Click here to Download MyLang App

ಯಾನ (ಪ್ರಿಂಟ್ ಪುಸ್ತಕ)

ಯಾನ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 230.00
ಸೇಲ್ ಬೆಲೆ
Rs. 230.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಯಾನ ದ ಅನುಸಂಧಾನ. 

ವಿಶ್ವದ ಸೃಷ್ಟಿ, ಅಗಾಧತೆ ನಿಗೂಢಕೌತುಕಗಳನ್ನು ಕುರಿತು ಅನ್ವೇಷಿಸುತ್ತಲೇ ಜಗತ್ತಿನ ಜೀವಸಂಕುಲದೆದುರು ಮನುಜನ ಯಃಕಶ್ಚಿತ್ ರೂಪವನ್ನೂ ಮನುಜನ ಆಲೋಚನೆಗಳು ಅದರ ಅಗಾಧತೆಯೆದುರು ನಿರರ್ಥಕವೆನಿಸುವ ವಿಶಾಲ ಚಿಂತನೆಯನ್ನೂ ಭೈರಪ್ಪ ನೆಲೆ ಕಾದಂಬರಿ ನಮಗೆ ಒದಗಿಸಿದೆ. ಅದೇ ಜಾಡಿನಲ್ಲಿ ಮುಂದೆ ಹೋಗಿ ಖಭೌತ ಬಾಹ್ಯಾಕಾಶದ ವಿಸ್ಮಯವನ್ನೇ ಮುಖ್ಯ ವಸ್ತುವಾಗಿ ಹೊಂದಿ ಹೊರಹೊಮ್ಮಿದ ಯಾನ ಕಾದಂಬರಿಯು, ನೆಲೆಯ ಮುಂದಿನ ಹೆಜ್ಜೆಯನ್ನು ತುಳಿದಿದೆ. ಯಾನವು ನೆಲೆಯಂತಹ ಸಾಂದ್ರ ಸ್ವಭಾವ ಚಿಂತನೆಯಿಂದ ರೂಪುಗೊಂಡದ್ದಲ್ಲವೆನಿಸಿದರೂ ಭವಿಷ್ಯದಲ್ಲಿ ಒದಗಬಹುದಾದ ನೀತಿಯ ಪ್ರಶ್ನೆಗಳ ಕುರಿತು ಒಂದು ನಿರಪೇಕ್ಷ ನೆಲೆಯಿಂದ ಉತ್ತರ ಕಂಡುಕೊಳ್ಳುವ ಹುಡುಕಾಟ ಇಲ್ಲಿದೆ.

ಖಗೋಳ ವಿಜ್ಞಾನ, ಬಾಹ್ಯಾಕಾಶ ಸಂಶೋಧನೆಗಳಲ್ಲಿನ ಅತ್ಯಾಧುನಿಕ ಬೆಳವಣಿಗೆಗಳನ್ನು ಅತ್ಯಂತ ಸಮರ್ಪಕವಾಗಿ, ಸರಳವಾಗಿ ತಮ್ಮ ಕಾದಂಬರಿಯ ವಸ್ತುವಿಗೆ ಹೊಂದಿಸಿಕೊಂಡಿರುವ ಲೇಖಕರು, ಅದರ ಬೆಳವಣಿಗೆಯನ್ನು ಅಭಿವೃದ್ಧಿಗೆ ಹೊಂದಿಸಿಕೊಳ್ಳುವಾಗ ಉಂಟಾಗಬಹುದಾದ ಸಂದಿಗ್ಧ ಸಂದರ್ಭಗಳಲ್ಲಿ ನೈತಿಕ ತುಮುಲ ಹೊಯ್ದಾಟಗಳಲ್ಲಿ ಮನುಷ್ಯನ ವರ್ತನೆಯನ್ನು ಅತ್ಯಂತ ತಾಳ್ಮೆಯಿಂದ ಕಂಡರಿಸಿದ್ದಾರೆ.


ಕೃಪೆ   https://pustakapremi.wordpress.com/

 

ಪುಟಗಳು : 224

Customer Reviews

No reviews yet
0%
(0)
0%
(0)
0%
(0)
0%
(0)
0%
(0)