
ಈ ಕೃತಿಯು ಮಕ್ಕಳ ಕಥೆಗಳ ಸಂಗ್ರಹವಾಗಿದ್ದು, ಇದರಲ್ಲಿ ಹಲವು ಕಾಲ್ಪನಿಕ ಕಥೆಗಳಿವೆ. ಪುಟ್ಟ ಮಕ್ಕಳಿಗೆ ಒಳ್ಳೆಯ ನೀತಿಯನ್ನು ಸಾರುವ ಕಥಾ ಸಂಗ್ರಹವು ಇದಾಗಿದ್ದು, ಚಿಕ್ಕ ಮಕ್ಕಳಿಗೆ ಕುತೂಹಲದಾಯಕವಾದ ಹಾಗೂ ಆಸಕ್ತಿದಾಯಕವಾದಂತಹ ಕಥೆಗಳನ್ನು ಈ ಕೃತಿಯು ಒಳಗೊಂಡಿದೆ. ಪ್ರಾಣಿಗಳ ಕಥೆ, ರಾಜರ ಕಥೆ ಹೀಗೆ ಪುಟ್ಟ ಮಕ್ಕಳಿಗೆ ಇಷ್ಟವಾಗುವಂತಹ ಹಲವು ಚಿಕ್ಕ ಕಥೆಗಳ ಸಂಗ್ರಹವು ಇದಾಗಿದೆ. ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸುವ, ಓದಿನಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವ ಕಥೆಗಳು ಇದರಲ್ಲಿವೆ. ಮಕ್ಕಳಿಗೆ ತಮ್ಮ ಓದಿನಲ್ಲಿ ಆಸಕ್ತಿ ಹೆಚ್ಚಿಸಲು, ಪ್ರತಿನಿತ್ಯ ಓದುವ ಅಭ್ಯಾಸವು ಅವರಿಗಾಗಲು ಈ ಕೃತಿಯು ಸಹಾಯವಾಗುವುದು. ಕಥೆಯ ಕೊನೆಯಲ್ಲಿ ಆ ಕಥೆಯಿಂದ ತಿಳಿದುಕೊಳ್ಳಬೇಕಾದ ನೀತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ನೀತಿ ಕಥೆಗಳಿಂದ ಮಕ್ಕಳಿಗೆ ಜೀವನದ ಮೌಲ್ಯವನ್ನು ಈ ಕೃತಿಯು ತಿಳಿಸುತ್ತದೆ. ಬೇರೆ ಬೇರೆ ವಿಷಯದ ಬಗ್ಗೆ ವಿಶಿಷ್ಟ ಶೈಲಿಯಲ್ಲಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಒಂದರಿಂದ ಇನ್ನೊಂದು ಕಥೆ ಬಹಳ ಭಿನ್ನವಾಗಿದೆ. ಎಲ್ಲಾ ರೀತಿಯ ಕಥೆಗಳ ಒಂದು ಸಂಪೂರ್ಣ ಕಥಾಸಂಗ್ರಹವು ಇದಾಗಿದೆ.
ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿ ಅದನ್ನು ಅವರು ಭವಿಷ್ಯದಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉಪಯೋಗವಾಗಲಿ ಎಂಬ ಕಾರಣಕ್ಕೆ ಈ ಕಥಾ ಸಂಗ್ರಹವನ್ನು ರಚಿಸಲಾಗಿದೆ. ಕಥೆಯಲ್ಲಿ ಬರುವಂತಹ ಸನ್ನಿವೇಶಗಳು, ನಮ್ಮ ಜೀವನದಲ್ಲಿಯೂ ಬಂದರೆ ಆಗ ನಾವು ಏನು ಮಾಡಬೇಕು ಎಂಬುದನ್ನು ಕಥೆಯ ನೀತಿಯಿಂದ ತಿಳಿಸಿಕೊಡಲಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು? ಹೇಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು? ಎಂಬುದನ್ನೂ ತಿಳಿಸಲಾಗಿದೆ. ಮಕ್ಕಳು ತಮ್ಮ ಬಾಲ್ಯದಲ್ಲಿ ಓದಿದ ಕಥೆಗಳು ಬರೀ ಬಾಲ್ಯಕಷ್ಟೇ ಸೀಮಿತವಾಗಿರದೆ, ಅದರಿಂದ ದೊರೆತ ಜ್ಞಾನವನ್ನು ತಮ್ಮ ಮುಂದಿನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಕಥೆಗಳ ನೀತಿಯಿಂದ ತಿಳಿಸಲಾಗಿದೆ. ಹಾಗೂ ಇದೇ ಕಾರಣಕ್ಕೆ ಈ ಕೃತಿಯು ರಚಿಸಲ್ಪಟ್ಟಿದ್ದು, ಇದರಲ್ಲಿ ಅದ್ಭುತವಾದ ನೀತಿ ಕಥೆಗಳ ಸಂಗ್ರಹವಿದೆ.