Click here to Download MyLang App

ಹೂವಿನಂಥಾ ಮನಸು : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ |

ಸುಜಾತಳ ಆರೋಗ್ಯ ದ ಬಗ್ಗೆ ಫೋನು ಕರೆ ಬರೋದನ್ನೇ ಕಾಯುತ್ತಿದ್ದ ಸುಜಾತಾಳ ತಾಯಿ ಸರೋಜಮ್ಮ,  ಅದೇ ಗುಂಗಿನಲ್ಲಿದ್ದರು, ಏನೂ ಕೆಲಸ ಮಾಡಲು ಮನಸ್ಸಿಲ್ಲ, ಈ ಸಾರಿ ಏನಾಗುವುದೋ, ಎಂತೋ ಏನೋ ಎಂದು, ಚಿಂತೆ ಆವರಿಸಿತ್ತು , ಬೆಳಿಗ್ಗೆ ಯಿಂದ ತಿಂಡಿ ಸಹ ತಿನ್ನಲು ಮನಸ್ಸಾಗಿರಲಿಲ್ಲ, ಅವರ ಮನೆಯ ಹಿಂಭಾಗದ ಮನೆ ವಿನೋದಮ್ಮನ ಮಗನ ಮದುವೆಗೂ ಹೋಗಲೂ ಮನಸ್ಸಾಗದೇ.....ಫೋನು ಕೈಲಿಡಿದೇ ಕಾತರದಿಂದ ಕುಳಿತಿದ್ದರು.

       ಹೌದು ಮಗಳು ಸುಜಾತ ಎರಡನೇ ಬಾರಿ ಗರ್ಭಿಣಿಯಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಎರಡು ದಿನ ಕಳೆದಿತ್ತು, ತಾಳಲಾರದ ತುಂಬಾ ಹೊಟ್ಟೆನೋವು ಎಂದು,  ಒಂಬತ್ತು ತಿಂಗಳು ತುಂಬುವ ಮೊದಲೇ ಆಸ್ಪತ್ರೆಗೆ ಸೇರಿದ್ದಳು, ಮೊದಲನೇ ಸಲ  ಗರ್ಭಿಣಿಯಾಗಿದ್ದಾಗ  ಸುಜಾತಾಳ ಮನೆ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರಿಂದ ಅಲ್ಲಿ ಅಷ್ಟೊಂದು ಸೌಕರ್ಯಗಳಿಲ್ಲದೇ ತನ್ನ ವಂಶದ ಕುಡಿಯನ್ನು ಕೊಂದುಬಿಟ್ಟಿರಿ ಎಂದು ತುಂಬಾ ರಂಪಾಟ

 

ಮಾಡಿದ್ದರು ಸುಜಾತಾಳ ಅತ್ತೆ ಶ್ಯಾಮಲಮ್ಮ, ಅಂದಿನಿಂದಲೂ ಸುಜಾತಾಳ ಹಾಗೂ ಅವಳ ಹೆತ್ತವರ ಮೇಲೆ ಕೆಂಡ ಕಾರುತ್ತಲೇ ಇದ್ದರು ಅತ್ತೆ ಶ್ಯಾಮಲಮ್ಮ.

    ಇನ್ನು ಈಬಾರಿ ನಾವೇ ನಮ್ಮ ಮನೆ ಹತ್ತಿರದ ದೊಡ್ಡ ಆಸ್ಪತ್ರೆಗೆ ಸೇರಿಸುವೆವು, ನೀವೇನೂ ತೊಂದರೆ ತೆಗೆದುಕೊಳ್ಳಬೇಡಿ....... ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು, ಬೀಗರು.

