Click here to Download MyLang App

ನಾವಿಕನಾಗು ನಾವಿನ್ಯತೆಗೆ : ಓಂಕಾರ್ ಯಾದವ್ ಮಾರೇನಹಳ್ಳಿ | ಸಾಮಾಜಿಕ | ಒಲವಿರದ ಬದುಕು : ರೂಪಾ ರೈ | ಸಾಮಾಜಿಕ | ಕತೆಯ ಒಳನುಡಿ ಶೈಲಿ -ಶಿಷ್ಟ ಸ್ವರೂಪದ ಕನ್ನಡ|

ಬದುಕು ಯಾವಾಗಲು ಹೊಸತನಕ್ಕೆ ಒಳಗಾಗುತ್ತಲೇ ಇರಬೇಕು. ಬರಿ ನಿಂತನಿರಂತಿದ್ದರೆ ಅಷ್ಟೇನು ಸೊಗಸಿರುವುದಿಲ್ಲ. ಮನುಷ್ಯನ ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ಅನೇಕ ಕಷ್ಟ ಹಾಗೂ ಸುಖದ ಸನ್ನಿವೇಶಗಳನ್ನು ಎದುರಿಸಿರುತ್ತಾನೆ.ಜೀವನದ ಪ್ರತಿಯೊಂದು ಹಂತದಲ್ಲಿ ಒಂದೊಂದು ಪಾಠವನ್ನು ಕಲಿಯುತ್ತ ಹೋಗುತ್ತಿರುತ್ತಾನೆ.ಒಳಿತನ್ನು ಜೊತೆಯಲ್ಲಿರಿಸಿಕೊಂಡು ಕೆಡುಕಿನಿಂದ ಪಾಠ ಕಲಿತು ತನ್ನ ಜೀವನವನ್ನು ನಡೆಸುತ್ತ ಹೋಗುತ್ತಾನೆ.
ಸಾಮಾನ್ಯವಾಗಿ ಬದುಕಿನಲ್ಲಿ ಹೊಸತನವನ್ನು ಹುಡುಕುವ ಗೋಜಿಗೆ ಹೋಗುವವರ ಸಂಖ್ಯೆ ಕಡಿಮೆ. ತಮ್ಮ ಕೆಲಸದಲ್ಲೆ ದಿನನಿತ್ಯ ಕಾಲ ಕಳೆಯುವುದರಿಂದ ನಮಗೆ ಸಮಯ ಸಿಗುವುದಿಲ್ಲವೆಂದು ಕೆಲವರು ಹೇಳುತ್ತಿರುತ್ತಾರೆ.ಇನ್ನು ಕೆಲವರು ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಅಂತ ತಲೆಕೆಡಿಸಿಕೊಳ್ಳದೆ ಇರುವವರು ಜಾಸ್ತಿ.ಅದೇನೇ ಇರಲಿ ನಮ್ಮ ನಾವು ಹೊಸ ಹೊಸ ಆಯಾಮಗಲ್ಲಿ ತೋಡಗಿಸಿಕೊಳ್ಳುತ್ತಾ ಹೋಗುತ್ತಿದ್ದರೆ ಕ್ರಮೇಣ ತಾನಾಗಿಯೇ ಹೊಸತನವನ್ನು ಹುಡುಕು ಆರೋಗ್ಯಕರ ಹುಚ್ಚು ಹಿಡಿಯುತ್ತದೆ.

ಋಗ್ವೇದದಲ್ಲಿ ಒಂದು ಮಾತಿದೆ ಆ ನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ ಅಂದರೇ ಸದ್ವಿಚಾರಗಳು ಎಲ್ಲೆಡೆಯಿಂದಲೂ ಹರಿದು ಬರಲಿ. ಇದರಂತೆಯೇ ನಾವು ಹೊಸ ಹೊಸ ಕೆಲಸಗಳನ್ನು ಮಾಡ ಹೊರಟಾಗ ಒಳಿತುಗಳು ಹಾಗೂ ಕೆಡುಕುಗಳು ಬಂದೆ ಬರುತ್ತವೆ.ಅದರಲ್ಲಿರುವ ಶ್ರೇಷ್ಠತೆಯನ್ನು ಗೌರವಿಸುತ್ತ ನಮ್ಮ ಬದುಕಿಗೆ ಪೂರಕವಾಗುವಂತಿದ್ದಾರೆ ಅದನ್ನು ಅಳವಡಿಸಿಕೊಳ್ಳುವುದು ನಾವಿನ್ಯತೆಯಲ್ಲದೆ ಮತ್ತೇನು..? ಕನ್ನಡ ಸಾಹಿತ್ಯದಲ್ಲಿ ಬರುವ ಷಟ್ಪದೀಯ ಬ್ರಹ್ಮಎಂದೇ ಖ್ಯಾತರಾದ ಕವಿ ರಾಘವಾಂಕರು ಹೇಳಿದಂತೆ ನಡೆವವರು ಎಡವದೆ ಕುಳಿತವರು ಎಡವುತ್ತಾರೆಯೇ? ಎಂಬಂತೆ ಹೊಸತನದಲ್ಲಿ ತೋಡಾಗಿದಾಗ ಕೆಡುಕೇನಾದರೂ ಅಥವಾ ತೊಂದರೆಗಳು ಬಂದರೆ ಭಯ ಪಡದೆ ಮತ್ತಷ್ಟು ಉತ್ಸಾಹಿಗಳಾಗಿ ಮುಂದೇನಡೆಯುವುದು ನಾವು ಅಂದುಕೊಂಡ ದಾರಿ ಸೇರಲು ಸುಲಭ ಮಾರ್ಗ.

