Click here to Download MyLang App

ಡಿಯರ್ ಫ್ರೆಂಡ್ ಭಾಗ 1 - ಬರೆದವರು : ವಿಶ್ರುತ್ ಗೌಡ | ಸಾಮಾಜಿಕ |ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

Based on the true story  
Welcome to my life story

ನಮಸ್ಕಾರ…
 ಇದು ನಂದೇ ಕಥೆ, ಎಲ್ಲೂ ನೋಡಿದ್ದಲ್ಲ, ಎಲ್ಲೋ ಕೇಳಿದ್ದು ಅಲ್ಲ, ನನ್ನದೇ ಸ್ವಂತ ಕಥೆ. ಹೊಸ ಕಥೆ ಅಂತೆಲ್ಲ ಕಥೆ ಹೊಡಿಯಲ್ಲ, ಕೊಂಚ ಭಿನ್ನ ಅಂತ ನಾನೇ ಹೇಳ್ಕೊಳೋದು ಅಷ್ಟ್ ಚನಾಗಿರಲ್ಲ, ಓದಿದ್ಮೇಲೆ ಏನ್ ಅನ್ಸುತ್ತೆ ನೀವೇ ಹೇಳಿ…
 ಕಣ್ಣಲ್ಲಿ ಸೆರೆಯಾಗಿ, ಮನದಲ್ಲೆ ಮನೆ ಮಾಡಿದ್ದ, ಖುಷಿ, ನಗು, ಅಳು ಎಲ್ಲವನ್ನು ರಾಶಿ ರಾಶಿ ಕೊಟ್ಟ ನೆನಪುಗಳು, ಇದೇ ಮೊದಲಸಲ ಪದಗಳ ರೂಪ ಪಡಿತಿದೆ… ಹೊಸ ಪ್ರಯತ್ನ ತಪ್ಪಿದ್ರೆ ಹೊಟ್ಟೆಗ್ ಹಾಕೊಂಡು, ತಿದ್ದಿ, ಅಪ್ಪಿ-ತಪ್ಪಿ ಒದ್ತ ಒದ್ತ ನಿದ್ದೆ ಬಂದ್ರೆ, ಕ್ಷಮಿಸ್ಬಿಡಿ…
 ಕಾಲಘಟ್ಟ ೧೯೯೮, ಏಪ್ರಿಲ್ ೧, ತುಮಕೂರು, ಹೌದು, world fool’s day ದಿನ ಈ fool ಹುಟ್ಟಿದ್ದು. ನಂಗ್ ಈಗ್ಲೂ ಒಂದ್ doubt ಇದೆ, ನನ್ birthday ಪ್ರಯುಕ್ತ ಆ ದಿನ fool’s day celebrate ಮಾಡ್ತರ, ಅಥವಾ ಆ ದಿನ ಹುಟ್ಟಿದ್ದಕ್ಕೆ ನಾನ್ ಹಿಂಗ್ ಇದಿನಾ ಅಂತ. ಆಗ ನಮ್ಮಪ್ಪ ಹಾಸನದಲ್ಲಿ ಇದ್ರಂತೆ, ತಮಾಷೆ ಏನಪ್ಪ ಅಂದ್ರೆ ನಾನ್ ಹುಟ್ಟಿದ್ ವಿಷ್ಯ ಹೇಳ್ದಾಗ ನಮ್ಮಪ್ಪ ನಂಬ್ತನೆ ಇರ್ಲಿಲ್ವಂತೆ, “ಎಲ್ಲ ಸೇರ್ಕೊಂಡು ನಂಗೆ April fool ಮಾಡ್ತಿದಿರಾ?” ಅಂತ ಕೇಳಿದ್ರಂತೆ...!!