      ಅದರಂತೆ ಅವರ ಮನೆಹತ್ತಿರದ ಆಸ್ಪತ್ರೆಗೆ ಸೇರಿಸಿ ಎರಡು ದಿನವಾದರೂ ಚಿಕಿತ್ಸೆ ಮುಂದುವರೆದಿತ್ತು ಸುಜಾತಳಿಗೆ , ಯಾವಾಗ ಬೇಕಾದರೂ ಮಗು ಹೆರಿಗೆಯಾಗುವ ಸಂದರ್ಭವಿತ್ತು .  ಸುಜಾತಾಳ ಜೊತೆ ಅವಳ ಗಂಡ ನಾರಾಯಣ ಹಾಗೂ ಅವಳ ತಂಗಿ ವಿಮಲಾ ಆಸ್ಪತ್ರೆಯಲ್ಲಿ ಇದ್ದು ಸುಜಾತಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

     ಆಗಾಗ ತನ್ನ ಮಗನಿಗೆ ಫೋನು ಕರೆ ಮಾಡಿ ಸೊಸೆಯ ಆರೋಗ್ಯ ದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು, ಏನೋ ನಾರಾಯಣ, ನಿನ್ನ ಹೆಂಡತಿಗೆ ಇನ್ನೂ ಹೆರಿಗೆಯಾಗಲಿಲ್ಲವೇನೋ.....ಅದೇನೋ.....ನಿನ್ನ ಹೆಂಡತಿ ಊರಿಗೆ ಮುಂಚೆಯೇ ಹೊಟ್ಟೆನೋವು ಅಂತಾ ಆಸ್ಪತ್ರೆ ಸೇರುತ್ತಾಳೆ, ಬರೋವಾಗ ಬರೀ ಕೈಲಿ ಬರ್ತಾಳಲ್ಲೋ....ಈ ಬಾರಿಯಾದರೂ ಒಂದು ಮಗು ತರುವಂತೆ ಹೇಳೋ........... ಎಂದು ಸುಜಾತಾಳ ಅತ್ತೆ

 

ಶ್ಯಾಮಲಮ್ಮ,  ನಾರಾಯಣನಿಗೆ ಆಗಾಗ ಫೋನು ಮಾಡಿ ತಲೆ ತಿನ್ನುತ್ತಲೇ ಇದ್ದರು.

    ಸುಜಾತ, ನಾರಾಯಣ ಮದುವೆಯಾಗಿ ಸುಮಾರು ಮೂರು ವರುಷಗಳೇ ಕಳೆದರೂ ಸುಜಾತಳೊಂದಿಗೆ ಶಾಮಲಮ್ಮ ಹೊಂದಿಕೊಂಡಿರಲಿಲ್ಲ , ಕಾರಣ ತಾವು ಅಪೇಕ್ಷೆಪಟ್ಟಷ್ಟು ಹಣ, ಒಡವೆ ಸಿಕ್ಕಿಲ್ಲ ಎಂದು, ಅದಲ್ಲದೇ ಮೊದಲನೇ ಮಗು ಸಾವಿಗೆ ಬೀಗರೇ ಕಾರಣವೆಂದು ಅಪವಾದ ಹೊರಿಸಿದ್ದರು, ಸುಜಾತಾಳನ್ನು ಕೂರಲೂ ಬಿಡದೆ, ನಿಲ್ಲಲೂ ಬಿಡದಂತೆ ತೊಂದರೆ ಕೊಡುತ್ತಲೇ ಇದ್ದರು.

       ಅವರ ಮೊದಲೆರಡು ಗಂಡು ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ, ಒಡವೆ ಕೊಟ್ಟಂತಹ ಹೆಣ್ಣುಗಳನ್ನೇ ನೋಡಿ ಮದುವೆ ಮಾಡಿಕೊಂಡಿದ್ದರು, ಅವರುಗಳಿಗೂ ಮೂರ್ನಾಲ್ಕು ಗಂಡು ಮಕ್ಕಳೇ ಹುಟ್ಟಿದ್ದರಿಂದ ಅವರ ಮೇಲೆ ತುಂಬಾ ಅಕ್ಕರೆ.

