Click here to Download MyLang App

ಅಂಚು (ಪ್ರಿಂಟ್ ಪುಸ್ತಕ)

ಅಂಚು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 375.00
ಸೇಲ್ ಬೆಲೆ
Rs. 375.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇಡೀ ಕಾದಂಬರಿಯಲ್ಲಿ ಬರುವುದು ಎರಡೇ ಮುಖ್ಯ ಪಾತ್ರಗಳು – ಅಮೃತಾ ಮತ್ತು ಸೋಮು. ಮಿಕ್ಕೆಲ್ಲವೂ ಆಗಾಗ್ಗೆ ಬಂದು ಹೋಗುವ ಅತಿಥಿಗಳಷ್ಟೇ. ಇಡೀ ಕಥಾನಕದಲ್ಲಿ ಅಮೃತಾ ಆವರಿಸಿಕೊಳ್ಳುವ ಪರಿ ಉಂಟಲ್ಲ? ಊಹಿಸಲೂ ಸಾಧ್ಯವಾಗದ್ದು. ಅವಳು ಒಳ್ಳೆಯ ಕುಟುಂಬ ಹಿನ್ನೆಲೆಯಿಂದ ಬಂದ ವಿದ್ಯಾವಂತೆ. ಪಿಹೆಚ್’ಡಿ ಮಾಡಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿರುತ್ತಾಳೆ. ಕಾರಿನಲ್ಲಿ ಕಾಲೇಜಿಗೆ ಬರುವ ಏಕೈಕ ವ್ಯಕ್ತಿ ಎಂದರೆ ಇವಳೇ. ದೊಡ್ಡ ಎಸ್ಟೇಟ್’ನ ಮಾಲೀಕಳು. ಪ್ರಿನ್ಸಿಪಾಲ್ ಕೂಡ ಬಸ್ಸಿನಲ್ಲಿ ಬರುತ್ತಾರೆಂದರೆ ಅವಳ ಶ್ರೀಮಂತಿಕೆ ಎಂಥದ್ದೋ ತಿಳಿಯಬಹುದು. ಗಂಡ ಎಂಜಿನಿಯರ್. ಒಳ್ಳೆ ಸಂಬಳ. ಮುದ್ದಾದ ಎರಡು ಗಂಡು ಮಕ್ಕಳು. ಗಂಡ ಕೆಲಸದ ನಿಮಿತ್ತ ದೂರದೂರಿನಲ್ಲಿ ಇರುತ್ತಾನೆನ್ನುವುದೇ ಕೊರಗು, ಹೊರತು ಬದುಕಿಗೆ ಯಾವುದೇ ರೀತಿಯ ಕೊರಗಿಲ್ಲ. ದುಡಿದೇ ತಿನ್ನುವ ಅಗತ್ಯವಿಲ್ಲ. ಮೇಲಾಗಿ ಬಡತನ ಇವಳ ಬಳಿ ಇಲ್ಲವೇ ಇಲ್ಲ. ಮೈಸೂರಿನಿಂತಹ ನಗರದಲ್ಲಿದ್ದರೂ ಊರಾಚೆಗಿನ ಅಷ್ಟಾಗಿ ಅಭಿವೃದ್ಧಿ ಹೊಂದದ ಬಡಾವಣೆಯಲ್ಲಿ, ಅಲ್ಲಿ ಬಿಕೋ ಎನ್ನುವ ವಾತಾವರಣವಿದ್ದರೂ, ತನ್ನ ತಂದೆ ಕಟ್ಟಿಸಿದ ಪುರಾತನವಾದ ದೊಡ್ಡ ಬಂಗಲೆಯಲ್ಲಿ ತನ್ನೆರೆಡು ಮಕ್ಕಳೊಂದಿಗೆ ವಾಸವಿರುತ್ತಲೇ ಇರುವ ಶ್ರೀಮಂತೆ….ಹಾಗೆಂಬುದು ಅಮೃತಾಳ ಸಹೋದ್ಯೋಗಿಗಳ ಉವಾಚ.

ಮೋಹನ್ ಕುಮಾರ್ ಡಿ ಎನ್


ಕೃಪೆ   https://pustakapremi.wordpress.com/

 

ಪುಟಗಳು : 352

Customer Reviews

No reviews yet
0%
(0)
0%
(0)
0%
(0)
0%
(0)
0%
(0)