Click here to Download MyLang App

ಮಂಡಿ ಕೀಲಿನ ಸ್ವಾಸ್ಥ್ಯ - ಯೋಗದ ಹಾದಿ,  ಮಂಡಿ ಕೀಲಿನ ಸ್ವಾಸ್ಥ್ಯ,   ಡಾ|| ಎಸ್. ಎನ್. ಓಂಕಾರ್,  ಓಂಕಾರ್ ಎಸ್ ಎನ್,  Omkar S N,    Mandi Keelina Swaasthya ,

ಮಂಡಿ ಕೀಲಿನ ಸ್ವಾಸ್ಥ್ಯ - ಯೋಗದ ಹಾದಿ (ಇಬುಕ್)

e-book

ಪಬ್ಲಿಶರ್
ಡಾ|| ಎಸ್. ಎನ್. ಓಂಕಾರ್
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

  

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಚಾಕಚಕ್ಯತೆಯಿಂದ ಯೋಚಿಸುವುದಷ್ಟೇ ಅಲ್ಲ, ಚುರುಕಾಗಿ ಓಡಾಡುವುದೂ ಅಗತ್ಯವಾಗಿದೆ. ಹಾಗಾಗಿ, ಮಂಡೆಯಷ್ಟೇ ಅಲ್ಲ, ಮಂಡಿಯೂ ಭದ್ರವಾಗಿರಬೇಕು. ಈ ದೃಷ್ಟಿಕೋನದಿಂದ ನಾವು ಮಂಡಿಯ ಆರೋಗ್ಯದ ಕಡೆಗೆ ಮೊದಲಿನಿಂದಲೂ ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿರುವುದೇನೆಂದರೆ, ಅನೇಕರು ಮಂಡಿಯ ತೊಂದರೆಗೆ ಒಳಗಾಗುತ್ತಿರುವುದು. ವಿಶೇಷವಾಗಿ, ಯೌವನದಲ್ಲೇ ಈ ಮಂಡಿಯ ನೋವು ಅನೇಕರನ್ನು ಬಾಧಿಸುವುದನ್ನು ನೋಡುತ್ತಿದ್ದೇವೆ. ವಯಸ್ಸಾದ ಮೇಲಂತೂ ಮಂಡಿಯನ್ನು ಬದಲಿಸುವುದು, ಸ್ವಾಭಾವಿಕ ಮಂಡಿ ಹೋಗಿ ಕೃತಕ ಮಂಡಿ ಬರುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಮಂಡಿಯ ಆರೋಗ್ಯ ಹದಗೆಟ್ಟರೆ ಜೀವನ ಬಹಳ ದುಸ್ತರವಾಗುತ್ತದೆ. ನಿಲುವು, ನಡಿಗೆಯೇ ಕಷ್ಟವಾಗುತ್ತದೆ ಎಂದ ಮೇಲೆ ಓಡಾಟದ ಮಾತಂತೂ ದೂರವೇ ಆಗುತ್ತದೆ. ಇದು ಜೀವನ ಶೈಲಿಯ ಮೇಲೆ ಸಾಕಷ್ಟು ದುಷ್ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಂಡಿಯ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಖಚಿತವಾಗಿ ಗಮನವನ್ನು ಕೊಡಬೇಕು. ಮಂಡಿಯ ತೊಂದರೆ ಅಲ್ಪ ಕಾಣಿಸಿಕೊಂಡಾಗಲೇ ಎಚ್ಚೆತ್ತುಕೊಂಡು ಕೆಲವು ಯೋಗದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮುಂದಾಗುವ ತೊಂದರೆಗಳನ್ನು ತಡೆಯಬಹುದು.

ಮಂಡಿಯ ಚಿಕಿತ್ಸೆ ಸಾಕಷ್ಟು ದುಬಾರಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹಾಗಾಗಿ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದಲೂ ಮಂಡಿಯ ಕಡೆ ಗಮನ ಕೊಡಬೇಕಾದುದು ಬಹಳ ಮುಖ್ಯ.

ಮಂಡಿಯ ಕೀಲಿಗೆ ತೊಂದರೆಯುಂಟಾದರೆ ಓಡಾಟ ಕಷ್ಟವಾಗುತ್ತದೆ. ಓಡುವುದಂತೂ ಸಾಧ್ಯವೇ ಇಲ್ಲ. ಹಾಗಾಗಿ ತೂಕ ಹೆಚ್ಚಾಗುವ ಸಂಭವವಿರುತ್ತದೆ. ಅಂದರೆ ಮಂಡಿಯ ನೋವಿನಿಂದ ಕೇವಲ ಮಂಡಿಗಷ್ಟೇ ತೊಂದರೆಯಲ್ಲ, ದೇಹದ ತೂಕವೂ ಜಾಸ್ತಿಯಾಗುವ ಅಪಾಯವೂ ಇರುತ್ತದೆ. ದೇಹದ ತೂಕ ಜಾಸ್ತಿಯಾದರೆ ಮಂಡಿಗೆ ಅದು ಮತ್ತಷ್ಟು ಕಷ್ಟವಾಗುತ್ತದೆ. ಮಂಡಿಗೆ ಕಷ್ಟವಾದಷ್ಟೂ ದೇಹದ ತೂಕ ಜಾಸ್ತಿಯಾಗುತ್ತಲೇ ಹೋಗುತ್ತದೆ. ಹಾಗಾಗಿ ಇದೊಂದು ವಿಷ ವತೃಲ (vicious cycle). ಒಮ್ಮೆ ಅಧಿಕ ತೂಕವಾದರೆ, ಅದು ಅನೇಕ ಕಾಯಿಲೆಗಳಿಗೆ ಹೆದ್ದಾರಿಯಾಗುತ್ತದೆ. ಈ ಕಾರಣದಿಂದಲೂ ಮಂಡಿಯ ಆರೋಗ್ಯದ ಕಡೆಗೆ ಮೊದಲಿನಿಂದಲೂ ಗಮನ ಕೊಡುವುದು ಅಗತ್ಯ.