 ಮತ್ತೆ, ನಾನ್ puc ಒದ್ತ ಮೂಡುಬಿದ್ರೆಲಿ ಇದ್ದಾಗ, ಇದೇ April ಅಲ್ಲಿ, warden ಬಂದು “ನಿಮ್ fatherಗೆ ಹುಷಾರಿಲ್ವಂತೆ ಈಗ್ಲೆ ಊರಿಗೆ ಹೊರಡು” ಅಂದಾಗ, ನನ್ ಮನಸ್ಸು ನಂಬ್ಲಿಲ್ಲ, “ದೇವ್ರೆ... ಇದು April fool ಅಗಿರ್ಲಪ್ಪ” ಅಂತಿತ್ತು. ಅವತ್ತೆ ನಾನ್ ಕೊನೆ ಸಾರಿ ಅತ್ತಿದ್ದು. ಅವತ್ತು ನಾನು ಅಪ್ಪನ್ನ ಅಷ್ಟೆ ಅಲ್ಲ, ಒಬ್ಬ best friendನು ಕಳ್ಕೊಂಡೆ. Yes, my father was my best friend. ಬಿಡಿ ಕೆಲವು ನೆನಪು ಮಾಸಲ್ಲ…
 ಅಂದ್ಹಾಗೆ, ನಮ್ ಅಪ್ಪ-ಅಮ್ಮ ಇಬ್ರು ಚನ್ನರಾಯಪಟ್ಟಣದಲ್ಲಿ government employees, ಅಪ್ಪ – health dept. ಅಲ್ಲಿ opthmologist ಆಗಿದ್ರು, ಆದ್ರೆ ಮನೆಗ್ ಬಂದ ತಕ್ಷಣ cartoonist ಆಗ್ತಿದ್ರು, ಅವ್ರ್ಗೆ cartoons ಅಂದ್ರೆ ಪ್ರಾಣ, ನನ್ನ ಬಿಟ್ರೆ ಅದೇ ಅವ್ರ್ ಪ್ರಪಂಚ… ಇನ್ನ mother india – court ಅಲ್ಲಿ CMO - chief ministerial officer, ಮನೇಲು CMOನೆ ಅಂದ್ರೆ – cartoon mocking officer ಅಂತ, ಎಲ್ರುನ್ನ ಅಣಕ ಮಾಡಿ ಚಿತ್ರ ಬರಿಯದು ಅಪ್ಪನ್ ಕೆಲ್ಸ, ಅಪ್ಪ town ಗೆ ಹೋದ್ಮೆಲೆ, ಆ ಅಣಕನ ಅಣಕ ಮಾಡದು ಅಮ್ಮನ್ ಕೆಲ್ಸ, “ಕೋಳಿ ಗೀಚೋ ತರ ಗೀಚದು ಒಂದ್ drawingಅ? ನೋಡು-ನೋಡು, ಚೊಟ್ಟ್ ಮೂಗು, ಆನೆ ಕಿವಿ same ನಿಮ್ಮ್ ಅಪ್ಪನ್ ಥರನೆ ಇದೆ”, but ಈ ಸರಿ ಆ paper ಮೇಲಿರೊ ಚೊಟ್ಟ್ ಮೂಗ್ cartoonu ನನ್ನ್ ಮಗಂದೆ ಅಂತ ನಮ್ ಅಮ್ಮಂಗ್ ಅರ್ಥ ಆಗೋಕೆ ತುಂಬ time ಏನ್ ತಗೋಳಿಲ್ಲ ಬಿಡಿ, ನಂಗು background ಅಲ್ಲಿ ಎಲ್ಲೊ, ಯಾರೋ “ಲೋ, cartoon ಮುಖದವ್ನೆ!!” ಅಂತ ಕರೆದಿದ್ ನೆನಪ್ ಅಯ್ತು, ಬಡ್ಡೆತವು ಇವ್ರಗೆಲ್ಲ ನಮ್ ಅಪ್ಪನತ್ರ ಕಣ್ಣ್ check ಮಾಡ್ಸ್ಬೇಕು, finally what I am trying to say is…… so ನಾನ್ ಬೆಳದ್ದಿದ್ದೆಲ್ಲ ಚನ್ನರಾಯಪಟ್ಟಣದಲ್ಲೆ…
ಈಗ ನಿಮಿಗೊಂದು important ವಿಷಯ ಹೇಳ್ಬೇಕು, ತುಂಬ important, ಚಿಕ್ಕ ವಯಸ್ಸಿಂದ ನಂಗೆ ಇರೋದು ಎರಡೆ ಗುರಿ, ಒಂದು ಕಲಾವಿದ ಆಗ್ಬೇಕು, ಇನ್ನೊಂದು ಮದ್ವೆ ಅಂತೇನಾದ್ರು ಆದ್ರೆ, love marraigeeeee ಆಗ್ಬೇಕು. ಮೊದಲನೆ ಗುರಿ okay, ಆದ್ರೆ ಎರಡನೆದು ಸ್ಡಲ್ಪ ವಿಚಿತ್ರ ಅನಿಸಿರುತ್ತೆ ಅಲ? ಹು, ಕೆಲವರಿಗೆ love marriage ಅನ್ನೋದು ಆಸೆ ಆದ್ರೆ, ನಂಗ್ ಮಾತ್ರ ಅದು ಗುರಿ.