ನಾವಿನ್ಯತೆಯೆಂದರೇ ನಾವು ಮಾಡುವ ಕೆಲಸದ ಜೊತೆಗೆ ಒಂದಷ್ಟು ಹೊಸ ಕೆಲಸವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು.ಉದಾಹರಣೆಗೆ ಕೃಷಿಕರಾಗಿದ್ದಾರೆ, ವ್ಯವಸಾಯದ ಜೊತೆ ಜೊತೆಯಲ್ಲೇ ನವೀಕರಣಗೊಂಡ ಆದುನಿಕ ಪ್ರಗತಿಪರ ಕೃಷಿಯ ಪದ್ಧತಿಯ ಬಗ್ಗೆ ಓದುವುದು ಹಾಗೂ ಹೆಚ್ಚು ತಿಳಿದವರಿಂದ ಮಾಹಿತಿ ಪಡೆಯುವುದು ಅದನ್ನು ತಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವುದು ನಾವಿನ್ಯತೆಗೆ ನಮ್ಮನ್ನು ತೊಡಗಿಸಿಕೊಂಡಿದ್ದೇವೆಂದೆ ಅರ್ಥ.ಯುವಸಮೂಹದವರು ಕೂಡ ಇಂತಹ ಉನ್ನತ ಹಾಗೂ ಉತ್ತಮ ಕ್ರಿಯೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದರೆ ಖಂಡಿತವಾಗಿ ರಾಷ್ಟ್ರ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸ್ಪರ್ಧೆಗಿಳಿಯುತ್ತದೆ.

ವಿದ್ಯಾರ್ಥಿಗಳು ನಿತ್ಯದ ತಮ್ಮ ವಿಷಯಗಳ ಅಧ್ಯಯನದಂತೆ ಈ ದೇಶದ ಮಣ್ಣಿನ ಪ್ರತಿಭಾನ್ವಿತ ಶ್ರೇಷ್ಠ ಸಂತರ, ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ ಜೀವನವನ್ನು ಓದುತ್ತಾ, ಈ ಮಣ್ಣಿನ ನೈಜ ಇತಿಹಾಸವನ್ನು ತಿಳಿಯುತ್ತ ನಮ್ಮ ಪವಿತ್ರ ಆಚಾರ ವಿಚಾರಗಳನ್ನು ಉಡುಗೆ ತೋಡುಗೆಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋದರೆ ಮುಂದೊಂದು ದಿನ ರಾಷ್ಟ್ರದ ಆಡಳಿತ ಪ್ರಭುದ್ದರ ಕೈಯಲ್ಲಿ ನಡೆಯುತ್ತಾ ಹೋಗುತ್ತದೆಎಂಬುದಕ್ಕೆ ಯಾವುದೇ ಸಂಶಯವಿರುವುದಿಲ್ಲ.ಆದುದರಿಂದ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ನಮ್ಮನ್ನು ನಾವು ವ್ಯಕ್ತಿಗತವಾಗಿ ನಾವಿನ್ಯತೆಗೆ ಒಳಪಡಿಸಿಕೊಳ್ಳುವುದು ವೈಯಕ್ತಿಕ ಏಳಿಗೆಗೆ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಮ್ಮ ಪಾತ್ರವು ಪೂರಕವಾಗಿ ಅಜರಾಮರವಾಗಿರುತ್ತದೆ.


✍🏻...ಓಂಕಾರ್ ಯಾದವ್. ಎನ್ ಮಾರೇನಹಳ್ಳಿ