Click here to Download MyLang App

ಒಂಟಿ ಪಯಣ : ವಿನಾಯಕ ಗುರುಸಿದ್ದಪ್ಪ ರಾವಳ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

ಹೊಸೂರ ಕ್ರಾಸ್ ಯಾರ್ ನೋಡ್ರಿ ಇಳ್ಕೊಳ್ಳಿ
ಇಳ್ಕೊಳ್ಳಿ ಅಂತಾ ಕಂಡಕ್ಟರ ಕೂಗಿದಾಗ ಹಾಗೆಯೇ ಓದುತ್ತಾ ಹಿಡಿದ ಕೈಯಲ್ಲಿಯ ಪುಸ್ತಕವನ್ನು ಚೀಲದಲ್ಲಿ ಹಾಕಿ ಕೈಯಲ್ಲಿಯ ಗಡಿಯಾರದತ್ತ ಸಮಯ 6.45 ಆಗುತ್ತ ಬಂದ ದ್ದನ್ನು ನೋಡಿ ಮೊದಲೇ 6.00 ಘಂಟೆಗೆ ಹೊಸೂರ ಕ್ರಾಸ್ ತಲುಪಬೇಕಿತ್ತು ಆದರೆ ಮಾರ್ಗ ಮಧ್ಯದಲ್ಲಿ ರೈತರ ರಸ್ತೆ ಬಂದ ಮಾಡಿದ ಕಾರಣ ಸುಮಾರು 45 ನಿಮಿಷ ತಡವಾಗಿ ಬಂದಿತ್ತು
ಬಸ್ಸಿನಿಂದ ಇಳಿದು ಅಲ್ಲಿಯೇ ಪಕ್ಕದ ಗೂಡ ಅಂಗಡಿಯತ್ತ ಹೆಜ್ಜೆ ಹಾಕಿದೆ ಮುಸ್ಸಂಜೆಯಾಗುತ್ತಾ ಬಂದ ಕಾರಣ ಅವನು ಸಹ ಅಂಗಡಿ ಮುಚ್ಚುವ ತಯಾರಿ ನಡಿಸಿದ್ದ
ಅಂಗಡಿಯವನು ಏನು ಕೊಡಲಿ ಸರ್ ಅಂತಾ ಕೇಳಿದ? ಚಹಾ ಇದ್ದರೆ ಕೊಡಿ ಅಂತಾ ನಾನು ಕೇಳಿದೆ.. ಇದೇ ತಗೊಳ್ಳಿ ಸಾರ್ ಅಂತಾ ಲೋಟದಲ್ಲಿ ಚಹಾ ಹಾಕಿ ಕೊಟ್ಟ ಹಾಗೆಯೇ ಚಹಾ ಕುಡಿಯುತ್ತ
ಚಿಕ್ಕ ಹೊಸೂರ ಗೆ ಹೋಗುವ 6.30 ರ ಕೊನೆಯ ಬಸ್ಸಿನ ಬಗ್ಗೆ ವಿಚಾರಿಸಿದೆ ಸರ್ ಅದು ಈ ಹೊತ್ತು ರೈತರ ಧರಣಿ ರಸ್ತೆ ಬಂದ ಇದ್ದ ಕಾರಣ ಬಸ್ಸು ಮುಂದಿನ ನಿಲ್ದಾಣಕ್ಕೆ ಹೋಗದೆ ಇಲ್ಲಿಂದಲೇ ಮರಳಿ ಸರಿಯಾದ ಸಮಯಕ್ಕೆ ಹೊರಟು ಹೋಯಿತು ಸರ್ ಅಂತಾ ಹೇಳಿದ
ಆಗ ಇನ್ನೂ ಮೊಬೈಲ್ ಅಷ್ಟಾಗಿ ಬಳಕೆ ಇರಲಿಲ್ಲಾ ಆದರೂ ಕೂಡ ಒಂದು ಚಿಕ್ಕ ಮೊಬೈಲ್ ನನ್ನ ಹತ್ತಿರವಿತ್ತು ಕೇವಲ ಸಂಭಾಷಣೆ ಮತ್ತು ಸಂದೇಶಗಳಿಗೆ ಸೀಮಿತ ವಾಗಿದ್ದ ಸಾಧಾರಣ ಮೊಬೈಲ ಅದು
ಪುಣ್ಣ್ಯ ಕ್ಕೆ ಮೊಬೈಲ ಸಿಗ್ನಲ ಬರ್ತಾ ಇತ್ತು ನಾನು ಹೋಗಬೇಕಾಗಿರುವ ನನ್ನ

ಸಂಬಂಧಿಕರ ಮನೆಗೆ ಫೋನ್ ಮಾಡಿದೆ
ಅಲ್ಲಿಂದ ಯಾವುದೇ ಉತ್ತರ ಬರಲಿಲ್ಲ
ಮತ್ತೆ ಮತ್ತೆ ಪ್ರಯತ್ನ ಮಾಡಿದರೂ ಸಹ ಯಾವುದೇ ಉತ್ತರ ಬರಲಿಲ್ಲ ಬಹುಶಃ ಅವರ ಮನೆಯ ದೂರವಾಣಿ ಸಂಪರ್ಕದಲ್ಲಿ ಯಾವುದೋ ತೊಂದರೆಯಾಗಿರಬಹುದು ಅಂತಾ ಭಾವಿಸಿ ಸುಮ್ಮನಾಗಿ

ಮತ್ತೆ ಅಂಗಡಿ ಯವನಲ್ಲಿ ಬೇರೆ ವಾಹನ ಏನಾದರೂ ಸಿಗಬಹುದೇ ಅಂತಾ ವಿಚಾರಿಸಿದೆ
ಇಲ್ಲಾ ಸರ್ ಚಿಕ್ಕಹೊಸೂರ ವರೆಗೂ ಸಿಗುವುದು ತುಂಬಾ ಕಷ್ಟ ಇಲ್ಲಿಂದ ದೊಡ್ಡ ಹೊಸೂರ ಗೆ ಹೋಗುವ ಹಾಲಿನ ವಾಹನ ಸುಮಾರು 15 ನಿಮಿಷದಲ್ಲಿ ಬರುತ್ತೆ ನಾನು ಸಹ ನನ್ನ ಕೆಲವು ಸರಕುಗಳು ಆ ವಾಹನದಲ್ಲಿ ಬರುತ್ತಿರುವ ಕಾರಣ ಆ ವಾಹನ ಬರುವದನ್ನೇ ಕಾಯುತಿರುವೆ ಅಂತಾ ಹೇಳಿದ
ಆಗಲೇ ಸಮಯ 7.10 ಆಗುತ್ತ ಬಂದಿತ್ತು
ಸಧ್ಯ ಏನಾದರೂ ಅನುಕೂಲವಾಯಿತಲ್ಲ ಅಂತಾ ಅಂಗಡಿಯವನಿಗೆ ದುಡ್ಡು ಕೊಟ್ಟು ಹಾಗೆಯೇ ಅಲ್ಲಿಯೇ ದಾರಿ ಕಾಯುತ್ತ ಕುಳಿತುಕೊಂಡೆ
ಅಂಗಡಿಯವನು ಹೇಳಿದ ಹಾಗೇ 7.30 ರ ಸುಮಾರಿಗೆ ಹಾಲಿನ ವಾಹನ ಬಂದೆ ಬಿಟ್ಟಿತು ವಾಹನ ದ ಹಿಂದಿನ ಭಾಗದಲ್ಲಿ ನನ್ನ ಹಾಗೇಯೇ ಸುಮಾರು ಆರು ಜನ ಪ್ರಯಾಣಿಕರು ತಮ್ಮ ಸರಕು ಸಾಮಗ್ರಿಗಳ ಸಮೇತ ಕುಳಿತಿದ್ದರು
ನಾನು ಸಹ ವಾಹನದ ಚಾಲಕನನ್ನು ಕೇಳಿ ಹಿಂದೆ ಅವರ ಜೊತೆಗೆ ಕುಳಿತುಕೊಂಡೆ.
ಹಾಗೆಯೇ ವಾಹನ ದಲ್ಲಿ ಪ್ರಯಾಣ ಮಾಡಿ ಸುಮಾರು 8.00 ಘಂಟೆಗೆ ಚಿಕ್ಕ ಹೊಸೂರ ಕ್ರಾಸ ತಲುಪಿ ವಾಹನ ಚಾಲಕನಿಗೆ ಪ್ರಯಾಣದ ಹಣವನ್ನು ಕೊಟ್ಟು ನಮ್ಮೂರ ದಾರಿ ಹಿಡಿದೆ ಮೊದಲೇ ನಾನುಹೋಗುವ ಚಿಕ್ಕ ಹೊಸೂರಿನ ದಾರಿ ಅಂಕು ಡೊಂಕು ಸ್ವಲ್ಪ ಗುಡ್ಡ ಗಿಡ ಮರಗಳ ದಾರಿಯಾದುದ ರಿಂದ ದಾರಿಯಲ್ಲಿ ಯಾವುದೇ ಮನೆ ಅಂಗಡಿ ಪಾದಚಾರಿಗಳು, ದ್ವಿಚಕ್ರವಾಹನ ಇತ್ತ್ಯಾದಿ ಯಾವದೇ ಇಲ್ಲದ ಕಾರಣ ಕತ್ತಲೆಯಲ್ಲಿಯೇ ಚೀಲ ಬಗಲಿಗೆ ಹಾಕಿ ಮೊಬೈಲ್ ಬೆಳಕಿನ ಸಹಾಯದಿಂದ ಒಂಟಿಯಾಗಿ ನಡೆಯಲು ಪ್ರಾರಂಭಿಸಿದೆ....
