Click here to Download MyLang App

ಸಿಂಗಲ್ಸ್ ಕಷ್ಟಗಳು : ಮಂಜುನಾಥ್ ಸಿ ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಹವ್ಯಕ ಕನ್ನಡ / ಕುಂದಗನ್ನಡ ಶೈಲಿಯ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ಸಿಂಗಲ್ಸ್ ಕಷ್ಟಗಳು

ಈವಾಗ ಮಾತಾಡೋ ವಿಷಯ ಎಲ್ರುಗೂ ಅನ್ವಯಿಸಲ್ಲ ನಮ್ಮಂತ ಸಿಂಗಲ್ಸ್ ಗೆ ಮಾತ್ರ ಅನ್ವಯಿಸೋದು.ಆದ್ರೂ ಎಲ್ರು ಕೇಳಿ ಅಂತ ಕಳಕಳಿಯಿಂದ ಕೇಳಿಕೊಳ್ಳುತ್ತಿದೆನೆ ಇಂತಿ ಸಿಂಗಲ್ಸ್ ಲಿ ಒಬ್ಬವ.
ನಮ್ಮ ಬಗ್ಗೆ ಸ್ವಲ್ಪ ಪರಿಚಯ ಮಾಡ್ಕೋಬೇಕು ಅಂದ್ರೆ ಹುಟ್ಟಿದ್ದು ಬೆಳದಿದ್ದು ಹೈದ್ರಾಬಾದ್ ಕರ್ನಾಟಕ ಬಳ್ಳಾರಿಲಿ ಇನ್ನು ವಿದ್ಯಾಭ್ಯಾಸ ಅಂತೀರಾ ಇಂಜಿನಿಯರಿಂಗ ಆಗಿದೆ,ಕೆಲಸದ ಬಗ್ಗೆ ಅಂತೂ ಕೇಳೋಕೆ ಹೋಗಬೇಡಿ ನಾವು ಹೇಳಲ್ಲ.
ಇನ್ನು ಈ ಕಥೆಗೆ ಬರೋಣ ಈ ಭೂಮಿ ಮೇಲೆ ಸಂತೋಷದ ಜೀವಿಗಳು ಅಂದ್ರೆ ಮತ್ತು ದುಃಖದ ಜೀವಿಗಳು ಅಂದ್ರು ನಾವೇ.
ಒಂತರ ಎಡಬಿಡಂಗಿ ಇದ್ದಂಗೆ ನಮ್ಮ ಲೈಫ್.
ಇನ್ನು ಸಿಂಗಲ್ಸ್ ಕಷ್ಟನ ಯಾವ ದೇವರ ಅತ್ರ ಹೇಳ್ಕೋಬೇಕು ಗೊತ್ತಾಗ್ತಿಲ್ಲ ಯಾಕಂದ್ರೆ ನಾವು ಕೈ ಮುಗಿಯೋ ದೇವ್ರು ಎಲ್ಲ ಸಿಂಗಲ್ಸ್ ಹೇ. ಬೇಡಿಕೊಂಡರು ಕನಸಲ್ಲಿ ಬಂದು ನಾನೇ ಸಿಂಗಲ್ ಆಗಿ ಚೆನ್ನಾಗಿ ಇದೀನಿ ನಿನ್ ಯಾಕೆ ಕಮಿಟಿ ಆಗ್ತಿಯ ಅಂತ ಎಚ್ಚರಿಕೆ ಕೊಟ್ಟು ಹೋಗ್ತಾರೆ.

ಸಿಂಗಲ್ಸ್ , ಏನು ಮುಂಚೆ ಇಂದನೆ ಸಿಂಗಲ್ ಆಗೆ ಇರೋಲ್ಲ ಅವರಿಗೂ ಮುಂಚೆನೇ ಒಂದೋ ಎರಡೋ ಲವ್ ಹಾಗಿ,ಬ್ರೇಕಪ್ ಹಾಗಿ ಈ ಲವ್ ಸಹವಾಸ ನೆ ಬೇಡ ಅಂತ ದೀಕ್ಷೆ ತಗೊಂಡಿರ್ತಾರೆ
ಈ ಸಿಂಗಲ್ ಲೈಫ್ ಚೆನ್ನಾಗಿ ಇದೆ ಬಿಡು ಗುರು ಅನ್ಕೊಂಡು ಅಂಗೇ ದಿನಚರಿಯ ಲೈಫ್ ನೂಕ್ತ ಇರ್ತಾರೆ. ಆದರೆ ಈ ಸಿಂಗಲ್ಸ್ ಎಲ್ಲಿ ಹೋಗಿ ಬೇಕಾದ್ರೂ ಜೀವನ ನಡಸ್ತಾರೆ,ಆದ್ರೆ ಈ ಸಮಾಜದಲ್ಲಿ ಮಾತ್ರ ಬದುಕೋದು ಬಹಳ ಕಷ್ಟ.ಯಾಕಂದ್ರೆ ನಾವು ಸಿಂಗಲ್ಸ್ ಅನ್ನೋದುನ್ನ ಪ್ರತಿ ಒಬ್ರು ಬೆಟ್ಟು ಮಾಡಿ ಒತ್ತಿ ಒತ್ತಿ ಹೇಳದಂಗೆ ಇರುತ್ತೆ.

ಇನ್ನು ಮನೆಲಿ ಅಂತೀರಾ ಅಮ್ಮನಿಗೆ ನನಗೆ ಒಬ್ಬಳು ಹುಡುಗಿ ಇಷ್ಟ ಆಗಿದಳೆ ಅವಳು ನನ್ನ ಇಷ್ಟ ಪಟ್ಟಿದಳೇ ಅಂತ ಹೇಳಿದ್ರೆ ಅಮ್ಮ ಎನ್ ಹೇಳಬೇಕ್,ಹೇಯ್ ಬಿಡೋ ಅವ್ಳಗೆಲ್ಲೋ ಹುಚ್ಚು ಇಡಿದಿರಬೇಕು ಅಂತವಳೇ.ಆ ಲೆವೆಲೆಗೆ ನಮ್ಮ ಮೇಲೆ ನಂಬಿಕೆ ಇನ್ನು ಫ್ರೆಂಡ್ಸ್ ಅಂತೀರಾ ಮಚ್ಚ ನಿಂಗೇನೋ ಕಮ್ಮಿ ಯಾವ ಹುಡುಗಿ ಬೀಳಲ್ಲ ಹೇಳು ಅಂತ ಮೋಟಿ ವೇಟ್ ಮಾಡತರೆ ಇನ್ನೇನು ಸಿಂಗಲ್ ಇಂದ ಮಿಂಗೆಲ್ ಆಗ್ಬೇಕು ಅನ್ನೋ ವೇಳೆಗೆ ಅದೇ ಫ್ರೆಂಡ್ಸ್ ಬಂದು ಅವಳ ಆಗೆ ಕೈ ಕೊಟ್ಟಳು ಇನ್ನು ಇವಳು ಖರ್ಚು ಮಾಡೋದು ನೋಡಿದ್ರೆ ನಿನಂತು ಆತ್ಮಹತ್ಯೆ ಮಾಡ್ಕೊತಿಯ ಮಗ ಅಂತ ಹೇಳಿ ಭಯ ಬೀಳಿಸಿ ಈ ಸಿಂಗಲ್ ಲೈಫ್ ಉತ್ತಮ ಅನ್ನೋ ಅಗೆ ಮಾಡತರೆ.

ಸಿಂಗಲ್ಸ್ ಇರೋದ್ರಿಂದ ದೊಡ್ಡ ಸಮಸ್ಯೆ ಅಂದ್ರೆ. ಕಂಡ ಕಂಡವರ ಮೇಲೆ ಕ್ರಷ್ ಆಗುತ್ತೆ.ಇತ್ತೀಚಿಗೆ ತರಕಾರಿ ತರೋಕೆ ಮಾರುಕಟ್ಟೆಗೆ ಹೋಗಿದ್ದೆ ಅಲ್ಲಿ ತರಕಾರಿ ಕೊಡೋ ಆಂಟಿ ಮೇಲೆನು
ಕ್ರಷ್ ಆಯ್ತು, ಬಿಎಂಟಿಸಿ ಲಿ ಟಿಕೆಟ್ ತಗೊಳಿ ಅಂದ ಲೇಡಿ ಕಂಡಕ್ಟರ್ ಮೇಲೆ ಕ್ರಷ್ ಆಗ್ಬೇಕಾ.
ಇನ್ನು ಸಿಂಗಲ್ಸ್ ಆಗಿ ಇದ್ರೆ ಅನುಕೂಲಗಳು ಹೇಳ್ತಿನಿ ಕೇಳಿ ಎಲ್ರಿಗೂ ಗೊತ್ತಿರೋದೆ ಆದ್ರೂ ಒಂದ್ಸರಿ ಕೇಳುಸ್ಕೊಂಡು ಬಿಡಿ.
ನಾವು ಎಲ್ಲಿ ಇದೀವಿ ಎನ್ ಮಾಡ್ತಇದೀವಿ ಅಂತ ಹೇಳೊ ಅವಸರ ಇರಲ್ಲ,ಖರ್ಚು ಅಂತೂ ಕಮ್ಮಿನೆ ಹೊರಗಡೆ ಹೊದ್ರೆ ಒಂದೆ ಪ್ಲೇಟ್ ಪಾನಿ ಪೂರಿ,ಒಂದೇ ಪ್ಲೇಟ್ ದೋಸೆ,ಒಂದೇ ಪ್ಲೇಟ್ ಎಗ್ಗ್ ರೈಸ್ ಏನೋ ಬೇಜರ್ ಆದಾಗ ಒಂದು ಬೀರು, ಅಷ್ಟೆ ಸಿಂಗಲ್ಸ್ ಜೀವನ.
ಅದೇ ಕಮಿಟ್ ಆದ್ರೆ ಅನುಕೂಲಗಳು ಮತ್ತು ಅನನುಕೂಲಗಳು ಎಲ್ರಿಗೂ ಗೊತ್ತಿರೋದೆ.

ಈಗೆ ಹೇಳ್ತಾ ಹೋದ್ರೆ ಸಿಂಗಲ್ಸ್ ಬಗ್ಗೆ ಟಿಪ್ಪಣಿ ದೊಡ್ಡದು ಆಗ್ತಾ ಹೋಗುತ್ತೆ.ಎಲ್ರು ಸಿಂಗಲ್ಸ್ ಇಂದ ಕಮಿಟ್ ಆಗ್ಲಿ ಅಂತ ದೇವರಲ್ಲಿ ಬೆಡ್ಕೊಂಡ್.ಈ ಸಿಂಗಲ್ಸ್ ಕಷ್ಟಗಳ ಕಥೆಗೆ ಸಣ್ಣ ವಿರಾಮ ಇಟ್ಟು ಮತ್ತೆ ಸಿಗೋಣ