Click here to Download MyLang App

ವರದಿಗಾರ - ಬರೆದವರು : ಆರ್ ಪವನ್ ಕುಮಾರ್ | ಸಾಮಾಜಿಕ

ಬೆಳಕು ಹರಿದು ಸುಮಾರು ಹೊತ್ತಾಗಿತ್ತು. ನೇರವಾಗಿ ಬೆಳಕಿನ ಕಿರಣಗಳು ಕೋಣ ಪ್ರವೇಶಿಸದಂತೆ ಕಿಟಕಿ, ಬಾಗಿಲುಗಳ ಭದ್ರ ಪಡಿಸಿಕೊಂಡು ಮಲಗಿದ್ದ ಕಿರಣ. ಅವನು ಮುಚ್ಚಿದ ಕಣ್ಣಗಳ ತೆರದರು ಸಾಕಿತ್ತು. ಕೋಣ ಯೊಳಗೆ ಬೆಳಕಿನ ಅನುಭವವಾಗುವಂಥ ವಾತಾವರಣ ನೆಲೆಯೂರಿತ್ತು. ಮುಂಜಾನೆಯ ಬೆಳಗೆಂದರೆ ಕಪ್ಪನೆಯ ಶಿಲೆಯ ಮೇಲರೆವ ಬಿಳಿ ಹಾಲಿನ ನೊರೆಯೆಂದು ಭಾವಿಸಿ ಇದಾ ಕಾಣುವ ಪ್ರತಿಕ್ಷಣವು ಪುಳಕಿತನಾಗಿದ್ದ ಕಿರಣ ಇಂದು ಅದರ ಮೇಲೆ ಆಸಕ್ತಿ ಕಳೆದುಕೊಂಡಿದ್ದ. ಅವನ ಬೆಳಗಿನ ವಾಯುವಿಹಾರ, ವ್ಯಾಯಾಮಗಳೆಲ್ಲವು ತಾತ್ಕಲಿಕವಾಗಿ ಬಂದ್ ಆಗಿದ್ದವು. ಕೋಣ ಬಿಟ್ಟು ಕದಲದೆ ಕುಳಿತಲ್ಲೆ ಮನಸ್ಸ ಮುತ್ತುವ ಚಿಂತೆಗಳಿಗೆ ಚಡಪಡಿಸುತ್ತಿದ್ದ. ದಿನಕ್ಕೆ ಏನಿಲ್ಲವೆಂದರು ಹತ್ತಾರು ಕರೆಗಳು ಬಂದರು ಯಾವುದನ್ನು ಸ್ವೀಕರಿಸಿ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಕರೆಯ ಒತ್ತಡ ಜಾಸ್ತಿಯಾದರೆ ಪುಟ್ಟ ಸಂದೇಶ ರವಾನಿಸಿ ತೆಪ್ಪಗಾಗುತ್ತಿದ್ದ. ಕಿರಣನಿಗೆ ಮತ್ತಷ್ಟು ಏಕಾಂತದ ಅವಶ್ಯಕತೆಯಿದ್ದು, ಈ ಮೂಲಕ ತನ್ನೊಳಗೆ ಜಡವಾಗಿ ನಿಂತಿರುವ ಅಪರಾಧಿ ಭಾವ ಒಂದನ್ನೂ ಕಳೆದುಕೊಳ್ಳಬೇಕಿನಿಸಿತ್ತು. ಯಾರೋ ಏನಾದರು ನೆಪದಲ್ಲಿ ತನ್ನ ಏಕಾಂತವ ಕಸಿಯುತ್ತ ತನ್ನಲ್ಲಿರುವ ಅಪರಾಧಿ ತನವನ್ನು ಮತ್ತಷ್ಟು ಹೆಚ್ಚಿಸಲು ಹಿಂಸೆಗೆ ಸಿಕ್ಕ ಪಶುವಾಗುತ್ತಿದ್ದ. ಕಿರಣ ಅನುಭವಿಸುತ್ತಿರುವ ಸಂಕಟವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದಷ್ಟು ಕೇಳಿದವರು ಹಗುರುವಾಗಿ `ಇಟ್ಸ್ ಯೂರ್ ಇಲ್ಯುಷನ್' ಎಂದು ಹೇಳುತ್ತಿದ್ದರು. ಇದರಿಂದ ಕಿರಣನಿಗೆ ಮುಂದೆ ಅವರೊಂದಿಗೆ ಯಾವುದೇ ಸಂವಹನಗಳು ಸಾಧ್ಯವಾಗುತ್ತಿರಲಿಲ್ಲ. ಅಷ್ಟೊಂದು ಸಾವು, ನೋವು ಜೀವಗಳು ಬಿಗಿ ಹಿಡಿದ ನರಳಾಟವನ್ನ ಈ ಮನುಷ್ಯ ಜಗತ್ತು ಅದ್ಹೇಗೆ ಇದೊಂದು ಪುಟ ಸೇರುವ ಘಟನೆಯೆಂದು ಮರೆತು ಬಿಟ್ಟಿತ್ತೆಂದುಕೊAಡ.

