Click here to Download MyLang App

ಸಾಧು - ಬರೆದವರು : ಕಲ್ಪನಾ ಅರುಣ್ | ಮಕ್ಕಳ ಕತೆಒಂದೂರಿನಲ್ಲಿ ದೊಡ್ಡ ಆಲದ ಮರವಿತ್ತು. ಅದರ ಕೆಳಗೆ ಕಟ್ಟೆ ಕಟ್ಟಿದ್ದರು. ಹಾಗಾಗಿ ಆ ಊರಿನ ಜನ ಬಿಡುವಿನ ವೇಳೆಯಲ್ಲಿ ಅಲ್ಲಿ ಬಂದು ಕುಳಿತು ಲೋಕಾಭಿರಾಮ ಮಾತುಕತೆ ಆಡಿ ಸಮಯ ಕಳೆಯುತ್ತಿದ್ದರು.
ಒಂದು ದಿನ ಆ ಊರಿಗೆ ಅಪರಿಚಿತ ಸಾಧು ಒಬ್ಬ ಬಂದನು. ಅವನು ಆಲದ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾದನು, ಗಡ್ಡದಾರಿ
ಕಾವಿ ಬಟ್ಟೆ ಕೈಯಲ್ಲಿ ರುದ್ರಾಕ್ಷಿ
ಹಣೆಗೆ ಭಸ್ಮ ಜಟೆ ಅವನನ್ನು ಕಂಡರೆ ಏನೋ ಒಂಥರಾ ಗೌರವದ ಭಾವನೆ ಬರುತ್ತಿತ್ತು.
ಊರಿನ ಜನ ಆತನ ಕುರಿತು
ಮಾತನಾಡಿಕೊಂಡು ತಮ್ಮಷ್ಟಕ್ಕೆ ತಾವಿದ್ದರು. ಆ ಸಾಧು ಆಲದ ಮರದ ಕೆಳಗೆ ತನ್ನ ವಾಸಸ್ಥಾನ ಮಾಡಿಕೊಂಡಿದ್ದನು. ಗಂಟಿನಲ್ಲಿ
ಕಟ್ಟಿಕೊಂಡು ಬಂದಿದ್ದ ಆಹಾರ ಸೇವಿಸುತ್ತಿದ್ದನು. ಊರಿನ ಮಕ್ಕಳೆಲ್ಲ ಕುತೂಹಲದಿಂದ ಆತನ ಕಡೆಗೆ ದೃಷ್ಟಿ ಹಾಯಿಸುತ್ತಿದ್ದರು. ಆದರೆ ಯಾರೂ ಅವನನ್ನು ಮಾತನಾಡಿಸಲಿಲ್ಲ. ಸಾಧುವಿಗೆ
ಸ್ನಾನ ಮಾಡದೇ ಮೈಯೆಲ್ಲ ನವೆದಂತಾಗಲು ಶುರುವಾಯ್ತು.
ಕಾರಣ ಹತ್ತಿರದಲ್ಲಿ ಸ್ನಾನಕ್ಕೆ ನೀರು ಸಿಗಬಹುದೇ ಎಂದು
ಯೋಚಿಸತೊಡಗಿದನು.
ಮರದ ಕೆಳಗೆ ಕುಳಿತ ಒಬ್ಬ ಮುದುಕನ ಬಳಿ ಬಂದ ಸಾಧು
ಅಯ್ಯಾ ಇಲ್ಲಿ ನೀರು ಸಿಗಬಹುದೇ ಎಂದನು. ಅದಕ್ಕೆ ಆ ಮುದುಕ ಕನಿಕರ ತೋರಿ
ನನ್ನ ಮನೆಗೆ ಬಾ ನೀರು ಕೊಡುವೆ ಎ೦ದನು. ಹೀಗೆ ಆ ಊರಿನ ಜನರ ಪರಿಚಯ ಮಾಡಿಕೊಂಡು ಸಾಧು ಸ್ನಾನ ಊಟ ಹೀಗೆ ಎಲ್ಲ ಸೌಕರ್ಯಗಳನ್ನು ಪಡೆದು ಆ ಊರಿನವನೇ ಆಗಿಬಿಟ್ಟನು.
ಹಳ್ಳಿ ಅಂದ್ರೆ ಹಾಗೇ ತಾನೇ?
