Click here to Download MyLang App

ಸಾಧಿಸಿದವಳು - ಬರೆದವರು : ವೈಷ್ಣವಿ ಪುರಾಣಿಕ್

ಹೆಸರು ಸಂತಾನ_ಲಕ್ಷ್ಮಿ, ಆದರೆ
ಮದುವೆ ಆಗಿ 20 ವರ್ಷಗಳಾದರೂ ಮಕ್ಕಳಿಲ್ಲ.
ತವರು ಮನೆ, ಅತ್ತೆ ಮನೆಯಲ್ಲಿ ದೊರೆತಿರುವುದು ಅಪಾದನೆ, ಬೈಗುಳ, ನೋವು.
ಬಂಜೆ ಎಂದು ಅಸಮಾಧಾನ ತೋರುವ ಅತ್ತೆ, ವೈದ್ಯರ ಬಳಿ ಬಾರದ ಗಂಡ, ನೀನೆ ಸರಿಯಾಗಿಲ್ಲ ಎನ್ನುವ ತಾಯಿ, ಹೋಗಲಿ ಬಿಡು ದೇವರ ಮೇಲೆ ಭಾರ ಹಾಕೆನ್ನುವ ತಂದೆ, ತಮ್ಮದೇ ಪ್ರಪಂಚದಲ್ಲಿ ಮುಳುಗಿರುವ ತಮ್ಮ-ತಂಗಿಯರ ಮಧ್ಯೆ,
ತಾನು ಒಂದು ಜೀವವೆಂದು ಗುರುತಿಸುತ್ತಿಲ್ಲ ಯಾರು ಸಹ.
ಇನ್ನು ಇಲ್ಲಿದ್ದು ಪ್ರಯೋಜನವಿಲ್ಲ ಎಂದು ಹೊರಟ ಲಕ್ಷ್ಮಿಗೆ ಸಂಪತ್ತು ಸಿಕ್ಕಂತೆ ಆಗಿತ್ತು.

ಲಕ್ಷ್ಮಿಗೆ ಸಂಪತ್ತು ಎಂದರೆ ಆಕೆಗೆ ದೇವರ ಗುಡಿಯು ಸಿಕ್ಕಿತು.ಆಕೆಯು ಭಕ್ತಿಯಿಂದ ದೇವರಲ್ಲಿ ನಾನು ನಿಮ್ಮಲ್ಲಿ ಒಂದೇ ಪ್ರಾರ್ಥನೆ ಮಾಡುತ್ತಾ ಇದ್ದೇನೆ. ಎಲ್ಲರನ್ನು ಒಳಿತನ್ನು ಮಾಡಿರಿ. ನನಗೆ ಬದುಕುವ ಮಾರ್ಗವನ್ನು ನೀವೇ ತೋರಿಸಬೇಕು ಎಂದು ಪ್ರಾರ್ಥನೆ ಮಾಡಿ ಕಣ್ಣುಗಳನ್ನು ಬಿಡುವ ಹೊತ್ತಿಗೆ ಭಟ್ಟರು ತೆಗೆದುಕೊಳ್ಳಿ ಪ್ರಸಾದ ಎಂದಾಗ ಆಕೆಯು ತೆಗೆದುಕೊಂಡು ಹಾಗೆ ನಡೆದುಕೊಂಡು ಹೋಗುವಾಗ ಅಲ್ಲೇ ಇದ್ದ ಸಣ್ಣ ಹುಡುಗಿ ಗಣಕಯಂತ್ರವನ್ನು ಸರಿಪಡಿಸುತ್ತಾ ಇದ್ದಳು ಆದರೆ ಎಷ್ಟು ಪ್ರಯತ್ನ ಆಗುತ್ತಾ ಇರಲಿಲ್ಲ. ಈಕೆ ಪುಟ್ಟ ಎಂದಾಗ ಆಕೆಯು ಕೋಪದಲ್ಲಿ ನನ್ನ ಕಷ್ಟ ನನಗೆ ಎಂದು ಬೈದಾಗ ಆಕೆಯ ಮನಸಿಗೆ ನೋವಾಯಿತು ಆದರೂ ಆಕೆಯ ಗಣಕಯಂತ್ರವನ್ನು ಸರಿಪಡಿಸಿದಾಗ ಆ ಸಣ್ಣ ಹುಡುಗಿಗೆ ಸಂತೋಷವಾಯಿತು. ತನ್ನ ಅಪ್ಪಾಜಿ ಅಮ್ಮನವರನ್ನು ಕರೆದಾಗ ಅವರಿಗೆ ಸಂತೋಷವಾಗಿ "ನೀವು ಯಾರು? "ಎಂದು ಪ್ರಶ್ನೆ ಮಾಡಿದಾಗ...
ಆಕೆಯು ಏನು ಉತ್ತರ ನೀಡದಿದ್ದಾಗ ನಿನಗೆ ನಮ್ಮ ಕಚೇರಿಯಲ್ಲಿ ಉದ್ಯೋಗ ಕೊಡುವೆ ಎಂದು ಕೊಡುವಾಗ ಆಕೆಯ ಕಣ್ಣಿನ ಅಂಚಿನಲ್ಲಿ ನೀರು ತುಂಬಿಬಂದಿತು. ಆಕೆಯು ಅವರ ಇಬ್ಬರಿಗೂ ನಮಸ್ಕಾರ ಮಾಡಿದಾಗ ಆತ ದೇವರಿಗೆ ನಮಸ್ಕಾರ ಮಾಡಿ ಎಂದು ತನ್ನ ಕುಲದೇವರ ಬಳಿ ಕರೆದುಕೊಂಡು ಹೋದಾಗ ಆಕೆಗೆ ಒಂದೇ ಸಮನೇ ವಾಂತಿಯಾಗುವುದನ್ನು ಕಂಡ ಆತನ ಹೆಂಡತಿ ನೀವು ತಾಯಿಯಾಗುತ್ತೀರಾ ಎಂದಾಗ ಎಷ್ಟು ಸಮಯಗಳ ಕಾಲ ನನ್ನ ಕಷ್ಟವನ್ನು ಯಾರ ಬಳಿಯಲ್ಲಿ ಹೇಳಲು ಆಗದೇ ಮೌನವಾಗಿದ್ದ ನಾನು ಈಗ ನನ್ನ ಕೂಸಿನ ಬಳಿ ಹೇಳಬಹುದು ಎಂದು ಮನದಲ್ಲಿ ಸಂತೋಷಪಟ್ಟಳು.
ಕುಲದೇವರ ದರ್ಶನ ಮುಗಿಸಿಬಂದು ಕಚೇರಿಯಲ್ಲಿ ಕೆಲಸದಲ್ಲಿ ಒಳ್ಳೆಯ ಆಸಕ್ತಿ ಹೊಂದಿ ಆಕೆಯು ಎಲ್ಲರಿಂದಲೂ ಗೌರವವನ್ನು ಪಡೆದುಕೊಳ್ಳುವ ಹೊತ್ತಿಗೆ ಹೆಣ್ಣು ಕೂಸುವಿಗೆ ಜನನವನ್ನು ನೀಡಿದಳು.
ಕಚೇರಿ ಅಧಿಕಾರಿಗಳು ಆಕೆಯನ್ನು ಕೂಸುವನ್ನು ಮತ್ತು ತಮ್ಮ ಕುಟುಂಬದವರ ಜೊತೆಯಲ್ಲಿ ದೇವಸ್ಥಾನಕ್ಕೆ ಹೋದಾಗ ಆಕೆಗೆ ಆಶ್ಚರ್ಯವೆಂಬಂತೆ ತವರು ಮನೆ, ಅತ್ತೆ ಮನೆಯವನ್ನು ದೂರದಲ್ಲಿ ಕಂಡ ಆಕೆಯು ನೋಡಿಯೂ ಸುಮ್ಮನಾದಳು. ನಂತರದಲ್ಲಿ ಅಧಿಕಾರಿಗಳ ಬಳಿ ಕಣ್ಣಿನ ಸನ್ನೆಯ ಮೂಲಕ ಹೇಳಿದಾಗ ಅವರ ಇಬ್ಬರ ಕಣ್ಣಿನ ಅಂಚಿನಲ್ಲಿ ನೀರು ತುಂಬಿ ಬಂದಾಗ ಆ ಕೂಸು ಮಗಳು ಆಂಟಿ ನೀವು ರೋದಿಸಬೇಡಿ ಹೆಣ್ಣು ಸಾಧಿಸಲು ಇರುವವಳು ಎಂದು ಹೇಳುವ ಹೊತ್ತಿಗೆ ತವರು ಮನೆ, ಅತ್ತೆ ಮನೆಯವರು ಆಕೆಯ ಕಾಲಿಗೆ ನಮಸ್ಕಾರ ಮಾಡಿ ನಮ್ಮದು ತಪ್ಪು ಆಯಿತು ಕ್ಷಮಿಸಿ ಎಂದಾಗ ಆಕೆಯು ನೀವು ದೊಡ್ಡವರು ನಮ್ಮನ್ನು ಆಶೀರ್ವಾದ ಮಾಡಿ ಎಂದಾಗ ಅಧಿಕಾರಿಗಳು ನಿಮ್ಮ ಮೊಮ್ಮಗಳನ್ನು ತೆಗೆದುಕೊಳ್ಳಿ ಎಂದಾಗ ದೇವರಿಗೆ ಪೂಜೆ ಪ್ರಾರಂಭವಾಯಿತು ಎಲ್ಲರೂ ಸಂತೋಷದಿಂದ ಜೀವನವನ್ನು ನಡೆಸಲು ಪ್ರಾರಂಭ ಮಾಡಿದರು.