ಇನ್ನೊಂದ್ shocking news ಹೇಳ್ಲಾ, ಈ ವಿಚಿತ್ರ ಗುರಿ ಹಿಂದೆ ಇರೊ ಗುರು ಬೇರೆ ಯಾರು ಅಲ್ಲ, ನನ್ನ ಇನ್ನೊಂದು best friend ನಮ್ mother india - ಹೆಸ್ರು ಪದ್ಮ ಅಂತ ಅಲಿಯಾಸ್ ಕೆಂಪುಕುಮಾರಿ. ನಾನ್ ನಿಜ April fool ಮಾಡ್ತಿಲ್ಲ, ನೀವ್ ನಂಬಲೆ ಬೇಕು. “ನೀನ್ love marriage ಆದ್ರೆ ನಂಗೇನು problem ಇಲ್ಲ ಮಗನೆ” ಅನ್ನೋ dialogue ಕೇಳಿರ್ತಿರ, ಆದ್ರೆ “ಮುಚ್ಕೊಂಡ್ love marriageeee ಆಗ್ಬೇಕು” ಅನ್ನೋ dialogue ಕೇಳಿದಿರ?? ಇಲ್ಲ ಅಲ? ನಾನ್ ದಿನ ಕೇಳ್ತಿನಿ ಕಣ್ರೀ. ಇದರ ಹಿಂದೆನು ಒಂದ್ important reason ಇದೆ ಅದನ್ನ ಮುಂದೆ ಎಲ್ಲಾದ್ರು detail ಆಗಿ ಹೇಳ್ತಿನಿ. ನಾನೆಂಥ ಅದೃಷ್ಠವಂತ ಅಂತ ಅನ್ಕೊತಿದಿರ ಅಲ್ವಾ? ಸ್ವಲ್ಪ ತಡೀರಿ actual ಕಥೆ ಇನ್ನು ಶುರು ಆಗಿಲ್ಲ. ಹ, ಈ love ವಿಷ್ಯದಲ್ಲಿ ದೇವತೆ ಥರ ಇರೊ ನಮ್ಮಮ್ಮ, ಅದೇ ನಾನ್ actor ಆಗ್ತಿನಿ ಅಂದ್ರೆ ಮಾತ್ರ, ಮೈಮೇಲೆ ದೇವ್ರ್ ಬಂದವ್ರ ಥರ ಆಡುತ್ತೆ.
ಮೊದಲೆ ನಾವ್ ಹುಡುಗ್ರು ಬೇಲಿ ಹಾರಿ ಹುಲ್ಲು ಮೇಯೊ ಜಾತಿ, ಇನ್ನ ಬೇಲಿನೇ ಇಲ್ಲ ಅಂದ್ರೆ ಕೇಳ್ಬೇಕಾ! ಊರೆಲ್ಲ ಮೇಯ್ತಿವಿ. ಇನ್ನಾ ಈ rangeಗೆ permission ಸಿಕ್ಕಿದ್ಮೇಲೆ ಯಾರ್ ತಾನೆ ಸುಮ್ನಿರ್ತರೆ ಅಲ್ವಾ? ಹು, ನಾನು ಸುಮ್ನಿರ್ಲಿಲ್ಲ, ನನ್ love adventure ಶುರು ಆದಾಗ school uniform ಅಲ್ಲಿ ಇನ್ನು ಚಡ್ಡಿ ಹಾಕೋತಿದ್ವಿ… ನಂಗ್ ಆವಾಗ ʼdʼ ಮತ್ತೆ ʼbʼ ಇವೆರಡರಲ್ಲಿ d ಯಾವ್ದು, b ಯಾವ್ದು ಅಂತನೆ confuse ಅಗ್ತಿತ್ತು… ಇನ್ನ ಆಗ love ಅನ್ನದ್ ನೆನಸ್ಕೊಂಡ್ರೆ ಇವಾಗ ನಗು ಬರುತ್ತೆ…