ಈಚಿನ ದಿನಗಳಲ್ಲಿ ಪ್ರತಿಯೋರ್ವರೂ ಒಂದಲ್ಲ ಮತ್ತೊಂದು ವ್ಯಾಯಾಮ ವಿಧಾನಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಕೆಲವರಿಗಂತೂ ಇದು ಗೀಳಾಗುವ ಸಂಭವವೂ ಇರುತ್ತದೆ. ಯಾವುದೇ ತರಹದ ದೈಹಿಕ ವ್ಯಾಯಾಮ ವಿಧಾನಗಳಲ್ಲಿ, ಮಂಡಿಯ ಪಾತ್ರ ಮಹತ್ತರ. ಹಾಗಾಗಿ, ಮಂಡಿಯ ಕುರಿತಾಗಿ ಮುಂದಾಲೋಚನೆ ಬಹಳ ಅಗತ್ಯ.

ಇಂದು ಅನೇಕ ಪ್ರವಾಸಗಳಿಗೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಎಲ್ಲಿಯೇ ಹೋದರೂ ಓಡಾಟವಿಲ್ಲದೇ ಇರಲು ಸಾಧ್ಯವೇ ಇಲ್ಲ. ನಾವು ಯಾವುದೇ ಸ್ಥಳಗಳಿಗೆ ಹೋಗಲಿ, ಅದು ಯಾತ್ರಾ ಸ್ಥಳವೇ ಆಗಲಿ ಅಥವಾ ಮೋಜಿನ ತಾಣವೇ ಆಗಲಿ, ನಾವು ನಡೆದಾಡುವುದು ಬಹಳ ಮುಖ್ಯವಾಗುತ್ತದೆ. ನಡೆದಾಡುವುದೇ ಇಲ್ಲದಿದ್ದರೆ ನಮಗೆ ಯಾತ್ರೆಯ ಪಾವಿತ್ರ್ಯವೂ ಇರುವುದಿಲ್ಲ, ಮೋಜಿನ ಸುಖವೂ ದಕ್ಕುವುದಿಲ್ಲ.

ಈ ಕಾರಣದಿಂದಲೂ, ಇಂದಿನ ದಿನಗಳಲ್ಲಿ, ಎಂದಿಗಿಂತಲೂ ಹೆಚ್ಚಾಗಿ ಮಂಡಿಯ ಕೀಲಿನ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಜೊತೆಗೆ ಆರೋಗ್ಯವಂತರೂ ಸಹ ಮಂಡಿಯ ಕೀಲಿನ ಆರೋಗ್ಯವನ್ನು ಕಾಪಾಡಿಕೊಂಡು, ಅದರ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಅಗತ್ಯವಿದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಪುಸ್ತಕವನ್ನು ಬರೆಯಲಾಗಿದೆ.

ಇಂದು ಅನೇಕ ಯುವಕ - ಯುವತಿಯರು ಆಟಗಳಲ್ಲಿ ಆಸಕ್ತಿಯನ್ನು ಹೊಂದುತ್ತಿರುವುದನ್ನು ಕಾಣುತ್ತೇವೆ. ವಿಶೇಷವಾಗಿ ಓಡುವುದು (athletics), ನೆಗೆತ (long and high jump) ಮುಂತಾದವುಗಳು. ಇವುಗಳನ್ನು ಮಾಡಬೇಕಾದರೆ ಮಂಡಿಯ ಕೀಲಿನ ಆರೋಗ್ಯ ಉತ್ತಮವಾಗಿರಬೇಕು. ಈ ಪುಸ್ತಕದಲ್ಲಿರುವ ಅನೇಕ ಕ್ರಮಗಳು ಇವರುಗಳಿಗೂ ಸಹ ಸಾಕಷ್ಟು ಉಪಯುಕ್ತವಾಗುತ್ತವೆ. ಹೀಗೆ, ಒಟ್ಟಾರೆ, ಒಬ್ಬ ಸಾಮಾನ್ಯನಿರಬಹುದು, ವಯಸ್ಸಾದವರಿರಬಹುದು, ಅಶಕ್ತರಿರಬಹುದು, ಯುವಕ- ಯುವತಿಯರಿರಬಹುದು ಅಥವಾ ಆಟಗಾರರಿರಬಹುದು, ಎಲ್ಲರೂ ಮಂಡಿಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದಾದಂತಹ ಕ್ರಮಗಳನ್ನು ಈ ಪುಸ್ತಕದಲ್ಲಿ ಕೊಡುವ ಪ್ರಯತ್ನವನ್ನು ಮಾಡಲಾಗಿದೆ.

 

ಪುಟಗಳು: 192

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !