Click here to Download MyLang App

ವಂಶವೃಕ್ಷ (ಪ್ರಿಂಟ್ ಪುಸ್ತಕ)

ವಂಶವೃಕ್ಷ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 455.00
ಸೇಲ್ ಬೆಲೆ
Rs. 455.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಭೈರಪ್ಪನವರ ಎಲ್ಲಾ ಪುಸ್ತಕಗಳು ಕೂಡ ಜನಪ್ರಿಯವೇ, ಅವರ ಬರವಣಿಗೆ ವೈಖರಿಗೆ ಮನಸ್ಸೋಲದವರಿಲ್ಲ.. ಸಮಾಜದ ಆಗು ಹೋಗುಗಳನ್ನು ಯಥಾವತ್ತಾಗಿ ಬಿಂಬಿಸಿ, ಓದುಗರನ್ನು ತಮ್ಮದೇ ಶೈಲಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ..

ವಂಶವೃಕ್ಷದಲ್ಲಿನ ಪಾತ್ರಗಳು ಬೆರಳೆಣಿಕೆ, ಆದರೆ ಅವುಗಳ ಪ್ರಭಾವ ಅಧಿಕ! ಮುಖ್ಯವಾಗಿ ಕಾಡುವ ಪಾತ್ರಗಳು ಕಾತ್ಯಾಯಿನಿ, ಶ್ರೀನಿವಾಸ ಶೋತ್ರಿಗಳು ಹಾಗೂ ಸದಾಶಿವ ರಾಯರದ್ದು..

ಶ್ರೀನಿವಾಸ ಶೋತ್ರಿಗಳು ತಮ್ಮ ಜೀವನವನ್ನು ಪ್ರೀತಿಸುತ್ತಾರೆ, ವಂಶ ಪಾರಂಪರಿಕ ವಿಧಾನಗಳನ್ನು ಅನುಸರಿಸುತ್ತಾರೆ.. ಯಾವುದೇ ಕ್ಷಣದಲ್ಲಿಯಾದರೂ ತಾಳ್ಮೆ ಕಳೆದುಕೊಳ್ಳದೆ, ಬದುಕನ್ನು ನಿಭಾಯಿಸುವ ರೀತಿ ಅನುಕರಣೀಯ.. ಇನ್ನು ಕಾತ್ಯಾಯಿನಿ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, ಅವನಿಂದ ದೊರೆತ ಮಗುವಿದ್ದರೂ, ಕೇವಲ ವಯಸ್ಸಿನಾಕರ್ಷಣಗೆ ಒಳಗಾಗಿ ರಾಜಾರಾಯರನ್ನು ಮದುವೆಯಾಗುತ್ತಾಳೆ.. ಅವಳು ಮಾಡಿದ್ದು ಸರಿಯೋ ತಪ್ಪು ಎನ್ನುವುದು ಸ್ವತಃ ಅವಳಿಗಷ್ಟೇ ಅಲ್ಲದೆ ಓದುಗರಿಗೂ ದ್ವಂದ್ವ ಮನಸ್ಥಿತಿ.. ಅಧ್ಯಯನದಲ್ಲೇ ಬಹುಪಾಲು ಕಾಲ ಕಳೆದ ಸದಾಶಿವ ರಾಯರು, ಪತ್ನಿಯಿದ್ದರೂ ಸಹ ತಾವು ಬರೆಯುವ ಸಂಪುಟ ಪೂರ್ತಿಗೊಳಿಸಲೇಬೇಕೆಂಬ ಹಟಕ್ಕೆ ಕರುಣೆಯನ್ನು ಮದುವೆಯಾಗುವ ರಾಯರನ್ನೂ ಓದುಗ ಮಿತ್ರರು ಪ್ರಶ್ನಿಸುವಂತಾಗುತ್ತೆ.. ತಾವುಗಳು ಹುಟ್ಟಿ ಬೆಳೆದ ವಾತಾವರಣ, ಸದ್ಯದ ಪರಿಸ್ಥಿತಿ, ಭವಿಷ್ಯದ ಚಿಂತೆಗಳನ್ನು ಹೊತ್ತ ಈ ಕಥೆಯನ್ನು ಓದಲೇಬೇಕು ನೀವುಗಳು..

ಧನ್ಯವಾದಗಳು,
ಸುಪ್ರೀತಾ ವೆಂಕಟ್


ಕೃಪೆ   https://pustakapremi.wordpress.com/

 

ಪುಟಗಳು : 261

Customer Reviews

No reviews yet
0%
(0)
0%
(0)
0%
(0)
0%
(0)
0%
(0)