ಇಷ್ಟೆಲ್ಲ ಕೇಳಿದ್ಮೇಲೆ, ನಿಮ್ ಪ್ರಕಾರ ಇದುವರೆಗೆ minimum ಅಂದ್ರು ನಂಗೊಂದು 2 love story, back ಅಲ್ಲಿ 2 breakup, ಆದ್ರು ಆಗಿರುತ್ತೆ ಅನ್ಕೊಂಡಿರ್ತಿರ ಅಲ್ವಾ? ಹುಹು, missಆಗಿ ಕೂಡ ಆ ಥರ imagination ಮಾಡ್ಕೊಬೇಡಿ… ನನ್ ಯೋಗ್ಯತೆಗೆ love story ಅಲ್ಲ, ಇದುವರೆಗು ಒಂದ್ ಹುಡ್ಗಿಗು propose ಕೂಡ ಮಾಡಿಲ್ಲ. ಇದುಕ್ಕು ಒಬ್ಬ best friend ಎ ಕಾರಣ, ನನ್ ಚಡ್ಡಿ ದೋಸ್ತ್ ಯಶಸ್ ಅಲಿಯಾಸ್ ಕ್ವಾಣ ಅಂತ. ಅದೇನೊ ಗಾದೆ ಇದ್ಯಲ್ಲ ʼದೇವ್ರು ಕೊಟ್ರು ಬಡ್ಡಿಮಗ ಪೂಜಾರಿ ಕೊಡ್ಲಿಲ್ಲʼ ಅಂತ ಆ ಪೂಜಾರಿ ಇವ್ನೆ.  ಆದ್ಯಾಕೊ ಗೊತ್ತಿಲ್ಲ ಚಡ್ಡಿ ಹಾಕ್ತಿದ್ದ ವಯಸ್ಸಿಂದನು ಇವ್ನ ಮಾತ್ ಯಾವತ್ತು ಮೀರಿಲ್ಲ… ಬಡ್ಡಿಮಗ ಅವ್ನು ಒಂದು condition ಹಾಕಿದ್ದ – ಯಾವ್ದೇ ಹುಡುಗಿ ಇಷ್ಟ ಆದ್ರು ತಕ್ಷಣ propose ಮಾಡ್ಬಾರ್ದು, minimum ಒಂದೆರಡ್ ವರ್ಷ ಕಾದು, ಆಮೇಲ್ propose ಮಾಡ್ಬೋದು. uff, ಅವ್ನ್ ಈ condition ಹಾಕಿದ್ದು, ಆ ಚಡ್ಡಿ ಹಾಕಿದ್ ವಯಸ್ಸಲ್ಲೆ…
ಈ ಹಾಳ್ condition ಮಹಿಮೆಯಿಂದ ಆಗಿದ್ ಎಡವಟ್ಟು ಒಂದೆರಡ್ ಅಲ್ಲ ಕಣ್ರೀ, ಬರೀ ಎಡವಟ್ಟೆ. ಆದ್ರು, ಆ conditionನ ಮಹತ್ವ ಅರ್ಥ ಆಗೋಕೆ ಬರೋಬ್ಬರಿ 10 ವರ್ಷ time ತಗೊಳ್ತು!!! ಅರ್ಥ ಆದ್ಮೆಲೇ, ಅನ್ಸಿದ್ದು ಒಂದೆ, ನಮ್ ಕ್ವಾಣ ಯಶಸ್ ಗೆ ಅವಾಗ್ಲೆ ಇಷ್ಟೊಂದ್ ತಲೆ ಎಲ್ಲಿತ್ತು ಅಂತ, ಅವ್ನು ಆಗ್ಲೆ my autograph movieಗೆ ದೊಡ್ಡು fan, ಅದ್ರು effect ಇರ್ಬೋದೇನೊ… ಯಾರಿಗೊತ್ತು?
