Click here to Download MyLang App

ಸಾಧನಾ - ಬರೆದವರು : ಪ್ರತಿಭಾ ಎಂ ನಾಯ್ಕ | ಸಾಮಾಜಿಕ


ಸಾಧನಾಳಿಗೆ ತಾನು ನೋಡುತ್ತಿರುವುದು ಕನಸೋ ನನಸೋ ತಿಳಿಯದೇ ತನಗೇ ತಾನೇ ಪ್ರಶ್ನೆ ಮಾಡುತ್ತಾ
ಕುಳಿತಿದ್ದಾಳೆ. ಇಲ್ಲಾ....ಇದು...... ನಿಜಾ ತಾನು ನೊಡುತ್ತಿರುವುದು ಇದು ಕನಸಲ್ಲಾ....ಇಂದು ನನ್ನ ಕನಸು ನನಸಾದ ದಿನ.....ಎದುರಿಗೆ‌ ತುಂಬಿದ ಸಭಾಂಗಣ....ಧ್ವನಿವರ್ಧಕದಲ್ಲಿ ಸಾಧನಾಳ ಸಾಧನೆಯ ಬಗ್ಗೆ ವರದಿ ವಾಚಿಸುತ್ತಿದ್ದಾರೆ...ಸನ್ಮಾನ ಮಾಡುವುದಕ್ಕಾಗಿ ಅಕ್ಕ ಪಕ್ಕ ಗೌರವಾನ್ವಿತರು ಹಾರ ತುರಾಯಿ ಹಿಡಿದುಕೊಂಡು ನಿಂತಿದ್ದಾರೆ....ಆಗಲೇ ಸಾಧನಾಳ ಕಣ್ಣು ತುಂಬಿ ಬಂದಿದೆ....ತನ್ನ ಇಷ್ಟು ದಿನದ ಕಷ್ಟ‌ ಪರಿಶ್ರಮ ಒಂಟಿತನದ‌ ಹೋರಾಟದ ಫಲವಾಗಿ ಇಂದು ಸನ್ಮಾನ ಪಾರಿತೋಷಕ ಪಡೆಯುವ ಸುದಿನ...ನನ್ನ ಕಷ್ಟದ ಹೋರಾಟದ ದಿನಗಳಲ್ಲಿ ಜೊತೆಯಾಗಿ ಕಣ್ಣೀರು ಒರೆಸಿದ ತಾಯಿ ಮತ್ತು ಮಗಳು ಎದುರಿಗೆ ನಿಂತು ಖುಷಿಯಾಗಿ ಚಪ್ಪಾಳೆ ತಟ್ಟುತ್ತಿದ್ದಾರೆ....ತನ್ನ ಜನ್ಮ ಸಾರ್ಥಕವಾಯಿತು ಎಂಬ ಹೆಮ್ಮೆ ಅಭಿಮಾನದಿಂದ ನಿಂತಿದ್ದಾಳೆ ಸಾಧನಾ ವೇದಿಕೆಯಾ ಮೇಲೆ ಅಭಿಮಾನದ ಸನ್ಮಾನ ಸ್ವೀಕರಿಸುತ್ತಾ.
ಹೌದು ಚಿಕ್ಕವಳಿದ್ದಾಗಲಿಂದಲೇ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಹೊತ್ತ ಸಾಧನಾಳಿಗೆ ಜೀವನದಲ್ಲಿ ಎದುರಾದ ಸಮಸ್ಯೆಗಳು ಅವಳನ್ನು ಕಂಗೆಡಿಸಿದ್ದು ಸತ್ಯ. ತಂದೆಯ ಅಕಾಲಿಕ ಸಾವು....ತಾಯಿ ಕಷ್ಟದಿಂದ ಸಲಹಿ ದೊಡ್ಡಮಾಡಿದರೂ ಕೂಡಾ ....ಮದುವೆ ಆದ ಮೇಲೆ ಗಂಡ ಬೇರೊಬ್ಬಳ ಸಹವಾಸದಿಂದ ದೂರಾ ಆದ ಮೇಲೆ ಪುಟ್ಟದಾದ ಮಗಳನ್ನು ಹೊತ್ತುಕೊಂಡು ಬದುಕುವುದೇ ಬೇಡಾ ಎಂದು ತೀರ್ಮಾನಿಸಿದಾಗ ......ತಾಯಿಯ ಸ್ವಾಂತನದ ಮಾತುಗಳಿಗೆ ದೃಡವಾಗಿ ನಿಂತು ಬದುಕಲೇ ಬೇಕು .....ಛಲದಿಂದ....ಎಂದು ನಿರ್ಧಾರ ಮಾಡಿದ ಮೇಲೆ....ಸಾಧನಾ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಎದುರಾಯಿತು.
ಹೌದು ತಾನು ಏನು ಮಾಡುವುದು ಹೇಗೆ ಬದುಕುವುದು ಎಂದು ಗೊಂದಲದಲ್ಲಿ ಇದ್ದಾಗ ಹುಡುಕಾಟವ ಬಿಟ್ಟು ದೇವರ ಮೇಲೆ ಭಾರಹಾಕಿ ತನ್ನಲ್ಲೇ ಇದ್ದ ಕಲೆಯನ್ನೇ ಉಪಯೋಗಿಸಿ ಸಾಧನೆ ಮಾಡಬೇಕೆಂಬ ಛಲದಿಂದ....ಅದನ್ನೇ ಉಪಯೋಗಿಸಿಕೊಳ್ಳುವ ನಿರ್ಧಾರ ಮಾಡಿ ಮುಂದಡಿ ಇಟ್ಡಳು ಸಾಧನಾ....ಸಾಲಮಾಡಿ ಬಟ್ಟೆ ಗಾರ್ಮೆಂಟ್ಸ ಪ್ರಾರಂಭಿದಳು. ಪ್ರಾರಂಭದಲ್ಲಿ ಇದು ಸಾಧ್ಯನಾ......? ಅಂತ ಅನ್ನಿಸಿದರೂ ಕೂಡಾ ಅಮ್ಮನಾ ಪ್ರೋತ್ಸಾಹ ಹಾಗೂ ಜೀವನ ಅನಿವಾರ್ಯತೆಗಾಗಿ ಕಷ್ಟಪಟ್ಟು ಈಗ ಮಹಿಳಾ ಉದ್ಯಮಿಯಾಗಿ ನಿಂತಿದ್ದಾಳೆ.
ಕೇವಲ ತಾನು ಬದುಕಿದರೇ ಸಾಲದು ತನ್ನಂತಹ ಎಷ್ಟೋ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಬಾಳಬೇಕು ಎಂಬ ಮನಸ್ಸಿನಿಂದ ಸ್ವತಃ ತನ್ನದೇ ಆದ ಇಂದು ಸ್ವಾಭಿಮಾನ ಎಂಬ ಹೆಸರಿನ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಯಾರ ಹತ್ತಿರವೂ ಧನ ಸಹಾಯ ಕೇಳದೇ ಕಷ್ಟದಲ್ಲಿ ಇರುವ ಮಹಿಳೆಯರಿಗೆ ತರಬೇತಿ ಕೊಟ್ಟು ಅವರಿಗೆ ಧನ ಸಹಾಯ ಮಾಡಿ ಅವರನ್ನು ದಡ ಸೇರಿಸುವ ಕೆಲಸ ಮಾಡುತ್ತಾ ಸಮಾಜ ಸೇವಕಿ ಎಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದಾಳೆ.
ಈ ಎಲ್ಲಾ ಸಾಧನೆಗಾಗಿ ಸಾಧನೆ ಹಾದಿಯಲ್ಲಿರುವ ಎಷ್ಟೋ ಜನ ಹೆಣ್ಣುಮಕ್ಕಳಿಗೆ ಇಂದು ಸಾಧನಾ ಮಾದರಿಯಾಗಿದ್ದಾಳೆ. ಪೇಪರ್, ಟಿ.ವಿ ಎಲ್ಲಾ ಕಡೆ ಸಾಧನಾಳ ಹೆಸರು ಮತ್ತು ಸಾಧನೆಯ ಬಗ್ಗೆ ಹೆಮ್ಮೆಯ ಮಾತು ಕೇಳಿಬರುತ್ತಿದೆ. ಇವೆಲ್ಲಾ ನೋಡುತ್ತಾ ಸಾಧನಾ ತಾನು ಪಟ್ಟ ಕಷ್ಟ , ನೋವುಗಳ ನೆನಪುಗಳು ಮರೆಯಾಗಿ ಮಂದಹಾಸದಿಂದ ನಗುತ್ತಾ ನಿಂತಿದ್ದಾಳೆ.......ಸಾಧನೆಯ ಹಾದಿಯಲ್ಲಿ ನಸುನಗುತ್ತಾ.