Click here to Download MyLang App

ಕಲಿವ ಶಾಲೆಯ ಹಲವು ಮುಖಗಳು (ಪ್ರಿಂಟ್ ಪುಸ್ತಕ)

ಕಲಿವ ಶಾಲೆಯ ಹಲವು ಮುಖಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ವಿ. ಮಂಜುನಾಥ್
ಮಾಮೂಲು ಬೆಲೆ
Rs. 300.00
ಸೇಲ್ ಬೆಲೆ
Rs. 300.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸುಭಗ ಕನ್ನಡದ ಸಮಾಜಮುಖಿ ಕೃತಿ

ಎಸ್.ವಿ. ಮಂಜುನಾಥ್ ಶಿಕ್ಷಣರಂಗದ ಬಗ್ಗೆ ಗಂಭೀರ ಕಾಳಜಿಯಿಂದ ಕೆಲಸ ಮಾಡುತ್ತಿರುವ ಅಪರೂಪದ ವ್ಯಕ್ತಿ. 'ಕಲಿವ ಶಾಲೆಯ ಹಲವು ಮುಖಗಳು'- ಸ್ವಾನುಭವ, ಸಂಶೋಧನೆ, ನಿಸ್ವಾರ್ಥ ಆಸಕ್ತಿಯಿಂದ ಅವರು ರಚಿಸಿರುವ ಮಹತ್ವದ ಕೃತಿ, ಶಿಕ್ಷಣ ಕ್ಷೇತ್ರದ ನಾನಾ ಮುಖಗಳನ್ನು ಸರ್ಕಾರಿ ಶಾಲೆಗಳ ಪುರೋಭಿವೃದ್ಧಿಯನ್ನು ಅವಕಾಶವಂಚಿತ ಮಕ್ಕಳ ಹಿತಾಸಕ್ತಿಯ ನೆಲೆಯಲ್ಲಿ ಚಿಂತಿಸುವ, ಸುಭಗ ಕನ್ನಡದಲ್ಲಿ ರಚಿತವಾದ ಅಂಶ ಪುಸ್ತಕವನ್ನು ಈಚಿನ ದಿನಗಳಲ್ಲಿ ನಾನು ಕಂಡಿರಲಿಲ್ಲ. 

ನಮ್ಮ ಸರ್ಕಾರಿ ಆರಂಭಿಕ ಕಲಿಕಾ ಕೇಂದ್ರಗಳಿಗೆ ಕೇರಳ ಮಾದರಿಯ ಪರ್ಯಾಯದ ಸೂಚನೆ ಸೂಕ್ತವೆನಿಸಿತು. ತಮ್ಮ ಅನುಭವಗಳನ್ನು ಹಾಗೂ ಅರಿವನ್ನು ಹೀಗೆ ಕನ್ನಡದಲ್ಲಿ ಸೃಷ್ಟಿಸುವ ಕೃತಿಗಳು ಇವತ್ತಿನ ತುರ್ತು ಅಗತ್ಯಗಳಾಗಿವೆ. ಮಂಜುನಾಥ್‌ರ ಕನ್ನಡ ಕೂಡ ಅದರ ಗಾಂಭೀರ್ಯ, ಶುದ್ಧತೆ, ಅಧಿಕೃತತೆಯಿಂದ ನನಗೆ ತುಂಬಾ ಪ್ರಿಯವಾಗಿದೆ. ಲೇಖಕರ ಸಮಾಜಮುಖಿಗುಣ, ಶಿಕ್ಷಣ ಬಗೆಗಿನ ಅನನ್ಯವಾದ ಕಾಳಜಿಯನ್ನು ನಾನು ವಿಶೇಷವಾಗಿ ಪ್ರಸ್ತಾಪಿಸುತ್ತೇನೆ. ಶ್ರೀಯುತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

- ಎಚ್.ಎಸ್. ವೆಂಕಟೇಶಮೂರ್ತಿ, ಪ್ರಸಿದ್ಧ ಕವಿಗಳು

 

 

ಕಲಿಯುತ್ತಾ ಕಲಿಸುವ ಕ್ರಿಯೆ

ಶಿಕ್ಷಣ ಸಂಸ್ಕೃತಿಯನ್ನು ಸೂಕ್ತವಾಗಿ ಗ್ರಹಿಸಿ, ಸಕ್ರಿಯವಾಗಿ ಆ ವಲಯದಲ್ಲಿ ಭಾಗವಹಿಸುವುದು ಹೇಗೆ ಎಂಬುದನ್ನು ಕುರಿತು ಆ ನಮ್ಮ ವಿಚಾರಗಳನ್ನು ತಲೆಕೆಳಗೆ ಮಾಡಿ ಹೊಸ ದೃಷ್ಟಿಕೋನವೊಂದನ್ನು ಮಂಜುನಾಥ್ ಅವರ ಇಲ್ಲಿಯ ಲೇಖನಗಳು ನಮಗೆ ನೀಡುತ್ತವೆ. ಇವು ಕೇವಲ 'ಬರಹ'ಗಳಲ್ಲ. ಕ್ಷೇತ್ರಕಾರ್ಯ, ಪ್ರಯೋಗ, ಚರ್ಚೆ, ಆತ್ಮಪರೀಕ್ಷೆ, ಅಧ್ಯಯನಗಳ ಹಿನ್ನೆಲೆಯಲ್ಲಿ ಮೂಡಿರುವ ಮಂಜುನಾಥ್‌ರ ಕಳಕಳಿಯ ಪ್ರಾರ್ಥನೆ ಮತ್ತು ಒತ್ತಾಯ.

ಶಿಕ್ಷಣವೆಂದರೆ ಕಲಿಸುವುದು ಎಂಬುದು ಸಾಂಪ್ರದಾಯಿಕ ತಿಳುವಳಿಕೆ, ಹಾಗಲ್ಲ, ಅದು ನಿರಂತರವಾಗಿ ಕಲಿಯುತ್ತಾ ನಂತರ ಕಲಿಸುವ ಕ್ರಿಯೆ; ಕೇವಲ ಶಿಕ್ಷಕರುಗಳಿಗೆ ಮಾತ್ರವಲ್ಲ, ಪೋಷಕರಿಗೆ, ಆಡಳಿತಗಾರರಿಗೆ ಮತ್ತು ಸಾಂಸ್ಕೃತಿಕ ನಾಯಕರುಗಳಿಗೆ ಕೂಡ. ಎಲ್ಲರೂ ಎಲ್ಲ ಕಾಲದಲ್ಲಿಯೂ ಕಲಿಯುತ್ತಲೇ ಇರಬೇಕಾದ ಆಯಾಮವನ್ನು ನಾವು ಮರೆತಿರುವುದರಿಂದಲೇ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಬಿಗಡಾಯಿಸಿರುವುದು. ನಮ್ಮ ಪ್ರಾಮಾಣಿಕ ಕಾಳಜಿ, ಉದ್ದೇಶಗಳನ್ನು ಮೀರಿ ಹೀಗೆಂದು ಮಂಜುನಾಥ್ ಅವರು ಮತ್ತೆ ಮತ್ತೆ ನಮಗೆ ನೆನೆಪಿಸುತ್ತಾರೆ. ಮಂಜುನಾಥ್‌ ಕ್ರಿಯಾಶೀಲ ಆಶಾವಾದಿ, ಆಶಾವಾದವೆಂಬುದು ಅವರ ಮನೋಧರ್ಮ ಮಾತ್ರವಲ್ಲ, ಮಕ್ಕಳಿಗಾಗಿ ಇರುವ ಆಸೆ ಮತ್ತು ನಂಬಿಕೆ. ಈ ಆಶಾವಾದಕ್ಕೆ ಓದುಗರೆಲ್ಲರನ್ನೂ ಒಳಗೊಳ್ಳುವಷ್ಟು ನಿಸ್ಪೃಹತೆ ಮತ್ತು ಆರ್ದ್ರತೆಯಿದ್ದು ಇಲ್ಲಿಯ ಬರವಣಿಗೆ ಸಾಂಸ್ಕೃತಿಕವಾಗಿದೆ, ಗಾಢವಾಗಿದೆ.

ಸಾರ್ವಜನಿಕ ಸಮಸ್ಯೆಯೆಂದು ನಾವು ತಿಳಿದಿರುವುದನ್ನು ನಮ್ಮ ಅಂತರಂಗದ ಮತ್ತು ಕೌಟುಂಬಿಕ ಸಮಸ್ಯೆಯೆಂದು ಮನವರಿಕೆ ಮಾಡಿಕೊಡುವುದರಲ್ಲೇ ಈ ಪುಸ್ತಕದ ಸಾರ್ಥಕತೆ ಇರುವುದು.

- ಕೆ. ಸತ್ಯನಾರಾಯಣ, ಸಾಹಿತಿಗಳು ಮತ್ತು ನಿವೃತ್ತ ಮುಖ್ಯ ಆಯುಕ್ತರು.
ಆದಾಯ ತೆರಿಗೆ ಇಲಾಖೆ, ಭಾರತ ಸರ್ಕಾರ

 

ಪುಟಗಳು : 300

Customer Reviews

No reviews yet
0%
(0)
0%
(0)
0%
(0)
0%
(0)
0%
(0)