Flashback ಅಲ್ಲಿ ಆಗಿದ್ ಎಡವಟ್ಟೆಲ್ಲ ಈಗ ಯಾಕೆ ಗುರು ಅಂತೀರ, ಚಿಕ್ಕ-ಪುಟ್ಟ ಉಪಕಥೆಗಳು ಅಷ್ಟೆ ಒಂದ್ಸರಿ ಕೇಳ್ ನೋಡಿ. Flashback ಅಲ್ಲಿ ಆಗಿದ್ ಎಡವಟ್ಟನ್ನೆಲ್ಲ present ಅಲ್ಲಿ ನೆನಪು ಮಾಡ್ಕೊಂಡಾಗ ಒಂಥರ ಮಜವಾಗಿರುತ್ತೆ ಗುರು. ಅದೇನೊ nostalgia ಅಂತರಲ್ಲ ಹಾಗೆ…
--------------------------------೧--------------------------
ಆಗ ನಾನು 3ನೇ class ಅಲ್ಲೇನೊ ಇದ್ದೆ ಅನ್ಸುತ್ತೆ. ನಮ್ಮಪ್ಪ ಅಮ್ಮ ಇಬ್ರು ಕೆಲಸ ಮುಗುಸ್ಕೊಂಡು ಬರೋದು late ಆಗ್ತಿತ್ತು, ಅವ್ರಿಬ್ರು ಬರೋವರಗು ನಮ್ ಊಟ-ಪಾಠ-ಆಟ ಎಲ್ಲ ನಮ್ಮನೆ ಹಿಂದೆ ಇದ್ದ ಸುಮ aunty ಮನೇಲೆ. ನಾನ್ ನಮ್ಮನೇಲಿ ಇದ್ದಿದ್ಕಿಂತ, ಅವ್ರ್ ಮನೇಲೆ ಜಾಸ್ತಿ ಇರ್ತಿದಿದ್ದು, ಅವರು ಅಷ್ಟು ಚನಾಗ್ ನೋಡ್ಕೊತಿದ್ರು ನನ್ನ, ಬರೀ ಅದೊಂದೆ ಕಾರಣ ಅಲ್ಲ, ನಾನ್ ಅಲ್ಲೆ ಜಾಸ್ತಿ ಇರ್ತಿದ್ದಕ್ಕೆ ಇನ್ನೊಂದ್ ಕಾರಣನು ಇತ್ತು, ಅವರಿಗೆ ಒಬ್ಳು ಮಗಳಿದ್ಲು… yesss, ಹೀಗೆ ಶುರು ಆಗಿದ್ದು ನಮ್ ಮೊದಲ್ನೆ ಎಡವಟ್ಟು, ಆ ಮೊದಲ್ನೆ ಎಡವಟ್ಟಿನ ಹೆಸರು, ಅಲ್ಲ ಅಲ್ಲ ಮೊದಲ್ನೆ crush ಹೆಸ್ರು, ನಿಶ್ಚಿತ aka ನಿಶ್ಚಿ.
ಆ ವಯಸ್ಸಲ್ಲಿ ಯಾರನ್ನ? ಯಾತಕ್ಕೆ? ಇಷ್ಟ ಪಡ್ತಿವಿ ಅಂತ ಯಾವನಿಗ್ ಗೊತ್ತಿರುತ್ತೆ ಅಲ್ವಾ? ನಂಗು ಗೊತ್ತಿರ್ಲಿಲ್ಲ, ಗೊತ್ತಿದ್ದಿದ್ದು ಒಂದೆ ಪಿಳ ಪಿಳ ಅಂತ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾಯಿರದು… ಇವತ್ತಿಗು ಅಷ್ಟೆ ಗೊತ್ತಿರದು!! ಆಡಿದ ಮಾತುಗಳು ಯಾವ್ದು ನೆನಪಿಲ್ಲ ಅಂದ್ರು ಎಡವಟ್ಟಗಳು ಒಂದಿಷ್ಟು ನೆನಪಿದೆ ಕೇಳಿ-
Actually, ಅವ್ಳೇ ಬೇರೆ school, ನಾನೇ ಬೇರೆ school, ಆದ್ರೆ school ಮುಗುಸ್ಕೊಂಡು ಮನೆಗೆ ಬಂದ್ ತಕ್ಷಣ - ಅವ್ಳು teacher, ನಾನು ಅವ್ಳ್ studentu. ಪಾಪ ನಮ್ teacher ಗೆ ಬಳಪ ಅಂದ್ರೆ ತುಂಬ ಇಷ್ಟ, ತಿದ್ದಕ್ಕೆ ಅನ್ಕೊಂಡ್ರ ಅಲ್ಲ ಅಲ್ಲ ತಿನ್ನಕ್ಕೆ!!! ಹು…  ಎಲ್ಲ ಮಕ್ಕಳು chocolate ಬೇಕು ಅಂತ ಹಠ ಮಾಡಿದ್ರೆ, ಇದು ನಂಗೆ chalk piece ಬೇಕು ಅಂತ ಹಠ ಮಾಡ್ತಿತ್ತು. ಪಾಪ, buy one - get one free ಅನ್ನೊಥರ chalk piece ತಿಂದಾಗೆಲ್ಲ, ಅವ್ರ್ ಅಮ್ಮನ ಕೈಲಿ ಒದೆನು free ಆಗೆ ತಿಂತಿದ್ಲು. ಅವ್ಳು ಅವಾಗ ಅಳದನ್ನ ನೋಡಿದ್ರೆ ನಂಗು ಅಳು ಬರ್ತಿತ್ತು. ನಾನು ಅವ್ಳಿಗೋಸ್ಕರ ದಿನಾ ಸ್ಕೂಲ್ ಯಿಂದ ಒಂದೊಂದೆ ಬಳಪ ಕದ್ಕೊಂಡು ಬರ್ತಿದ್ದೆ – ಈಗ ಆಗಿದ್ರೆ ನನ್ನ chalk piece peddler ಅಂತ ಕರಿಬೋದಿತ್ತು.
