ಗಿರಿಮನೆ ಕತೆಗಳೇ ಹಾಗೆ. ಕಾಡಲ್ಲೆಲ್ಲಾ ಅಲೆದಾಡಿಸಿ ಕೊನೆಗೆ ವಾಸ್ತವಕ್ಕೆ ತಂದುಬಿಟ್ಟ ಅನುಭವ. ಕತೆ ಅದೆಷ್ಟು ಚೆನ್ನಾಗಿ ಬರೆದಿದ್ದಾರೋ ಅಷ್ಟೆ ರಸವತ್ತಾಗಿ ಓದಿದ್ದಾರೆ ಕೂಡ. ಅದರ ಜೊತೆಗೆ ಹಿನ್ನೆಲೆ ಸಂಗೀತ ಪಕ್ಷಿಯ ಇಂಚರ ಎಲ್ಲವೂ ರೋಚಕ ಅನುಭವ ಕೊಟ್ಟಿತು. ಜೊತೆಗೆ ಮನ ಮಿಡಿಯುವ ಕತೆಯ ಅಂತ್ಯ ಮನಸ್ಸು ಕಲಕಿತು.