Click here to Download MyLang App

ತಬ್ಬಲಿಯು ನೀನಾದೆ ಮಗನೆ (ಪ್ರಿಂಟ್ ಪುಸ್ತಕ)

ತಬ್ಬಲಿಯು ನೀನಾದೆ ಮಗನೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 375.00
ಸೇಲ್ ಬೆಲೆ
Rs. 375.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಎಸ್.ಎಲ್. ಭೖೆರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಕಾದಂಬರಿಯು, ಧರಣಿ ಮಂಡಲ ಮಧ್ಯದೊಳಗೆ…… ಪದ್ಯದೊಂದಿಗೆ ಆರಂಭವಾಗುತ್ತದೆ. ಈ ಪದ್ಯದಲ್ಲಿ ಬರುವ ಕಾಳಿಂಗನೆಂಬ ಗೊಲ್ಲನ ವಂಶಜನೆಂದು ಕಾಳಿಂಗ ಗೌಡ, ಕಾಳೇನ ಹಳ್ಳಿಯಲ್ಲಿ ಊರಿನ ಮುಖ್ಯವ್ಯಕ್ತಿಯಾಗಿ ಪ್ರಸಿದ್ದಿಯೊಂದಿರುವುದರ ಜೊತೆಗೆ ಪದ್ಯದಲ್ಲಿ ಬರುವ ಪುಣ್ಯಕೋಟಿ ಗೋವಿನ ತಳಿ ಅವನ ದೊಡ್ಡಿಯಲ್ಲಿರುತ್ತದೆ.
ಗೋವುಗಳನ್ನು ತಾಯಿಯಂತೆ ತಿಳಿದು ಅವುಗಳ ಆರೖೆಕೆ ಮಾಡಿ ಪ್ರೀತಿಯಿಂದ ಕಾಣುತ್ತಾನೆ, ಅಲ್ಲದೆ ಗೋ ಹತ್ಯೆ ಮಾಡುವುದನ್ನು ಮಹಾಪಾಪವೆಂದು ತಿಳಿದಿರುತ್ತಾನೆ. ಕಾಳೇಗೌಡನ ಮಗನು ಕೂಡ ಗೋವನ್ನು ರಕ್ಷಿಸಲು ಹೋಗಿ ಕಿರುಬಕ್ಕೆ ಬಲಿಯಾಗಿರುತ್ತಾನೆ. ಆದರೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ವಿದೇಶಿ ಹೆಣ್ಣನ್ನು ಮದುವೆಯಾಗಿ ಬರುವ ಮೊಮ್ಮಗ ಮಾತ್ರ, ಗೋವು, ಪ್ರಾಣಿಗಳಿರುವುದು ಮನುಷ್ಯನ ಆಹಾರಕ್ಕಾಗಿ, ಮಾಂಸಕ್ಕಾಗಿಯೆಂದು ವಾದಿಸುತ್ತಾನೆ. ಇದರಿಂದಾಗಿ ಮನೆಯವರ ಜೊತೆಗೆ ಊರಿನವರಿಂದ ದೂರವಾಗುತ್ತಾನೆ. ಇಂತಹ ಒಂಟಿತನದ ಬದುಕಿನಿಂದ ಬೇಸರಗೊಂಡು ಮರಳಿ ತನ್ನ ಹಿಂದಿನ ಶ್ರದ್ದೆಗೆ ಮರಳುವುದರೊಳಗೆ, ಪಡೆದಿದ್ದಕಿಂತ ಹೆಚ್ಚಿನದನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ.

ಗೋವುಗಳನ್ನು ದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದರ ವ್ಯತಿರಿಕ್ತ ಸ್ವಭಾವದ ಮೊಮ್ಮಗನ ನಡುವಿನ ಮೌಲ್ಯಗಳ ತಿಕ್ಕಾಟವೇ ಕಾದಂಬರಿಯ ಕಥಾವಸ್ತು.

-Kavitha Bhat


ಕೃಪೆ   https://pustakapremi.wordpress.com/

 

ಪುಟಗಳು : 296

Customer Reviews

No reviews yet
0%
(0)
0%
(0)
0%
(0)
0%
(0)
0%
(0)