ಹೆಂಗೊ ಕದ್ದು-ಮುಚ್ಚಿ chalk piece supply ಮಾಡ್ಕೊಂಡು, ತಿನ್ನುಸ್ಕೊಂಡು ಇದ್ದೆ, ಒಂದ್ಸರಿ ಏನ್ ಆಯ್ತು ಗೊತ್ತ? schoolಯಿಂದ ಬಂದ ತಕ್ಷಣ ಸನ್ನೆ ಮಾಡಿ “chalk piece ಎಲ್ಲೊ?” ಅಂತ ಕೇಳಿದ್ಲು. ನಾನು super mario game ಆಡ್ಕೊಂಡು “ಒಳಗ್ ಎಲ್ಲೊ ಬಚ್ಚಿಟ್ಟಿದಿನಿ ನೋಡೋಗೆ” ಅಂತ ಸನ್ನೆ ಮಾಡಿ ಹೇಳ್ದೆ. ನಾ ತಂದಿದ್ದೆ ಬೇರೆ color ಬಳಪ, ಅವ್ಳ್ ಮೂತಿ ಮೇಲೆ ಇದ್ದಿದ್ದ್ ಬಳಪದ colorಎ ಬೇರೆ, ಎಲ್ಲೊ miss ಹೊಡಿತಾಯ್ತಲ ಅಂತ ನೋಡಿದ್ರೆ. ಆ ಬಡ್ಡೆತದಕ್ಕೆ ಅದೇನ್ urgent ಇತ್ತೊ. ಪೆದ್ದ್ ಮುಂಡೆದು chalk piece ಅನ್ಕೊಂಡು ಅಲ್ಲಿಟ್ಟಿದ್ ಜಿರ್ಲೆ ಹೋಡ್ಸಕ್ಕೆ ತಂದಿದ್ದ್ ಲಕ್ಷ್ಮಣ ರೇಖೆನ ತಿಂದ್ಬಿಟ್ಟಿದ್ಲು. ಉಫ್!! ಎಲ್ಲ ಬಾಯಿಗ್ ಬಂದಿತ್ತು. ವಿಷ್ಯ ಗೊತ್ತಾಗಿ, ಅವ್ರ್ fire engine daddy, siren on ಮಾಡ್ಕೊಂಡ್ ಓಡೋಡ್ ಬಂದು ವಾಂತಿ ಮಾಡ್ಸಿ, ಔಷಧಿ ಕುಡ್ಸಿ ಬಳಪಕ್ಕು, ಲಕ್ಷ್ಮಣ ರೇಖೆಗು ವ್ಯತ್ಯಾಸ ಹೇಳ್ಕೊಟ್ಟಿದ್ ಆಯ್ತು. ಒದೆ ಬೀಳದು ಒಂದು just ಅಲ್ಲಿ miss ಆಯ್ತು.
