Click here to Download MyLang App

ನೇರಳೆ‌ ಹಣ್ಣು - ಬರೆದವರು : ದಿವ್ಯಾ ಶೆಟ್ಟಿ | ಸಾಮಾಜಿಕ

ದೇವನ ಹಳ್ಳಿ ಎಂಬ ಒಂದು ಊರಿನಲ್ಲಿ ಸೋಮಪ್ಪ ಎಂಬ ಒಬ್ಬ ರೈತ ಇದ್ದ ಇವನಿಗೆ ಕಿರಣ್ ಮತ್ತು ಈರಣ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದರು. ಸಂಜೆ ಹೊತ್ತಲ್ಲಿ ಮಕ್ಕಳು ತಮ್ಮ ಮನೆಯ ಎದುರುಗಡೆ ಮಾವಿನ ಮರದ ಹತ್ತಿರ ಆಟವಾಡುತ್ತಿದ್ದರು ಇವರು ಆಟ ವಾಡುತ್ತಿರುವಾಗ ಇವರ ಗೆಳೆಯರಾದ ಸೋಮ, ರಾಮ, ನಂದಿನಿ ಬರುತ್ತಿರುವಾಗ ಈರಣ್ ಕೇಳಿದ ಎ ನಂದಿನಿ, ಸೋಮ,ರಾಮ ನೀವು ಯಾವ ಕಡೆ ಹೋಗ್ತಾ ಇದ್ದೀರಾ ಎಂದು ಕೇಳಿದಾಗ ರಾಮ ಹೇಳಿದ ಇಲ್ಲಿ ನದಿ ದಾಟಿ ಹೋದರೆ ನೇರಳೆ ಹಣ್ಣಿನ ಮರ ಉಂಟು ಅಲ್ಲಿಗೆ ಹೋಗ್ತಾ ಇದ್ದೀವಿ ನೀವು ಕೂಡ ಬನ್ನಿ ಎಂದು ಕರೆದ ಆಗ ಈರಣ್ ಇಲ್ಲಪ್ಪಾ ನಾ ಬರಕಿಲ್ಲ ಎಂದ ಆಗ ಕಿರಣ್ ಎ ನೇರಳೆ ಹಣ್ಣು ಅಂತೆ ಬಾರೋ ಹೋಗೋಣ ಎಂದು ಹೇಳಿದ ಆಗ ಈರಣ್ ಅಪ್ಪಯ್ಯ ಬೈತಾರೆ ನಾ ಬರಕಿಲ್ಲ ಎಂದ ಆದರೂ ಕಿರಣ್ ಬಾ... ಬಾ... ಎಂದು ಒತ್ತಾಯಿಸಿ ತನ್ನ ಗೆಳೆಯರ ಜೊತೆ ಕರೆದು ಕೊಂಡು ಹೋದ ದಾರಿಯಲ್ಲಿ ಹೋಗುತ್ತಿರುವಾಗ ರಾಮನ ಅಪ್ಪಯ್ಯ ಎದುರುಗಡೆ ಕೆಲಸ ಮುಗಿಸಿ ಮನೆಗೆ ಬರುತ್ತಿರುತ್ತಾರೆ ಎದುರುಗಡೆ ತನ್ನ ಮಗ ಮತ್ತು ಅವನ ಗೆಳೆಯರನ್ನು ನೋಡಿದ ರಾಮನ ಅಪ್ಪ ಚೆನ್ನಯ್ಯ ಎ ಮಕ್ಲಾ ಎಲ್ಲಿಗೆ ಹೊರಟಿದ್ದೀರಾ ಕತ್ತಲಾಗ್ತಾ ಬಂತು ಎಂದು ಹೇಳುವಾಗ ರಾಮ ಅಪ್ಪಯ್ಯ ನೇರಳೆ ಹಣ್ಣಿನ ಮರ ನದಿಯಾಚೆ ಉಂಟು ಅಲ್ಲಿಗೆ ಹೊರಟಿದ್ದೀವಿ ಎಂದು ಹೇಳುತ್ತಾನೆ ಆಗ ಚೆನ್ನಯ್ಯ ಎರಡು ಬಿಡ್ಲೇನೋ ನಿಂಗೆ ಕತ್ತಲಾಗ್ತಾ ಬರ್ತಾ ಇದೆ ಈಗ ನದಿಯಾಚೆ ಹೋಗುತ್ತಾನಂತೆ ಎಂದು ಜಬೈಸಿದ. ಎಲ್ಲಾ ಮಕ್ಕಳನ್ನು ಹಿಂದಿರುಗಿಸಿ ಮನೆಗೆ ಕರೆದು ಕೊಂಡು ಬರುತ್ತಾನೆ.
ಕಿರಣ್ ಮತ್ತು ಈರಣ್ ಮನೆಯ ಒಳಗೆ ಬಂದಾಗ ತನ್ನ ಅಪ್ಪಯ್ಯ ಸೋಮಪ್ಪ ಎಲ್ಲಿಗೆ ಯದುಕೋ ಹೋಗಿದ್ರಿ ಎಂದು ಕೇಳುವಾಗ ಕಿರಣ್ ಹೇಳ್ತಾನೆ ನದಿಯಾಚೆ ನೇರಳೆ ಹಣ್ಣಿನ ಮರ ಉಂಟು ಅಲ್ಲಿಗೆ ಹೋಗ್ತಾ ಇದ್ವಿ ಅಪ್ಪಯ್ಯ ಎಂದು ಹೇಳ್ತಾನೆ ಆಗ ಸೋಮಪ್ಪ ಈ ಕತ್ಲೇ ಅಲ್ಲಿ ನೇರಳೆ ಹಣ್ಣು ಬೇಕಾ ಎಂದು ಜಬೈಸ್ತಾನೆ. ಆಗ ಕಿರಣ್ ನನಗೆ ನೇರಳೆ ಹಣ್ಣು ಬೇಕು ಎಂದು ಕೂಗಲು ಶುರು ಮಾಡುತ್ತಾನೆ ಆಗ ಈರಣ್ ಸಮಾಧಾನ ಮಾಡಿ ಊಟವನ್ನು ತಂದು ಕೊಡುತ್ತಾನೆ ಮತ್ತೆ ಇಬ್ಬರು ಊಟ ಮಾಡಿ ಮಲಗುತ್ತಾರೆ.