ಮತ್ತದೇ ಪೋನ್ ರಿಂಗಾಗುವ ಸದ್ದು. ಕಿರಣನಿಗೆ ಎಚ್ಚರವಾದರು ಕರೆ ಯಾರದೆಂದು ನೋಡುವ ಆಸಕ್ತಿಯಿರಲಿಲ್ಲ. ಇಡೀ ರಾತ್ರಿ ಕಾಡುತ್ತಿದ್ದ ಚಿಂತೆಗಳಿಗೆ ತಲೆಕೊಟ್ಟ ಪರಿಣಾಮ ನಿದ್ರೆ ಬಂದಿರಲಿಲ್ಲ. ಹಾಸಿಗೆಯಲ್ಲಿ ಹೊರಳಾಡುವಷ್ಟು ಹೊರಳಾಡಿ ೩, ೪ ಸಿಗರೇಟ್ ಹೊತ್ತಿಸಿ ಉರಿದು ಬೂದಿ ಮಾಡಿದರು ಚಡಪಡಿಕೆ ತೊಲಗಿರಲಿಲ್ಲ. ಹೊತ್ತು ಹೋಗದ ಕಾರಣಕ್ಕೆ ಮೊಬೈಲ್ ಆನ್ ಮಾಡಿದರೆ ಸ್ನೇಹಿತರು, ಪರಿಚಿತರ ನೂರೆಂಟು ಮೇಸೆಜ್‌ಗಳು. ಯೋಗಕ್ಷೇಮ ವಿಚಾರಿಸುವುದರಿಂದ ಆರಂಭವಾಗಿ ತನ್ನ ಸ್ಥಿತಿಗೆ ವಿಷಾದಿಸುವಂತಿದ್ದವು. ಯಾವುದಕ್ಕೂ ಪತ್ರಿಕ್ರಿಯಿಸದೆ ಇರುವುದು ಸೂಕ್ತವೆಂದಕೊAಡ. ಇಷ್ಟೆಲ್ಲಾ ಆತ್ಮೀಯತೆ, ಸಲಿಗೆ, ಸಂಬAಧಗಳು ಬರೀಯ ಸಂದೇಶಗಳಿಗಷ್ಟೇ ಮೀಸಲಾಗಿ ಆದರಾಚೆಗೆ ಏನ ಹುಡುಕಲೊರಟರು ಶೂನ್ಯ ಎದುರಾಗಿತ್ತು. ವ್ಯಕ್ತಿಯಿಂದ ವ್ಯಕ್ತಿಗಿರುವ ಭಿನ್ನತೆಗಳ ಕಿರಣ ಸ್ಪಷ್ಟವಾಗಿ ಗುರುತಿಸಿದ್ದ. ಈಗ ಯಾರೊಂದಿಗೆ ಉಭಯಕುಶಲೋಪರಿ ನಡೆಸಲೊರಟರು ಅದು ಕೊನೆಗೆ ತಾನು ಕೆಲಸ ಬಿಟ್ಟಲ್ಲಿಗೆ ಬಂದು ನಿಲ್ಲುತ್ತಿತ್ತು. ಕಿರಣ ಕೆಲಸ ಬಿಟ್ಟು ವಾರ ಕಳೆದಿರುವುದು ಹಲವರಲ್ಲಿ ಅಚ್ಚರಿ ಹುಟ್ಟಿಸಿತ್ತು. `ಪಾದರಸದಂತೆ ಚುರುಕಾದ ಹುಡುಗ' ಸುದ್ದಿಯ ವಾಸನೆ ಮೂಗಿಗೆ ಬಡಿದರೆ ಸಾಕು ಅದರ ತಳಬುಡಗಳ ಸೋಸಿ ವರದಿ ಸಿದ್ಧಪಡಿಸಿ ಓದುಗರ ಮುಂದೆ ಇಡುತ್ತಿದ್ದ. ಇಂತಾ ಕಿರಣನ ಬಗ್ಗೆ ಸಾಕಷ್ಟು ಮೆಚ್ಚುಗೆ ಪ್ರಶಂಸೆಗಳು ಸಿಗುತ್ತಲೆ ಅವನ ಬದುಕಿಗೆ ಹೊಸ ತಿರುವು ಸಿಕ್ಕಿತ್ತು. ಪತ್ರಿಕೋದ್ಯಮ ಕಿರಣ ಆಯ್ದುಕೊಂಡ ಮಾಧ್ಯಮವಾಗಿತ್ತು. ತನ್ನ ನೇರ ಹಾಗೂ ದಿಟ್ಟತನದ ವ್ಯಕ್ತಿತ್ವಕ್ಕೆ ಪತ್ರಿಕೋದ್ಯಮ ಸೂಕ್ತವೆಂದು ಇದರ ಆಕರ್ಷಣೆಗೆ ಒಳಗಾದವನು ಮುಂದೆ ಅದನ್ನೆ ಅನುಸರಿಸಿದ. ಈ ವಿಷಯದಲ್ಲೆ ಪದವಿ ಮುಗಿಸಿದವನು ಸ್ಥಳೀಯ ಪತ್ರಿಕೆಗಳ ಬಾಗಿಲು ತಟ್ಟಲು ಅಲ್ಲಿ ಅವಕಾಶಗಳಿಗೆ ಬರವಿರಲಿಲ್ಲ. ಆದರೆ, ಇವನು ನಿರೀಕ್ಷಿಸಿದ ಸಂಬಳ, ಉದ್ಯೋಗ ಭದ್ರತೆಗಳು ಮಾತ್ರ ಭೀತಿ ಹುಟ್ಟಿಸುವಂತಿದ್ದವು. ಕಲಿಕೆಯ ಹಂಬಲದಿAದ ವರದಿಗಾರನ ಪಟ್ಟಕ್ಕೇರಿ ಕೆಲಸ ಪ್ರಾರಂಭಿಸಿದ್ದ. ತಾನು ಓದಿದ್ದಕ್ಕೂ ಇಲ್ಲಿ ಕೆಲಸದಿಂದ ಕಲಿಯುತ್ತಿರುವುದಕ್ಕೂ ಅಜಗಜಾಂತರ ವ್ಯೆತ್ಯಾಸವಿರುವುದ ಕಂಡು ತನ್ನೊಳಗಿದ್ದ ಭ್ರಮೆಗಳ ಕಳೆದುಕೊಳ್ಳುತ್ತಿದ್ದ. ಸ್ಥಳೀಯ ಪತ್ರಿಕೆಯಲ್ಲಿನ ವರದಿಗಾರಿಕೆಯ ಕೆಲಸ ಕಿರಣನ ಅಭಿರುಚಿಗೆ ಒಂದು ರೀತಿಯ ಸಂತಸ ತಂದಿತ್ತು. ಪತ್ರಿಕೆ ಕರ‍್ಯಲಯದಲ್ಲಿನ ಇತರೆ ಹಿರಿಯರು ಅವನಿಗೆ ಕೆಲ ಮಾಗದರ್ಶನಗಳ ನೀಡುತ್ತ ಯಾವ ಸುದ್ದಿಯನ್ನು ಹೇಗೆ ಬರೆಯಬೇಕೆಂಬುದ ನಾಜೂಕಾಗೆ ಕಲಿಸಿ ಕೊಡುತ್ತಿದ್ದರು. ಇನ್ನೂ ಪೋಟೋಗಳಿಗಾಗಿ ಪುಟ್ಟ ಕ್ಯಾಮರ್ ಒಂದನ್ನೂ ಜೊತೆಯಲ್ಲಿ ಇರಿಸಿಕೊಂಡಿದ್ದ. ಪೋಟೋಗ್ರಫಿ ಬಗ್ಗೆ ಆಸಕ್ತಿಯುಳ್ಳವನಾಗಿದ್ದ ಕಿರಣ ಅಲ್ಲಿನ ಸೀನಿಯರ್ ಪೋಟೋಗ್ರಾಫರ್ ಜೊತೆ ಕ್ಯಾಮರ್ ಆ್ಯಂಗಲ್, ಫೋಕಸ್, ಬೆಳಕು, ನೆರಳುಗಳ ಬಗ್ಗೆ ಒಂದಷ್ಟು ವಿಚಾರಗಳ ತಿಳಿದುಕೊಂಡಿದ್ದ. ಅವನ ವರದಿಕೆಯ ನಡುವೆ ಈ ಚಿತ್ರ ತಗೆಯುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಪತ್ರಿಕೆಗೆ ಸುದ್ದಿ ತರುವ ನೆಪದಲ್ಲಿ ಹಲವು ಜನರ ಪರಿಚಯ, ಸ್ನೇಹ ಸಂಪಾದನೆಯಾಗಿತ್ತು. ವರದಿಗಾರಿಕೆಯ ವಿಸೃತ್ತ ರೂಪಕ್ಕೆ ಇತರರಿಗಿಂತ ಕಿರಣ ಹೆಚ್ಚು ಪರಿಣಾಮಕಾರಿಯಾಗಿದ್ದ. ಅವನ ಸಾಹಿತ್ಯದ ಓದು ಇದಕ್ಕೆ ಪೂರಕವಾಗಿ ಶ್ಯಬ್ದಗಳ ಭಂಡಾರವನ್ನೆ ಒದಗಿಸಿಕೊಟ್ಟಿತ್ತು. ಇದನ್ನು ಬಳಸಿ ವರದಿಗಾರಿಕೆಯನ್ನು ಸುಂದರ, ಸರಳ, ಸುಲಭವಾಗಿ ಓದುವಂತೆ ಬರೆಯುತ್ತಿದ್ದ. ಸಂಪಾದಕರ ಹಾದಿಯಾಗಿ ಕೆಲವರಿಗೆ ಕಿರಣನ ಭವಿಷ್ಯದ ಮೇಲೆ ಅಪಾರ ಭರವಸೆಗಳಿದ್ದವು. ಚಿಮ್ಮುವು ಕಾರಂಜಿಯAತೆ ಹುಡುಗ ಪತ್ರಿಯೊಂದಕ್ಕೂ ಮುನ್ನುಗ್ಗಿ ವಿಷಯ ಸಂಗ್ರಹಿಸಿ ಬೇಕಾದ ಸಾಕ್ಷಾö್ಯಧಾರಗಳ ಆಧಾರವಾಗಿರಿಸಿ ಸುದ್ದಿ ಬರೆದು ಪ್ರಕಟವಾಯಿತೆಂದರೆ ಓದಿದವರು ಮೆಚ್ಚಿಕೊಳ್ಳುವಂತೆ ಇರುತ್ತಿತ್ತು.

ಎಡಿಟರ್ ಕೆಲವೊಂದು ಘಟನೆಗಳ ಪತ್ಯಕ್ಷö ಮತ್ತು ಪರೋಕ್ಷ ವರದಿಗೆ ಕಿರಣನ್ನ ಮೊದಲಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವರಿಗೆ ಇವನ ಕೆಲಸದ ಮೇಲೆ ಆಗಾಧವಾದ ನಂಬಿಕೆ ಮತ್ತು ವಿಶ್ವಾಸ. ಬಿಸಿ ರಕ್ತದ ಯುವಕ ಸ್ವಲ್ಪ ಎಡವಿದರು ಕೊಟ್ಟ ಕರ‍್ಯವನ್ನು ಸಾಧಿಸಿ ತರುತ್ತಾನೆ ಎಂದು. ಅದೇ ರೀತಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಸುದ್ದಿ ಸಿಗುತ್ತಲೆ ಎಡಿಟರ್ ಕಿರಣಗೆ ಕಾಲ್ ಮಾಡಿ ಇರುವ ಎಲ್ಲಾ ಕೆಲಸ ಅಲ್ಲಿಗೆ ಬಿಟ್ಟು ಅತ್ತ ದೌಡಾಯಿಸಲು ಹೇಳಿದ್ದರು. ಅವರ ಮಾತಿನಂತೆ ಕಿರಣ ಯಾವುದೋ ಸಮಾರಂಭ ಒಂದರ ವರದಿಗೆ ಬಂದವನು ಅಲ್ಲಿಂದ ಸ್ಥಳಕ್ಕೆ ಓಡಿದ್ದ. ವಹಿಸಿದ್ದ ಕೆಲಸಕ್ಕೆ ತಕ್ಷಣ ಪ್ರವೃತ್ತನಾಗುವುದರಿಂದಲೆ ಕಿರಣನಿಗೆ ಪತ್ರಿಕೆಯಲ್ಲಿ ಹೆಚ್ಚಿನ ಸ್ಥಾನ ಹಾಗೂ ಸಂಬಳದಲ್ಲಿ ಅಲ್ಪ ಏರಿಕೆ ಕಂಡಿತ್ತು. ಆ ಏರಿದ ಸಂಬಳ ಕಿರಣ ತೃಪ್ತನಾಗುವಂತೇನು ಇರಲಿಲ್ಲ. ಆದರೆ, ತನ್ನ ವೃತ್ತಿಯನ್ನು ಪ್ರೀತಿಸುವ ಅವನ ಗುಣ ಮಾತ್ರ ಎಲ್ಲೆಗಳ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತಿತ್ತು. ಹೊಸ ಅನುಭವಗಳಿಗೆ ಸದಾ ತಕಲಾಡುತ್ತಿದ್ದ. ವಸ್ತು, ವಿಚಾರ, ವ್ಯಕ್ತಿಗಳ ಮೇಲೆ ತೀವ್ರ ಆಸಕ್ತಿಯಿಂದಲೆ ಕೆದುಕಿ, ಸ್ಪಷ್ಟಪಡಿಸಿಕೊಂಡು ತನ್ನ ಸುದ್ದಿಗಾರಿಕೆಯ ಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದ. ಘಟನೆ ನಡೆದ ಸ್ಥಳಕ್ಕೆ ಸಾಗುವ ಹಾದಿ ತುಂಬಾ ಅವನ ತಲೆಯಲ್ಲಿ ವರದಿಗಾರಿಕೆಯನ್ನು ಹೇಗೆ ಮಾಡಬೇಕು, ಯಾರ ಅಭಿಪ್ರಾಯ, ಅನಿಸಿಕೆಗಳ ತಗೆದುಕೊಳ್ಳಬೇಕು, ಆ ಬಿದ್ದ ಕಟ್ಟಡದ ಹಿನ್ನಲೆ, ಮಾಲೀಕ, ಅದರ ಜೀವಿತಾವಧಿ ಹೀಗೆ ಏನೇನೋ ಬಂದ ಯೋಚನೆಗಳಿಂದ ಒಂದು ಯೋಜನೆ ರೂಪಿಸಿಕೊಳ್ಳುತ್ತಿದ್ದ. ಕಿರಣನ ಸೆಲ್‌ಗೆ ಎಡಿಟರ್ ಕಾಲ್ ಮತ್ತೆ, ಮತ್ತೆ ಬರುತ್ತಲೆ ಮಾಡಬೇಕಾದ ಕರ‍್ಯಗಳ ಬಗ್ಗೆ ಸೂಚಿಸುತ್ತ ಹುರಿದುಂಬಿಸುತ್ತಿತ್ತು. ಅದರಂತೆ ಘಟನೆ ಸ್ಥಳಕ್ಕೆ ಬರುತ್ತಲೆ ಅಲ್ಲಾಗಲೇ ಜನ ಪ್ರವಾಹ ಬಂದು ನಿಂತಿತ್ತು. ಎಲ್ಲರ ಬಾಯಲ್ಲೂ ಘಟನೆಯ ಸುದ್ದಿ ನಾನಾ ಥರದಲ್ಲಿ ತಳಬುಡವಿರದೆ ಹರಿದಾಡುತ್ತ ಸಾವು, ನೋವಿನ ಬಗ್ಗೆ ಮಾತುಕತೆ ಆಗುತ್ತಿತ್ತು. ಸುದ್ದಿ ಹಂಬಲಕ್ಕೆ ಬಿದ್ದ ಕಿರಣ ತನ್ನ ಚಾಕಚಕ್ಯತೆಯಿಂದ ತುಂಬಿಕೊAಡ ಪೊಲೀಸರು, ಅಗ್ನಿಶಾಮಕದವರು ರಕ್ಷಣಾ ಪಡೆಯವರನ್ನು ಭೇದಿಸಿ ಹಳೇ ಕಟ್ಟಡ ಕುಸಿದ ಜಾಗಕ್ಕೆ ನುಗ್ಗಿದ್ದ. ಎದುರಾದ ಪೊಲೀಸರಿಗೆ ತಾನು ಪ್ರೆಸ್‌ನವನೆಂದು, ವರದಿಗಾರಿಕೆ ತನ್ನ ಕರ‍್ಯವೆಂದು ಪುಟ್ಟ ಭಾಷಣ ಬಿಗಿದು ಅವರ ಬಾಯಿ ಮುಚ್ಚಿಸಿದ್ದ. ಇವನ ರಣೋತ್ಸಾಹದ ಮುಂದೆ ಬಿಗಿ ನಿಯಮಗಳೆಲ್ಲ ಸಡಿಲಗೊಂಡಿದ್ದವು. ವಾದಕ್ಕೆ ಇಳಿದರೆ ಅವರ ಸಮನಾಗಿ ಜಿದ್ದಿಗೆ ಬಿದ್ದವನಂತೆ ಮಾತಿಗೆ ಮಾತು ಬೆಳೆಯುತ್ತಿತ್ತು. ಕರ್ತವ್ಯ, ಅಧಿಕಾರ, ದರ್ಪ, ವಾಂಛೆ, ನಿಷ್ಠುರಗಳೆಲ್ಲವು ಎದುರು, ಬದುರಾಗಿ ಕಾದಾಡಿ ಕೊನೆಗೆ ಪೊಲೀಸ್ ಹಿರಿಯ ಅಧಿಕಾರಿ ಕಿರಣನಿಗೆ "ಸಾವುನ್ನ ವೈಭವೀಕರಿಸೋದು, ವಿಜೃಂಭಿಸೋದು ಮನುಷ್ಯ ಸಂಸ್ಕೃತಿ ಅಲ್ಲ" ಎಂದು ತಣ್ಣಗೆ ಹೇಳಿದ್ದ. ಆ ನಂತರ ಕಿರಣನ ಹೆಜ್ಜೆಗಳು ಅವಘಡ ನಡೆದ ಸ್ಥಳಕ್ಕೆ ಹೊರಟವು.

ಎಂದಿನAತೆ ಉತ್ಸಾಹದಲ್ಲಿ ಬ್ಯಾಗಿನೊಳಗಿದ್ದ ಕ್ಯಾಮರಾ ತಗೆದು ಪೋಟೋ ಕ್ಲಿಕಿಸಲು ನಿರ್ಧಾರಿಸಿದ. ಆದರೆ, ಬಿದ್ದು ಪುಡಿ ಪುಡಿಯಾಗಿರುವ ಮಣ್ಣು, ಕಲ್ಲು, ಕಬ್ಬಿಣ್ಣದ ರಾಶಿಯಲ್ಲಿ ಏನಾ ಸೆರೆ ಹಿಡಿಯುವುದೆಂಬುದು ದೊಡ್ಡ ಪ್ರಶ್ನೆಯಾಯಿತು. ಕಿವಿಗೆ ಇರಿಯುವಂತೆ ಒಂದೆಡೆ ಅಳು, ರೋಧನಗಳ ಕೂಗು. ನೆಲ ಬಗೆದರೆ ಸಿಗುವು ಸತ್ತ ದೇಹಗಳು, ಅರೆಬರೆ ಜೀವಗಳು. ಅಷ್ಟೊಂದು ರಕ್ತ ಹೀರಿದರು ಕಮ್ಮಿಯಾಗಾದ ಧೂಳು. ನಾಲ್ಕು ಅಂತಸ್ತಿನ ಕಟ್ಟಡ ದಶಕಗಳಿಂದ ಮಳೆ, ಬಿಸಿಲುಗಳ ಸಹಿಸಿ ನಿಂತು ಸಾಕಾದಂತೆ ಒಮ್ಮೆಗೆ ನೆಲಕ್ಕೆ ಉರುಳಿತ್ತು. ಅಲ್ಲಿದ್ದ ಬಹುತೇಕ ಕುಟುಂಬಗಳು ಒಂದೇ ಸಾರಿಗೆ ಸಾವಿನ ಮನೆ ಬಾಗಿಲು ಬಡಿದಿದ್ದವು. ಈ ಕಟ್ಟಡದ ಅಪಾಯವನ್ನು ಗುರುತಿಸಿ ದುರಸ್ಥಿ ಕರ‍್ಯಗಳು ನಡೆದಿದ್ದವಾದರು ಪ್ರಯೋಜನವಿರಲಿಲ್ಲ. ಇಲ್ಲಿನವರಿಗೆ ಖಾಲಿ ಮಾಡಿ ಬೇರೆ ಕಡೆ ಮನೆ ನೋಡಿಕೊಳ್ಳಲು ಹೇಳಿದರು ಸ್ಥಳಾವಕಾಶದ ಕಾರಣ ಯಾರು ಇಲ್ಲಿಂದ ಕದಲಿರಲಿಲ್ಲ. ಹೀಗೆ ಇದೊಂದು ಭೀಕರ ಘಟನೆಯಾಗಿ ಪರಿವರ್ತಿತವಾಗುತ್ತಲೆ ಆಕ್ರಂಧನ ಮುಗಿಲು ಮುಟ್ಟಿತ್ತು. ಈ ದೃಶ್ಯಗಳ ಕಣ್ಣಾರೆ ಕಾಣುತ್ತ ಕಿರಣನಿಗೆ ಬದುಕಿನ ಹೊಸ ಮಗ್ಗಲಿನ ದರ್ಶನವಾದಂತೆ ನಿಂತು ಬಿಟ್ಟ. ಯಾಂತ್ರಿಕವಾಗಿ ಮಾತ್ರ ಅವನ ತಲೆ ಕೆಲಸ ಮಾಡುತ್ತಿತ್ತು. ಘಟನೆ ನಡೆದ ಸ್ಥಳವನ್ನೆ ನಾಲ್ಕು, ಐದು ಬಾರಿ ಸುತ್ತಿದ್ದ. ಯಾರ ಮಾತನಾಡಿಸಲು ಮನಸ್ಸು ಬರಲಿಲ್ಲ. ಅವರ ಮುಖಭಾವದ ಅಳು, ನೋವು ಎದೆ ಕಲಕುವಂತಿದ್ದವು. ಕೆಲ ಸತ್ತ ದೇಹಗಳು ಕಟ್ಟಡ ಕುಸಿದ ಭರಕ್ಕೆ ಅಪ್ಪಚ್ಚಿಯಾಗಿ ಮೇಲೆತ್ತಿದರೆ ಬಿಡಿ ಬಿಡಿಯಾಗಿ ಮಾಂಸಗಳು ಕೈಗೆ ಬರುತ್ತಿತ್ತು. ಈ ಘಟನೆ ಕುರಿತ ಕೆಲವರ ಮಾತನಾಡಿಸಲು ಬಾಯಿ ತೆರೆದರೆ ಅಲ್ಲಿ ಕಿರುಚುವ, ಎದೆ ಬಡಿದುಕೊಳ್ಳುವ ಹೊರತು ಮಾತುಗಳಿರಲಿಲ್ಲ. ಕಿರಣ ತೋರಿದ ನಿರ್ಭೀತಿಯನ್ನು ಇತರೆ ಮಾಧ್ಯಮಗಳ ವರದಿಗಾರರು ತೋರಿದ್ದೆ ಪೊಲೀಸರು ಅವರಲ್ಲಿ ಕೆಲವರ ಆಯ್ದು ಒಳಗೆ ಬಿಟ್ಟರು. ಬಂದವರು ನೇರ ಅಳುವವರ ಮುಂದೆ ಮೈಕುಗಳ ಒಡ್ಡಿ ಈ ಘಟನೆ ಬಗ್ಗೆ ಅನಿಸಿಕೆ, ಅಭಿಪ್ರಾಯಗಳೆಂದು ಪ್ರಶ್ನೆಗಳ ಎಸೆಯುತ್ತಿದ್ದರು.

ಅಲ್ಲಿಂದ ಒಳನುಗ್ಗಿ ಚಿತ್ರ ಸಹಿತ ವರದಿ ತಂದು ಕಿರಣ ಎಡಿಟರ್ ಟೇಬಲ್ ಮೇಲಿಟ್ಟಿದ್ದ. ಎಡಿಟರ್ ಕುತೂಹಲದಲ್ಲಿ ಅವುಗಳನ್ನು ನೋಡುತ್ತ "ಪೋಟೋಗಳು ಇನ್ನೂ ಸ್ವಲ್ಪ ರೂಡ್‌ಗಾರಿಬೇಕಿತ್ತು. ನೀನು ಸರಿಯಾಗಿ ಆಲಾರ್ಟ್ ಆಗಿಲ್ಲ" ಎಂದು ಹೇಳುತ್ತಲೆ ಅವನ ವರದಿಯನ್ನು ನೋಡಿದರು. ಅದು ಅವರಿಗೆ ತೀರ ಸಾಮಾನ್ಯ ಸುದ್ದಿಯಂತೆ ಕಂಡಿದ್ದೆ "ಕಿರಣ ಎಂಥಾ ಘಟನೆ ಗೊತ್ತಾ ಇದು? ಇದ್ನ ನೀನು ಇಷ್ಟು ಸಲೀಸಾಗಿ ಬರದ್ರೇಗೆ?" ಎಂಬ ಮಾತು ಕೇಳುತ್ತಲೆ ಕಿರಣ ಗಾಬರಿಯಲ್ಲಿ "ಸಾರ್ ಏನೇಳ್ತೀದಾರ?" ಎಂದರೆ ಎಡಿಟರ್ "ಯಸ್ ಮ್ಯಾನ್, ಸುದ್ದಿ ಎಲ್ರೂ ಪ್ರಕಟಿಸ್ತಾರೆ ಆದ್ರೆ ಅದ್ರಲ್ಲೊಂದು ಥ್ರಿಲ್ ಬೇಕು. ಓದಿದ್ರೆ ಘಟನೆ ಬಗ್ಗೆ ಮೈ ಜುಂ ಅನ್ಬೇಕು" ಎಂಬ ಮಾತಿಗೆ ಕಿರಣ ಬೇಸ್ತು ಬಿದ್ದ. ತಾನು ಕಂಡ ಆ ಸಾವು, ನೋವು, ಅಳು, ರೋಧನ, ಆಕ್ರಂಧನಗಳು ಮನುಷ್ಯತನ ಮಿಡಿಯುವಂತಿರದೆ ಘಟನೆ ಬಗ್ಗೆ ಉತ್ಪೆçÃಕ್ಷೆ ಹುಟ್ಟಿಸುವಂತಾದರೆ ಸಮಾಜಕ್ಕೆ ಪತ್ರಿಕೆಯ ಮೂಲಕ ಹೇಳ ಹೊರಟ್ಟಿದೆನೆಂಬ ಪ್ರಶ್ನೆ ಕಾಡಿತು. ಎಡಿಟರ್ ಈ ಘಟನೆ ಬಗ್ಗೆ ಎಲ್ಲಾ ನಿರ್ಧಾರವನ್ನು ತಾವೊಬ್ಬರೆ ಕೈಗೊಂಡಿದ್ದರು. ಕಿರಣ ಘಟನೆ ಸ್ಥಳದಲ್ಲಿದ್ದ ವಾತಾವರಣವನ್ನು ಎಡಿಟರ್‌ಗೆ ಎಷ್ಟು ಬಿಡಿಸಿ ಹೇಳಿದರು ಅವರು "ಇಟ್ಸ್ ನಾಟ್ ಏ ಮ್ಯಾಟರ್. ಯೂ ಡೋಂಟ್‌ವರಿ ಎಬೌಟ್ ಆಫ್ ದಿಸ್" ಎಂದು ಹೇಳುತ್ತಲೆ ಈ ಘಟನೆ ಬಗ್ಗೆ ಇತರೆ ಮೂಲಗಳಿಂದ ಬರುವ ಪ್ರತಿ ಸುದ್ದಿ, ಮಾಹಿತಿಗಳನ್ನು ಗಮನಿಸುತ್ತ ಕುಳಿತರು. ಕಿರಣನಿಗೆ ತಾನು ಕಂಡ ಆ ನರಕದಂತ ದೃಶ್ಯಗಳನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ಅವು ಮನುಷ್ಯತ್ವವನ್ನು ಭಿಕ್ಷೆಯಂತೆ ಬೇಡುತ್ತಿದ್ದವು. ಅದನ್ನು ಮರೆತಂತೆ ತಾನು ಅವುಗಳ ಹೊರ ಜಗತ್ತಿಗೆ ಎಳೆದು ಮಾಡಲೊರಟ ಕೃತ್ಯ ಅದೆಷ್ಟು ಫೋರವಾದದ್ದೆಂದು ಕಿರಣನ ಅರಿವಿಗೆ ಬರುತ್ತಲೆ ಮೈ ಬೆವತು ಕುಳಿತಲ್ಲೆ ಕಂಪಿಸಿದ.

ಅಲ್ಲಿನ್ನೂ ಹಸಿ ನೆತ್ತರು, ಬಿಸಿ ಕಣ ್ಣÃರು ಆರಾದಿರುವ ಮುನ್ನವೇ ಇಲ್ಲೊಂದು ವರದಿಗಾರಿಕೆ ತನ್ನ ಕರ‍್ಯ ಮುಗಿಯತೆಂಬAತೆ ನಿರಾಳವಾಗಿತ್ತು. ಆದರೆ, ಕಪ್ಪುಬಣ್ಣದ ದೊಡ್ಡ ಅಕ್ಷರಗಳಲ್ಲಿ ದುರಂತದ ಬಗ್ಗೆ ಶೀರ್ಷಿಕೆಯ ವಿಷಯವಾಗಿ ಎಡಿಟರ್ "ಇಲ್ಲಾ, ಹೆಡ್‌ಲೈನ್ ಬೇರೆನೋ ಕೊಡಿ. ಓದುಗರಿಗೆ ಆಕರ್ಷಕವಾಗಿ, ಕುತೂಹಲವಾಗಿ ಇರಬೇಕು" ಎಂದು ತನ್ನ ತಲೆಯೊಳಗಿನ ಶ್ಯಬ್ದ ಸಂಪತ್ತನ್ನು ಬಗೆಯುತ್ತಿದ್ದ. ಅವನ ಸುತ್ತಲಿನವರು ಅದೇ ಪ್ರಯತ್ನದಲ್ಲಿದ್ದರು. ಈ ದೃಶ್ಯವನ್ನು ಇದೆಂಥಾ ಅಮಾನುಷವೆಂದು ಕಾಣುತ್ತಿದ್ದ ಕಿರಣ ಎದುರಿಗಿನ ಪೇಜ್ ನೋಡಲು ಅವನೇ ತಗೆದ ದುರಂತದ ಕುರಿತ ಕೆಲವು ಚಿತ್ರಗಳು ನೂರು ಕತೆ ಹೇಳುತ್ತಿದ್ದವು. ಅವು ಸಾರುತ್ತಿರುವ ಕ್ರಿಯೆಗಳಿಗೆ ಮಾತು, ಬರಹಗಳ ಅವಶ್ಯಕತೆಯೇ ಇರಲಿಲ್ಲ. ಆದರೆ, ನಡೆದ ಈ ದುರಂತ ಘಟನೆಯನ್ನು ರೋಚಕಗೊಳಿಸುವ ಸಲುವಾಗಿ ನಡೆಸಬೇಕಾದ ಕರ‍್ಯಗಳೆಲ್ಲವು ಸಲೀಸಾಗಿದ್ದವು. ಕಿರಣ ತಾನು ಬರೆದ ವರದಿಯನ್ನು ಪೇಜ್‌ಗೆ ಹಾಕಿದ್ದ. ಅದನ್ನು ಎತ್ತಿಕೊಂಡ ಎಡಿಟರ್ ಸಾಕಷ್ಟು ತಿದ್ದಿ, ತೀಡಿ, ಮೊನಚುಗೊಳಿಸಿ ಪೇಜ್‌ಮೇಕರ್ ಕೈಗೆ ಕೊಟ್ಟಿದ್ದರು. ಮುಖಪುಟಕ್ಕೆ ಬೇಕಾದ ಆಯ್ಕೆಯಲ್ಲೂ ಭೀಕರತೆ ಕಾಣ ಸುವುದನ್ನೆ ಎತ್ತಿಕೊಳ್ಳಲು ಕಿರಣ ಅಲ್ಲಿ ಇರಲಾರದವನಂತೆ ಹೊರಟು ಬಂದಿದ್ದ.

ಪತ್ರಿಕೆಯ ಮುಖಪುಟದಲ್ಲಿ ಆ ದುರಂತ ಘಟನೆಯ ವರದಿ ಪ್ರಕಟವಾಗಿತ್ತು. ಇತರೆ ಪತ್ರಿಕೆಗಳಿಗಿಂತ ಕಿರಣನ ಪತ್ರಿಕೆಯು ಕೆಲ ಭೀಭತ್ಸವೆನ್ನೂ ಚಿತ್ರಗಳ ಸಹಿತ ಸುದ್ದಿಯನ್ನು ಸ್ವಲ್ಪ ಧೀರ್ಘಗೊಳಿಸಿತ್ತು. ಕಿರಣ ತಗೆದ ಚಿತ್ರಗಳು ಅಲ್ಲಿ ಬಳಕೆಯಾಗಿದ್ದವು. ಅವುಗಳಿಗೆ ಪದಗಳ ಹಂಗಿರಲಿಲ್ಲ. ನೋಡುಗರ, ಓದುಗರ ವಿವೇಚನೆಗೆ ಬಿಟ್ಟಂತೆ ಅವರಲ್ಲಿ ಸಹಾನುಭೂತಿ, ತಳಮಳವನ್ನು ಉಂಟು ಮಾಡಿತ್ತು. ಕೆಲವರು ಪತ್ರಿಕೆಯ ಈ ರೌಂಡ್‌ಅಪ್ ಸ್ಟೋರಿಗೆ ಮೆಚ್ಚಿಗೆ ಸೂಚಿಸಿದ್ದರು. ವರದಿಗಾರ ಘಟನೆಯ ಆಳಾಕ್ಕೆ ಇಳಿದು ಮಾಹಿತಿಗಳ ಹೆಕ್ಕಿರುವುದು ಅದನ್ನು ಓದುಗರಿಗೆ ದಾಟಿಸಲು ವಿಶ್ಲೇಷಿಸಿರುವುದರ ಬಗ್ಗೆ ಮಾತುಗಳು ಆಗುತ್ತಿದ್ದವು. ಕಿರಣನ ಕರ‍್ಯಕ್ಕೆ ಇಷ್ಟೆಲ್ಲ ಹೊಗಳಿಕೆಗಳು ಬರುತ್ತಲೆ ಅವನು ಒಂದು ಥರಹದ ಮನೋವೇದನೆಗೆ ಒಳಗಾಗಿದ್ದ. ದುರಂತ ನಡೆದ ಸ್ಥಳದಲ್ಲಿನ ನೆನ್ನೆಯ ಇವನ ವರ್ತನೆ ತೀರ ಬಾಲಿಶವೆನಿಸಿತ್ತು. ನೋವಿನ ದವಡೆಗೆ ಸಿಲುಕಿದವರ ಸಂಕಷ್ಟಕ್ಕೆ ಕೈ ಚಾಚದೆ ಆ ಮುಖಭಾವಗಳ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ತನ್ನ ಮನಸ್ಸು ಅದೆಷ್ಟು ಕ್ರೂರವೆಂದುಕೊAಡ. ಅವರೆಡೆಗೆ ಕ್ಯಾಮರಾ ತಿರುಗಿಸಿ ಪೋಟೋಗಳ ಕ್ಲಿಕಿಸುವಾಗ ಆ ಕಣ್ಣುಗಳು ಕ್ಷಣ ಇವನ ಕಡೆ ಹೊರಳಿ ನಿಸ್ತೇಜ ಭಾವದಿಂದ ಹಣೆ ಚೆಚ್ಚಿಕೊಂಡವು. ಈ ದೃಶ್ಯಕ್ಕೆ ಕಿರಣನ ಎದೆ ನಡುಗಿತು. ತಾನು ಕೆಲಸದ ನೆಪದಲ್ಲಿ ಮನುಷ್ಯನಿಗೆ ಸ್ಪಂದಿಸಬಹುದಾದ ಗುಣವನ್ನೆ ಕಳೆದುಕೊಂಡು ಒಣ ಕೊರಾಡಿಗಿರುವಂತೆ ಅನಿಸಿತು. ಅಲ್ಲಿಂದ ಮಂಕು ಬಡಿದವನಂತೆ ತನ್ನ ಕ್ರಿಯೆಗಳಿಂದ ದೂರ ಉಳಿದು ಈ ಮನುಷ್ಯ ಪ್ರಪಂಚ ಅನುಭವಿಸುವ ದುಖಃ, ನೋವುಗಳ ಆಪ್ತವಾಗಿಸಿಕೊಳ್ಳ ತೊಡಗಿದ. ಆದರೆ, ಅದು ಇವನ ಅಸ್ತಿತ್ವವನ್ನೆ ಅಲುಗಾಡಿಸುವಂತಿತ್ತು. ತನ್ನೊಳಗಿದ್ದ ಪತ್ರಿಕಾ ಧರ್ಮ, ನೀತಿ, ಜವಾಬ್ದಾರಿಗಳ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಸಮರ್ಥಿಸಿಕೊಳ್ಳಲಾಗದೆ ಅಲ್ಲಿಂದ ಪಲಾಯನ ಮಾಡಿದ್ದ. ಈ ರೀತಿಯಾಗಿ ವೃತ್ತಿ ಮತ್ತು ಬದುಕಿನಲ್ಲಿ ಆರೋಹಣ ಕ್ರಮದಲ್ಲಿದ್ದ ಕಿರಣ ಇದ್ದಕ್ಕಿದ್ದಂತೆ ಧೀಡರನೆ ಪೇಟೆ ಧಾರಣೆ ಪಾತಾಳಕ್ಕೆ ಕುಸಿವಂತೆ ಕುಸಿದಿದ್ದ. ಇದಕ್ಕೆ ಕಾರಣವಾಗಿದ್ದು, ಮಾತ್ರ ಆ ದಿನ ಮತ್ತು ಆ ಘಟನೆ. ಇವರೆಡು ಕಿರಣನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದವು. ಅವನೊಳಗಿದ್ದ ಮನುಷ್ಯತ್ವ ಬೆತ್ತಲಾಗಿ ನಿಂತಿರುವುದನ್ನು ತೋರಿಸಿಕೊಡಲು ಕಿರಣ ತನ್ನ ಕರ‍್ಯಕ್ಕೆ ತಾನೇ ಮುಜುಗರ ಪಟ್ಟಿದ್ದ. ರೋಚಕತೆ, ಆಕರ್ಷಣೆ, ಪ್ರಶಂಸೆಗಳೆಲ್ಲವು ಆ ಕ್ಷಣದ ನಂತರ ಸಪ್ಪೆ ಎನ್ನಿಸುವಂಥಾದ್ದು ಅನಿಸಿತ್ತು. ಇಂತಾ ಕ್ಷಣ ಕತೆಯ ಬೆನ್ನೇರಿ ತಾನು ಮಾಡಿದ ಆ ದಿನದ ಕರ‍್ಯ ಮನುಷ್ಯತ್ವಕ್ಕೆ ಬಗೆದ ಕೇಡೆಂದು ನಿಧಾನವಾಗಿ ಅರ್ಥವಾಗಿತ್ತು.

ಮರುದಿನ ಕಛೇರಿಗೆ ಬಂದವನಿಗೆ ಎಲ್ಲರಿಂದಲೂ ಸಹಜವೆನಿಸೋ ಮೆಚ್ಚಿಗೆ ಮಾತುಗಳು ಬರಲೂ ಇವುಗಳಿಗೆ ಕಿವಿ ಕೊಡದವನಂತೆ ತನ್ನ ಸ್ಥಳದಲ್ಲಿ ಕುಳಿತು ಏನೋ ಚಿಂತಿಸುತ್ತಿದ್ದ ಕಿರಣ. ಸಹುದ್ಯೋಗಿಯೊಬ್ಬ "ಕಿರಣ ನಿನ್ಗೆ ಕಾಲ್ ಬಂದಿದೆ ನೋಡು. ಯಾರೋ ಅಜ್ಜ" ಎನ್ನುತ್ತಲೆ ರೀಸಿವರ್ ತಗೆದುಕೊಂಡ ಕಿರಣ "ಹಲೋ ಹೇಳಿ ಸಾರ್" ಎಂದ. ಆ ಕಡೆಯಿಂದ "ಸುದ್ದಿ ಚೆನ್ನಾಗಿದೆ. ಆದ್ರೆ ಅದ್ನ್ ಇಷ್ಟೊಂದು ರೋಚಕಗೊಳಿಸೋ ಅವಶ್ಯಕತೆ ಏನಿತ್ತು? ಪತ್ರಿಕೆನಾ ಮನೆ ಮಂದಿಯಲ್ಲಾ ನೋಡ್ತಾರೆ. ಅದ್ರಲ್ಲಿ ಈ ಸಾವು, ನೋವುಗಳು ಮಕ್ಕಳ ಮನಸ್ಸಿನ ಮೇಲೆ ಬೀರೋ ಪರಿಣಾಮ ಏನಿರಬಹುದು ಅಂತಾ ಯಾಕೆ ಯೋಚಿಸೋದಿಲ್ಲ ನೀವು? ವಿಕಾರ, ವಿಷಾದ ಅನಿಸೋ ಚಿತ್ರಗಳೇ ಮುಖಪುಟ ತುಂಬಿದರೆ ಆದರಾಚೇಗಿನ ಬದುಕು ಮುಖ್ಯವಾಗೋದಿಲ್ಲ. ಸ್ವಲ್ಪ ವಿವೇಚನೆ ಮಾಡಿ. ನಾನು ನಿಮ್ಮ ಪತ್ರಿಕೆಗೆ ಕಳೆದ ೨೦ ವರ್ಷಗಳಿಂದ ಖಾಯಂ ಓದುಗ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಾರಿ ಪತ್ರಿಕೆ ತಿರುವಾಕೋದೆ ಬೇಸರವಾಗುತ್ತೆ. ಅಸಂಬದ್ಧ ಅನ್ನೂ ಸುದ್ದಿಗಳು ಮುಖಪುಟದಲ್ಲಿ ಬಂದು ಮೆಚ್ಚಿಕೊಳ್ಳೋ ಸುದ್ದಿಗಳು ಒಳಪುಟದಲ್ಲಿ ಸಣ್ಣದಾಗಿರುತ್ತವೆ" ಎಂದು ನಕ್ಕರು. ಕಿರಣ ಈ ಮಾತುಗಳ ಕೇಳಿಸಿಕೊಂಡನಷ್ಟೆ ಇದಕ್ಕೆ ಹೇಗೆ ಪತ್ರಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಸುಮಾರು ೫, ೬ ನಿಮಿಷಗಳಷ್ಟು ಆ ಹಿರಿಜೀವ ಮಾತನಾಡಿ ಕರೆ ತುಂಡರಿಸಿತ್ತು. ನೆನ್ನೆ ನಡೆದ ಕೃತ್ಯದಿಂದ ವರದಿಗಾರಿಕೆಯ ಬಗ್ಗೆ ಜರ್ಜರಿತನಾದಂತಿದ್ದ ಕಿರಣ ಈ ಮಾತುಗಳಿಂದ ಇನ್ನಷ್ಟು ಘಾಸಿಗೊಂಡ. ಇದರಿಂದ ಅವನೊಳಗೆ ತನ್ನ ವೃತ್ತಿಯ ಬಗ್ಗೆ ಡೋಲಾಯಮಾನ ಸ್ಥಿತಿಯಲ್ಲಿದ್ದ ನಿರ್ಧಾರಕ್ಕೆ ಒಂದು ಸ್ಪಷ್ಟತೆ ಬಂದಿತ್ತು. ತಡಮಾಡದಂತೆ ಕಿರಣ ಅಲ್ಲಿಂದ ನೇರ ಎಡಿಟರ್ ಛೇಂಬರ್‌ಗೆ ಬಂದವನೆ ಎಡಿಟರ್ ಕುರ್ಚಿ ಖಾಲಿಯಿದ್ದರು ತನ್ನ ವರದಿಗಾರನ ಹುದ್ದೆಗೆ ರಾಜೀನಾಮೆ ನೀಡುವ ಪತ್ರ ಬರೆದು ಅಲ್ಲೆ ಇಟ್ಟು ಬಂದ.

ಹಾಸಿಗೆಯಿಂದ ಎದ್ದವನಿಗೆ ಈ ದಿನ ದೇಹ, ಮನಸ್ಸುಗಳರೆಡು ಹಗುರತೆಯಿಂದಿರುವAತೆ ಕಂಡಿತು. ಹೋಗಿ ಕಿಟಕಿ ಬಾಗಿಲುಗಳ ತೆರೆದ. ಬೆಳಕು ಸಣ್ಣ ಮಗುವಿನಂತೆ ಓಡಿ ಬಂದು ಕೋಣೆ ತುಂಬಿತ್ತು. ತನ್ನ ಕೆಲಸದ ರಾಜೀನಾಮೆಯನ್ನ ಮತ್ತೆ ಧೃಡಪಡಿಸಿಕೊಂಡ. ಎಡಿಟರ್ ಅದನ್ನು ಸ್ವೀಕರಿಸದೆ ಕಿರಣನಿಗೆ ನಿರ್ಧಾರ ಬದಲಿಸಿ ಕೆಲಸಕ್ಕೆ ಬರುವಂತೆ ಸಂದೇಶ ಕಳುಹಿಸಿದ್ದರು. ಕಿರಣನಿಗೆ ಈ ಪತ್ರಿಕ್ಯೋದಮ ಬೇಸರವಾಗಿ ಅದು ತನ್ನ ಸ್ವಾತಂತ್ರö್ಯ ಹರಣ ಮಾಡುವುದನ್ನು ಸಹಿಸಿಕೊಳ್ಳದವನಾಗಿದ್ದ. ಪತ್ರಿಕೆ, ವರದಿಗಾರಿಕೆ ಎಂದರೆ ಕಿರಣನಿಗೆ ಬೇರೆಯದೆ ಆದರ್ಶಗಳಿದ್ದು, ಅವು ಇಂದಿನ ಪತ್ರಿಕಾ ಧರ್ಮದಲ್ಲಿ ಅಸಾಧ್ಯವೆನಿಸಿತ್ತು. ಆ ಕಾರಣಕ್ಕೆ ಈ ವೃತ್ತಿಯನ್ನೆ ಬದಲಿಸುವ ಧೈರ್ಯ ತೋರಿದ್ದ. ಎಡಿಟರ್ ತನ್ನ ರಾಜೀನಾಮೆ ಸ್ವೀಕರಿಸದೆ ಮುಂದಿನ ಯಾವ ಪತ್ರಿಕೆಗಳಲ್ಲೂ ತನಗೆ ಕೆಲಸ ಲಭಿಸುವುದಿಲ್ಲವೆಂಬ ಸಂಗತಿ ಗೊತ್ತಿತ್ತು. ಅವರು ಪತ್ರಿಕ್ಷಣ ಕಿರಣನ ನಿರ್ಧಾರವನ್ನು ಬದಲಿಸಿ ಮತ್ತೆ ವರದಿಗಾರಿಕೆಯಲ್ಲಿ ಸಕ್ರಿಯನಾಗಿಸಲು ಯತ್ನಿಸುತ್ತಿದ್ದರು. ಇದಕ್ಕೆ ಕಿರಣ ಅವರ ಯಾವ ಕರೆಗಳನ್ನು ರಿಸೀವ್ ಮಾಡದೆ ತನ್ನ ಕಠಿಣ ನಿರ್ಧಾರಕ್ಕೆ ಜೋತು ಬಿದ್ದಿದ್ದ. ಇದರಿಂದ ಮುಂದಿನ ಭವಿಷ್ಯವೆಂಬ ಚಿಂತೆಗೆ ಕಟ್ಟಡ ಕುಸಿತದಿಂದ ಬೀದಿ ಪಾಲಾದ ಹತ್ತಾರು ಕುಟುಂಬಗಳು ಮತ್ತೆ ಬದುಕು ಕಟ್ಟಿಕೊಳ್ಳುವ ರೀತಿ ಉದಾಹರಣೆಯಾಗಿ ಸಿಕ್ಕಿತ್ತು. ಬದುಕಲು ನಿರ್ಧಾರಿಸಿದ ಮೇಲೆ ವೃತ್ತಿಯ ಆಯ್ಕೆಗೆ ಮಹತ್ವವಿರುವುದಿಲ್ಲವೆಂದು ಕಿರಣ ನಂಬಿದ್ದ. ಈ ಯೋಚನೆಗಳಿಂದ ಕಿರಣನೊಳಗೆ ಲವಲವಿಕೆ ಕಾಣ ಸಿಕೊಂಡAತೆ ಕನ್ನಡಿ ನೋಡಲು ಮುಗುಳುನಗೆಯೊಂದು ಅರಳಿತ್ತು. ತನ್ನ ಬರವಣೆಗೆಯನ್ನು ಸುದ್ದಿ ರೂಪದಿಂದ ಕತೆ, ಕವನ, ಪ್ರಬಂಧ ರೂಪಕ್ಕೆ ದಾಟಿಸುವ ಆಲೋಚನೆ ಹೊಳೆಯುತ್ತಲೆ ಬರವಣ ಗೆ ಮತ್ತೆ ತನ್ನ ಕೈಹಿಡಿಯುವ ಉತ್ಸಾಹ ಮೂಡಿತ್ತು. ಪೋನ್ ಮತ್ತೆ ರಿಂಗ್ ಆಗಲೂ ಡಿಸ್‌ಪ್ಲೇಯಲ್ಲಿ ಎಡಿಟರ್ ನಂಬರ್ ನೋಡುತ್ತಲೆ ಕಾಲ್ ರಿಸೀವ್ ಮಾಡಿದ. ಎಡಿಟರ್ ಸಮಾಧಾನವಾಗಿ ಕಿರಣನಿಗೆ ಏನೇನೋ ಹೇಳುತ್ತಿದ್ದರು. ಕಿರಣನಿಗೆ ಇವೆಲ್ಲ ಅನವಶ್ಯಕವೆನಿಸಿ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಿಲ್ಲವೆಂದು ಹೇಳುತ್ತಲೆ ಅವನ ಗಮನ ಕಿಟಕಿಯಿಂದಾಚೆ ಕಾಣುವ ಆಗಸವ ನೋಡುತ್ತ ಅದರಲ್ಲಿ ತುಂಬಿರುವ ತೆಳು ಮೋಡಗಳ ಸಣ್ಣ ಚಲನೆಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದ. ಈ ಚಲನೆಯಲ್ಲಿ ಇಲ್ಲಿತನಕ ಹಿಂಸೆಯAತೆ ಅನುಭವಿಸಿದ ದುರಂತ ಘಟನೆಯ ನೋವುಗಳೆಲ್ಲವು ಮನಸ್ಸಿಂದ ಇಂಚಿAಚೆ ಕರಗುತ್ತಿದ್ದವು.