ಸುಮಾರು ಅರ್ಧ ಕಿಲೋಮೀಟರ ದಾಟಿರಬಹುದು... . ಹಿಂದಿನಿಂದ ಯಾರೋ ಬರುವ ಹೆಜ್ಜೆಯ ಸಪ್ಪಳ ಕೇಳಿತು.  ನಾನು ಹಾಗೆಯೇ ನನ್ನ ಹಾಗೇ ಯಾರೋ ಬರುತ್ತಿರಬೇಕು ಅಂತಾ ತಿಳಿದು ನನ್ನ ಪಾಡಿಗೆ ನಾನು ಹಿಂದಿರುಗಿ ನೋಡದೆ ಹಾಗೇ ಹೊರಟಿದ್ದೆ.. ಹಾಗೆಯೇ ಹೆಜ್ಜೆ ಯ ಸದ್ದು ನನ್ನ ಪಕ್ಕಕ್ಕೆ ಬಂದ ಹಾಗೇ ಆಯಿತು ಪಕ್ಕದಲ್ಲಿ ನೋಡಿದೆ...!! ಯಾರೂ ಇಲ್ಲಾ...
ಒಂದು ಕ್ಷಣ ಅಲ್ಲಿಯೇ ನಿಂತು ಅಕ್ಕ ಪಕ್ಕ ಹಿಂದೆ ಮುಂದೆ ನೋಡಿ ನನಗೆ
ಏನೋ ಭ್ರಮೆ ಇರಬೇಕು ಅಂತಾ ಮತ್ತೆ ನಡೆಯಲು ಪ್ರಾರಂಭಿಸಿದೆ....
ಮತ್ತೆ ಹಿಂದಿನಿಂದ ಯಾರೋ ಬರುವ ಹೆಜ್ಜೆಯ ಸಪ್ಪಳ ಕೇಳಿತು.. ನಾನು ಹಾಗೆಯೇ ನನ್ನ ಹಾಗೇ ಯಾರೋ ಬರುತ್ತಿರಬೇಕು ಅಂತಾ ತಿಳಿದು ನನ್ನ ಪಾಡಿಗೆ ನಾನು ಹಿಂದಿರುಗಿ ನೋಡದೆ ಹಾಗೇ ಹೊರಟಿದ್ದೆ.. ಹಾಗೆಯೇ ಹೆಜ್ಜೆ ಯ ಸದ್ದು ಮತ್ತೆ ನನ್ನ ಪಕ್ಕಕ್ಕೆ ಬಂದ ಹಾಗೇ ಆಯಿತು
ಆಗಲೂ ಸಹ ಮತ್ತೆ ಅಕ್ಕ ಪಕ್ಕ ನೋಡಿ ಯಾರೂ ಕಾಣದ ಕಾರಣ ಯಾರು ಯಾರು ಅಂತಾ ಕೇಳಿದೆ?? ಮೊಬೈಲ್ ಟಾರ್ಚ್ ನ್ನು ಅತ್ತ ಇತ್ತ ತಿರುಗಿಸಿ ನೋಡಿದೆ ಯಾರೂ ಕಾಣಲಿಲ್ಲ
ಆಗ ನನಗೆ ಭಯ ಶುರುವಾಯಿತು
ಹೇಗಾದರೂ ಅರ್ಧ ದಾರಿ ಬಂದಿರಬೇಕು ಇನ್ನೇನು ಊರು ಬಂದೇ ಬಿಡುತ್ತೆ ಅಂತಾ ಏನೋ ಧೈರ್ಯ ತಂದುಕೊಂಡು ಮತ್ತೆ ಹಾಗೆಯೇ ನಡೆಯಲು ಪ್ರಾರಂಭಿಸಿದೆ. ಆಗ ದೂರದಲ್ಲಿ ಯಾವೋದು ವಾಹನ ಹಿಂದಿನಿಂದ ಬರುವ ಬೆಳಕು ಕಂಡಿತು ಮತ್ತೆ ಹಿಂದೆ ತಿರುಗಿ ನೋಡಿದೆ ಒಂದೇ ದ್ವೀಪ ಕಂಡಿತು ಸಧ್ಯ ಆ ವಾಹನದವರ ಹತ್ತಿರ ಸಹಾಯ ಕೇಳಿ ಹೇಗೂ ಹಳ್ಳಿಯನ್ನು ತಲುಪಬಹುದು ಅಂತಾ ಆ ದ್ವಿಚಕ್ರ ವಾಹನ ನನ್ನ ಸಮೀಪ ಬರುವದನ್ನೇ ಕಾಯುತ್ತ ಹಿಂದೆ ಹಿಂದೆ ನೋಡುತ್ತಾ ಹಾಗೆಯೇ ನನ್ನ ನಡಿಗೆ ಮುಂದುವರಿಸಿದೆ.
ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಹಿಂದೆ ಬರುತ್ತಿರುವ ವಾಹನದತ್ತ ದ್ರಷ್ಟಿ ಹಾಯಿಸಿದೆ
ನನ್ನ ದಾರಿಯಲ್ಲಿಯೇ ಬರುತ್ತಿದ್ದ ಆ ದ್ವಿಚಕ್ರವಾಹನ ಬಲಗಡೆ ಒಂದು ಸಣ್ಣ ತಿರುವಿನಲ್ಲಿ ತಿರುಗಿ ಬೇರೆ ದಾರಿ ಹಿಡಿಯಿತು
ಆ ವಾಹನದಲ್ಲಿ ಹೇಗೂ ಹಳ್ಳಿಯನ್ನು ತಲುಪಬಹುದು ಎಂಬ ಆಸೆಯು ಸಹ ನಿರಾಶೆ ಆಯಿತು ಬೇರೆ ಗತಿಯಿಲ್ಲದೆ ಹಾಗೆಯೇ ನಡೆಯಲು ಪ್ರಾರಂಭಿಸಿದೆ
ಹಿಂದಿನಿಂದ ಮಿಯಾವ್ ಮಿಯಾವ್ ಅನ್ನುವ ಬೆಕ್ಕಿನ ಶಬ್ದ ಕೇಳಿಸಿತು ಅದರ ಬೆನ್ನಲ್ಲಿಯೇ ಯಾರೋ ಬರುವ  ಹೆಜ್ಜೆಯ ಸಪ್ಪಳ ಕೇಳಿಸಿತು.. ಈ ಸಾರಿ ನಾನು ಹಿಂದೆ ತಿರುಗಿ ನೋಡುವ ಧೈರ್ಯ ಮಾಡಲಿಲ್ಲಾ ಒಂದೆರಡು ಕ್ಷಣಗಳ ನಂತರ
ಹಹ್ ಹಹ್ ಹಃ ಹಹ್ ಹಹ್ ಹಃ ಎಂದು ಸಣ್ಣ ನಗು ಕೇಳಿಸಿತು, ಅದರ ಜೊತೆಗೆ ಯಾರೋ ಬರುವ ಹೆಜ್ಜೆಯ ಸಪ್ಪಳ ನನ್ನ ಸಮೀಪ ಪಕ್ಕಕ್ಕೆ ಬಂದಂತಾಯಿತು.... ಆಗಲೇ ಚಳಿಯಲ್ಲಿಯೂ ಸಹ ನಾನು ಸಂಪೂರ್ಣವಾಗಿ ಬೆವೆತುಹೋಗಿ ಆ ಕಡೆ ನೋಡುವ ಧೈರ್ಯ ಮಾಡದೇ ಮತ್ತೆ ಬೇಗ ಬೇಗ ನೇ ಹೆಜ್ಜೆ ಹಾಕಲು ಪ್ರಾರಂಭಮಾಡಿದೆ
ಆಂಜನೇಯ ಸ್ವಾಮಿಯನ್ನು ಮನದಲ್ಲಿ ನೆನೆಸುತ್ತ ಜೈ ಆಂಜನೇಯ ಅನ್ನುತ್ತ ಪಕ್ಕಕ್ಕೆ ತಿರುಗಿ ನೋಡುವ ಧೈರ್ಯ ಮಾಡದೇ ಮತ್ತಷ್ಟು ಬೇಗ ಬೇಗ ನೇ ಹೆಜ್ಜೆ ಹಾಕಲು ಪ್ರಾರಂಭ ಮಾಡಿದೆ ಮತ್ತೆ ಒಂದೆರಡು ನಿಮಿಷದ ನಂತರ ನಂತರ
ಹಹ್ ಹಹ್ ಹಃ ಹಹ್ ಹಹ್ ಹಃ ಎಂದು ಸಣ್ಣ ನಗು ಮತ್ತೆ ಕೇಳಿಸಿತು, ಅದರ ಜೊತೆಗೆ ಗೂಬೆ ಕೂಗುವ ಶಬ್ದ ಎಲ್ಲಾ ದಿಕ್ಕಿನಿಂದಲೂ ಕೇಳಿಸುವ ಜೊತೆಗೆ ಯಾರೋ ನೆರಳುವ ಶಬ್ದ ನನ್ನ ಅತೀ ಸಮೀಪ ಹೆಜ್ಜೆಯ ಸಪ್ಪಳದ ಜೊತೆಗೆ ಗೆಜ್ಜೆಯ ಸಪ್ಪಳ ನನ್ನ ಸಮೀಪ ಎರಡು ಪಕ್ಕಕ್ಕೆ, ಮತ್ತು ಹಿಂದೆಯೂ ಸಹ ಬಂದಂತಾಯಿತು
ಈಗಲೂ ಸಹ ಅಕ್ಕ ಪಕ್ಕ ತಿರುಗಿ ನೋಡುವ ಧೈರ್ಯ ಮಾಡದೇ ಮೊಬೈಲ್ ಗಡಿಯಾರದತ್ತಲು ಸಹ ಗಮನ ಕೊಡದೆ ಹಾಗೆಯೇ ಅತೀ ವೇಗವಾಗಿ ಎದುಸಿರು ಬಿಡುತ್ತ ಆಂಜನೇಯ ಸ್ವಾಮಿಯನ್ನು ಮನದಲ್ಲಿ ನೆನೆಸುತ್ತ ಜೈ ಆಂಜನೇಯ ಅನ್ನುತ್ತ ಮೊಂಡು ಧೈರ್ಯದಿಂದ ಹಾಗೆಯೇ ಓಡಲು ಪ್ರಾರಂಭ ಮಾಡಿದೆ.
.. ನನ್ನ ಜೊತೆಗೆ
ಅದೇ ವೇಗದಲ್ಲಿ ಗೆಜ್ಜೆಯ ಸಪ್ಪಳ

ಹಹ್ ಹಹ್ ಹಃ ಹಹ್ ಹಹ್ ಹಃ ಎಂದು ಸಣ್ಣ ನಗು ಬಾವಲಿಗಳು ಹಾರಡುವ ಶಬ್ದ 
ಗೂಬೆ ಕೂಗುವ ಶಬ್ದ ಯಾರೋ ನೆರಳುವ ಶಬ್ದ ಮಿಯಾವ್ ಮಿಯಾವ್ ಅನ್ನುವ ಬೆಕ್ಕಿನ ಶಬ್ದ 
ಓ ಒವೂ ಓ ಒವ್ ಒವ್ ಊ ಊಒವ್ ಒವೂ  ಅನ್ನುವ ನಾಯಿ ಅಳುವ ಶಬ್ದ  ಇವೆಲ್ಲವುಗಳ ಶಬ್ದ ಅಷ್ಟ ದಿಕ್ಕುಗಳಿಂದ ಲೂ ನನ್ನ ಸುತ್ತ ನನ್ನ ಕಿವಿಯಲ್ಲಿ ಸುತ್ತಲಾರಂಭಿಸಿದವು ಇದೇ ಸಮಯದಲ್ಲಿ ನನ್ನ ಎದೆ ಬಡಿತ ಅತೀ ತೀವ್ರವಾಯಿತು ಒಂದು ಕೈಯಿಂದ ಎದೆ ಹಿಡಿದುಕೊಂಡೆ ಹೀಗೆ ಎದೆ ಹಿಡಿದುಕೊಂಡಾಗ ಹಾಗೆಯೇ ನನ್ನ ಕೈಗೆ ನಾನು ಕೊರಳಲ್ಲಿಯ ಆಂಜನೇಯನ ತಾಯತ ಹಾಗೂ ಧರ್ಮಸ್ಥಳ ಮಂಜನಾಥ ನ ಚಿತ್ರವಿದ್ದ ಲಾಕೆಟ್ ಕೈಗೆ ತಾಗಿದವು ಎದೆಯ ಜೊತೆಗೆ ಅವುಗಳನ್ನು ಸಹ ಹಿಡಿದು ಕೊಂಡು ಮತ್ತೆ ಮತ್ತೆ ಕಂಪಿಸುವ ಅಳುವ ಧ್ವನಿಯಲ್ಲಿಯೇ ಜೋರಾಗಿ ಜೈ,«»«»«»ಆಂಜ»«ನೇ»««ಯ ಎನ್ನುತ್ತಾ ಮುನ್ನಡೆದೆ....... ಅಷ್ಟರಲ್ಲಿ ನನ್ನ ಗಮನ ಮೊಬೈಲ್ ಗಡಿಯಾರದತ್ತ ಹೋಯಿತು ಮೊಬೈಲ್ ಗಡಿಯಾರ ಬೆಳಗಿನ ಜಾವ 2.30
ಸಮಯ ತೋರಿಸಿದನ್ನು ನೋಡಿ ನಾನು ಮೂರ್ಛೆ ಹೋಗುವ ದೊಂದೇ ಬಾಕಿ.. ಏಕೆಂದರೆ ನಮ್ಮ ಊರಿನ ದಾರಿ ನಿಧಾನ ವಾಗಿ ಹೋದರು ಸಹ 40 ನಿಮಿಷ ದ ದಾರಿ!!!
ಆದರೂ ಸಹ ಹೇಗೋ ಧೈರ್ಯ ತಂದು ಕೊಂಡು ಅನಿವಾರ್ಯತೆಯಿಂದ ಈ ಸಾರಿ ನಾನು ಎಲ್ಲಿಯೋ ದಾರಿ ತಪ್ಪಿರಬಹುದು ಎಂಬ ಆತಂಕದಿಂದ ಹಿಂದೆ ಮುಂದೆ ಅಕ್ಕ ಪಕ್ಕ ತಿರುಗಿ ನೋಡುವ ಸಾಹಸ ಮಾಡಿತೆಯಿಂದ ಈ ಸಾರಿ ನಾನು ಎಲ್ಲಿಯೋ ದಾರಿ ತಪ್ಪಿರಬಹುದು ಎಂಬ ಆತಂಕದಿಂದ ಹಿಂದೆ ಮುಂದೆ ಅಕ್ಕ ಪಕ್ಕ ತಿರುಗಿ ನೋಡುವ ಸಾಹಸ ಮಾಡಿ
ನನ್ನ ಕತ್ತನ್ನು ನಿಧಾನವಾಗಿ ಆಕಡೆ ಈಕಡೆ ಹೊರಳಿಸಿದ್ದೆ ತಡ
ಅದೇ ವೇಗದಲ್ಲಿ ಗೆಜ್ಜೆಯ ಸಪ್ಪಳ

ಹಹ್ ಹಹ್ ಹಃ ಹಹ್ ಹಹ್ ಹಃ ಎಂದು ಸಣ್ಣ ನಗು ಬಾವಲಿಗಳು ಹಾರಡುವ ಶಬ್ದ 
ಓ ಒವೂ ಓ ಒವ್ ಒವ್ ಊ ಊಒವ್ ಒವೂ  ಅನ್ನುವ ನಾಯಿ ಅಳುವ ಶಬ್ದ  ಇವೆಲ್ಲವುಗಳ ಜೊತೆಗೆ ವಿವಿಧ ಭಯಂಕರ ಭಯಾನಕ ವಿಕಾರ ರೂಪದಲ್ಲಿರುವ ಆಕ್ರತಿಗಳು  ನನ್ನ ಸುತ್ತುವರೆದು ಆಕಡೆ ಈಕಡೆ ಹಿಂದೆ ಮುಂದೆ
ಅಗಲಲಾಗದಾರದಂತೆ ಸುತ್ತುವರೆದವು ನನ್ನ ಕಣ್ಣಲ್ಲಿ ನನಗೇ ಅರಿವಿಲ್ಲದಂತೆ ಕಣ್ಣೀರು ಬಂದು ಹೃದಯ ಬಡಿತ, ಶರೀರ ಕಂಪನ, ತುಟಿಗಳು ಒಣಗುವದರ ಜೊತೆಗೆ, ಅತೀ ಬೆವರು.. ಇನ್ನೂ ಏನೇನೊ ಅಗಲಾರಂಭಿಸಿದವು ಆಗ ನನಗೇ ಥಟ್ಟನೇ ಕೊರಳಲ್ಲಿಯ ಆಂಜನೇಯನ ತಾಯತ ಹಾಗೂ ಧರ್ಮಸ್ಥಳ ಮಂಜನಾಥ ನ ಚಿತ್ರವಿದ್ದ ಲಾಕೆಟ್ ನೆನಪಾದವು ತಕ್ಷಣವೇ ತಡ ಮಾಡದೇ ಅವುಗಳನ್ನು ಹೊರಗಡೆ ತೆಗೆದು ಮೊಬೈಲ್ ಬೆಳಕನ್ನು ಅವುಗಳ ಮೇಲೆ ಹಿಡಿದು ಜೋರಾಗಿ ಜೈ ಆಂಜನೇಯ ಜೈ ಮಂಜುನಾಥ್ ಅನ್ನುತ್ತತ್ತ ಮುಂದುವರಿದೆ ಆಶ್ಚರ್ಯವೆಂಬಂತೆ ನನ್ನನ್ನು ಸುತ್ತುವರೆದ ಆ ಭಯಂಕರ ಭಯಾನಕ ವಿಕಾರ ಆಕ್ರತಿಗಳು ನಿಧಾನವಾಗಿ ಹಿಂದೆ ಸರಿಯಲು ಪ್ರಾರಂಭ ಮಾಡಿದವು
ಇದರಿಂದ ನನ್ನಲ್ಲಿ ಮತ್ತಷ್ಟು ಧೈರ್ಯ ಜೊತೆಗೆ ಕಾಲಲ್ಲಿ ಶಕ್ತಿಯೂ ಹೆಚ್ಚಿತು ನಾನು ಮತ್ತಷ್ಟು ಜೋರಾಗಿ ಜೈ ಆಂಜನೇಯ ಜೈ ಮಂಜುನಾಥ್ ಅನ್ನುತ್ತತ್ತ ಮತ್ತಾವುದೇ ಅರಿವು ಇಲ್ಲದೇ ಓಡತೊಡಗಿದೆ...
ಸ್ವಲ್ಪ ಓಡಿದ ನಂತರ ಮುಂದೆ ದ್ರಷ್ಟಿ ಹಾಯಿಸಿಒಂದು ಕ್ಷಣ ನಿಂತೆ ದೂರ ದಲ್ಲಿ ಮಿನುಕು ದೀಪ ಕಾಣಲಾರಂಭಿಸಿದವು ಅದನ್ನು ನೋಡಿ ಸ್ವಲ್ಪ ನಿಟ್ಟುಸಿರು ಬಿಟ್ಟು ಮೊಬೈಲ್ ಗಡಿಯಾರ ದತ್ತ ಗಮನ ಹರಿಸಿದೆ ಸಮಯ 4.50 ಸಮಯ ತೋರಿಸಿದನ್ನು ನೋಡಿ ಮತ್ತಷ್ಟು ಧೈರ್ಯ ತಂದು ಕೊಂಡು ಹಾಗೆಯೇ ಓಟ ಕಡಿಮೆ ಮಾಡಿ ನಡೆಯಲು ಪ್ರಾರಂಭ ಮಾಡಿದೆ
 ಮತ್ತೆ ಸ್ವಲ್ಪ ದೂರದಲ್ಲಿ ಕಪ್ಪು ವಸ್ತ್ರ ದ ಆಕ್ರತಿಗಳು ಕಾಣಲಾರಾಂಭಿ ಸಿದವು !!!