       ನಾರಾಯಣ ತುಂಬಾ ಇಷ್ಟಪಟ್ಟಿದ್ದರಿಂದ ಸ್ವಲ್ಪ ಬಡವರಾದರೂ ಅದೇ ಹುಡುಗಿ ಸುಜಾತಾ, ಮೂರನೆ ಸೊಸೆಯಾಗಿ , ಶ್ಯಾಮಲಮ್ಮನ ಮನೆ ಸೇರಿದ್ದಳು.

          ಇನ್ನು ಈ ಬಾರಿಯೂ ಏನಾದರೂ ಅನಾಹುತವಾದರೆ ಏನಪ್ಪಾ ಎಂದು ಸುಜಾತಾಳ ತಾಯಿ ಸರೋಜಮ್ಮನವರ ಹೃದಯ ಬಡಿದುಕೊಳ್ಳಲಾರಂಭಿಸಿತು, ಅದೂ ಅಲ್ಲದೇ ಈ

 

ಬಾರಿಯೂ ಒಂಬತ್ತು ತಿಂಗಳು ತುಂಬುವ ಮೊದಲೇ ಆಸ್ಪತ್ರೆಗೆ ದಾಖಲಾಗಿದ್ದಾಳೆ,  ಮಗಳು,  ಏನಪ್ಪಾ ದೇವರೇ.......ಎಂದು ದೇವರನ್ನು ಬೇಡಿಕೊಳ್ಳುತ್ತಲೇ ಇದ್ದರು.

       ಆದರೆ ಅಳಿಯ ನಾರಾಯಣ,  ತುಂಬಾ ಸಭ್ಯಸ್ತ, ಮೃದು ಸ್ವಭಾವದವನು, ಅದರಿಂದಲೇ ಸ್ವಲ್ಪ ಸಮಾಧಾನ ಸರೋಜಮ್ಮ ನವರಿಗೆ, ಆದರೂ ಶ್ಯಾಮಲಮ್ಮನವರ ಮುಂದೆ ನಾರಾಯಣನ ಹಾಗೂ ಅವನ ತಂದೆಯ ಆಟ ಏನೂ ನಡೆಯದು, ಮೊದಲ ಇಬ್ಬರು ಸೊಸೆಯರ ಮೇಲೆ, ಅವರ ಮಕ್ಕಳ ಮೇಲೆ ತೋರಿಸುವ ಪ್ರೀತಿ ಸುಜಾತಾಳ ಮೇಲೆ ತೋರಿಸುತ್ತಿರಲಿಲ್ಲ, ಕುಂತರೂ ತಪ್ಪು, ನಿಂತರೂ ತಪ್ಪು ಕಂಡುಹಿಡಿಯುತ್ತಿದ್ದರು ಶ್ಯಾಮಲಮ್ಮನವರು, ಅದಕ್ಕೆ ತಕ್ಕಂತೆ ಈ ಮೊದಲನೇ ಸಲ  ಗರ್ಭಿಣಿಯಾದ ಸುಜಾತಾ, ಐದು ತಿಂಗಳು ಗರ್ಭೀಣಿಯಾಗಿದ್ದಾಗಲೇ ತವರು ಮನೆಗೆ ಹೋಗಿದ್ದಳು, ಆಗಲೂ ಸರಿಯಾದ  ಸಮಯಕ್ಕೆ ಮೊದಲೇ ಹೊಟ್ಟೆನೋವೆಂದು ಅವರ ಮನೆ ಹತ್ತಿರವೇ ಇದ್ದ ಚಿಕ್ಕದಾದ ಒಂದು ನರ್ಸಿಂಗ್ ಹೋಂಗೆ ದಾಖಲಾದ ಸುಜಾತಾಳಿಗೆ ಆ ಬಾರಿಯೂ ಮಗು ಪೂರ್ಣಪ್ರಮಾಣದಲ್ಲಿ ಬೆಳವಣಿಗೆಯಾಗದ ಕಾರಣ ಹುಟ್ಟತ್ತಲೇ  ಸತ್ತುಹೋಗಿತ್ತು, ಇದರಿಂದ

ಶ್ಯಾಮಲಮ್ಮನವರ ಕೋಪಕ್ಕೆ ಸುಜಾತಾ ಹಾಗೂ

 

ಅವಳ ಮನೆಯವರು ತುತ್ತಾಗಿದ್ದರು,

      ಹೀಗಿರುವಾಗಲೇ ಸುಜಾತಾಳ ತಂಗಿ, ವಿಮಲಾ,  ತನ್ನ ತಾಯಿಗೆ ಫೋನು ಕರೆ ಮಾಡಿದಳು ಅಳುತ್ತಲೇ , ಅಮ್ಮಾ....... ಅಮ್ಮಾ......ಎಂದು ,

ಸರೋಜಮ್ಮ ನವರೇ, ಕೇಳಿದರು,  ಈ ಕಡೆಯಿಂದ ಹೇಳಮ್ಮಾ........ ಏನಾಯಿತು, ಎಂದು .

      ಈ ಬಾರಿಯೂ ಮಗು ಬೆಳವಣಿಗೆ ಕಾಣದೆ ಸತ್ತುಹೋಗಿದೆ ಅಮ್ಮಾ.......ಇನ್ನು ಅಕ್ಕನ ಅತ್ತೆ ಏನನ್ನುವರೋ ......ನನಗಂತೂ ತುಂಬಾ ಭಯವಾಗುತ್ತಿದೆ ಅಮ್ಮಾ......ಎಂದು ಹೇಳಿದಳು,

ಅಕ್ಕನೂ ಮಗು ಹೋಗಿದ್ದಕ್ಕೆ ಚಿಂತಿಸದೇ ತನ್ನ ಅತ್ತೆ, ಶ್ಯಾಮಲಮ್ಮನವರಿಗೆ ಹೇಗೆ ಮುಖ ತೋರಿಸುವುದೆಂದು ಚಿಂತಿಸುತ್ತಿದ್ದಾಳೆ. ತುಂಬಾ ಸೊರಗಿಹೋಗಿದ್ದಾಳೆ, ಎಂದು ಹೇಳಿದಳು ವಿಮಲಾ. ಸರೋಜಮ್ಮ ನವರೂ ಅಳುತ್ತಲೇ ಆಕಾಶವೇ ಕಳಚಿಬಿದ್ದಂತೆ, ಫೋನಿನಲ್ಲಿ ಮಾತನಾಡಲೂ ಆಗದೇ, ಇರು........ ವಿಮಲಾ......ನಾನೇ ಆಸ್ಪತ್ರೆ ಬಳಿ ಆಟೋ ಹಿಡಿದು ಬರ್ತೀನಿ, ಇನ್ನು ಸುಜಾತಳು ಎಷ್ಟು ಹಿಂಸೆಪಡುವಳೋ......ಒಂದುಕಡೆ ಬಾಣಂತಿ ನೋವು, ಮತ್ತೊಂದು ಕಡೆ ತನ್ನ ಕರುಳ ಕುಡಿ ಕಳೆದುಕೊಂಡಿದ್ದು, ಎಲ್ಲದಕ್ಕೂ ಮೀರಿ ಅವಳ ಅತ್ತೆಯ ಬೈಗುಳ , ಯಾವುದನ್ನು ಸಹಿಸುವುದು....... ನೀನು ..... ಸ್ವಲ್ಪ, 

 

ನಾನು ಬರೋವರೆಗೂ ಅಕ್ಕನಿಗೆ ಧೈರ್ಯ ಹೇಳುತ್ತಿರು, ಎಂದು ಒಂದೇ ಉಸಿರಿಗೆ ತನ್ನೆಲ್ಲಾ ಮಾತುಗಳನ್ನು ಹೇಳಿ ಫೋನು ಆಫ್ ಮಾಡಿ , ಆಸ್ಪತ್ರೆಗೆ ಹೊರಡಲು ತಯಾರಾದರು  ಸರೋಜಮ್ಮ ನವರು.

    ಅಷ್ಟರಲ್ಲಿ ಶ್ಯಾಮಲಮ್ಮ ಹಾಗೂ ಅವರ ಪತಿ ರಂಗರಾಯರು ಆಗಲೇ ತಮ್ಮ ಕಾರಿನಲ್ಲಿ ಆಸ್ಪತ್ರೆ ಬಳಿ ಇದ್ದರು, ಆ ಸಮಯಕ್ಕೆ ಅವರ ಮುಂದೆಯೇ ಸರೋಜಮ್ಮ ನವರ  ಆಟೋ ಬಂದು ನಿಂತಿತು, ಅದರಿಂದ ಇಳಿದ ಸರೋಜಮ್ಮನವರು, ತಾವೇ ಮೊದಲು ತಮ್ಮ ಬೀಗರನ್ನು ಮಾತನಾಡಿಸಿದರು, ಶ್ಯಾಮಲಮ್ಮನವರೇ......ಈ ಬಾರಿಯೂ ಸುಜಾತಾಳು ತನ್ನ ಮಗು ಕಳಕೊಂಬಿಟ್ಳಂತೆ, ಏನು ಮಾಡುವುದು.... ಎಂದು ಅವರ  ಮುಂದೆ ಅಳುತ್ತಾ, ಇವರ  ಹೆಣ್ಣು ಹೆತ್ತ ವೇದನೆ ಎಂಥವರಿಗೂ ಮನಸ್ಸು ಕಲಕುವಂತಿತ್ತು,

       ಅವರನ್ನು ಸಮಾಧಾನ ಪಡಿಸುವವರೇ ಯಾರೂ ಇಲ್ಲ ಎನ್ನುವಂಥಾ ಸಮಯದಲ್ಲಿ ಅವರ ಬುಜದ ಮೇಲೆ ಯಾರೋ ಕೈಗಳನ್ನಿಟ್ಟಂತಾಯಿತು,  ಅಳುತ್ತಿದ್ದ ಕಣ್ಣುಗಳನ್ನು ತಮ್ಮ ಸೀರೆಯ ಸೆರಗಿನಿಂದ ಒರೆಸಿಕೊಳ್ಳುತ್ತಾ ಕತ್ತೆತ್ತಿ ನೋಡಿದರೆ, ಅವರ ಬೀಗರಾದ ಶ್ಯಾಮಲಮ್ಮನವರ ಕೈಗಳೇ ಅವು.

       ಮತ್ತಷ್ಟು ಭಯಗೊಂಡವರಂತೆ ಬೆಚ್ಚಿಬಿದ್ದ ಸರೋಜಮ್ಮ ನವರು ಅವರ ಮುಖವನ್ನು ನೋಡಿದರು, ಆಗ ಶ್ಯಾಮಲಮ್ಮನವರೇ

 