ಆಡತ-ಕುಣಿತ ಎರಡು ವರ್ಷ ಕಳಿತು, ಆ condition ಕೂಡ ನೆಗದು ಬಿದ್ದಿತ್ತು… ಯಾವ್ದೊ picture effectu, Homework ಬರಿಯೋಕೆ ಅಂತ ಇದ್ದಿದ್ copy writing book ಅಲ್ಲಿ, love letter ಬರೀಬೇಕು ಅಂತ fix ಆದೆ. ಏನ್ ಬರೀಬೇಕು ಅಂತ ತುಂಬಾ ತಲೆ, ತಳ ಕೆಡುಸ್ಕೊಂಡು, ಅಪ್ಸರ pencil sharp ಮಾಡ್ಕೊಂಡು ಶುರು ಮಾಡ್ದೆ– “my bear nischitha………” ಹೇಳಿದ್ನಲ್ಲ d, b ಗೆ ವ್ಯತ್ಯಾಸ ಗೊತ್ತಿರ್ಲಿಲ್ಲ ಅಂತ. ಹಂಗೊ ಹಿಂಗೊ page ತುಂಬ್ಸಿ ಚಡ್ಡಿ ಜೇಬು ತುಂಬ ಬಳಪ ತುಂಬುಸ್ಕೊಂಡು, shirt ಜೇಬಲ್ಲಿ ನಮ್ಮ ಮೊದಲ ಪ್ರೇಮ ಪತ್ರ ಇಟ್ಕೊಂಡು ಬಾಗ್ಲತ್ರ ಹೋದೆ. What a timing ಅಂತಿರ ಸುಮ aunty ಆರತಿ ತಟ್ಟೆ ಇಟ್ಕೊಂಡು, “ವಿಶ್ರುತ್ ಅಣ್ಣಂಗೆ ರಾಖಿ ಕಟ್ಟು ಬಾ ನಿಶ್ಚಿ” ಅಂತ slow motion ಅಲ್ಲಿ ಕೂಗುದ್ರು, ವಾಪಸ್ ತಿರಿಕೊಂಡು ಓಡೋಗಕ್ಕು ಅಗ್ಲಿಲ್ಲ, ತಗ್ಲಾಕೊಂಡೆ… ಮೊನ್ನ್ ಮೊನ್ನೆ ಇನ್ನು ಆಟದ್ ಅಡಿಗೆ ಸಾಮಾನ್ ಇಟ್ಕೊಂಡು ಅಪ್ಪ-ಅಮ್ಮ ಆಟ ಆಡಿದ್ವಿ, ಅನ್ಯಾಯವಾಗಿ ನಂಗೆ ತಂಗಿನ ಮಾಡ್ಬಿಟ್ರು. ಸುಮ aunty ಯಾವಾಗ್ಲು ಹೇಳೋರು, “ವಿಶ್ರುತ್ ನನ್ ಮಗನ್ ಥರ, ನನ್ ಸ್ವಂತ ಮಗನ್ ಥರ” ಅಂತ, ಅವ್ರ್ ಹಾಗ್ ಅಂದಾಗೆಲ್ಲ ಒಳ್ಗ್ ಯಾವ್ದೊ ಜಾಗದಲ್ಲಿ ಸಖತ್ ಖುಷಿ ಆಗದು, ಅವತ್ತು ಅವ್ರ್ ಅದುನ್ನೆ ಹೇಳಿದ್ರು, ಆದ್ರ್ ಯಾಕೋ ಅವತ್ ಖುಷಿ ಆಗ್ಲಿಲ್ಲ… ಸರಿ ಇನ್ನೇನ್ ಮಾಡದು, ಸಪ್ಪೆ ಮೋರೆ ಹಾಕೊಂಡು, ಜೇಬಲಿದ್ದ chalk pieceನೆಲ್ಲ ಕ್ವಾಣನ ಬಾಯಿಗೆ ತುರ್ಕಣ ಅಂತ ಹೊರಟೆ. ಇಷ್ಟ್ ಸಾಲ್ದು ಅಂತ, ಆ ವಾರದಲ್ಲೆ ಅವ್ರ್ fire engine daddyಗೆ transfer ಆಯ್ತು, ಮನೆ ಖಾಲಿ ಮಾಡ್ಕೊಂಡು ಹೋದ್ರು…
    ನಾನ್ last time ನಮ್ ತಂಗ್ಯಮ್ಮನ್ ನೋಡ್ದಾಗ child marriage ಆಗಿ, ಅವ್ಳ್ child ಗೆ chalk piece ತಿಂತಿಯ ಅಂತ ಬಾಯ್ ಮೇಲೆ ಹೊಡಿತಿದ್ಲು.