ಮಾರನೇ ದಿನ ಕಿರಣ್ ಎದ್ದು ಮನೆ ಕೆಲಸವನ್ನು ಮುಗಿಸಿ ಮನೆಯ ಜಗಲಿಯಲ್ಲಿ ಕುಳಿತಿರುವಾಗ ತನ್ನ ಗೆಳೆಯರು ನದಿಯಾಚೆಯಿಂದ ಬರುತ್ತಿದ್ದರು ಮತ್ತು ಅವರ ಕೈಯಲ್ಲಿ ಇದ್ದ ನೇರಳೆ ಹಣ್ಣನ್ನು ನೋಡಿ ಕಿರಣ್ ಗೆ ಆಸೆಯಾಗಿ ಎ ಎಲ್ಲಿಗೆ ಹೋಗಿದ್ರಿ ಎಂದು ಕೇಳಿದ ಆಗ ಸೋಮ ನದಿಯಾಚೆ ಹೋಗಿ ನೇರಳೆ ಹಣ್ಣು ತಂದ್ವಿ ಎಂದು ಹೇಳುವಾಗ ಕಿರಣ್ ಹೌದಾ ಎ ನನಗೂ ಕೂಡ ಸ್ವಲ್ಪ ನೇರಳೆ ಹಣ್ಣು ಕೊಡ್ರೋ ಎಂದು ಕೇಳಿದ ಆಗ ಸೋಮ ಇಲ್ಲಪ್ಪಾ ನಾವು ಕೊಡಕಿಲ್ಲ ಬಹಳ ಕಷ್ಟ ಪಟ್ಟು ಆ ನದಿ ದಾಟಿ ತಂದ್ವಿ ಗೊತ್ತಾ ನಿಂಗೆ ಬೇಕಾದ್ರೆ ನೀನೇ ಹೋಗಿ ತಾ ಎಂದು ಹೇಳಿ ಹೊರಟು ಹೋದರು. ನಿರಾಶೆ ಗೊಂಡ ಕಿರಣ್ ಜಗಲಿಯಲ್ಲಿ ಬಂದು ಕೂತ ಮಳೆ ಬರತೊಡ ಗಿದವು ಈರಣ್ ಮನೆ ಒಳಗಿನಿಂದ ಬಂದು ಎ ಕಿರಣ್ ಬಾರೋ ಮಳೆ ಬರ್ತಾ ಇದೆ ಅಪ್ಪಯ್ಯ ಕರೆತ ಇದ್ದಾರೆ ಬಾರೋ ಒಳಗೆ ಎಂದು ಕರೆದ ಆಗ ಕಿರಣ್ ನಾ ಬರಕಿಲ್ಲ ಇಲ್ಲೇ ಕುತ್ಕೋತಿನಿ ಎಂದ ಆಗ ಈರಣ್ ಯಾಕೋ ಏನಾಯಿತು ನಿಂಗೆ ಎಂದು ಕೇಳಿದಾಗ ಕಿರಣ್ ನಾ ನೇರಳೆ ಹಣ್ಣು ತರ್ಲಿಕ್ಕೆ ನದಿಯಾಚೆ ಹೋಕ್ತಿನಿ ಎಂದ ಆಗ ಈರಣ್ ಎ ಮಳೆ ಬರ್ತಾ ಇದೆ ಈಗ ಯಾಕೋ ಹೋಕ್ತಿಯಾ ಹೋಗ್ಬೇಡ ಎಂದಾಗ ಕಿರಣ್ ಗೆ ಕೋಪ ಬಂದು ನಾ ಹೋಕ್ತಿನಿ ನೀನು ಮನೆಯೋಳಗೆ ಹೋಗು ನಾ ಬರಕಿಲ್ಲ ಎಂದು ಜಬೈಸಿದ. ಈರಣ್ ಮನೆಯ ಒಳಗೆ ಹೋದ ಕಿರಣ್ ಸ್ವಲ್ಪ ಹೊತ್ತು ಜಗಲಿಯಲ್ಲಿ ಕೂತು ಯಾರಿಗೂ ಹೇಳದೆ ನೇರಳೆ ಹಣ್ಣಿನ ಆಸೆಯಿಂದ ನದಿಯಾಚೆ ಹೋದ ತುಂಬಾ ಮಳೆ ಮತ್ತು ಗಾಳಿ ಬಿಸ್ತಾ ಇತ್ತು ಕಿರಣ್ ಗೆ ಭಯ ಆಯಿತು ಕಿರಣ್ ಹಣ್ಣನ್ನು ಮರದಿಂದ ಕೀಳುತ ಕೀಳುತ ಅವನಿಗೆ ಖುಷಿ ಆಯಿತು ಇನ್ನು ಜಾಸ್ತಿ ನೇರಳೆ ಹಣ್ಣನ್ನು ಕೀಳುತ ಕೀಳುತ ಕಾಲು ಜಾರಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ....

( ಅತಿಯಾದ ಆಸೆಯೇ ದುಃಖಕ್ಕೆ ಮೂಲ
ಕಾರಣ...)

ಸರ್ಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ....