Click here to Download MyLang App

ಸ್ವಭಾವ - ಬರೆದವರು : ಮಹೇಶ್ ಎಸ್ ಸಂಕಣ್ಣವರ್ | ಸಾಮಾಜಿಕ

ಅದು ಮುಂಜಾನೆ ಸುಮಾರು ಹತ್ತರ ಸಮಯ.ನಾನು ದೇವರ ಪೂಜೆ ಮಾಡತಾ ನಿಂತಿದ್ದೆ.ಹೊರಗಿನಿಂದ ಒಂದು ಶಬ್ದ ಕೇಳಿತು.
"ಸಾವಕಾರ್ರ...."ಅಂತ.ನನಗೆ ಗೊತ್ತಾಯಿತು ಅದು ಕೇರಿಯ ಕುಂಟ ರಾಮಣ್ಣನ ಧ್ವನಿನೆ ಅಂತ.ನಾನು ಹೊರಗೆ ಬಂದು"ಅಪ್ಪಾರಿಲ್ಲರಿ ರಾಮಣ್ಣಾರ ಹೊರಗೋಗ್ಯಾರ"ಅಂದೆ.

ಆತ ನಗುತ್ತ"ಒಂದ ರೊಟ್ಟಿದ್ದರ ಕೊಡರಿ?"ಯಂದ.ಅವನು ದಲಿತ ಜನಾಂಗದ ಒಂದು ಹಳೆ ತಲೆಮಾರಿನ ಮನುಷ್ಯ. ಅವನು ತನ್ನ ಜೀವನಪೂರ್ತಿ ನಮ್ಮ ಮನೆಯಲ್ಲಿ ಸೆಗಣಿ ಬಾಚಗೊಂಡಿದ್ದ‌. ಅವನ ಮೇಲೆ ಮನೆಯವರಿಗೆಲ್ಲ ದಂದಕಿ ಪಡಸಾಲಿ ಆಚೆಯ ಅಕ್ಕರೆ ಮಮತೆ,ಪ್ರೀತಿ ಇತ್ತು.

ನಾನೋಗಿ ಎರಡು ಕಟಗ ರೊಟ್ಟಿ, ಹೆಸರ ಕಾಳ ಪಲ್ಲೆ ತಂದಕೊಟ್ಟೆ.ಆತ ಮತ್ತೊಮ್ಮೆ ನಕ್ಕು"ಇಲ್ಲೆ ತಿಂತಿನಿ ಸಾವಕಾರ"ಯಂದ.ನಾನು ಗೋಣಳ್ಳಾಡಿಸಿ ಒಳಗಡೆ ಹೋದೆ.

ಸುಮಾರು ಹೊತ್ತಾದ ಮೇಲೆ ಮತ್ತೊಮ್ಮೆ ನನ್ನ ಆತ ಕೂಗಿ ಕರೆದು"ಸಾವಕಾರ ನೀರ ಹಾಕರಿ"ಯಂದ.ನಾನು ಆತನ ಕೈಗೆ ಲೋಟ ಕೊಡಲು ಹೋದೆ.ಆತ ಅದಕ್ಕೆ ಭಯಪಟ್ಟು"ಬ್ಯಾಡ ಸಾವಕಾರ ಎತ್ತರಿಸಿ ಹಾಕು"ಯಂದ.ನನಗೆ ತುಂಬಾನೆ ಇರಿಸು ಮುರಿಸು ಉಂಟಾಯಿತು.ಆತ ಮತ್ತೊಮ್ಮೆ ಸಾವಕಾರ"ನೀರು....,"ಯಂದ.ನಾನು ವಾಸ್ತವ ಜಗತ್ತಿಗೆ ಬಂದು ಎತ್ತರಿಸಿ ನೀರು ಹಾಕಿದೆ. ಆತ ಬೊಗಸೆಯಲ್ಲಿ ನೀರು ಕುಡಿದು ಎಲಿ ಅಡಿಕಿ ಚೀಲ ತೆಗೆದ.

ರಾಮಣ್ಣನ ಮಗ ಶಿವರಾಜ್ ಮತ್ತು ನಾನು ಒಂದೆ ವಾರಿಗೆಯವರು.ಅವನು ನಾನೋದುತಿದ್ದ ಕಾಲೇಜಲ್ಲೆ ಓದುತಿದ್ದ.ನನಗಿಂತ ಅವನು ತುಂಬಾ ಜಾಣನೂ ಆಗಿದ್ದ.ಅವನಿಗೂ ನನಗೂ ಸುಮಾರಾಗೆ ಒಂದು ಮಟ್ಟಿಗೆ ಸ್ನೇಹವಿತ್ತು.ಅವನುಯಂದು ನನ್ನ ಮುಂದೆ ಆಗಲಿ ಬೇರೆಯವರ ಮುಂದೆ ಆಗಲಿ ತಾನೊಬ್ಬ ಶೋಷಿತ ವರ್ಗದವನೆಂದು ತೋರಿಸಿಕೊಳ್ಳುತ್ತಿರಲಿಲ್ಲ.ಅವನು ತುಂಬಾ ಸ್ವಾಭಿಮಾನಿಯಂತೆ ವರ್ತಿಸುತ್ತಿದ್ದ.

ಎಲಿ ಅಡಿಕಿ ಜಗಿದು ತನ್ನ ಮನೆಗೆ ಹೊರಡಲು ತಯಾರಾದ ರಂಗಣ್ಣ ನನ್ನ ಹತ್ತಿರ ಕರೆದು"ಇದನ್ನ ನಮ್ಮ ಶಿವ್ಯಾಗ ಹೇಳಬೇಡ ಅವಂಗ ಬಾಳ ಸೊಕ್ಕು"ಯಂದ.

ನಾನು ಸುಮ್ಮನೆ ನಕ್ಕೆ.ಜಾತಿಯ ಆಧಾರದ ಮೇಲೆ ನಡೆದ ಈ ಘಟನೆಯು ನನಗೆ ಮಾನವ ಸ್ವಭಾವವನ್ನ, ಸಂಕೀರ್ಣ ಜಾತಿ ವ್ಯವಸ್ಥೆಯ ನಾನಾ ಮುಖಗಳನ್ನ ತೆರೆದಿಟ್ಟಿತು.

ನಾನು ಸುಮ್ಮನೆ ರಾಮಣ್ಣನನ್ನ ನೋಡಿದೆ ಅವನು ಕುಂಟುತ್ತ ನಡೆಯುತ್ತಿದ್ದ.ಅವನಿಂದೆ ನೆನಪಾದ ರವಿ ಕಲ್ಪನೆಯಲ್ಲಿ ರಾಜಕುಮಾರನಂತೆ ಗಂಭೀರವಾಗಿ ನಡೆಯುವ ಹಾಗೆ ಭಾಸವಾಗಿ ವಿಸ್ಮಿತನಾದೆ.