲಿ ಈ ಕುಟುಂಬ ಮನೆಯನ್ನು ಬಿಟ್ಟು ಹೊರಡುವಲ್ಲಿಗೆ ಈ ನಾಟಕ ಮುಗಿಯುತ್ತದೆ. ವಿಶೇಷವಾದ ನಾಟಕೀಯತೆಯೇನೂ ಇಲ್ಲದ ಈ ಕಥೆಯನ್ನು ಚೆಕಾವ್ ನಿರೂಪಿಸುವ ರೀತಿಯಿಂದಲೇ ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವ ಮಾನವವ್ಯಾಪಾರಗಳ ಒಂದು ದರ್ಶನವಾಗಿಯೂ ಪರಿವರ್ತಿತವಾಗುತ್ತದೆ.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !