Click here to Download MyLang App

ಸಾಕ್ಷಿ (ಪ್ರಿಂಟ್ ಪುಸ್ತಕ)

ಸಾಕ್ಷಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 385.00
ಸೇಲ್ ಬೆಲೆ
Rs. 385.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಮೌಲ್ಯವನ್ನು ಅಳೆಯುವ ಮಾಪನವಾದರೂ ಏನು? ಅಳವಡಿಸಿಕೊಳ್ಳುವ ಮೌಲ್ಯವು ಕೇವಲ ವ್ಯಕ್ತಿಯೊಬ್ಬನ ಅಂತರಂಗದ ಅನುಸಾರವಿರಬೇಕೋ ಅಥವಾ ಹೊರಗಿನ ಕ್ರಿಯಾಕಲಾಪಗಳಿಗೆ ನೇರ ಹೊಣೆಯಾಗಿ ಪರಿಣಾಮ ಬೀರಬಹುದೋ? ಇಷ್ಟಕ್ಕೂ ಅನುಸರಿಸಬೇಕಾದ ಅಥವಾ ಅನುಸರಣಾ ಯೋಗ್ಯವಾದ ಮೌಲ್ಯಗಳು ಯಾವುವು? ಸತ್ಯ, ಧರ್ಮ, ನ್ಯಾಯ, ಒಳ್ಳೆಯತನ, ಸರ್ವಜನ ಹಿತ, ನಿರ್ಮೋಹಿತನ, ನಿರ್ಲಿಪ್ತತೆ, ನಿರ್ಭಾವುಕತೆ, ವಿವೇಕಪೂರ್ಣ ಚಿಂತನೆ..ಯಾವುದು ಒಳ್ಳೆಯ ಮೌಲ್ಯಗಳು? ಇನ್ನೊಬ್ಬರನ್ನು ನೋಯಿಸದಂತೆ ಬಾಳುವುದೇ? ಲೌಕಿಕದಲ್ಲಿ ನಡೆವ ಕಲಾಪಗಳಿಂದ ವಿಮುಕ್ತನಾಗಿ ಅಲೌಕಿಕನಾಗುವುದೇ? ಎಲ್ಲ ಭವ ಭಾವ ಬಂಧನದಿಂದ ಕಳಚಿಕೊಳ್ಳುವುದೇ?

ಅಥವಾ ಮೌಲ್ಯರಹಿತ ಬದುಕಿನಲ್ಲಿ ಪರರ ಚಿಂತೆಯೇ ಇಲ್ಲದೆ ಅಧರ್ಮಿ, ಅಸಹಿಷ್ಣು, ಅವಿವೇಕಿ, ಲೋಭಿ, ಲೋಲುಪನಾಗಿ ಸಮಾಜವನ್ನು, ಪರಿಸರವನ್ನು, ವ್ಯಕ್ತಿಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ತನ್ಮೂಲಕ ಕೇವಲ ತನ್ನ ಸ್ವಹಿತಾಸಕ್ತಿ ಕಾಪಾಡಿಕೊಂಡಿದ್ದರೆ ಸಾಕೇ? ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಏರ್ಪಡುವ ಸಂಘರ್ಷಕ್ಕೆ ಸಿಲುಕದೇ ಕೇವಲ ತಟಸ್ಥನಾಗಿರಬೇಕಾ? ಅಥವಾ ನಡೆದ ಘಟನೆಗಳನ್ನು ತಾದ್ಯಾತ್ಮಕತೆಯಿಂದ ಸ್ವೀಕರಿಸಿ ಆ ಘಟನೆಗಳಿಗೆ ಸಾಕ್ಷೀಭೂತನಾಗಿರುವುದಾ? ಏನು ನಡೆದಿದೆಯೋ ಅದರ ಅರಿವೇ ಇಲ್ಲದ ಅಸಹಾಯಕತೆಗೂ, ಅರಿವಿಗೆ ಬಂದರೂ ಏನೂ ಮಾಡಲಾಗದ ನಿರ್ವೀರ್ಯತೆಗೂ, ಪ್ರಮಾದ ತಡೆಯಬಹುದಾದ ಸಾಮರ್ಥ್ಯವಿದ್ದರೂ ತಡೆಯಲಾಗದ ಅಸಮರ್ಥತೆಗೂ ಅಂಥಾ ವ್ಯತ್ಯಾಸವೇನಿಲ್ಲ. ಈ ಎಲ್ಲಾ ಸಾಧ್ಯತೆಗಳೂ ಒಂದೇ ಘಟನೆಗಿರುವ ಹಲವು ಆಯಾಮದಂತೆ ಪರಸ್ಪರ ಥಳುಕು ಹಾಕಿಕೊಂಡಿರುತ್ತವೆ. ಅದರ ಪರಿಧಿಯಿಂದಾಚೆ ಬರದೆ ವಿನಃ ಆ ಘಟನೆಯಿಂದ ನಮ್ಮನ್ನು ನಾವು ಹೊರತುಪಡಿಸಿ ನಿರ್ಧರಿಸಲಾರೆವು. ಹಾಗೆ ಹೊರಬಂದು ನಿರ್ಧರಿಸಲಾಗದೆ, ಒಂದು ಘಟನೆಗಿರಬಹುದಾದ ಹಲವು ಆಯಾಮಗಳನ್ನು ಗಮನಿಸದೆ ಸಾವಿಗೆ ಶರಣಾದ ಕರುಣಾಳುವಿನ ಕಥೆಯೇ “ಸಾಕ್ಷಿ”.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


ಕೃಪೆ   https://pustakapremi.wordpress.com/

 

ಪುಟಗಳು : 324

Customer Reviews

No reviews yet
0%
(0)
0%
(0)
0%
(0)
0%
(0)
0%
(0)