ಹೋದೆಯಾ ಪಿಶಾಚಿ ಅಂದರೆ ಬಂದೆ ನಾ ಕಿಡಕಿಯಲಿ ಅಂದ ಹಾಗೇ....ಮತ್ತೆ ನನ್ನ ಎದೆ ಬಡಿತ ಶರೀರ ಬೆವರುವಿಕೆ ಹೆಚ್ಚಾಯಿತು ನನಗೆ ಮುಂದೆ ಹೋಗಬೇಕೋ ಹಿಂದೆ ಹೋಗಬೇಕೋ ಏನೂ ತಿಳಿಯದೆ ನನ್ನ ಕಾಲುಗಳಲ್ಲಿಯ ಶಕ್ತಿಯೇ ಕಡಿಮೆ ಆಯಿತು ಇದ್ದ ಮೊಂಡು ಧೈರ್ಯ ಸಹ ಹೊರಟು ಹೋಗಿ ಏನೂ ಮಾಡಲು ತೊಚದೆ ಅಲ್ಲಿಯೇ ದಾರಿ ಪಕ್ಕ ಒಂದು ಗಿಡದ ಪಕ್ಕ ಅವಿತುಕೊಂಡು
ಜೈ ಆಂಜನೇಯ ಜೈ ಮಂಜುನಾಥ್ ಅಂತಾ ಮನಸ್ಸಿನಲ್ಲಿ ಸ್ಮರಣೆ ಮಾಡುತ್ತ ನಿಂತುಕೊಂಡೆ..ಕಪ್ಪು ವಸ್ತ್ರ ದ ಆಕ್ರತಿಗಳು ನನಗೆ ಹತ್ತಿರ ವಾಗತೊಡಗಿದವು ನಾನು ಇತ್ತ ಮೊಬೈಲ ಟಾರ್ಚದತ್ತ ಮತ್ತು ಆಂಜನೇಯನ ತಾಯತ ಹಾಗೂ ಧರ್ಮಸ್ಥಳ ಮಂಜನಾಥ ನ ಚಿತ್ರವಿದ್ದ ಲಾಕೆಟ್ ಗಮನ ಹರಿಸಿದೆ ಆಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು...ಆಂಜನೇಯನ ತಾಯತ ಹಾಗೂ ಧರ್ಮಸ್ಥಳ ಮಂಜನಾಥ ನ ಚಿತ್ರವಿದ್ದ ಲಾಕೆಟ ನ ಮೇಲೆ ಬಲವಾದ ನಂಬಿಕೆಯನ್ನು ಇಟ್ಟು ಉಸಿರು ಸಹ ಬಿಡದೆ ಹಾಗೇ ನಿಂತು ಬಿಟ್ಟೆ...ಕಪ್ಪು ವಸ್ತ್ರ ದ ಆಕ್ರತಿಗಳು ನನಗೇ ಮತ್ತಷ್ಟು ಹತ್ತಿರವಾಗ ತೊಡಗಿದವು..
ಇಲ್ಲಿಯವರೆಗೆ ನನ್ನ ಗಮನ ಆ ಕಪ್ಪು ಆಕ್ರತಿಗಳ ಮೇಲೆ ಇದ್ದ ಕಾರಣ ಬೇರೆ ಕಡೆಗೆ ಗಮನ ಹೋಗಿರಲಿಲ್ಲ
ಕಪ್ಪು ವಸ್ತ್ರ ದ ಆಕ್ರತಿಗಳು ನನಗೇ ಮತ್ತಷ್ಟು ಹತ್ತಿರವಾಗ ತೊಡಗಿ ನಾನು ಮರೆಯಾಗಿ ನಿಂತ ಗಿಡದ ಹತ್ತಿರ ಸಣ್ಣ ದಾರಿ ಇತ್ತು ಇದನ್ನು ನಾನು ನೋಡಿಯೇ ಇರಲಿಲ್ಲಾ!!!
ಕಪ್ಪು ವಸ್ತ್ರ ದ ಆಕ್ರತಿಗಳು ನನಗೇ ಮತ್ತಷ್ಟು ಹತ್ತಿರವಾಗ ತೊಡಗಿದಂತೆ ಕೈ ಕಾಲು ನಡುಕ ಬೆವರು ಎದೆ ಡವ ಡವ ಮತ್ತೆ ಈ ಹಿಂದೆ ಕಾಣಿಸಿದ ಭಯಂಕರ ಭಯಾನಕ ವಿಕಾರ ಆಕ್ರತಿಗಳು ನೆನಪಾಗಿ ಏನೂ ತಿಳಿಯದೆ ನಿಂತಲ್ಲಿಯೇ ಕಲ್ಲಾದೆ..
ಕಪ್ಪು ವಸ್ತ್ರ ದ ಆಕ್ರತಿಗಳು ನನಗೇ ಮತ್ತಷ್ಟು ಹತ್ತಿರವಾಗ ತೊಡಗಿ ನಾನು ನಿಂತ ಮರದ ಪಕ್ಕದ ಹಾದಿಯಲ್ಲಿ ಬರಲಾರಂಬಿಸಿದವು
ನನ್ನ ನನ್ನ ಎದೆ ಬಡಿತ ಶರೀರ ಬೆವರುವಿಕೆ ಮತ್ತಷ್ಟು ಹೆಚ್ಚಾಗಿ ಕಣ್ಣುಗಳು ಮಂಜಾಗತೊಡಗಿ ಮೊದಲಿನ ಹಾಗೇ ಜೋರಾಗಿ  ಜೈ ಆಂಜನೇಯ ಜೈ ಮಂಜುನಾಥ್ಅಂತಾ ಕೂಗಲು ಸಹ ಧೈರ್ಯ ಸಾಲಲಿಲ್ಲ ಆದರೂ ಸಹ ಹೇಗೂ ಧೈರ್ಯ ತಂದುಕೊಂಡು ಆ ಆಕ್ರತಿಗಳು ಮರದ ಪಕ್ಕದ ಚಿಕ್ಕ ದಾರಿಯಲ್ಲಿ ಬರುತ್ತ ನನ್ನ ಕಡೆಗೆ ದ್ರಷ್ಟಿ ಬಿಳುತಿದ್ದ ಹಾಗೇಯೇ ಯಾವುದೋ ಇದ್ದ ಬಿದ್ದ ಧೈರ್ಯ ತಂದುಕೊಂಡು ಮತ್ತೆ
ಜೈ ಆಂಜನೇಯ ಜೈ ಮಂಜುನಾಥ್ಅಂ  ತಾ ಕೂಗಿದೆ ಆದರೂ ಸಹ ಆ ಆಕ್ರತಿಗಳು ಮೌನವಾಗಿ ನನ್ನ ಹತ್ತಿರ ಬರಲಾರಂಭಿಸಿದವು ನಾನು ನನ್ನ ಕಣ್ಣುಗಳನ್ನು ಮುಚ್ಚಿಕೊಂಡು ಹಾಗೆಯೇ ಕಂಪಿಸುತ್ತ ಜೈ ಆಂಜನೇಯ ಜೈ ಮಂಜುನಾಥ್ ಅಂತಾ ತಡವರಿಸುತ್ತ ಹಾಗೆಯೇ ಮೂರ್ಛೆ ಹೋದದಷ್ಟೇ ನೆನಪು.
ಯಾರೋ ಮುಖದ ಮೇಲೆ ನೀರು ಚಿಮುಕಿಸಿದ ಹಾಗೆ ಆಗಿ ನಿಧಾನ ಕಣ್ಣು ಬಿಡುತ್ತಾ ಸುತ್ತ ಮುತ್ತ ದ್ರಷ್ಟಿ ಹಾಯಿಸಿ ನೋಡಿದರೆ ಸುತ್ತ ಮುತ್ತಲು ಬೆಳಕು ಹರಿಯುವ ಮೊದಲಿನ ಮಬ್ಬುಗತ್ತಲು ಸುತ್ತ ಮುತ್ತಲು ಆಸ್ಪಷ್ಟ ಕಪ್ಪು ಆಕ್ರತಿಗಳು ಮತ್ತೆ ಮತ್ತೆ ಕಣ್ಣು ಉಜ್ಜಿಕೊಂಡು ಆ ಆಕ್ರತಿಗಳ ಗಮನ ಹರಿಸಿದೆ... ಅವರೆಲ್ಲರೂ ಅಯ್ಯಪ್ಪ ಮಾಲಾಧಾರಿಗಳು!!!!
ನಂತರ ನನ್ನನ್ನು ವಿಚಾರಿಸಿ ಕುಡಿಯಲು ನೀರು ಕೊಟ್ಟು ಸರ್ ನಮ್ಮನ್ನು ನೋಡುತ್ತಿದ್ದ ಹಾಗೇ ಏಕೆ ಜೈ ಆಂಜನೇಯ ಜೈ ಮಂಜುನಾಥ್ ಅಂತಾ ಕೂಗಿಕೊಂಡು ಮೂರ್ಛೆ ಹೋದಿರಿ ಅಂತಾ ಕೇಳಿದರು
ನಾನು ಹಿಂದಿನ ದಿನದ ಸಾಯಂಕಾಲದಿಂದ ಈ ವರೆಗೂ ನಡೆದ ಘಟನೆ ಎಲ್ಲಾ ವಿವರಿಸಿದೆ
ಅದಕ್ಕೆ ಆ ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಈ ಹಿಂದೆ ಈ ದಾರಿಯಲ್ಲಿ ಒಬ್ಬ ವ್ಯಕ್ತಿ ನೇಣು ಹಾಕಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅಂದಿನಿಂದ ಇಲ್ಲಿ ಭೂತ ಚೇಷ್ಟೆ ಪ್ರಾರಂಭವಾಗಿದ್ದು..ಸಂಜೆ ಯಾಗುತ್ತಿದ್ದಂತೆ ಈ ರಸ್ತೆಯಲ್ಲಿ ಒಂಟಿಯಾಗಿ ಹೆಚ್ಚಿಗೆ ಯಾರೂ ಓಡಾಡುವದಿಲ್ಲ ಅಂತಾ ನನಗೆ ಹೇಳಿ ನಾನು ಆ ಹಳ್ಳಿಗೆ ಬಂದಿರುವ ಕಾರಣ ಕೇಳಿ
ತಮ್ಮ ಹತ್ತಿರ ಇದ್ದ ಮೊಬೈಲನಿಂದ ನಾನು ಹೋಗುವ ಸಂಬಂಧಿ ಕರ ಮನೆಗೆ ಕರೆ ಮಾಡಿ ನನ್ನನ್ನು ಸಂಬಂಧಿಕರ ಮನೆಗೆ
ತಲುಪಿಸಿದರು