ಸಾಧು ಹಾಡು. ಕತೆ, ಅಧ್ಯಾತ್ಮದ
ವಿಷಯಗಳ ಬಗ್ಗೆ ಆ ಊರಿನವರಿಗೆ ಹೇಳುತ್ತ ಮನರಂಜನೆ ನೀಡ ತೊಡಗಿದನು. ಆ ಊರಿನ ಜನರಿಗೆ ಸಾಧು ಒಬ್ಬ ಆತ್ಮೀಯ
ವ್ಯಕ್ತಿಯಾದನು. ಒಂದು ದಿನ ಆ ಊರಿಗೆ ಹೊರಗಡೆ ವಿದ್ಯೆ ಕಲಿಯಲು ಹೋಗಿದ್ದ ಯುವಕ ನೊಬ್ಬ ಬಂದನು. ಅವನಿಗೆ ಸಾಧುವಿನ ವೇಷ ಭೂಷಣ
ಮಾತು ನಗು ತರಿಸಿತ್ತು.
ಆತ ಕೈ ಕಟ್ಟಿ ಸಾಧುವಿನ ಬಳಿ ನಿಂತು ನಗುತ್ತ ನಿಮ್ಮ ಮಾತು ಕತೆಯೆಲ್ಲ ವಿಚಿತ್ರವಾಗಿದೆ. ಎಲ್ಲಿ ಕಲಿತಿರಿ? ಇವನ್ನೆಲ್ಲಾ ಎಂದನು
ಸಾಧು ಕೋಪಗೊಳ್ಳಲಿಲ್ಲ. ತನ್ನ
ಧಾಟಿಯಲ್ಲೇ ಬಾ ಮಗನೇ ಕುಳಿತು ಕೋ ಎಂದು ಕರೆದನು.
ಆತನ ಮೈದಡವಿ ಅಯ್ಯ ಮಗನೇ ನೀನು ವಿದ್ಯಾವಂತನಾಗಿರಬಹುದು.
ಆದರೆ ಅಹಂಕಾರ ಪಡದಿರಯ್ಯ
ನಯ ವಿನಯ ಹಿರಿಯರ ಕುರಿತು ಗೌರವ ಇರಲಿ
ವತ್ಸ ನೀನು ನನ್ನ ಮಾತು ನಾಟಕ ಎ೦ದು ಕೊಳ್ಳಬೇಡ. ನೀನಿನ್ನೂ ಚಿಕ್ಕವನು. ನಾಳೆ ಜೀವನದ ಹೊಸ ಅನುಭವ ಪಡೆಯುವಿ. ಯೋಗ್ಯ ವಿಚಾರವಂತನಾಗು ಪುತ್ರ. ಎ೦ದು ನಕ್ಕನು. ಆ ಸಾಧುವಿನ
ಸ್ಪರ್ಶ ಮಾತು ಆಯುವಕನ ನಿಲುವನ್ನೇ ಬದಲಾಯಿಸಿತು.
ಆತ ಸಾಧುವಿಗೆ ನಮಸ್ಕರಿಸಿ
ಕಾಲಿಗೆ ಬಿದ್ದನು. ಮುಂದೆ ಆತ ಎಂದೂ ಸಾಧು ಸಜ್ಜನರಿಗೆ ವ್ಯಂಗ್ಯವಾಡಲಿಲ್ಲ ಜೀವನವನ್ನು
ಅಚ್ಚುಕಟ್ಟಾಗಿ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದನು ಸಾಧುವಿನ ಸಾಧುತ್ವ ಅವನಿಗೆ
ಪರಿವರ್ತನೆಯ ಮಾರ್ಗ ತೋರಿತು. ಆ ಸಾಧುವೂ ಆ ಊರನ್ನು ಬಿಡಲೇ ಇಲ್ಲ.
ಅಲ್ಲಿಯ ಜನರಿಗೆ ಹಿತವಾದ
ನಡೆ ಕಲಿಸಿ ಆ ಊರಿನ
ಜನ ಸಮಾಧಾನದಲ್ಲಿ ಉಸಿರು
ಬಿಡುವಂತೆ ನೋಡಿಕೊಂಡನು.
ಒಟ್ಟಾರೆ ಆ ಹಳ್ಳಿ ಸಾಧುವಿನ
ಸದ್ಗುಣದ ಹಿರಿಮೆಯಲ್ಲಿ
ಗರಿಯಾಗಿ ಮೂಡಿತು

ಒಳ್ಳೆಯ ಒಂದು ಹೃದಯ ಹಲವು ಹೃದಯಗಳನ್ನು ಮಿಡಿಸಿ
ಒಳ್ಳೆಯತನದ ಹೂವುಗಳನ್ನು
ಬಿರಿಸಬಲ್ಲದು ಮಕ್ಕಳೇ
ನೆನಪಿನಲ್ಲಿರಲಿ