ಮಾತನಾಡಿದರು, ಏನೂ ಭಯಪಡಬೇಡಿ ಸರೋಜಮ್ಮ,  ಒಂದು ಹೆಣ್ಣಿನ ಕಷ್ಟ ಏನೆಂದು ನನಗೂ ಅರ್ಥವಾಗುತ್ತೆ, ನಾನೇನೂ ಅಷ್ಟೊಂದು ಕಟುಕಳಲ್ಲ, ನೀವಿನ್ನೂ ಆಸ್ಪತ್ರೆಯೊಳಕ್ಕೆ ಹೋಗಿಲ್ಲ, ನಾನು ನಮ್ಮ ಯಜಮಾನರು, ಇದುವರೆಗೂ ಸುಜಾತಾಳ ಜೊತೆಗೇ ಇದ್ದೆವು, ಅವಳಿಗೆ ಧೈರ್ಯ ಕೊಟ್ಟು, ನೀನೇನೂ ಭಯಪಡಬೇಡ, ನಾವೆಲ್ಲರೂ ನಿನ್ನ ಜೊತೆಗಿರುವೆವು, ನೀನು ಆರೋಗ್ಯವಾಗಿ ನಮ್ಮ ಮನೆಗೆ ಬಾ, ಎಂದು ಹೇಳಿ ಬಂದಿರುವೆ,  ನಾರಾಯಣ ಹಾಗೂ ವಿಮಲಾ ಅವಳ ಜೊತೆಗಿದ್ದಾರೆ, ಸುಜಾತಾಳು ಈ  ನಾಲ್ಕು ದಿನದಲ್ಲಿ ಚೇತರಿಸಿಕೊಳ್ತಾಳೆ ಅಂತ ವೈದ್ಯರು ಹೇಳಿದ್ದಾರೆ, ಅದೂ ಅಲ್ಲದೇ ಮೂರನೇ ಬಾರಿ ಅವಳ ಗರ್ಭ ನಿಲ್ಲುವಂತೆ ಏನೇನು ಔಷಧಿ, ಚಿಕಿತ್ಸೆಗೆ ಬೇಕೋ ಅದೆಲ್ಲವನ್ನೂ ಇದೇ ಆಸ್ಪತ್ರೆಯ ನುರಿತ ವೈದ್ಯರು ಮಾಡುವರು, ಮುಂದಿನ ಬಾರಿ ನನಗೆ ಸುಜಾತಾ ಳಿಂದ ಒಂದು ಗಂಡು ಮಗು ಖಂಡಿತಾ ದೊರೆಯುತ್ತದೆ, ಅದಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಮಾಡಲು ವೈದ್ಯರಲ್ಲಿ ಮಾತನಾಡಿರುವೆವು, ಮುಂದಿನ ತಿಂಗಳಿನಿಂದಲೇ ಚಿಕಿತ್ಸೆ ಪ್ರಾರಂಭ ಮಾಡುವೆವು,  ಎಂದು ಆಶ್ವಾಸನೆ ಕೊಟ್ಟಿದ್ದಾರೆ, ನೀವೂ ಸಹ ನೆಮ್ಮದಿಯಿಂದ ಇರಿ, ಈಗ ಹೋಗಿ ಸುಜಾತಾ ಳನ್ನು ನೋಡಿಕೊಂಡು ಬನ್ನಿ, ಹಾಗೇ ಬರುವಾಗ ನಮ್ಮ

 

ಮನೆಗೆ ಬಂದು ಹೋಗಿ ಎಂದು ಸರೋಜಮ್ಮನವರಿಗೆ ಬುಜ ತಡವಿ, ಅವರಿಗೆ ಧೈರ್ಯ ಹೇಳಿ ಹೊರಟರು.

      ಅಬ್ಬಾ.......ಸ್ವರ್ಗವೇ ಧರೆಗಿಳಿದು ಬಂದಂತಾಯಿತು ಸರೋಜಮ್ಮ ನವರಿಗೆ, ಇದುವರೆಗೂ ಬೀಗರಾದ ಶ್ಯಾಮಲಮ್ಮನವರನ್ನು ತುಂಬಾ ಒರಟು, ಎಂದು ಅವರನ್ನು ಶಪಿಸಿದ್ದುಂಟು, ಅದಾವ ದೇವರು ಬಂದು ಅವರ ಕಣ್ಣು ತೆರೆಸಿದನೋ ಆ ದೇವರೇ ಬಲ್ಲ.

    ಸರೋಜಮ್ಮ ನವರು ಆಸ್ಪತ್ರೆಯ ಸುಜಾತಾಳ ಕೊಠಡಿಗೆ ಹೋದರೆ , ಅಲ್ಲಿ ಆಗತಾನೆ ಸುಜಾತಾಳಿಗೆ ಲಸಿಕೆ , ಗ್ಲೂಕೋಸ್ ನೀಡಿ, ವಿಶ್ರಮಿಸಿ ಕೊಳ್ಳಲು ಮಲಗಿಸಿದ್ದರು, ಅಲ್ಲಿ ಅವರ ಅಳಿಯ ನಾರಾಯಣ, ಹಾಗು ಕೊನೆ ಮಗಳು ವಿಮಲಾ ಜೊತೆಗಿದ್ದರು , ಸರೋಜಮ್ಮನವರಿಗೆ  ಅಳಿಯ ನಾರಾಯಣನ  ಸಪ್ಪೆಮುಖ ನೋಡಿ ಮತ್ತಷ್ಟು ಅಳು ಬಂದಿತು, ಆದರೂ ಅವನೇ ತನ್ನ ಅತ್ತೆಯ ವರಿಗೆ ಧೈರ್ಯ ಹೇಳಿದನು, ಮತ್ತೂ ಮಾತನಾಡುತ್ತಾ ,  ಸರೋಜಳು ಅಮ್ಮ ಬಂದೊಡನೆ ಆ ಸ್ಥಿತಿಯಲ್ಲಿಯೂ  ಅವರ ಕ್ಷಮೆ ಕೇಳಲು, ಅಳುತ್ತಾ,  ಏಳಲು ಪ್ರಯತ್ನಪಟ್ಟಳು,ಈ ಸ್ಥಿತಿಯಲ್ಲಿ ಸುಜಾತಾಳ  ಸ್ಥಿತಿ ನೋಡಿ ಅಮ್ಮನ ಕರುಳು ಕಿತ್ತು ಬಂದಂತಾಗಿ, ಅವರ ಮನಸ್ಸು ಕರಗಿ, ಒಂದು ಹೆಣ್ಣಿನ ಮನಸ್ಸನ್ನು ಮತ್ತೊಂದು ಹೆಣ್ಣು ಅರ್ಥ

 

ಮಾಡಿಕೊಳ್ಳದಿದ್ದರೆ ನಾವು ಮನುಷ್ಯರಾ.....ಎಂದು ಹೇಳಿ, ಅವಳನ್ನು ಸಮಾಧಾನ ಪಡಿಸಿದರು, ಹಾಗೂ ಸುಜಾತಾಳಿಗೆ ಏಕೆ  ಸಮಯಕ್ಕೆ ಮುಂಚೆಯೇ ಈ ರೀತಿ ಆಗುತ್ತಿದೆ ಎಂದು ವೈದ್ಯರಲ್ಲಿ ವಿವರಣೆ ಕೇಳಿದರು, ಅವರು ಇರುವ ಸಮಸ್ಯೆಯ ಬಗ್ಗೆ ಸರಿಯಾಗಿ ವಿವರಿಸಿ, ಏನೇನೋ ಚಿಕಿತ್ಸೆ ಮಾಡಬೇಕಿದೆ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದಾರೆ. ನೀವೇನೂ ಇನ್ನು ಹೆದರುವಂಥಾದ್ದೇನೂ ಆಗುವುದಿಲ್ಲ, ಮುಂದಿನಬಾರಿ ಸುಜಾತಾ ಖಂಡಿತಾ ನಿಮ್ಮನ್ನು ಅಜ್ಜಿ ಮಾಡುವಳು ಎಂದು ಹೇಳಿದನು. 

    ಇದೆಲ್ಲವನ್ನೂ ನೋಡಿದ ಸರೋಜಮ್ಮ ನವರಿಗೆ, ಸುಜಾತಾಳಿಗೆ ತನ್ನ ಅತ್ತೆ ಶ್ಯಾಮಲಮ್ಮನವರ ಕಡೆಯಿಂದ  ಬಂದಂತಹ ಅಡೆಚಣೆಗಳೆಲ್ಲಾ ಹಿಮದಂತೆ ಕರಗಿ ಮುಂದೆ ಒಳ್ಳೆಯ ದಿನಗಳು ಬಂದವು.

 

-ರಾಜೇಂದ್ರ ಕುಮಾರ್ ಗುಬ್ಬಿ